Asianet Suvarna News Asianet Suvarna News

ಹೈಟ್ ಇರೋರು v/s ಕುಳ್ಳಗೆ ಇರೋರು, ಆರೋಗ್ಯ ಸಮಸ್ಯೆ ಯಾರಿಗೆ ಹೆಚ್ಚು ?

ಹೆಚ್ಚು ಹೈಟಾಗಿದ್ದೀನಿ (Height) ಅನ್ನೋ ಖುಷಿನಾ ? ಹಾಗಿದ್ರೆ ಹೊಸ ಅಧ್ಯಯನ (Study)ವೊಂದರಿಂದ ತಿಳಿದುಬಂದಿರೋ ಈ ಶಾಕಿಂಗ್ ವಿಚಾರನ ತಿಳ್ಕೊಳ್ಳಿ. ಹೈಟ್ ಇರೋರಿಗೆ ಆರೋಗ್ಯ ಸಮಸ್ಯೆ (Health Problme)ಗಳೂ ಜಾಸ್ತಿಯಂತೆ ನೋಡಿ. ಅಧ್ಯಯನದಲ್ಲಿ ತಿಳಿದುಬಂದಿದ್ದೇನು ಅನ್ನೋದ್ರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Study Says Taller People At A Higher Risk Of Skin Infections And Nerve Disorders Vin
Author
Bengaluru, First Published Jun 4, 2022, 12:39 PM IST

ಇವತ್ತಿನ ದಿನಗಳಲ್ಲಿ ವಯಸ್ಸಿನ (Age) ಅಂತರವಿಲ್ಲದೆ ಎಲ್ಲರಲ್ಲಿಯೂ ಆರೋಗ್ಯ ಸಮಸ್ಯೆ (Health problem) ಕಾಣಿಸಿಕೊಳ್ಳುತ್ತದೆ. ಮಕ್ಕಳು (Children), ವಯಸ್ಕರು, ವೃದ್ಧರು ಅನ್ನೋ ಬೇಧವಿಲ್ಲದೆ ಎಲ್ಲರೂ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಾರೆ. ಅದರಲ್ಲೂ ದೇಹದಲ್ಲಿ  ರೋಗ ನಿರೋಧಕ ಶಕ್ತಿ ಕಡಿಮೆಯಿರುವವರಂತೂ ಅತಿ ಹೆಚ್ಚು ಆರೋಗ್ಯ ಸಮಸ್ಯೆಯಿಂದ ಬಳಲಬೇಕಾಗುತ್ತದೆ. ಆದ್ರೆ ಹೊಸ ಅಧ್ಯಯನ ಒಂದರಿಂದ ತಿಳಿದುಬಂದಿರುವ ಅಚ್ಚರಿ ಸಂಗತಿಯನ್ನೊಂದು ಕೇಳಿ. ಹೆಚ್ಚು ಹೈಟ್ ಇರೋರಿಗೆ ಆರೋಗ್ಯದ ಅಪಾಯ ಹೆಚ್ಚಿದ್ಯಂತೆ. ಅದರಲ್ಲೂ ಮಹತ್ವದ ಸಂಶೋಧನೆಗಳು ಎತ್ತರ ಮತ್ತು ಪರಿಧಮನಿಯ ಹೃದಯ ಕಾಯಿಲೆಯ (Heart Disease) ಕಡಿಮೆ ಅಪಾಯದ ನಡುವಿನ ಸಂಪರ್ಕವನ್ನು ಮತ್ತು ಬಾಹ್ಯ ನರರೋಗ ಮತ್ತು ರಕ್ತಪರಿಚಲನಾ ಅಸ್ವಸ್ಥತೆಗಳಿಗೆ ಎತ್ತರ ಮತ್ತು ಹೆಚ್ಚಿನ ಅಪಾಯದ ನಡುವಿನ ಸಂಬಂಧವನ್ನು ಒಳಗೊಂಡಿವೆ.

ಯುಎಸ್ ಡಿಪಾರ್ಟ್ಮೆಂಟ್ ಆಫ್ ವೆಟರನ್ ಅಫೇರ್ಸ್‌ನ ಮಿಲಿಯನ್ ವೆಟರನ್ ಪ್ರೋಗ್ರಾಂ (ಎಂವಿಪಿ) ನಡೆಸಿದ ದೊಡ್ಡ ಅನುವಂಶಿಕ ಅಧ್ಯಯನವು ವ್ಯಕ್ತಿಯ ಎತ್ತರವು ಪ್ರೌಢಾವಸ್ಥೆಯಲ್ಲಿ ಅನೇಕ ಆರೋಗ್ಯ ಪರಿಸ್ಥಿತಿಗಳಿಗೆ ಅಪಾಯದ ಅಂಶವಾಗಬಹುದು ಎಂದು ಕಂಡುಹಿಡಿದಿದೆ. ಮಹತ್ವದ ಸಂಶೋಧನೆಗಳು ಹೆಚ್ಚು ಎತ್ತರ ಇರೋರಿಗೆ ಚರ್ಮದ ಸೋಂಕುಗಳು (Skin allergy), ನರಗಳ ಅಸ್ವಸ್ಥತೆಗಳ (Nerves problem) ಅಪಾಯ ಎಂದು ತಿಳಿಸಿದೆ. 

ತೆಳ್ಳಗೆ, ಬೆಳ್ಳಗೆ ಇರುವ ಪುರುಷರಲ್ಲಿ ಗುಪ್ತಾಂಗದ ಈ ಕ್ಯಾನ್ಸರ್‌ ಅಪಾಯ ಹೆಚ್ಚು !

ಅಧ್ಯಯನದ ನೇತೃತ್ವ ವಹಿಸಿದ್ದ ಈಸ್ಟರ್ನ್ ಕೊಲೊರಾಡೋ ಹೆಲ್ತ್ ಕೇರ್ ಸಿಸ್ಟಮ್‌ನ ಡಾ. ಶ್ರೀಧರನ್ ರಾಘವನ್, ಎಪಿಡೆಮಿಯೋಲಾಜಿಕ್ ದೃಷ್ಟಿಕೋನದಿಂದ ಕ್ಲಿನಿಕಲ್ ಪರಿಸ್ಥಿತಿಗಳಿಗೆ ಎತ್ತರವು ಹೇಗೆ ಸಂಬಂಧಿಸಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಮಹತ್ವದ ಕೊಡುಗೆಯಾಗಿದೆ ಎಂದು ಫಲಿತಾಂಶಗಳನ್ನು ವಿವರಿಸಿದ್ದಾರೆ. ಫಲಿತಾಂಶಗಳು ಅನುಭವಿಗಳ ಜೀವನದ ಮೇಲೆ ಪರಿಣಾಮ ಬೀರುವ ಎತ್ತರ ಮತ್ತು ಕ್ಲಿನಿಕಲ್ ಪರಿಸ್ಥಿತಿಗಳ ನಡುವಿನ ಸಂಬಂಧವನ್ನು ಎತ್ತಿ ತೋರಿಸುತ್ತವೆ ಎಂದು ಅವರು ತಿಳಿಸಿದ್ದಾರೆ.

ತಂಡವು ಎತ್ತರದ ಮೇಲೆ ಪ್ರಭಾವ ಬೀರುವ 3290 ಜೀನ್ ರೂಪಾಂತರಗಳನ್ನು ಮತ್ತು 1000ಕ್ಕೂ ಹೆಚ್ಚು ಕ್ಲಿನಿಕಲ್ ಗುಣಲಕ್ಷಣಗಳನ್ನು ಕಂಡು ಹಿಡಿದಿದೆ. ಎತ್ತರವು ನಿಮ್ಮ ಹೃತ್ಕರ್ಣದ ಕಂಪನ - ಹೃದಯ ಬಡಿತ - ಮತ್ತು ರಕ್ತಪರಿಚಲನೆಯ ತೊಂದರೆಗಳ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಇದು ದೃಢಪಡಿಸಿದೆ. ಜೀನ್‌ಗಳು ಎತ್ತರಕ್ಕೆ ಸಂಬಂಧಿಸಿರುವುದು ನರಗಳ ಹಾನಿ ಮತ್ತು ಚರ್ಮ ಮತ್ತು ಮೂಳೆಗಳ ಸೋಂಕುಗಳ ಹೆಚ್ಚಿನ ಅಪಾಯದೊಂದಿಗೆ ಸಂಬಂಧಿಸಿದೆ ಎಂದು ಅವರು ಕಂಡುಕೊಂಡರು.

ಮಾತ್ರವಲ್ಲ, ಎತ್ತರವನ್ನು ಸಾಮಾನ್ಯವಾಗಿ ರೋಗ (Disease)ಗಳಿಗೆ ಅಪಾಯಕಾರಿ ಅಂಶವೆಂದು ಪರಿಗಣಿಸಲಾಗುವುದಿಲ್ಲ. ಆದರೆ ಹಿಂದಿನ ಸಂಶೋಧನೆಯು ಯಾರಾದರೂ ಎಷ್ಟು ಎತ್ತರ ಇದ್ದಾರೆ ಎಂಬುದು ಹಲವಾರು ಆರೋಗ್ಯ ಪರಿಸ್ಥಿತಿಗಳ ಬಗ್ಗೆ ತಿಳಿಸುತ್ತದೆ ಎಂದಿದ್ದಾರೆ. ಎತ್ತರ ಮತ್ತು ಆರೋಗ್ಯದ ನಡುವಿನ ಸಂಬಂಧವು ಜೈವಿಕ ಆಧಾರವನ್ನು ಹೊಂದಿದೆಯೇ ಅಥವಾ ಇತರ ಅಂಶಗಳಿಂದಾಗಿ ಇದೆಯೇ ಎಂಬುದು ಸರಿಯಾಗಿ ಅರ್ಥಮಾಡಿಕೊಳ್ಳಲಾಗಿಲ್ಲ.

ಇದು ಸೊಂಟದ ವಿಷ್ಯ ! ನಿಮ್ ಹೈಟು ವೈಟು ಸರಿಯಾಗಿದ್ಯಾ ನೋಡ್ಕೊಳ್ಳಿ

ಯಾರಾದರೂ ವಯಸ್ಕರಾಗಿ ಎಷ್ಟು ಎತ್ತರಕ್ಕೆ ಬೆಳೆಯುತ್ತಾರೆ ಎಂಬುದು ಅವರ ಪೋಷಕರಿಂದ ಅನುವಂಶಿಕವಾಗಿ ಪಡೆದ ಜೀನ್‌ಗಳಿಂದ ಗುರುತಿಸಲ್ಪಡುತ್ತದೆ. ಆದರೆ ಪೋಷಣೆ, ಸಾಮಾಜಿಕ ಆರ್ಥಿಕ ಸ್ಥಿತಿ, ಮತ್ತು ಜನಸಂಖ್ಯಾಶಾಸ್ತ್ರದಂತಹ ಪರಿಸರ ಅಂಶಗಳು (ಉದಾಹರಣೆಗೆ, ವಯಸ್ಸು ಅಥವಾ ಲಿಂಗ) ಅಂತಿಮವಾಗಿ ಎತ್ತರವನ್ನು ನಿರ್ಧರಿಸುವಲ್ಲಿ ಒಂದು ಪಾತ್ರವನ್ನು ವಹಿಸುತ್ತವೆ. ಅದಕ್ಕಾಗಿಯೇ ಎತ್ತರ ಮತ್ತು ರೋಗದ ಅಪಾಯದ ನಡುವಿನ ಸಂಪರ್ಕವನ್ನು ನಿರ್ಧರಿಸುವುದು ಕಷ್ಟಕರವಾಗಿರುತ್ತದೆ ಎನ್ನಲಾಗಿದೆ.

ಎತ್ತರಕ್ಕೆ ಸಂಬಂಧಿಸಿದ ವೈದ್ಯಕೀಯ ಲಕ್ಷಣಗಳು ಸಾಮಾನ್ಯವಾಗಿ ಕಪ್ಪು ಮತ್ತು ಬಿಳಿ ರೋಗಿಗಳಲ್ಲಿ ಸ್ಥಿರವಾಗಿರುತ್ತವೆ.  ಎತ್ತರವು ಪರಿಧಮನಿಯ ಹೃದಯ ಕಾಯಿಲೆಯ ಕಡಿಮೆ ಅಪಾಯ ಮತ್ತು ಹೃತ್ಕರ್ಣದ ಕಂಪನ, ಬಾಹ್ಯ ನರರೋಗ ಮತ್ತು ರಕ್ತಪರಿಚಲನಾ ಅಸ್ವಸ್ಥತೆಗಳ ಹೆಚ್ಚಿನ ಅಪಾಯಕ್ಕೆ ಸಂಬಂಧಿಸಿದೆ. ಆದರೆ ಚರ್ಮ ಮತ್ತು ನರ ಸಂಬಂಧಿತ ರೋಗಗಳು ಹೆಚ್ಚು ಎತ್ತರ ಇರುವವರಲ್ಲಿ ಹೆಚ್ಚಾಗಿರುತ್ತದೆ ಎಂದು ಅಧ್ಯಯನದಿಂದ ಕಂಡು ಹಿಡಿಯಲಾಗಿದೆ. ಅದೇನೆ ಇರ್ಲಿ, ಅಧ್ಯಯನದಲ್ಲಿ ಕಂಡುಕೊಂಡಿದ್ದೇ ನಿಜವಾಗಿದ್ದರೆ, ಎತ್ತರ ಇರೋರು ಇನ್ಮುಂದೆ ಖುಷಿ ಪಡೋ ಬದ್ಲು ಸ್ಪಲ್ಪ ಬೇಜಾರು ಪಡಬೇಕಾದೀತು. 

Follow Us:
Download App:
  • android
  • ios