Asianet Suvarna News Asianet Suvarna News

Health Disease : ಪುರುಷರಿಗೆ ಹೆಚ್ಚು ಖತರ್ನಾಕ್ ಬೇಸಿಗೆ…ರಾತ್ರಿ ಹೋಗ್ಬಹುದು ಪ್ರಾಣ..!

ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿ ಖಾಯಿಲೆಗಳು ಹೆಚ್ಚಾಗ್ತಿವೆ. ಚಿಕ್ಕ ವಯಸ್ಸಿನಲ್ಲೇ ಹಾರ್ಟ್ ಅಟ್ಯಾಕ್ ಸಂಭವಿಸುತ್ತಿದೆ. ಅದ್ರಲ್ಲೂ ಬೇಸಿಗೆಯ ರಾತ್ರಿಗಳು ಪುರುಷರಿಗೆ ಹೆಚ್ಚು ಅಪಾಯಕಾರಿಯಂತೆ. ಸಂಶೋಧನೆಯೊಂದು ಆಘಾತಕಾರಿ ಸಂಗತಿ ಹೊರ ಹಾಕಿದೆ.
 

Summer Season Is Very Dangerous For Men
Author
Bangalore, First Published Apr 2, 2022, 5:37 PM IST

ದೇಶದ ಹಲವು ರಾಜ್ಯಗಳಲ್ಲಿ ಬೇಸಿಗೆ (Summer) ಆರಂಭದಲ್ಲಿಯೇ ಬಿಸಿ (Heat) ತನ್ನ ಅಬ್ಬರ ತೋರಲಾರಂಭಿಸಿದೆ. ಒಂದೆಡೆ ಬಿಸಿಲ ತಾಪ ತನ್ನ ರಂಗು ತೋರಿಸುತ್ತಿದ್ದರೆ ಮತ್ತೊಂದೆಡೆ ಅಧ್ಯಯನ (Study) ವೊಂದು ಪುರುಷರ ಆತಂಕವನ್ನು ಹೆಚ್ಚಿಸಿದೆ. ಅಧ್ಯಯನದ ಪ್ರಕಾರ,  ಬೇಸಿಗೆಯಲ್ಲಿ ರಾತ್ರಿ ಹೆಚ್ಚಾಗುವ ತಾಪಮಾನವು ಪುರುಷರಿಗೆ ಅಪಾಯಕಾರಿ ಎನ್ನಲಾಗಿದೆ ಪುರುಷರಿಗೆ ಹೃದಯ ಸಂಬಂಧಿ ಕಾಯಿಲೆಗಳಿಂದ ಸಾವು ಬರುವ ಅಪಾಯ ಸುಮಾರು 4 ಪ್ರತಿಶತದಷ್ಟು ಹೆಚ್ಚಾಗುತ್ತದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ಹೃದ್ರೋಗಿಗಳು ಈ ಋತುವಿನಲ್ಲಿ ಹೆಚ್ಚು ಎಚ್ಚರಿಕೆಯಿಂದಿರಬೇಕೆಂದು ಅಧ್ಯಯನದಲ್ಲಿ ಹೇಳಲಾಗಿದೆ.

ಹೃದಯ ಸಂಬಂಧಿ ಕಾಯಿಲೆ ಹೆಚ್ಚಾಗಲು ಕಾರಣವೇನು ? :
ಅಧ್ಯಯನದ ಪ್ರಕಾರ, ಬೇಸಿಗೆ ರಾತ್ರಿಯಲ್ಲಿ ಹೆಚ್ಚಾಗುವ ತಾಪಮಾನ  ಮಹಿಳೆಯರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಪುರುಷರಿಗೆ ಮಾತ್ರ ಇದು ಅಪಾಯಕಾರಿ. ಕಳೆದ ಕೆಲವು ವರ್ಷಗಳಲ್ಲಿ, ಹೆಚ್ಚುತ್ತಿರುವ ತಾಪಮಾನದಿಂದಾಗಿ, ಹೃದಯ ಸಂಬಂಧಿ ಕಾಯಿಲೆಗಳಲ್ಲಿ ಗಮನಾರ್ಹ ಹೆಚ್ಚಳ ಕಂಡುಬಂದಿದೆ ಎಂದು ಹೊಸ ಸಂಶೋಧನೆಯಲ್ಲಿ ಹೇಳಲಾಗಿದೆ. ವಾಸ್ತವವಾಗಿ, ಶಾಖದ ಕಾರಣದಿಂದಾಗಿ ದೇಹದ ಉಷ್ಣತೆಯನ್ನು ಸಾಮಾನ್ಯ ತಾಪಮಾನದಲ್ಲಿ ಸ್ಥಿರವಾಗಿಡಲು ದೇಹದ ಚಯಾಪಚಯ ಹೆಚ್ಚು ಶ್ರಮಿಸಬೇಕಾಗುತ್ತದೆ. ಇದು ಹೃದಯದ ಮೇಲೆ ಭಾರವನ್ನು ಹೆಚ್ಚಿಸುತ್ತದೆ. ಈ ಕಾರಣದಿಂದಾಗಿ, ಹೃದಯ ಸಂಬಂಧಿ ಕಾಯಿಲೆಗಳಿಗೆ ಬಲಿಯಾಗುವ ಸಾಧ್ಯತೆಗಳು ಗಮನಾರ್ಹವಾಗಿ ಹೆಚ್ಚಾಗುತ್ತವೆ. 

ಎಷ್ಟು ಪ್ರಯತ್ನಿಸಿದ್ರೂ Body Weight ಇಳೀತಿಲ್ವಾ? ನೀವು ಈ ತಪ್ಪು ಮಾಡ್ತಿರಬಹುದು!

ಮಹಿಳೆಯರಿಗಿಲ್ಲ ಅಪಾಯ : ಹೃದಯ ಸಂಬಂಧಿ ಕಾಯಿಲೆ ಅಪಾಯ ಹಾಗೂ ಸಾವು 60 ರಿಂದ 65 ವರ್ಷ ವಯಸ್ಸಿನ ಪುರುಷರ ಮೇಲೆ ಮಾತ್ರ ಪರಿಣಾಮ ಬೀರುತ್ತದೆ ಎಂದು ಅಧ್ಯಯನವು ಹೇಳುತ್ತದೆ. ಇದು ಮಹಿಳೆಯರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಕಳೆದ 15 ವರ್ಷಗಳಲ್ಲಿ ಯುಕೆಯಲ್ಲಿ ಹೃದ್ರೋಗದಿಂದ 40,000 ಸಾವು ಸಂಭವಿಸಿದೆ ಎಂಬುದು ಅಧ್ಯಯನದಿಂದ ಹೊರಬಂದಿದೆ. ಟೊರೊಂಟೊ ವಿಶ್ವವಿದ್ಯಾನಿಲಯದ ತಂಡವು 2001 ಮತ್ತು 2015 ರ ನಡುವೆ ಜೂನ್-ಜುಲೈನಲ್ಲಿ ಹೃದಯ ಕಾಯಿಲೆಗಳಿಂದ ಸಾವನ್ನಪ್ಪಿದ ಡೇಟಾವನ್ನು ಸಂಗ್ರಹಿಸಿದೆ.

ಬೇಸಿಗೆಯಲ್ಲಿ ನಿಮ್ಮ ಹೃದಯದ ಆರೈಕೆಗೆ ನೀಡಿ ಮಹತ್ವ : ಬೇಸಿಗೆಯಲ್ಲಿ ಮಾತ್ರವಲ್ಲ ಎಲ್ಲ ಸಂದರ್ಭದಲ್ಲೂ ದೇಹಕ್ಕೆ ನೀರಿನ ಅವಶ್ಯಕತೆಯಿದೆ. ಬೇಸಿಗೆಯಲ್ಲಿ ದೇಹ ಹೆಚ್ಚು ನೀರನ್ನು ಬಯಸುತ್ತದೆ. ದೇಹದಲ್ಲಿ ನೀರಿನ ಸಮತೋಲನವನ್ನು ಕಾಪಾಡಿಕೊಳ್ಳಲು ಬೇಸಿಗೆಯಲ್ಲಿ ಹೆಚ್ಚಿನ ನೀರನ್ನು ಕುಡಿಯಿರಿ. ವ್ಯಾಯಾಮ ಮಾಡಿದ ನಂತರ ಅರ್ಧಗಂಟೆ ಬಿಟ್ಟು ನೀರು ಕುಡಿಯುವುದು ಬಹಳ ಮುಖ್ಯ. ಚಹಾ ಮತ್ತು ಕಾಫಿಯಂತ ಕೆಫೀನ್ ಪಾನೀಯ ಹಾಗೂ ಸಕ್ಕರೆ ಅಂಶ ಹೆಚ್ಚಿರುವ ಆಹಾರದ ಬದಲಿಗೆ ಮಜ್ಜಿಗೆ, ಲಸ್ಸಿ ಮತ್ತು ಹಣ್ಣಿನ ರಸವನ್ನು ಕುಡಿಯಿರಿ.
ಹೃದಯ ಸಂಬಂಧಿ ಕಾಯಿಲೆ ಇರುವವರು ಮಾತ್ರವಲ್ಲ ಎಲ್ಲರೂ ಬೇಸಿಗೆಯಲ್ಲಿ ಉಪ್ಪನ್ನು ಕಡಿಮೆ ಸೇವಿಸಿ. ಆಹಾರದಲ್ಲಿ ರಸಭರಿತವಾದ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಲು ಮರೆಯದಿರಿ. ಮಧ್ಯಾಹ್ನ ಮನೆಯಿಂದ ಹೊರಗೆ ಕಾಲಿಡುವುದನ್ನು ತಪ್ಪಿಸಿ. ಮಧ್ಯಾಹ್ನ 11 ಗಂಟೆಯಿಂದ 4 ಗಂಟೆಯವರೆಗೆ ಆದಷ್ಟು ಮನೆಯಲ್ಲಿಯೇ ಇರಿ. ನಿಮ್ಮ ರಕ್ತದೊತ್ತಡವನ್ನು ಪರೀಕ್ಷಿಸುತ್ತಿರಿ.  

ವ್ಯಕ್ತಿತ್ವಕ್ಕೆ ಧ್ರುವಗಳನ್ನು ನೀಡುವ Bipolar Disorder

ಹೃದಯ ಸಂಬಂಧಿ ಕಾಯಿಲೆಗಳಿಂದ ಇಷ್ಟು ಸಾವು : ಸಂಶೋಧನೆ ಫಲಿತಾಂಶಗಳ ಪ್ರಕಾರ, 2001 ಮತ್ತು 2015 ರ ನಡುವೆ, ಇಂಗ್ಲೆಂಡ್ ಮತ್ತು ವೆಲ್ಸ್ ನಲ್ಲಿ ಒಟ್ಟು 39,912 ಜನರು ಹೃದಯ ಕಾಯಿಲೆಗಳಿಂದ ಸಾವನ್ನಪ್ಪಿದ್ದಾರೆ. ಈ ಸ್ಥಳಗಳಲ್ಲಿ ತಾಪಮಾನದಲ್ಲಿ ಒಂದು ಡಿಗ್ರಿ ಹೆಚ್ಚಳವಾದ್ರೂ ಸಾವಿನ ಸಂಖ್ಯೆ ಹೆಚ್ಚಾಗುತ್ತದೆ. 60-64 ವರ್ಷ ವಯಸ್ಸಿನ ಜನರಲ್ಲಿ ಹೃದ್ರೋಗದಿಂದ 3.1 ಪ್ರತಿಶತದಷ್ಟು ಸಾವು ಸಂಭವಿಸುತ್ತದೆ ಎಂದು ಸಂಶೋಧನಾ ವರದಿಯಲ್ಲಿ ಹೇಳಲಾಗಿದೆ.   65 ವರ್ಷ ಮೇಲ್ಪಟ್ಟ ಪುರುಷರಲ್ಲಿ ಅಪಾಯ ಹೆಚ್ಚು. ಆದ್ರೆ ಮಹಿಳೆಯರಲ್ಲಿ ಅಪಾಯ ಕಂಡು ಬಂದಿಲ್ಲ. ಮಹಿಳೆಯರ ಬಗ್ಗೆ ಪ್ರತ್ಯೇಕ ಅಧ್ಯಯನ ನಡೆಯುತ್ತಿದೆ.

Follow Us:
Download App:
  • android
  • ios