Asianet Suvarna News Asianet Suvarna News

Mental Health: “ಇಷ್ಟೊಂದು ನಗುತ್ತಿರುವೆಯಲ್ಲ? ಏನು ನೋವದು, ಮುಚ್ಚಿಡ್ತಾ ಇದ್ದೀ?

ಹಿಂದಿ ಗಝಲ್ ಮೂಲಕ ಖ್ಯಾತ ಗಾಯಕ ಜಗಜೀತ್ ಸಿಂಗ್ “ಇಷ್ಟೊಂದು ನಗುತ್ತಿರುವೆಯಲ್ಲ? ಏನು ನೋವದು, ಮುಚ್ಚಿಡುತ್ತಿರುವೆಯಲ್ಲ?’ ಎಂದು ಪ್ರಶ್ನಿಸುತ್ತಾರೆ. ಹೌದು, ನಗುವ ಮುಖದ ಹಿಂದೆಯೂ ಖಿನ್ನತೆ ಮನೆಮಾಡಿರಬಹುದು. ತಮ್ಮ ಸೋಲನ್ನು ಶತಾಯಗತಾಯ ಒಪ್ಪಿಕೊಳ್ಳದ ಮಂದಿಯಲ್ಲಿ ಇಂಥದ್ದೊಂದು ಸಮಸ್ಯೆ ಬೆಳೆಯಬಹುದು. 

The pain you are hiding may reason for smiling depression
Author
First Published Apr 28, 2023, 5:11 PM IST

ಮನುಷ್ಯನ ಮನಸ್ಸೇ ವಿಚಿತ್ರ. ಅಲ್ಲಿನ ಭಾವನೆಗಳ ಲೋಕ ಇನ್ನಷ್ಟು ವಿಚಿತ್ರ. ಜೀವನವನ್ನು ಹೆಚ್ಚು ಕಾಂಪ್ಲಿಕೇಟ್ ಮಾಡಿಕೊಳ್ಳದೆ ಸರಳವಾಗಿ ಬದುಕುವುದರಲ್ಲೇ ಸೊಗಸಿದೆ. ಆದರೆ, ಎಲ್ಲರಿಗೂ ಇದು ಸಾಧ್ಯವಿಲ್ಲ. ಪರಿಣಾಮವಾಗಿಯೇ ಖಿನ್ನತೆಯಂತಹ ಸಮಸ್ಯೆ. ಖಿನ್ನತೆ ಎಂದರೆ ಸಾಮಾನ್ಯವಾಗಿ ಅಳುವುದು, ಏಕಾಂಗಿಯಾಗಿ ಇರುವುದು, ಆತ್ಮಹತ್ಯೆಯಂತಹ ಆಲೋಚನೆಗಳಿಂದ ಬಳಲುವುದು, ನಗುವನ್ನು ಮರೆಯುವುದು ಮುಂತಾದ ಲಕ್ಷಣಗಳೊಂದಿಗೆ ಗುರುತಿಸಲಾಗುತ್ತದೆ. ಆದರೆ, ಅತಿಯಾಗಿ ನಗುನಗುತ್ತಿರುವ ಮುಖವೂ ಸಹ ಖಿನ್ನತೆಯ ಬಲಿಪಶುವಾಗಬಹುದು. ನಗುವಿನ ಹಿಂದೆಯೂ ಒಂದು ಬಗೆಯ ಖಿನ್ನತೆ ಇರಬಹುದು. ಇದನ್ನು ಸ್ಮೈಲಿಂಗ್ ಡಿಪ್ರೆಷನ್ ಎಂದು ಕರೆಯಲಾಗುತ್ತದೆ. “ತುಮ್ ಇತನಾ ಜೋ ಮುಸ್ಕುರಾಹೇ ಹೋ, ಕ್ಯಾ ಗಮ್ ಹೈ ಜಿಸಕೋ ಚುಪಾ ರಹೇ ಹೋ’ ಎನ್ನುವ ಜಗಜೀತ್ ಸಿಂಗ್ ಹಾಡಿರುವ ಗಝಲ್ ಒಂದನ್ನು ಕೇಳಿರಬಹುದು. ನಗುತ್ತಿದ್ದರೆ ಖಿನ್ನತೆ ಎಲ್ಲಿಂದ ಮೂಡಲು ಸಾಧ್ಯ ಎಂದೆನಿಸಬಹುದು. ಆದರೆ, ನಗುವಿನ ಸ್ಥಿತಿಯಲ್ಲೂ ವ್ಯಕ್ತಿ ಖಿನ್ನತೆಗೆ ಬಲಿಯಾಗಬಹುದು. ಆತ್ಮಹತ್ಯೆ ಮಾಡಿಕೊಂಡಿರುವ ಕೆಲವರ ಬಗ್ಗೆ “ಆತ ಯಾವಾಗಲೂ ಚೆನ್ನಾಗಿದ್ದನಲ್ಲ, ಏನಾಗಿತ್ತು?’ ಎಂದು ಅಚ್ಚರಿ ಪಡುವಂತಾಗುತ್ತದೆ. ಅದು ಇಂಥದ್ದೇ ಸ್ಥಿತಿ. ಇದನ್ನು ಗುರುತಿಸುವುದು ಸ್ವಲ್ಪ ಕಷ್ಟವಾಗುತ್ತದೆ. ಆದರೂ ಪ್ರಮುಖವಾಗಿ ಕೆಲವು ಲಕ್ಷಣಗಳಿರುತ್ತವೆ.

ನಗುವ ಮುಖದ (Smiling Face) ಹಿಂದೆ ಖಿನ್ನತೆ (Depression)
ಕೆಲವೊಬ್ಬರು ಮೇಲ್ನೋಟಕ್ಕೆ ನಗುನಗುತ್ತಿರಬಹುದು. ಆದರೆ, ಆಂತರಿಕವಾಗಿ (Internal) ಅವರಿಗೆ ಯಾವುದರಲ್ಲೂ ಆಸಕ್ತಿ ಇರುವುದಿಲ್ಲ. ಉದಾಸ ಭಾವನೆ ಮನೆಮಾಡಿರುತ್ತದೆ. ಬಹುಬೇಗ ಸುಸ್ತಾಗುತ್ತದೆ. ದೈನಂದಿನ ಕೆಲಸ (Daily Work) ಕಾರ್ಯಗಳನ್ನು ಯಾವುದೇ ಲೋಪವಿಲ್ಲದೆ ಮಾಡುತ್ತಿರಬಹುದು. ಆದರೆ, ಅವುಗಳನ್ನು ತೀರ ಯಾಂತ್ರಿಕವಾಗಿ ಮಾಡಬಹುದು. ಪ್ರತಿ ಕೆಲಸವನ್ನೂ ಮಧ್ಯೆ ಮಧ್ಯೆ ಬಿಟ್ಟುಬಿಡುವ ಮನಸ್ಥಿತಿ ಉಂಟಾಗಬಹುದು. ಯಾವಾಗಲೂ ದೇಹದಲ್ಲಿ ಎಲ್ಲಾದರೂ ನೋವು, ತಲೆನೋವು (Headache) ಕಾಡಬಹುದು.  

ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚಾಗಿ ಕಾಡುವ ಖಿನ್ನತೆ… ಪರಿಹಾರ ತಿಳಿಯಿರಿ

ಖಿನ್ನತೆಯುಂಟಾದಾಗ ವ್ಯಕ್ತಿಯಲ್ಲಿ ಸೆರಟೋನಿನ್ (Serotonin) ಎನ್ನುವ ಹಾರ್ಮೋನ್ (Hormone) ಪ್ರಮಾಣದಲ್ಲಿ ಭಾರೀ ಇಳಿಕೆಯಾಗುತ್ತದೆ. ಇದರಿಂದಾಗಿ ಇನ್ನೊಬ್ಬರ ಜತೆ ಹೋಲಿಕೆ (Compare) ಮಾಡಿಕೊಳ್ಳುವ ಅಭ್ಯಾಸ ಶುರುವಾಗುತ್ತದೆ. ಆಸುಪಾಸಿನ ಜನರಿಗಿಂತ ಹೆಚ್ಚು ನಾವು ಕೆಳಮಟ್ಟದಲ್ಲಿದ್ದೇವೆ ಎನಿಸಲು ಆರಂಭವಾಗುತ್ತದೆ. ನಮ್ಮದೇ ಒಳ್ಳೆಯ ದಿನಗಳೊಂದಿಗೆ ಕೆಟ್ಟ ದಿನಗಳನ್ನು ಹೋಲಿಕೆ ಮಾಡಿಕೊಂಡು ಇನ್ನಷ್ಟು ಕುಗ್ಗುವಂತಾಗುತ್ತದೆ. ಇದುವರೆಗೆ ಮಾಡಿದ ಕೆಲಸಗಳೆಲ್ಲ ವೇಸ್ಟ್ ಎನಿಸಲು ಶುರುವಾಗುತ್ತದೆ. ಖಿನ್ನತೆಯ ಭಾವನೆ ಹೆಚ್ಚಾಗಲು ಇನ್ನೂ ಹಲವು ಕಾರಣಗಳು ಸೇರಿಕೊಳ್ಳುತ್ತವೆ. ಒಟ್ಟಿನಲ್ಲಿ ಆಂತರಿಕವಾಗಿ ನೆಮ್ಮದಿ ಇಲ್ಲ, ಖುಷಿ (Happiness) ಇಲ್ಲದ ಸಮಸ್ಯೆ ಉಂಟಾಗುತ್ತದೆ. 

ಒಳಗೆ ಅಳು ಮೇಲಿಂದ ನಗು 
ಕೆಲವು ಜನರಿರುತ್ತಾರೆ. ತಮ್ಮ ಸೋಲನ್ನು ಅಥವಾ ಹಿನ್ನಡೆಯನ್ನು ಒಪ್ಪಿಕೊಳ್ಳುವುದಿಲ್ಲ. ತಮ್ಮ ಇಮೇಜ್ (Image) ಅವರಿಗೆ ಭಾರೀ ಮುಖ್ಯವಾಗುತ್ತದೆ. ಜನರು ತಮ್ಮನ್ನು ಅರ್ಥ ಮಾಡಿಕೊಂಡು ತಮ್ಮ ಬಗ್ಗೆ ಸಹಾನುಭೂತಿ ತೋರುವುದು, ದುರ್ಬಲ ಎನ್ನುವುದು ಇವರಿಗೆ ಇಷ್ಟವಾಗುವುದಿಲ್ಲ. ಹೀಗಾಗಿ, ಎಷ್ಟೇ ತೊಂದರೆಯಲ್ಲಿದ್ದರೂ ನಗುನಗುತ್ತಲೇ ಇರುತ್ತಾರೆ. ಮನೋಚಿಕಿತ್ಸಕರ ಪ್ರಕಾರ, ಸಮಸ್ಯೆಯನ್ನು (Problem) ಮತ್ತು ವಾಸ್ತವವನ್ನು (Reality) ಒಪ್ಪಿಕೊಳ್ಳದ, ಸ್ವೀಕಾರ ಮಾಡದ ಜನರಲ್ಲಿ ಸ್ಮೈಲಿಂಗ್ ಡಿಪ್ರೆಷನ್ (Smiling Depression) ಹೆಚ್ಚು. ಜೀವನದ ಒಂದು ಹಂತದಲ್ಲಿ ಸೋಲು ಎದುರಾಗಿದೆ ಎನ್ನುವುದನ್ನು ಇವರು ಸ್ವೀಕರಿಸುವುದೇ ಇಲ್ಲ. ಬದಲಿಗೆ, ಇದರ ಬಗ್ಗೆ ತಿಳಿದರೆ ಸ್ನೇಹಿತರು, ನೆಂಟರಿಷ್ಟರು ಏನನ್ನುತ್ತಾರೋ ಎನ್ನುವ ಯೋಚನೆಗೆ ಬಿದ್ದುಬಿಡುತ್ತಾರೆ. ಆಗ ಇವರಲ್ಲಿ ಖಿನ್ನತೆ ಎನ್ನುವುದು ಒಳಗಿಂದೊಳಗೇ ಅಪಾಯಕಾರಿಯಾಗಿ ಬೆಳೆಯಬಹುದು.

Relationship Tips: ನೀವು ಕೆಟ್ಟ ಅಮ್ಮನಾ, ಒಳ್ಳೆಯ ಅಮ್ಮನಾ? ಚೆಕ್‌ ಮಾಡ್ಕೊಳಿ

ಪರಿಹಾರವೇನು?
ಯಾವುದೇ ರೀತಿಯ ಖಿನ್ನತೆ ಇದ್ದರೂ ತಮ್ಮ ನೋವಿನ ಬಗ್ಗೆ ಇನ್ನೊಬ್ಬರಲ್ಲಿ ಹೇಳಿಕೊಳ್ಳುವುದು ಉತ್ತಮ ಮಾರ್ಗ. ಖಿನ್ನತೆಯನ್ನು ಒಪ್ಪಿಕೊಳ್ಳುವುದು ಮುಖ್ಯ. ಬಳಿಕ ಅದಕ್ಕೆ ಚಿಕಿತ್ಸೆ (Treatment) ಪಡೆದುಕೊಳ್ಳಬೇಕು. ಆದರೆ, ಸ್ವೀಕಾರ ಮಾಡದೇ ಇರುವವರಿಗೆ ಖಿನ್ನತೆ ಭಾರೀ ಅಪಾಯಕಾರಿಯಾಗಬಹುದು. ಇವರು ನಗುನಗುತ್ತಲೇ ಒಂದು ದಿನ ಆತ್ಮಹತ್ಯೆಯ (Suicide) ನಿರ್ಧಾರ ಕೈಗೊಂಡುಬಿಡಬಹುದು.
 

Follow Us:
Download App:
  • android
  • ios