ಅಣ್ಣ-ತಮ್ಮಂದಿರ ಜಗಳ ಬಿಡಿಸಲು ಬಂದಿದ್ದೇ ತಪ್ಪಾಯ್ತಾ? ಅತ್ತಿಗೆಯ ಕತ್ತು ಸೀ ಳಿದ ಮೈದುನ!
ಅಣ್ಣ-ತಮ್ಮಂದಿರ ಜಗಳ ಬಿಡಿಸಲು ಬಂದಿದ್ದ ಅತ್ತಿಗೆಯನ್ನೇ ಕತ್ತು ಸೀಳಿ ಹತ್ಯೆಗೈದ ದುರ್ಘಟನೆ ಹುಬ್ಬಳ್ಳಿ ಎಸ್‌ಎಂ ಕೃಷ್ಣನಗರದಲ್ಲಿ ನಡೆದಿದೆ. ಸಾಜಿಯಾಬಾನು ಕೊಲೆಯಾದ ಮಹಿಳೆ,
ಹುಬ್ಬಳ್ಳಿ (ನ.17): ಅಣ್ಣ-ತಮ್ಮಂದಿರ ಜಗಳ ಬಿಡಿಸಲು ಬಂದಿದ್ದ ಅತ್ತಿಗೆಯನ್ನೇ ಕತ್ತು ಸೀಳಿ ಹತ್ಯೆಗೈದ ದುರ್ಘಟನೆ ಹುಬ್ಬಳ್ಳಿ ಎಸ್‌ಎಂ ಕೃಷ್ಣನಗರದಲ್ಲಿ ನಡೆದಿದೆ.
ಸಾಜಿಯಾಬಾನು ಕೊಲೆಯಾದ ಮಹಿಳೆ, ನಾಸೀರ್ ಹತ್ಯೆಗೈದ ಆರೋಪಿ. ಸಾದಿಕ್ ಹಾಗೂ ನಾಸೀರ್ ಸಂಬಂಧದಲ್ಲಿ ಅಣ್ಣ-ತಮ್ಮಂದಿರು. ಹತ್ಯೆಯಾದ ಸಾಜಿಯಾಭಾನು ಸಾದಿಕ್ ಪತ್ನಿಯಾಗಿದ್ದಳೆ.
ಕ್ಷುಲ್ಲಕ ಕಾರಣಕ್ಕೆ ಸಾದಿಕ್ ಹಾಗೂ ನಾಸೀರ್ ಮಧ್ಯೆ ಗಲಾಟೆಯಾಗಿದೆ. ಮಾತಿಗೆ ಮಾತು ಬೆಳೆದು ಪರಸ್ಪರ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಹರಿತವಾದ ಚಾಕು ಹಿಡಿದು ಅಣ್ಣನ ಮೇಲೆ ದಾಳಿ ಮಾಡಿದ್ದ ನಾಸಿರ್. ಚಾಕು ಹಿಡಿದು ದಾಳಿ ಮಾಡುವುದು ಕಂಡು ಜಗಳ ಬಿಡಿಸಲು ಬಂದಿರುವ ಸಾಜಿಯಾಭಾನು.
ಹುಬ್ಬಳ್ಳಿಯಲ್ಲಿ ಮತ್ತೆ ಪುಂಡರ ಅಟ್ಟಹಾಸ; 500 ರೂಪಾಯಿಗಾಗಿ 5 ಬಾರಿ ಚಾಕುವಿನಿಂದ ಇರಿದ ಸ್ನೇಹಿತರು!
ಜಗಳ ಬಿಡಿಸಲು ಮಧ್ಯೆ ನೀನು ಬರ್ತಿಯಾ ಅಂತಾ ಸಾಜಿಯಾಭಾನು ಕುತ್ತಿಗೆಗೆ ಚಾಕುವಿನಿಂದ ಇರಿದಿರುವ ನಾಸಿರ್. ನೋಡನೋಡುತ್ತಿದ್ದಂತೆ ರಕ್ತದ ಮಡುವಿನಲ್ಲಿ ಒದ್ದಾಡುತ್ತ ಬಿದ್ದ ಸಾಜಿಯಾಭಾನು. ಸ್ಥಳೀಯರ ಸಹಾಯದಿಂದ ತಕ್ಷಣ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ತೀವ್ರ ರಕ್ತಸ್ರಾವದಿಂದ ಮೃತಪಟ್ಟ ಸಾಜಿಯಾಭಾನು.
ಕೊಲೆ ಮಾಡಲೆಂದೇ ಚಾಕು ತಂದಿದ್ದ ಆರೋಪಿ:
ಕೊಲೆ ಮಾಡಲೆಂದೇ ಚಾಕು ತಂದಿದ್ದಾನೆ. ನನ್ನ ಹೆಂಡತಿಯನ್ನ ಕೊಲೆ ಮಾಡುವುದರ ಜೊತೆಗೆ ನನ್ನ, ಮಕ್ಕಳನ್ನು ಕೊಲೆಗೂ ಯತ್ನಿಸಿದ್ದಾನೆ ಎಂದು ಮೃತ ಸಾಜಿಯಾಭಾನು ಪತಿ ಸಾಧಿಕ್ ಆರೋಪಿಸಿದ್ದಾರೆ.
ಕುಡಿದು ಬಂದಾಗೆಲ್ಲ ನಾಸೀರ್ ಜಗಳ ಮಾಡುತ್ತಿದ್ದ. ಇಂದು ಕಾರ್ಯಕ್ರಮವೊಂದಕ್ಕೆ ಹೋಗಿದ್ದ ನನ್ನ ಹೆಂಡತಿಯನ್ನು ಕರೆಯಿಸಿ ಚಾಕುವಿನಿಂದ ಇರಿದಿದ್ದಾನೆ. ನನ್ನ ತಲೆ ಮತ್ತು ಕೈಗೂ ಚಾಕು ಹಾಕಿದ್ದಾನೆ. ನನ್ನ ಪತ್ನಿಯ ಹತ್ಯೆ ಮಾಡಿದ ಬಳಿಕ ಓಡಿಹೋಗಿದ್ದಾನೆ. ಯಾವುದೇ ತಕರಾರು ಇರಲಿಲ್ಲ, ತೊಂದರೆ ಕೊಟ್ಟಿರಲಿಲ್ಲ. ನನ್ನ ಪತ್ನಿಯನ್ನ ವಿನಾಕಾರಣ ಹತ್ಯೆ ಮಾಡಿದ್ದಾನೆ ಎಂದು ಹೇಳಿದ್ದಾರೆ. ಸಾಜಿಯಾಭಾನು ಹತ್ಯೆ ವಿಚಾರ ತಿಳಿದು ಆಕೆಯ ಪೋಷಕರು ನಾಜೀರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.