ಗರ್ಬಾ ಸಂಭ್ರಮದಲ್ಲಿ ದುರಂತ; ಕೇವಲ 24 ಗಂಟೆಯಲ್ಲಿ 10 ಮಂದಿ ಹೃದಯಾಘಾತಕ್ಕೆ ಬಲಿ!

ಹೃದಯ ಬಡಿತ ಸ್ವಲ್ಪ ಹೆಚ್ಚಾದ್ರೂ ಈಗ ಟೆನ್ಷನ್ ಶುರುವಾಗುತ್ತೆ. ಅದಕ್ಕೆ ಕಾರಣ ಹೆಚ್ಚಾಗ್ತಿರುವ ಹೃದಯಾಘಾತ ಪ್ರಕರಣ. ಅದರಲ್ಲೂ ಗುಜರಾತ್‌ನ ಅಹಮದಾಬಾದ್‌ನಲ್ಲಿ ಗರ್ಬಾ ಸಂಭ್ರಮದಲ್ಲಿ ದುರಂತವೇ ನಡೆದು ಹೋಗಿದೆ. ಕೇವಲ 24 ಗಂಟೆಯಲ್ಲಿ 10 ಮಂದಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

Ten people Die Of Heart Attack In 24 Hours At Garba Events in Gujarat Vin

ಅಹಮದಾಬಾದ್: ಹೃದಯಾಘಾತವು ಒಂದು ಕಾಲದಲ್ಲಿ ಅಪರೂಪವಾಗಿತ್ತು. ಕೇವಲ ವಯಸ್ಸಾದವರಿಗೆ ಮಾತ್ರ ಹಾರ್ಟ್ ಅಟ್ಯಾಕ್ ಆಗುತ್ತಿತ್ತು. ಆದರೆ ಈಗ ಕಿರಿಯರು, ಹಿರಿಯರು ಅನ್ನೋ ಭೇದವಿಲ್ಲದೆ ಎಲ್ಲರೂ ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ. ಇದರಿಂದ ಪ್ರಪಂಚದಾದ್ಯಂತ ಅನೇಕ ಜನರು ಸಾಯುತ್ತಿದ್ದಾರೆ ಎಂದು ಸಮೀಕ್ಷೆಗಳು ಬಹಿರಂಗಪಡಿಸುತ್ತವೆ. ವಿಶ್ವಾದ್ಯಂತ ಸಾವಿಗೆ ಹೃದಯಾಘಾತವು ಪ್ರಮುಖ ಕಾರಣವಾಗಿದೆ ಎಂದು ಸಮೀಕ್ಷೆಗಳು ಹೇಳುತ್ತವೆ. ಬದಲಾಗುತ್ತಿರುವ ಜೀವನಶೈಲಿ, ಒತ್ತಡ, ಕೆಟ್ಟ ಆಹಾರ ಪದ್ಧತಿ ಹೀಗೆ ನಾನಾ ಕಾರಣಗಳಿಂದ ಹೃದ್ರೋಗಗಳ ಸಂಖ್ಯೆ ವಿಪರೀತವಾಗಿ ಹೆಚ್ಚುತ್ತಿದೆ ಎನ್ನುತ್ತಾರೆ ಆರೋಗ್ಯ ತಜ್ಞರು. 

ವ್ಯಾಯಾಮ ಮಾಡುವಾಗ, ಡ್ಯಾನ್ಸ್ ಮಾಡುವಾಗ, ಸುಮ್ಮನೆ ಕುಳಿತಿರುವಾಗ ಹೃದಯಾಘಾತಕ್ಕೆ (Heartattack) ಒಳಗಾಗಿ ಕುಸಿದು ಬೀಳುವ ಘಟನೆಗಳು ಇತ್ತೀಚಿಗೆ ಹೆಚ್ಚುತ್ತಿದೆ. ಇಂತಹ ಹೃದಯಾಘಾತದ ವಿಡಿಯೋಗಳು ಪ್ರತಿದಿನ ಸಾಮಾಜಿಕ ಜಾಲತಾಣಗಳಲ್ಲಿ (Social media) ಹರಿದಾಡುತ್ತಲೇ ಇರುತ್ತವೆ. ಕಳೆದ 24 ಗಂಟೆಗಳಲ್ಲಿ ಗುಜರಾತ್‌ನಲ್ಲಿ ಗರ್ಬಾ ನೃತ್ಯ (Garba dance) ಮಾಡುವಾಗ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

World Heart Day: ನಿದ್ದೆಯಲ್ಲೇ ಹಾರ್ಟ್‌ಅಟ್ಯಾಕ್ ಆಗೋದ್ಯಾಕೆ..ಹೀಗಾಗದಿರಲು ಏನ್ಮಾಡ್ಬೇಕು?

ಸರ್ಕಾರಿ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳಿಗೆ ಹೈ ಅಲರ್ಟ್ ನೀಡಿದ ಸರ್ಕಾರ
ಹೀಗೆ ಗರ್ಬಾ ಡ್ಯಾನ್ಸ್ ಮಾಡುವಾಗ ಮೃತಪಟ್ಟವರಲ್ಲಿ ಬರೋಡಾದ ದಾಭೋಯ್‌ನ 13 ವರ್ಷದ ಹುಡುಗನೂ ಸೇರಿದ್ದಾನೆ. ಕಪದ್ವಾಂಜ್‌ನ 17 ವರ್ಷದ ಬಾಲಕ ಕೂಡ ಗರ್ಬಾ ಆಡುವಾಗ ಸಾವನ್ನಪ್ಪಿದ್ದಾನೆ. ಮೊದಲಿಗೆ ಅಹಮದಾಬಾದ್‌ನ 24 ವರ್ಷದ ವ್ಯಕ್ತಿಯೊಬ್ಬರು ಗರ್ಬಾ ಸಮಯದಲ್ಲಿ ಹಠಾತ್ ಕುಸಿದು ಸಾವನ್ನಪ್ಪಿದರು. ರಾಜ್ಯದಲ್ಲಿ ಕಳೆದೊಂದು ದಿನದಲ್ಲಿ ಇದೇ ರೀತಿಯ ಪ್ರಕರಣಗಳು ವರದಿಯಾಗಿವೆ.

ತಕ್ಷಣ ಕಾರ್ಯಪ್ರವೃತ್ತರಾಗಿರುವ ಸರ್ಕಾರ, ಗಾರ್ಬಾ ಸಂಭ್ರಮ ನಡೆಯುವ ಸ್ಥಳಗಳಿಂದ ಹತ್ತಿರದಲ್ಲಿರುವ ಎಲ್ಲ ಸರ್ಕಾರಿ ಆಸ್ಪತ್ರೆಗಳಿಗೆ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಿಗೆ ಹೈ ಅಲರ್ಟ್​ ನೀಡಿದೆ. ಹೃದಯ ಸಂಬಂಧಿತ ಮತ್ತು ಉಸಿರಾಟದ ಸಮಸ್ಯೆಯಿಂದ ಯಾರೇ ಬಂದರೂ ತಕ್ಷಣ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದೆ.

ಮಗಳ ಮದ್ವೆಯ ದಿನ ಹೃದಯಾಘಾತ, ತಂದೆ ಸಾವು; ಹೆಚ್ಚು ಖುಷಿಯಾದ್ರೂ ಹಾರ್ಟ್‌ಅಟ್ಯಾಕ್‌ ಆಗುತ್ತಾ?

ಆರೋಗ್ಯ ಸಿಬ್ಬಂದಿ ಹೆಚ್ಚು ಅಲರ್ಟ್‌ ಆಗಿರುವಂತೆ ಸೂಚನೆ
ಗರ್ಬಾ ಆಚರಣೆಗಳು ಸಾಮಾನ್ಯವಾಗಿ ಸಂಜೆ 6ರಿಂದ 2 ಗಂಟೆಯ ನಡುವೆ ನಡೆಯುತ್ತದೆ. ನವರಾತ್ರಿಯ ಮೊದಲ ಆರು ದಿನಗಳಲ್ಲಿ 108 ತುರ್ತು ಆಂಬ್ಯುಲೆನ್ಸ್ , ಹೃದಯ ಸಂಬಂಧಿ ಸಮಸ್ಯೆಗಳಿಗೆ 521 ಕರೆಗಳನ್ನು ಮತ್ತು ಉಸಿರಾಟದ ತೊಂದರೆಗಾಗಿ ಹೆಚ್ಚುವರಿ 609 ಕರೆಗಳನ್ನು ಸ್ವೀಕರಿಸಿದೆ. ಹೀಗಾಗಿ ಆರೋಗ್ಯ ಇಲಾಖೆ, ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಿಗೆ ಎಚ್ಚರಿಕೆಯಿಂದಿರಲು ಸೂಚನೆ ನೀಡಿದೆ. ಆರೋಗ್ಯ ಸಿಬ್ಬಂದಿ ಹೆಚ್ಚು ಅಲರ್ಟ್‌ ಆಗಿರುವಂತೆ ತಿಳಿಸಲಾಗಿದೆ. 

ತುರ್ತು ಸಂದರ್ಭಗಳಲ್ಲಿ ಆಂಬ್ಯುಲೆನ್ಸ್‌ಗಳಿಗೆ ಈವೆಂಟ್‌ಗಳಿಗೆ ತ್ವರಿತವಾಗಿ ಪ್ರವೇಶಿಸಲು ಕಾರಿಡಾರ್‌ಗಳನ್ನು ರಚಿಸಲು ಗರ್ಬಾ ಸಂಘಟಕರಿಗೆ ಸೂಚನೆ ನೀಡಲಾಗಿದೆ. ತಮ್ಮ ಸಿಬ್ಬಂದಿಗೆ ಸಿಪಿಆರ್ ತರಬೇತಿ ನೀಡಲು ಮತ್ತು ಭಾಗವಹಿಸುವವರಿಗೆ ಸಾಕಷ್ಟು ನೀರಿನ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಅವರಿಗೆ ಸಲಹೆ ನೀಡಲಾಗಿದೆ. ಇದಲ್ಲದೆ, ಗರ್ಬಾ ಸಂಘಟಕರು ಸ್ಥಳಗಳಲ್ಲಿ ವೈದ್ಯರು ಮತ್ತು ಆಂಬ್ಯುಲೆನ್ಸ್‌ಗಳನ್ನು ನಿಲ್ಲಿಸುವ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸುವವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ಕೈಗೊಂಡಿದ್ದಾರೆ. 

ಈ ವರ್ಷ ನವರಾತ್ರಿ ಉತ್ಸವಕ್ಕೂ ಮುನ್ನ ಗುಜರಾತ್‌ನಲ್ಲಿ ಗರ್ಬಾ ಅಭ್ಯಾಸ ಮಾಡುವಾಗ ಮೂವರು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಹೀಗಾಗಿ ಹೃದಯಾಘಾತಕ್ಕೆ ಸಂಬಂಧಿಸಿದ ಆತಂಕ ಮತ್ತಷ್ಟು ಹೆಚ್ಚಿದೆ.

Latest Videos
Follow Us:
Download App:
  • android
  • ios