ರಾತ್ರಿ ಮಲಗಿದಾಗ ಜೊಲ್ಲು ಸುರಿಸುತ್ತೀರಾ? ಕಾರಣ ಇಲ್ಲಿದೆ ನೋಡಿ
ಗಾಢ ನಿದ್ರೆಯಿಂದ(Deep Sleep) ಎಚ್ಚರವಾದಾಗ ಕೆಲವೊಮ್ಮೆ ಮುಜಗರ ಮೂಡಿಸುತ್ತೆ. ಕಾರಣ ನಿದ್ರೆಯಲ್ಲಿ ಬಾಯಿಯಿಂದ ಸುರಿದ ಜೊಲ್ಲಿನಿಂದಾಗಿ(Drooling). ನಿದ್ರೆಯಲ್ಲಿರುವಾಗ ಜೊಲ್ಲು ಸುರಿಯುವುದೇಕೆ? ಇದಕ್ಕೆ ಕಾರಣ ಏನು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
ರಾತ್ರಿ ಕಲೆವೊಮ್ಮೆ ಮಲಗಿದಾಗ ನಿದ್ರೆ(Sleep) ಬರುವುದಿಲ್ಲ. ಪಕ್ಕದಲ್ಲಿ ಮಲಗಿದವರ ಗೊರಕೆಯಿಂದಲೂ ನಿದ್ರೆಗೆ ಭಂಗವಾಗುವುದೂ ಒಂದು ಕಾರಣ. ಗೊರೆಯುವುದು ಎಂದರೆ ಇದು ಗಾಢ ನಿದ್ರೆಯ ಸಂಕೇತ. ಈ ಸಂದರ್ಭದಲ್ಲಿ ಬಹುತೇಕ ಜನರಿಗೆ ಬಾಯಿಯಿಂದ ಲಾಲಾರಸವು(Saliva) ಹೊರಹೊಮ್ಮುತ್ತದೆ. ಇದನ್ನು ಸಾಮಾನ್ಯ ಭಾಷೆಯಲ್ಲಿ ಜೊಲ್ಲು(Drooling) ಸುರಿಯುವುದು ಎನ್ನುತ್ತೇವೆ. ಇದು ಬಹುತೇಕ ಅನಾನುಕೂಲತೆಯನ್ನು ಅನುಭವಿಸುವಂತೆ ಮಾಡುತ್ತದೆ. ನಿದ್ರೆ ಸಮಯದಲ್ಲಿ ಜೊಲ್ಲು ಸುರಿಯುವುದು ಹೆಚ್ಚು. ರಾತ್ರಿ ವೇಳೆ ನುಂಗುವ ಪ್ರತಿವರ್ತನಗಳು ಮುಖದ ಉಳಿದ ಸ್ನಾಯುಗಳಂತೆ ವಿಶ್ರಾಂತಿ ಪಡೆಯುತ್ತವೆ. ಇದರರ್ಥ ಲಾಲಾರಸವು ಶೇಖರಗೊಳ್ಳಬಹುದು ಮತ್ತು ಕೆಲವೊಮ್ಮೆ ಬಾಯಿಯಿಂದ ಹೊರಹೊಮ್ಮಬಹುದು. ಹೆಚ್ಚಾಗಿ ಜೊಲ್ಲು ಸುರಿಸುವುದಕ್ಕೆ ವೈದ್ಯಕೀಯ ಭಾಷೆಯಲ್ಲಿ ಸಿಯಾಲೋರಿಯಾ (Sialorrhea) ಮತ್ತು ಹೈಪರ್ಸಲೈವೇಶನ್ (Hypersalivation) ಕರೆಯುತ್ತಾರೆ.
ನಿದ್ರೆ ಮಾಡುವಾಗ ಜೊಲ್ಲು ಸುರಿಸುವುದು ಸಾಮಾನ್ಯ. ಕೆಲವೊಮ್ಮೆ ಜೊಲ್ಲು ಸುರಿಸುವುದು ನರವೈಜ್ಞಾನಿಕ ಸ್ಥಿತಿ, ನಿದ್ರಾಹೀನತೆ(Sleep Disorder) ಅಥವಾ ಇತರೆ ಆರೋಗ್ಯ ಸ್ಥಿತಿಗೆ ಕಾರಣವಾಗುತ್ತದೆ. ಪಾರ್ಶ್ವವಾಯುವಿನಂತಹ ಆರೋಗ್ಯ ಘಟನೆಯ ನಂತರ ಸೆರೆಬ್ರಲ್ ಪಾಲ್ಸಿ(Cerebral Palsy) ಅಥವಾ ಮಲ್ಟಿಪಲ್ ಸಕ್ಲೆರೋಸಿಸ್(Multiple Sclerosis(MS) ಪರಿಣಾಮವಾಗಿ ಹೆಚ್ಚು ಜೊಲ್ಲು ಸುರಿಸಬಹುದು. ಜೊಲ್ಲು ಸುರಿಸುವುದೇಕೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
1. ನಿದ್ರೆಯ ಸ್ಥಾನ(Sleep Position): ಜೊಲ್ಲು ಸುರಿಸುವುದು ಗುರುತ್ವಾಕರ್ಷಣೆಯೊಂದಿಗೆ(Gravity) ಸಂಬAಧಿಸಿದೆ. ಹೌದು ಮಲಗುವ ಸ್ಥಾನವು ಬಾಯಿಯೊಳಗಿನ ಜೊಲ್ಲು ಸುರಿಸುವುದಕ್ಕೆ ಕಾರಣವಾಗುತ್ತದೆ. ಬದಿಯಲ್ಲಿ ಅಥವಾ ಹೊಟ್ಟೆಯ ಮೇಲೆ ಮಲಗುವವರಿಗೆ ನಿದ್ರೆ ಮಾಡುವಾಗ ಜೊಲ್ಲು ಸುರಿಯುವುಸು ಹೆಚ್ಚು. ಅದರಲ್ಲೂ ಬಾಯಿಯ ಮೂಲಕ ಉಸಿರಾಡುತ್ತೀರೆಂದರೆ(Respiration) ಅಥವಾ ಕಿರಿದಾದ ಸೈನಸ್(Narrow Sinus Passages) ಹಾದಿಗಳನ್ನು ಹೊಂದಿದ್ದರೆ ತುಟಿಗಳು ಉಸಿರಾಡಲು ತೆರೆದಾಗ ಸಂಗ್ರಹವಾದ ಲಾಲಾರಸವು ಬಾಯಿಯಿಂದ ಹೊರ ಸುರಿಯುತ್ತದೆ.
Health Tips: ಸಣ್ಣ ಶಬ್ಧಕ್ಕೂ ಎಚ್ಚರವಾಗ್ತಿದ್ಯಾ? ಈ ಖಾಯಿಲೆ ಕಾಡ್ಬಹುದು ಎಚ್ಚರ!
2. ಸೈನಸ್ ಬ್ಲಾಕ್(Sinus Block): ಶೀತವಾದಾಗ ಮೂಗು ಕಟ್ಟುವುದು ಸಾಮಾನ್ಯ. ಅಷ್ಟೇ ಅಲ್ಲದೆ ಕಿರಿದಾದ ಸೈನಸ್‌ನ ಹಾದಿಗಳು ಹೊಂದಿದ್ದರೆ ಎಲ್ಲಾ ಸಮಯದಲ್ಲೂ ಜೊಲ್ಲು ಸುರಿಸುವುದು ಕಾಣಬಹುದು. ಈ ಕಟ್ಟಿದ ಮೂಗು ಬಾಯಿಯಿಂದ ಉಸಿರಾಡುವಂತೆ ಪ್ರಚೋದಿಸುತ್ತದೆ ಮತ್ತು ಇದು ಬಾಯಿಯಿಂದ ಸಾಮಾನ್ಯಕ್ಕಿಂತ ಹೆಚ್ಚು ಜೊಲ್ಲು ಸುರಿಸುವಂತೆ ಮಾಡುತ್ತದೆ.
3. GERD: ಗ್ಯಾಸ್ಟೊçÃಇಂಟಸ್ಟೆöÊನಲ್ ರಿಫ್ಲೆಕ್ಸ್ ಡಿಸಾರ್ಡರ್ (Gastrointestinal Reflex Disorder). ಇದು ಜೀರ್ಣಕಾರಿ(Digestion) ಸ್ಥಿತಿಯ ವಿಷಯ. ಹೊಟ್ಟೆಯ ವಿಷಯಗಳು ಅನ್ನನಾಳಕ್ಕೆ ಮತ್ತೆ ಹರಿಯುತ್ತದೆ. ಇದು ಅನ್ನನಾಳದ ಒಳಪದರವನ್ನು ಹಾನಿಗೊಳಿಸುತ್ತದೆ. GERD ಡಿಸ್ಫೇಜಿಯಾವನ್ನು ಉಂಟುಮಾಡಬಹುದು ಅಂದರೆ ನುಂಗಲು ತೊಂದರೆ ಮಾಡಬಹುದು. ಜೊತೆಗೆ ಗಂಟಲಿನಲ್ಲಿ ಗಡ್ಡೆಯಿರುವಂತೆ ಅನಿಸುತ್ತದೆ. ಅತಿಯಾದ ಜೊಲ್ಲು ಸುರಿಯುವುದರಿಂದ ಈ ಭಾವನೆ ಬರಬಹುದು.
4. ಔಷಧಿಯ ಅಡ್ಡ ಪರಿಣಾಮ(Medication side effects): ದೀರ್ಘವಾದಿಯ ಕಾಯಿಲೆಗಳಿಗೆ ಒಳಗಾಗಿದ್ದರೆ ನೀವು ಔಷಧಿ ತೆಗೆದುಕೊಳ್ಳುತ್ತಿದ್ದರೆ ಜೊಲ್ಲು ಸುರಿಸುವುದು ಹೆಚ್ಚು. ಆಂಟಿ ಸೈಕೋಟಿಕ್(Antipsychotic Drugs) ಔಷಧಗಳು ಮತ್ತು ಆಲ್‌ಝೈಮರ್(Alzheimer) ಚಿಕಿತ್ಸೆಗಾಗಿ ಬಳಸುವ ಔಷಧಿಗಳು ಅತಿಯಾದ ಜೊಲ್ಲು ಸುರಿಸುವುದಕ್ಕೆ ಕಾರಣವಾಗುತ್ತದೆ.
5. ನುಂಗುವ ಸಮಸ್ಯೆ(Swallowing Disorder): ನುಂಗಲು ತೊಂದರೆ ಉಂಟುಮಾಡುವ ಯಾವುದೇ ಸ್ಥಿತಿಯನ್ನು ಡಿಸ್ಫೇಜಿಯಾ(Dysphagia) ಎನ್ನುತ್ತಾರೆ. ಈ ಸ್ಥಿತಿಯು ಅತಿಯಾಗಿ ಜೊಲ್ಲು ಸುರಿಸಲು ಕಾರಣವಾಗುತ್ತದೆ. ಜೊಲ್ಲು ಸುರಿಸುವುದು ಎಚ್ಚರಿಕೆಯ ಲಕ್ಷಣವಾಗಿರಬಹುದು. ಪಾರ್ಕಿನ್ಸನ್(Parkinsons), ಮಸ್ಕ್ಯೂಲರ್ ಡಿಸ್ಟೊçÃಫಿ(Muscular Dystrophy) ಮತ್ತು ಕೆಲವು ರೀತಿಯ ಕ್ಯಾನ್ಸರ್(Cancer) ಕೂಡ ಡಿಸ್ಫೇಜಿಯಾವನ್ನು ಉಂಟುಮಾಡಬಹುದು ಮತ್ತು ಉಗುಳನ್ನು ನುಂಗಲು ಕಷ್ಟವಾಗುತ್ತದೆ.
Hypersomnia Problem: ಏನು ಮಾಡಿದರೂ ನಿದ್ರೆ ತಡೆಯೋಕಾಗೋಲ್ಲ ಅಂದ್ರೆ ಈ ರೋಗವಿರುತ್ತೆ!
6. ನಿದ್ರೆಯಲ್ಲಿ ಉಸಿರುಕಟ್ಟುವಿಕೆ(Sleep apnea): ನಿದ್ರಿಸುವಾಗ ಉಸಿರುಗಟ್ಟುವ ಸಮಸ್ಯೆಯನ್ನು ಎದುರಿಸುತ್ತಿರಬಹುದು. ನಿದ್ರಿಸುವಾಗ ಕೆಲವೊಮ್ಮೆ ಉಸಿರಾಟವನ್ನು ನಿಲ್ಲಿಸುವುದರಿಂದ ನಿದ್ರೆಗೆ ಅಡ್ಡಿಯಾಗುತ್ತದೆ. ಇದು ಸ್ಲೀಪ್ ಅಪ್ನಿಯಕ್ಕೆ ಲಾಲಾರಸ ಅಥವಾ ಜೊಲ್ಲು ಅಪಾಯಕಾರಿ ಅಂಶವಾಗಿದೆ. ಸ್ಲೀಪ್ ಅಪ್ನಿಯವು ತುಂಬಾ ಗಂಭೀರವಾಗಿದೆ ಮತ್ತು ಸರಿಯಾದ ರೋಗನಿರ್ಣಯವನ್ನು ಪಡೆಯಬೇಕು. ರಾತ್ರಿಯಲ್ಲಿ ಹೆಚ್ಚು ಜೊಲ್ಲು ಸುರಿಸುತ್ತಿದ್ದರೆ, ನಿದ್ರೆಯಲ್ಲಿ ಉಸಿರುಕಟ್ಟುವಿಕೆಯ ಇತರ ಯಾವುದೇ ಅಂಶಗಳನ್ನು ಹೊಂದಿದ್ದರೆ ವೈದ್ಯರನ್ನು ಕಾಣಬೇಕಾಗುತ್ತದೆ. ಜೋರಾಗಿ ಗೊರಕೆ, ಗಾಬರಿಯಲ್ಲಿ ಎದ್ದೇಳುವುದು, ಉಸಿರುಗಟ್ಟಿದ ಭಾವನೆ, ರಾತ್ರಿ ಗಮನಿಸುವ ಸಮಸ್ಯೆಗಳು, ಕೇಂದ್ರೀಕರಿಸುವಲ್ಲಿ ತೊಂದರೆ, ಎಚ್ಚರವಿದ್ದಾಗ ಅರೆನಿದ್ರಾವಸ್ಥೆ, ಎಚ್ಚರವಿದ್ದಾಗ ಗಂಟಲು ನೋಯುತ್ತಿರುವುದು, ಒಣಗಿದ ಬಾಯಿ(Dry Mouth). ಇವು ಅತಿಯಾದ ಜೊಲ್ಲು ಸುರುಸಲು ಕಾರಣವಿರಬಹುದು.