ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚಾಗಿ ಕಾಡುವ ಖಿನ್ನತೆ… ಪರಿಹಾರ ತಿಳಿಯಿರಿ
ಖಿನ್ನತೆ ಇತ್ತೀಚಿನ ದಿನಗಳಲ್ಲಿ ಜನರನ್ನು ಹೆಚ್ಚು ಕಾಡುತ್ತಿರುವ ಸಮಸ್ಯೆಯಾಗಿದೆ. ಈ ಸಮಸ್ಯೆಯನ್ನು ಲಘುವಾಗಿ ತೆಗೆದುಕೊಳ್ಳಬಾರದು. ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚು ಸಾಮಾನ್ಯ. ಅದರ ರೋಗಲಕ್ಷಣಗಳನ್ನು ಗುರುತಿಸಿ ಮತ್ತು ನಿಮ್ಮ ಸುತ್ತಲಿನ ಯಾರಾದರೂ ಖಿನ್ನತೆಯಿಂದ ಬಳಲುತ್ತಿದ್ದರೆ ಸಹಾಯ ಮಾಡಿ.
ಖಿನ್ನತೆಯು (depression) ಒಂದು ಮಾನಸಿಕ ಸಮಸ್ಯೆಯಾಗಿದ್ದು, ಅದು ಹೆಚ್ಚಾಗಿ ಗಮನಕ್ಕೆ ಬರುವುದಿಲ್ಲ. ದೇಹದಲ್ಲಿ ಯಾವುದೇ ರೀತಿಯ ಗಾಯವಾದಾಗ, ಯಾವುದೇ ಸಮಸ್ಯೆ ಇದ್ದರೆ, ನಾವು ಅದಕ್ಕೆ ಚಿಕಿತ್ಸೆ ನೀಡುತ್ತೇವೆ ಆದರೆ ಮನಸ್ಸಿಗೆ ಸಂಬಂಧಿಸಿದ ಈ ಸ್ಥಿತಿಗೆ ಗಮನ ಹರಿಸುವುದಿಲ್ಲ. ಖಿನ್ನತೆಯು ಅನೇಕ ರೀತಿಯ ಸಮಸ್ಯೆಗಳನ್ನು ಉಂಟುಮಾಡುವ ಸ್ಥಿತಿಯಾಗಿದೆ. ನಮ್ಮ ದೈಹಿಕ ಆರೋಗ್ಯದಂತೆ (Physical Health), ಮಾನಸಿಕ ಆರೋಗ್ಯವೂ (Mental Health) ಬಹಳ ಮುಖ್ಯ. ಇದನ್ನ ಕಡೆಗಣಿಸಿದ್ರೆ ಅಪಾಯ ಹೆಚ್ಚು.
ಖಿನ್ನತೆಯ ಸಮಸ್ಯೆಯು ಇಂದಿನ ಸಮಯದಲ್ಲಿ ಬಹಳ ಸಾಮಾನ್ಯವಾಗಿದೆ, ಆದರೆ ಅನೇಕ ಬಾರಿ ಜನರು ಹಿಂಜರಿಕೆಯಿಂದಾಗಿ ಅದರ ಬಗ್ಗೆ ಮಾತನಾಡುವುದಿಲ್ಲ. ಖಿನ್ನತೆಯ ಚಿಹ್ನೆಗಳನ್ನು ನೋಡಿದ ನಂತರವೂ, ಜನರು ಹೆಚ್ಚಾಗಿ ಅದನ್ನು ಅರ್ಥಮಾಡಿಕೊಳ್ಳುವುದಿಲ್ಲ, ಇದರಿಂದಾಗಿ ಈ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ. ಖಿನ್ನತೆ ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು ಸಾಮಾನ್ಯವಾಗಿದೆ. ಖಿನ್ನತೆಯ ರೋಗಲಕ್ಷಣಗಳು ಕೆಲವೊಮ್ಮೆ ನಿಧಾನವಾಗಿ ಕಾಣಿಸಿಕೊಳ್ಳುತ್ತವೆ ಮತ್ತು ಕಾಲಾನಂತರದಲ್ಲಿ ಇದು ಅಪಾಯಕಾರಿ ರೂಪ ಪಡೆಯಬಹುದು..
ಮೇ ಮಾನಸಿಕ ಆರೋಗ್ಯ ಜಾಗೃತಿ ತಿಂಗಳು. ಮಾನಸಿಕ ಆರೋಗ್ಯದ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಇದರ ಹಿಂದಿನ ಉದ್ದೇಶವಾಗಿದೆ. ಲಿಂಗ ಅಂತರ, ಕೀಳರಿಮೆ, ಹಾರ್ಮೋನುಗಳ ಬದಲಾವಣೆ ಮತ್ತು ಪ್ರಸವಾನಂತರದ ಖಿನ್ನತೆ ಸೇರಿದಂತೆ ಮಹಿಳೆಯರಲ್ಲಿ ಖಿನ್ನತೆಗೆ ಅನೇಕ ಕಾರಣಗಳಿವೆ. ಖಿನ್ನತೆ ಕಾಣಿಸಿಕೊಂಡಾಗ ಏನೆಲ್ಲಾ ಬದಲಾವಣೆಯಾಗುತ್ತೆ ನೋಡೋಣ.
ಮೂಡ್ ಸ್ವಿಂಗ್ (Mood swing)
ಇದು ಮಹಿಳೆಯರಲ್ಲಿ ಖಿನ್ನತೆಯ ಸಾಮಾನ್ಯ ಲಕ್ಷಣವಾಗಿದೆ. ಋತುಚಕ್ರದ ಸಮಯದಲ್ಲಿ ಮೂಡ್ ಸ್ವಿಂಗ್ ಆಗೋದು ಸಾಮಾನ್ಯ. ಆದರೆ ಆ ಸಮಯವನ್ನು ಬಿಟ್ಟು ಬೇರೆ ಸಮಯದಲ್ಲೂ ಪದೇ ಪದೇ ಮೂಡ್ ಆಗುತ್ತಿದ್ದರೆ , ಕಿರಿಕಿರಿ ಅನುಭವಿಸುತ್ತೀರಿ, ಕೆಲವೊಮ್ಮೆ ಅದರ ಬಗ್ಗೆ ನೀವು ಮಾತನಾಡದೆ ಅಳುತ್ತೀರಿ ಎಂದಾದರೆ ಆವಾಗ ಜಾಗರೂಕರಾಗಿರಬೇಕು.
sleep
ನಿದ್ರೆಯ ಕೊರತೆ (Sleeplessness)
ಖಿನ್ನತೆಯು ನಿದ್ರೆಯ ಸಮಸ್ಯೆಗಳನ್ನು ಉಂಟುಮಾಡಬಹುದು. ಆಗಾಗ್ಗೆ ಖಿನ್ನತೆಗೆ ಒಳಗಾದ ಮಹಿಳೆಯರು ತಡರಾತ್ರಿಯಲ್ಲಿ ಎಚ್ಚರವಾಗಿರುತ್ತಾರೆ ಮತ್ತು ತಮ್ಮ ಭೂತ ಅಥವಾ ವರ್ತಮಾನ ಮತ್ತು ನಾಳೆಯ ಬಗ್ಗೆ ಚಿಂತಿತರಾಗಿರುತ್ತಾರೆ. ಯಾವುದರ ಬಗ್ಗೆಯಾದರೂ ಯೋಚಿಸುವುದು, ಪ್ರತಿಯೊಂದು ತಪ್ಪಿಗೂ ನೀವೇ ತಪ್ಪಿತಸ್ಥರೆಂದು ನಂಬುವುದು ಸಹ ಖಿನ್ನತೆಯ ಲಕ್ಷಣವಾಗಿದೆ.
ಯಾವುದರಲ್ಲೂ ಆಸಕ್ತಿ ಇರೋದಿಲ್ಲ
ಖಿನ್ನತೆಗೆ ಒಳಗಾದಾಗ, ನೆಚ್ಚಿನ ವಿಷಯಗಳಲ್ಲಿ ಆಸಕ್ತಿ ಹೊಂದುವುದನ್ನು ಸಹ ನಿಲ್ಲಿಸುತ್ತೀರಿ. ನೀವು ಯಾವುದರ ಬಗ್ಗೆಯೂ ಆಸಕ್ತಿ ಹೊಂದಿಲ್ಲದಿದ್ದರೆ, ನೆಚ್ಚಿನ ಚಲನಚಿತ್ರವನ್ನು ನೋಡುವುದು, ಸ್ನೇಹಿತರೊಂದಿಗೆ ಸುತ್ತಾಡುವುದು, ಎಲ್ಲವೂ ನಿಷ್ಪ್ರಯೋಜಕವೆಂದು ತೋರಿದರೆ, ಅದು ಖಿನ್ನತೆಯ ಲಕ್ಷಣವಾಗಿರಬಹುದು.
ಅಹಿತಕರ ಭಾವನೆ (uncomfortable)
ಖಿನ್ನತೆಯಿಂದಾಗಿ, ಮಹಿಳೆಯರು ಆಗಾಗ್ಗೆ ಅಸೌಖ್ಯವನ್ನು ಅನುಭವಿಸುತ್ತಾರೆ. ಅನೇಕ ಬಾರಿ ಆತಂಕವು ತುಂಬಾ ಹೆಚ್ಚುತ್ತದೆ, ಅದನ್ನು ನಿಯಂತ್ರಿಸುವುದು ಕಷ್ಟ. ಇದಲ್ಲದೆ, ಖಿನ್ನತೆಯಿಂದಾಗಿ ನೀವು ಯಾವಾಗಲೂ ದಣಿವನ್ನು ಅನುಭವಿಸಬಹುದು.
ಹೀಗಾದಾಗ ಏನು ಮಾಡಬೇಕು?
ನಿಮ್ಮ ಸುತ್ತಲಿನ ಮಹಿಳೆಯಲ್ಲಿ ಖಿನ್ನತೆಯ ಲಕ್ಷಣಗಳನ್ನು ನೀವು ನೋಡುತ್ತಿದ್ದರೆ, ಅವರಿಗೆ ಸ್ಪೇಸ್ ನೀಡಿ. ಅವರ ಮಾತನ್ನು ಕೇಳಿ (listen to them) ಮತ್ತು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ.
ಆಗಾಗ್ಗೆ ಮಹಿಳೆಯರಿಗೆ ಮನಸು ಬಿಚ್ಚಿ ಮಾತನಾಡಲು ಸಾಧ್ಯವಾಗದ ಕಾರಣ ಖಿನ್ನತೆಗೆ ಬಲಿಯಾಗುತ್ತಾರೆ, ಯಾವುದೇ ಆಘಾತವನ್ನು ತಪ್ಪಿದಲು, ಅವರ ಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ.
ಖಿನ್ನತೆಯಿಂದ ಬಳಲುತ್ತಿರುವ ಮಹಿಳೆಯರು ಹೆಚ್ಚಾಗಿ ಒಂಟಿತನವನ್ನು ಅನುಭವಿಸುತ್ತಾರೆ. ಈ ಕಾರಣದಿಂದಾಗಿ, ಅವರು ಭಯಭೀತರಾಗಲು ಪ್ರಾರಂಭಿಸುತ್ತಾರೆ. ಅವರು ಏಕಾಂಗಿಯಲ್ಲ ಎಂದು ಅವರಿಗೆ ಭರವಸೆ ನೀಡಿ.
ಅವರ ಮೇಲೆ ಕಿರುಚುವ ಅಥವಾ ಕೋಪಗೊಳ್ಳುವ ಬದಲು ಅವರ ಮಾನಸಿಕ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ.
ರೋಗಲಕ್ಷಣಗಳು ಹೆಚ್ಚಾಗಿದ್ದರೆ, ಖಂಡಿತವಾಗಿಯೂ ಮನೋವೈದ್ಯರನ್ನು (psychiatrist) ಭೇಟಿ ಮಾಡಿ. ಹಿಂಜರಿಯಲು ಅಥವಾ ಭಯಪಡಲು ಏನೂ ಇಲ್ಲ.