Asianet Suvarna News Asianet Suvarna News

Health Tips: ಕಾಲು ನೋವು ನಿರ್ಲಕ್ಷ್ಯಿಸಬೇಡಿ: ದೇಹದಲ್ಲಿನ ಈ ಸಮಸ್ಯೆ ಲಕ್ಷಣವಿರಬಹುದು!

ಫ್ಯಾಟಿ ಲಿವರ್ ಕಾಯಿಲೆಯ ಆರಂಭಿಕ ಹಂತಗಳಲ್ಲಿ ಯಾವುದೇ ಗಮನಾರ್ಹ ಲಕ್ಷಣ ಕಾಣಿಸೋದಿಲ್ಲ. ಆದರೆ ರೋಗ ಗಂಭೀರ ಸ್ವರೂಪ ಪಡೆದಾಗ ಅನೇಕ ಸಮಸ್ಯೆಯಾಗುತ್ತದೆ. ಲಿವರ್ ಹಾಳಾಗಿದೆ ಎಂಬುದನ್ನು ನಮ್ಮ ದೇಹದಲ್ಲಾಗಿರುವ ಕೆಲ ಬದಲಾವಣೆಯಿಂದ ನಾವು ಪತ್ತೆ ಮಾಡಬೇಕು. ತಕ್ಷಣ ಚಿಕಿತ್ಸೆ ಪಡೆಯಬೇಕು.

Swelling And Pain In Leg Also Common Symptom Of Liver Problems
Author
First Published Jan 23, 2023, 7:11 PM IST

ಮನುಷ್ಯನ ದೇಹ ಒಂದು ಸೇತುವೆ ಇದ್ದ ಹಾಗೆ. ಅದರಲ್ಲಿ ಒಂದು ಭಾಗ ಹಾಳಾದರೆ ಸಾಕು ಉಳಿದ ಭಾಗಗಳು ಕೂಡ ಕ್ರಮೇಣ ಹಾಳಾಗುತ್ತವೆ. ದೇಹದ ಪ್ರತಿಯೊಂದು ಅಂಗವೂ ವಿಶಿಷ್ಟ ಕಾರ್ಯವೈಖರಿಯನ್ನು ಹೊಂದಿದೆ. ದೇಹ ಆರೋಗ್ಯದಿಂದ ಇದ್ದಾಗ ಎಲ್ಲ ಭಾಗಗಳು ತಮ್ಮ ತಮ್ಮ ಕೆಲಸವನ್ನು ಚಾಚೂ ತಪ್ಪದೆ ಮಾಡುತ್ತವೆ. ಅದೇ ಶರೀರದ ಒಂದು ಭಾಗ ತೊಂದರೆಗೆ ಸಿಲುಕಿತೆಂದರೂ ಸಾಕು ಅದರ ಇಫೆಕ್ಟ್ ಇನ್ನೊಂದು ಅಂಗದ ಮೇಲಾಗುತ್ತದೆ. ಹಾಗಾಗಿ ನಾವು ನಮ್ಮ ಬಾಹ್ಯ ಅಂಗಗಳ ಬಗ್ಗೆ ಎಷ್ಟು ಕಾಳಜಿ ವಹಿಸುತ್ತೇವೆಯೋ ಅಷ್ಟೇ ಕಾಳಜಿಯನ್ನು ದೇಹದ ಒಳಗಿನ ಅಂಗಗಳಿಗೂ ಕೊಡಬೇಕು.

ಇತ್ತೀಚಿನ ಜನರ ಆಹಾರ (Food) ಪದ್ಧತಿ ಹಾಗೂ ಜೀವನಶೈಲಿ (Lifestyle) ಯು ದೇಹದ ಒಳ ಅಂಗಗಳಿಗೆ ಬಹಳ ಮಾರಕವಾಗಿದೆ. ತಿಳಿದೋ ಅಥವಾ ತಿಳಿಯದೆಯೋ ನಾವು ಅನೇಕ ವಿಷಯುಕ್ತ ಆಹಾರಗಳನ್ನು ಸೇವಿಸುತ್ತಿದ್ದೇವೆ. ದೇಹದ ವಿಷಕಾರಿ ಅಂಶಗಳನ್ನು  ಹೊರಹಾಕುವ ಕೆಲಸವನ್ನು ಲಿವರ್ (Liver)  ಅಚ್ಚುಕಟ್ಟಾಗಿ ಮಾಡುತ್ತದೆ. ಆದರೆ ನಾವು ಸೇವಿಸುವ ಆಹಾರಗಳಿಂದ ಲಿವರ್ ನಲ್ಲಿ ವಿಷಕಾರಿ ಅಂಶಗಳು ಶೇಖರಣೆ ಆಗಿ ದುರ್ಬಲವಾದರೆ ಅದು ಹೇಗೆ ತಾನೇ ತನ್ನ ಕೆಲಸ ಮಾಡಬಲ್ಲದು?

ನಮ್ಮ ದೇಹದ ಅವಿಭಾಜ್ಯ ಅಂಗ ಲಿವರ್. ಇದು ರಕ್ತದಲ್ಲಿರುವ ಹಾನಿಕಾರಕ ವಸ್ತುಗಳನ್ನು ಹೊರಹಾಕುತ್ತದೆ. ಔಷಧಿಗಳು, ರಾಸಾಯನಿಕಗಳನ್ನು ಚಯಾಪಚಯಗೊಳಿಸುತ್ತದೆ. ಇದು ಗ್ಲುಕೋಸ್ ಅನ್ನು ಉತ್ಪಾದಿಸುವ ಮತ್ತು ಸಂಗ್ರಹಿಸುವುದರ ಮೂಲಕ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಹಾಗೂ ಕೊಲೆಸ್ಟ್ರಾಸ್ ಮಟ್ಟವನ್ನು ನಿಯಂತ್ರಿಸುತ್ತದೆ. ಹೀಗೆ ದಿನದ ಇಪ್ಪತ್ತನಾಲ್ಕು ಗಂಟೆಯೂ ಕೆಲಸ ಮಾಡುವ ಲಿವರ್ ನಮ್ಮ ಆಹಾರ ಪದ್ಧತಿಯಿಂದ ಹಾಳಾಗುತ್ತದೆ. ಇದರಿಂದ ವಾಂತಿ, ಹೊಟ್ಟೆ ನೋವು, ಕಣ್ಣು ಹಳದಿಯಾಗುವುದು, ಅಜೀರ್ಣ, ಮಲ ಮೂತ್ರಗಳಲ್ಲಿ ಬದಲಾವಣೆ ಮುಂತಾದ ಹತ್ತು ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ದೇಹದ ಯಾವ ಭಾಗದಲ್ಲಿ ವ್ಯತ್ಯಾಸ ಕಂಡುಬಂದರೂ ವೈದ್ಯರ ಬಳಿ ಪರೀಕ್ಷಿಸಬೇಕು. ಲಿವರ್ ತೊಂದರೆಯಿಂದ ಫ್ಯಾಟಿ ಲಿವರ್ ಮತ್ತು ಇನ್ನೂ ಅನೇಕ ಸಮಸ್ಯೆಗಳು ಉಂಟಾಗುತ್ತವೆ.  ನಿಮ್ಮ ದೇಹದಲ್ಲಿನ ಈ ಸಮಸ್ಯೆಗಳಿಗೂ ಲಿವರ್ ಕಾರಣವಾಗಿರಬಹುದು.

ಕಾಲಿನ ನೋವು : ಕಾಲಿನ ನೋವು ಈಗ ಎಲ್ಲರಿಗೂ ಇರುವ ಸಾಮಾನ್ಯ ಸಮಸ್ಯೆ. ಹಾಗಂತ ಅದನ್ನು ನಿರ್ಲಕ್ಷಿಸುವಂತಿಲ್ಲ. ಏಕೆಂದರೆ ಲಿವರ್ ಕೆಲಸ ಮಾಡುವುದನ್ನು ನಿಲ್ಲಿಸಿದಾಗ ಅದರ ಪ್ರಭಾವ ಪಿತ್ತಜನಕಾಂಗದ ಮೇಲೂ ಆಗುತ್ತದೆ. ಪಿತ್ತಜನಕಾಂಗ ಸರಿಯಾಗಿ ಕೆಲಸನಿರ್ವಹಿಸದೇ ಇದ್ದಾಗ ಶರೀರದ ಕೆಳಭಾಗದಲ್ಲಿ ನೀರು ಸಂಗ್ರಹವಾಗಿ ಕಾಲು ಊದಿಕೊಳ್ಳುತ್ತದೆ. ಎಡಿಮಾ, ಸಿರೋಸಿಸ್, ವೆರಿಕೋಸ್ ವೈನ್ಸ್, ಹೈಪರ್ ಟೆನ್ಷನ್ ಮುಂತಾದ ಸಮಸ್ಯೆಗಳು ಕೂಡ ಲಿವರ್ ತೊಂದರೆಯಿಂದಲೇ ಆಗುತ್ತದೆ.

HEALTH TIPS: ವರ್ಷಕ್ಕೊಮ್ಮೆಯೂ ನೆಗಡಿ ಕಾಡ್ತಿಲ್ಲವೆಂದ್ರೆ ಎಚ್ಚರ! ಹುಚ್ಚು ಕಾಡಬಹುದು

ತುರಿಕೆ : ಮೊದಲೇ ಹೇಳಿದಂತೆ ಲಿವರ್ ತೊಂದರೆಯಿಂದ ಪಿತ್ತಜನಕಾಂಗ ಖಾಯಿಲೆಗೆ ಒಳಗಾಗುತ್ತದೆ. ಪಿತ್ತಜನಕಾಂಗದ ತೊಂದರೆಯಿಂದ ಕೈ ಮತ್ತು ಕಾಲುಗಳಲ್ಲಿ ತುರಿಕೆ ಉಂಟಾಗುತ್ತದೆ. ಲಿವರ್ ತೊಂದರೆಯಿಂದ ಪ್ರಾಥಮಿಕ ಪಿತ್ತರಸ ಸಿರೋಸಿಸ್ (ಪಿಬಿಸಿ), ಪ್ರಾಥಮಿಕ ಸ್ಕೆಲೆರೊಸಿಂಗ್ ಕೊಲಾಂಗೈಟಿಸ್ (ಪಿ ಎಸ್ ಬಿ) ಮುಂತಾದ ಖಾಯಿಲೆಗಳು ಕಾಣಿಸುತ್ತವೆ. ಇದರಿಂದ ಪಿತ್ತರಸ ನಾಳಗಳು ಹಾನಿಯಾಗುತ್ತವೆ.

ರಾತ್ರಿ ಮಲಗಿದಾಗ ಜೊಲ್ಲು ಸುರಿಸುತ್ತೀರಾ? ಕಾರಣ ಇಲ್ಲಿದೆ ನೋಡಿ

ಮರಗಟ್ಟುವುದು ಮತ್ತು ಜುಮುಗುಡುವ ಸಮಸ್ಯೆ : ಹೆಪಟೈಟಿಸ್ ಸಿ ಮತ್ತು ಪಿತ್ತಜನಕಾಂಗದ ಖಾಯಿಲೆಯಿಂದ ಕೈ ಕಾಲುಗಳು ಮರಗಟ್ಟುವುದು ಮತ್ತು ಜುಮುಗುಡುವಿಕೆಯಂತಹ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಇದರಿಂದ ನರರೋಗಗಳೂ ಕೂಡ ಉಂಟಾಗಬಹುದು. ಲಿವರ್ ಸಾಮಾನ್ಯವಾಗಿ ವೈರಸ್ ಸೋಂಕು, ವಿಪರೀತ ಮದ್ಯಪಾನದಿಂದ ತೊಂದರೆಗೆ ಒಳಗಾಗುತ್ತದೆ. ಮುಖ್ಯವಾಗಿ ಹೆಪಟೈಟಿಸ್ ಸಿ ಸೋಂಕು. ಇದಕ್ಕೆ ಇನ್ನೂ ವ್ಯಾಕ್ಸೀನ್ ಕೂಡ ಬಂದಿಲ್ಲ. ಹೆಪಟೈಟಿಸ್ ಸಿ ಸಾಮಾನ್ಯವಾಗಿ ಕಲುಷಿತ ರಕ್ತದ ಮೂಲಕ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಕೆಲವು ಜನರಿಗೆ ಹೆಪಟೈಟಿಸ್ ಸಿ ಸೋಂಕು ಲಿವರ್ ನ ಕ್ಯಾನ್ಸರ್ ಗೆ ಕಾರಣವಾಗುತ್ತದೆ.

Follow Us:
Download App:
  • android
  • ios