Asianet Suvarna News Asianet Suvarna News

ವೀರ್ಯದ ಸಂಖ್ಯೆ ಕಡಿಮೆಯಾಗಲು ಇವೆಲ್ಲ ಕಾರಣ ಎನ್ನುತ್ತೆ ಅಧ್ಯಯನ

ಸೆಕ್ಸ್ ಗೆ ಸಂಬಂಧಿಸಿದ ಸಮಸ್ಯೆ ಬಗ್ಗೆ ಬಹಿರಂಗವಾಗಿ ಮಾತನಾಡಲು ಜನರು ಹಿಂಜರಿಯುತ್ತಾರೆ. ಪ್ರತಿಷ್ಠೆ ಹೆಸರಿನಲ್ಲಿ ಪುರುಷರು ಇದಕ್ಕೆ ಚಿಕಿತ್ಸೆ ಪಡೆಯೋದಿಲ್ಲ.  ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡುವ ಬದಲು ಅದ್ರ ಬಗ್ಗೆ ತಿಳಿಯೋದು ಬಹಳ ಮುಖ್ಯ.  
 

Study Reveals Causes Behind Low Sperm Count In Men lifestyle health fitness issues roo
Author
First Published Oct 26, 2023, 12:31 PM IST | Last Updated Oct 26, 2023, 12:31 PM IST

ಕೆಲ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆ ಇರುತ್ತದೆ. ಸೆಕ್ಸ್ ಗೆ ಸಂಬಂಧಿಸಿದಂತೆ ಮನಬಿಚ್ಚಿ ಮಾತನಾಡುವ ಜನರು ನಮ್ಮಲ್ಲಿ ಈಗ್ಲೂ ಇಲ್ಲ. ಹಾಗಾಗಿ ಅದನ್ನು ಮುಚ್ಚಿಡುವ ಪ್ರಯತ್ನ ನಡೆಸ್ತಾರೆ. ಇದು ವಂಶಾಭಿವೃದ್ಧಿ ಸೇರಿದಂತೆ ದಾಂಪತ್ಯ ವಿರಸಕ್ಕೂ ಕಾರಣವಾಗುತ್ತದೆ. ವೀರ್ಯ ಸಂಖ್ಯೆಯಲ್ಲಿ ಇಳಿಕೆ ಅಥವಾ ದುರ್ಬಲತೆಗೆ ಅನೇಕ ಕಾರಣವಿದೆ. ಕಳಪೆ ಜೀವನಶೈಲಿ, ಬೊಜ್ಜು, ಅತ್ಯಧಿಕ ಮದ್ಯ ಸೇವನೆ ಇವೆಲ್ಲವೂ ವೀರ್ಯದ ಸಂಖ್ಯೆ ಇಳಿಕೆಗೆ ಕಾರಣವಾಗುತ್ತದೆ. ಈ ಬಗ್ಗೆ ಆಗಾಗ ಸಂಶೋಧನೆಗಳು ನಡೆಯುತ್ತಿರುತ್ತವೆ. ಈಗ ಮತ್ತೊಂದು ಹೊಸ ಅಧ್ಯಯನ ನಡೆದಿದೆ. ಇದ್ರಲ್ಲಿ ಪುರುಷರ ವೀರ್ಯ ಸಂಖ್ಯೆ ಕಡಿಮೆ ಆಗಲು ಕಾರಣವೇನು ಎಂಬುದನ್ನು ಹೇಳಲಾಗಿದೆ. 

ಎಡಿನ್‌ಬರ್ಗ್ ವಿಶ್ವವಿದ್ಯಾಲಯದ ವೆಲ್‌ಕಮ್ ಸೆಂಟರ್ ಫಾರ್ ಸೆಲ್ ಬಯಾಲಜಿ ಸಹಯೋಗದಲ್ಲಿ  ಅಧ್ಯಯನ (Study) ನಡೆದಿದೆ. ಪುರುಷರಲ್ಲಿ ಕಡಿಮೆ ವೀರ್ಯಾಣು (Sperm) ಇರಲು ಕಾರಣ ಅವರಲ್ಲಿ ವೀರ್ಯ ಉತ್ಪಾದನೆ ಸಾಧ್ಯವಾಗದೆ ಇರೋದು ಎಂದು  ಅಧ್ಯಯನದ ಸಂಶೋಧಕ ಸ್ಕಾಟ್ ಹೆವ್ಲಿ ಹೇಳಿದ್ದಾರೆ. ಆರಂಭದಲ್ಲಿಯೇ ಇದು ಪತ್ತೆ ಮಾಡಿ ಚಿಕಿತ್ಸೆ (Treatment) ಪಡೆದಲ್ಲಿ ಸಮಸ್ಯೆ ದೊಡ್ಡ ಮಟ್ಟ ತಲುಪುವುದನ್ನು ತಪ್ಪಿಸಬಹುದು. ಪುರುಷರ ದೇಹ ವೀರ್ಯ ತಯಾರಿಸಲು  ಒಂದು ರೀತಿಯ ಪ್ರೋಟೀನ್ ರಚನೆಯ ಅಗತ್ಯವಿರುತ್ತದೆ. ಪ್ರೋಟೀನ್ ರಚನೆ ಆಗದೆ ಹೋದಾಗ ವೀರ್ಯದ ಸಂಖ್ಯೆ ಕಡಿಮೆಯಾಗ್ತಾ ಬರುತ್ತದೆ. ಬೊಜ್ಜು, ಕೆಟ್ಟ ಜೀವನಶೈಲಿ, ಜಂಕ್ ಮತ್ತು ಸಂಸ್ಕರಿಸಿದ ಆಹಾರ ಸೇವನೆಯಿಂದ ಈ ಸಮಸ್ಯೆ ಕಾಡೋದು ಹೆಚ್ಚು. 

ಹೆರಿಗೆಯಲ್ಲಿ ಯಾವುದೇ ಸಮಸ್ಯೆ ಬಾರದಿರಲು, 9ನೇ ತಿಂಗಳು ಹೀಗೆ ಮಾಡಿ!

ವೀರ್ಯಾಣು ಸಂಖ್ಯೆ ಕಡಿಮೆಯಾಗಲು ಇದೆಲ್ಲ ಕಾರಣ ಎನ್ನುತ್ತದೆ ಅಧ್ಯಯನ : 
• ಪುರಷರ ಖಾಸಗಿ ಅಂಗ ಹೆಚ್ಚಿನ ಶಾಖದಲ್ಲಿದ್ದಾಗ ವೀರ್ಯಾಣು ಸಂಖ್ಯೆ ಕಡಿಮೆಯಾಗುವ ಅಪಾಯವಿರುತ್ತದೆ.
• ಬೈಕ್, ಟ್ರಕ್, ಕಾರಿನಂತಹ ವಾಹನವನ್ನು ದೀರ್ಘಕಾಲದವರೆಗೆ ಚಲಾಯಿಸುವುದ್ರಿಂದಲೂ ವೀರ್ಯದ ಸಂಖ್ಯೆಯಲ್ಲಿ ಇಳಿಕೆಯಾಗುತ್ತದೆ ಎಂದು ತಜ್ಞರು ಹೇಳ್ತಾರೆ.
• ಒತ್ತಡ ಕೂಡ ಇದಕ್ಕೆ ಮತ್ತೊಂದು ಕಾರಣವಾಗಿದೆ. ವ್ಯಕ್ತಿಯೊಬ್ಬ ಸದಾ ಆಲೋಚನೆಯಲ್ಲಿದ್ದರೆ, ದೀರ್ಘಕಾಲದ ಖಿನ್ನತೆಯಿಂದ ಬಳಲುತ್ತಿದ್ದರೆ ಆತನ ವೀರ್ಯದ ಸಂಖ್ಯೆ ಕಡಿಮೆಯಾಗುತ್ತದೆ.
• ವಿಕಿರಣಗಳು ಕೂಡ ಒಮ್ಮೊಮ್ಮೆ ಈ ಸಮಸ್ಯೆ ತಂದೊಡ್ಡುತ್ತವೆ.

ಲೈಫ್ ಹ್ಯಾಪಿಯಾಗಿರ್ಬೇಕೆಂದ್ರೆ ಸ್ವಲ್ಪ ವೈಫನ್ನು ಖುಷಿಯಾಗಿಡೋದು ಹೇಗೆ ಕಲೀರಿ!

• ಹಾಟ್ ಟಬ್ ನಲ್ಲಿ ಸ್ನಾನ ಮಾಡುವುದ್ರಿಂದಲೂ ಪುರುಷರ ವೀರ್ಯ ಸಂಖ್ಯೆಯಲ್ಲಿ ಇಳಿಕೆಯನ್ನು ನೀವು ಕಾಣ್ಬಹುದು.
• ನಿದ್ರಾಹೀನತೆ, ಪ್ರತಿ ದಿನ ಏಳರಿಂದ ಎಂಟು ಗಂಟೆಗಳ ಕಾಲ ಸರಿಯಾಗಿ ನಿದ್ರೆ ಮಾಡದೆ ಇರುವುದ್ರಿಂದಲೂ ಅನೇಕ ಪುರುಷರ ವೀರ್ಯದ ಸಂಖ್ಯೆಯಲ್ಲಿ ಇಳಿಕೆಯಾಗುತ್ತದೆ ಎನ್ನುತ್ತಾರೆ ತಜ್ಞರು.
• ದೀರ್ಘಕಾಲಿಕ ಅನಾರೋಗ್ಯ ಅಥವಾ ದೀರ್ಘಕಾಲ ಮಾತ್ರೆ, ಔಷಧಿ ಸೇವನೆ ಕೂಡ ಪುರುಷರ ವೀರ್ಯದ ಮೇಲೆ ಪರಿಣಾಮ ಬೀರುತ್ತದೆ. ಇದ್ರಿಂದ ಅವರ ವೀರ್ಯದ ಕೌಂಟ್ ಕಡಿಮೆಯಾಗುತ್ತದೆ.
• ತಂಬಾಕು ಹಾಗೂ ಅತಿಯಾದ ಮದ್ಯ ಸೇವನೆ ಕೂಡ ಇದಕ್ಕೆ ಇನ್ನೊಂದು ಕಾರಣವಾಗಿದೆ. ಹೆಚ್ಚು ತಂಬಾಕು ಸೇವನೆ ಮಾಡುವ ಮತ್ತು ಮಿತಿಗಿಂತ ಹೆಚ್ಚು ಮದ್ಯ ಸೇವನೆ ಮಾಡುವ ಪುರುಷರಲ್ಲಿ ಈ ಸಮಸ್ಯೆ ಸಾಮಾನ್ಯವಾಗಿದೆ.

ವೀರ್ಯದ ಪ್ರಮಾಣ ಹೆಚ್ಚಳಕ್ಕೆ ಏನು ಮಾಡ್ಬೇಕು? : 
• ವೀರ್ಯದ ಸಂಖ್ಯೆ ಹೆಚ್ಚಳಕ್ಕೆ ನೀವು ಮಾತ್ರೆ ಸೇವನೆ (Consuming Tablet), ಚಿಕಿತ್ಸೆಗೆ ಒಳಗಾಗ್ಲೇಬೇಕು ಎಂದೇನಿಲ್ಲ. ನಿಮ್ಮ ದಿನಚರಿಯಲ್ಲಿ ಬದಲಾವಣೆ ಮಾಡಿಕೊಂಡಲ್ಲಿ ಸಂಖ್ಯೆ ಹೆಚ್ಚಳ ಸಾಧ್ಯ.
• ನಿಯಮಿತ ವ್ಯಾಯಾಮ (Regular Exercise), ಯೋಗದಿಂದ (Yoga) ನೀವು ವೀರ್ಯದ ಸಂಖ್ಯೆ ಹೆಚ್ಚಿಸಿಕೊಳ್ಳಬಹುದು.
• ಆರೋಗ್ಯಕರ ಆಹಾರ ಸೇವನೆ ಕೂಡ ಇಲ್ಲಿ ಮುಖ್ಯವಾಗುತ್ತದೆ. 
• ಮದ್ಯಪಾನ (Consuming Alcohol), ತಂಬಾಕು ಸೇವನೆಯಿಂದ ಹೊರಗೆ ಬರುವುದು ಮುಖ್ಯವಾಗುತ್ತದೆ.
• ಉತ್ತಮ ಆಹಾರದ ಜೊತೆ ವಿಟಮಿನ್ ಸಿ ಸೇವನೆ ಮಾಡುವುದು ಒಳ್ಳೆಯದು. ಇದು ವೀರ್ಯದ ಸಂಖ್ಯೆ ಹೆಚ್ಚಳಕ್ಕೆ ನೆರವಾಗುತ್ತದೆ. 

Latest Videos
Follow Us:
Download App:
  • android
  • ios