ಲೈಫ್ ಹ್ಯಾಪಿಯಾಗಿರ್ಬೇಕೆಂದ್ರೆ ಸ್ವಲ್ಪ ವೈಫನ್ನು ಖುಷಿಯಾಗಿಡೋದು ಹೇಗೆ ಕಲೀರಿ!

ನಾನು, ನನ್ನಿಂದ ಎಂದೇ ಬದುಕುವ ಪುರುಷರ ಜೀವನದಲ್ಲಿ ನೆಮ್ಮದಿ ಸಿಗಲು ಸಾಧ್ಯವಿಲ್ಲ. ಅವರ ಜೀವನ ಖುಷಿ, ನೆಮ್ಮದಿಯಿಂದ ಇರಬೇಕೆಂದ್ರೆ ಪತ್ನಿಯ ಪಾತ್ರ ಮಹತ್ವದ್ದು. ಆಕೆ ಮುಖದಲ್ಲಿ ನಗು ಬಂದ್ರೆ ನಿಮ್ಮ ಬಾಳು ಬಂಗಾರವಾದಂತೆ.
 

Happy Wife Happy Life Secrets relationship tips for happy marrried life roo

ನನ್ನ ಹೆಂಡ್ತಿ ಖುಷಿಯಾಗಿದ್ರೆ ನಾನೂ ಖುಷಿನೇ. ಆಕೆ ಸಂತೋಷವೇ ನನ್ನ ಸಂತೋಷ ಅಂತಾ ಕೆಲ ವೃದ್ಧರು ಹೇಳ್ತಾ ನಗೋದನ್ನು ನೀವು ನೋಡ್ಬಹುದು. ಈ ಹ್ಯಾಪಿ ವೈಫ್, ಹ್ಯಾಪಿ ಲೈಫ್ ಅನ್ನೋದು ಬರೀ ತಮಾಷೆ ಮಾತಲ್ಲ. ಇದು ನೂರಕ್ಕೆ ನೂರು ಸತ್ಯ. ಸಂಸಾರದಲ್ಲಿ ಮಡದಿ ಸಂತೋಷವಾಗಿದ್ದರೆ ಇಡೀ ಮನೆ, ಇಡೀ ಕುಟುಂಬ ನೆಮ್ಮದಿ, ಸಂತೋಷದಿಂದ ಕೂಡಿರುತ್ತದೆ.  ಹಾಗಾಗಿ ಪುರುಷನಾದವನು ಹೆಂಡತಿ ಸಂತೋವಾಗಿದ್ದಾಳಾ. ನೆಮ್ಮದಿಯಾಗಿದ್ದಾಳಾ ಎಂಬುದನ್ನು ತಿಳಿದುಕೊಳ್ಬೇಕು. 

ಆಕೆಯನ್ನು ಸಂತೋಷ (Happiness) ವಾಗಿಡೋದು ಹೇಗೆ ಎಂಬ ಸಂಗತಿ ಕೂಡ ಪುರುಷನಾದವನಿಗೆ ಗೊತ್ತಿರಬೇಕು. ನಿಮ್ಮ ಪತ್ನಿ ಸಂತೋಷವಾಗಿದ್ದಾಳೆ ಎಂಬುದನ್ನು ನೀವು ತಿಳಿಯಲು ಏನು ಮಾಡ್ಬೇಕು ಎಂಬುದನ್ನು ನಾವು ಹೇಳ್ತೇವೆ.

ಗರ್ಲ್ ಫ್ರೆಂಡಿಗಾಗಿ ಸಾಲ ಮಾಡಿದ ವ್ಯಕ್ತಿಯ ನೋವಿನ ಸಾಂಗ್ ವೈರಲ್

ಪತ್ನಿ (Wife) ಯನ್ನು ಸಂತೋಷವಾಗಿಡೋದು ಹೇಗೆ? : 

ಪತಿಯಾದವನು ಪತ್ನಿಯನ್ನು ಅರ್ಥ ಮಾಡಿಕೊಳ್ಬೇಕು : ಪರಸ್ಪರ ಒಬ್ಬರನ್ನೊಬ್ಬರು ಅರಿತುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಪತ್ನಿಯ ಭಾವನೆಗಳನ್ನು ಅರ್ಥ ಮಾಡಿಕೊಂಡಾಗ ಆಕೆ ಸಂತೋಷವಾಗಿದ್ದಾಳಾ ಇಲ್ವಾ ಎನ್ನುವುದನ್ನು ನೀವು ಸುಲಭವಾಗಿ ಹೇಳ್ಬಹುದು. ಪತ್ನಿಯ ಮುಖಭಾವ, ಆಕೆ ವರ್ತನೆಯಲ್ಲಿಯೇ ಆಕೆಯ ಖುಷಿಯನ್ನು ನೀವು ಅಳೆಯಬಹುದು. ಪತ್ನಿ ಬಾರಿಯೂ ಆಕೆಯನ್ನು ಗಮನವಿಟ್ಟು ನೋಡಿ. ಪತ್ನಿ ತನ್ನ ಮನೆ, ಮಕ್ಕಳು, ಸಂಸಾರ, ಕೆಲಸದಲ್ಲಿ ನೆಮ್ಮದಿ, ಸಂತೋವನ್ನು ಕಾಣ್ತಿದ್ದಾಳೆ ಎಂಬುದನ್ನು ಪತ್ತೆ ಮಾಡಿ. ಇಲ್ಲವೆಂದಾದ್ರೆ ಅದನ್ನು ನೀಡಲು ನೀವೇನು ಮಾಡ್ಬೇಕು ಎಂಬುದರ ಬಗ್ಗೆ ಗಮನ ಹರಿಸಿ.

ಸೆಕ್ಸ್ ನಂತರ ಹೊಟ್ಟೆ ಸೆಳೆತ ಕಾಣಿಸಿಕೊಂಡರೇನು ಕಾರಣ?

ಆಕೆಯ ಜೊತೆ ಸದಾ ಇರಿ : ಪತ್ನಿಯಾದವಳು ಸದಾ ಪತಿ ತನ್ನ ಜೊತೆಗಿರಬೇಕೆಂದು ಬಯಸ್ತಾಳೆ. ಆಕೆಯ ಮೂಡ್ ಸ್ವಿಂಗ್ ಗೆ ಹಾರ್ಮೋನ್ ಕೂಡ ಕಾರಣವಾಗಿರುತ್ತದೆ. ಕಾರಣ ಯಾವುದೇ ಇರಲಿ ಪತ್ನಿಯ ಜೊತೆ ನೀವಿರಬೇಕಾಗುತ್ತದೆ. ಆಕೆ ಮೂಡ್ ಸ್ವಿಂಗ್ (Mood Sweing) ಆದಾಗ, ಆಕೆ ನೋವಿನಲ್ಲಿದ್ದಾಗ, ಆಕೆ ಯಾವುದೋ ಚಿಂತೆಯಲ್ಲಿದ್ದಾಗ ಬಹುತೇಕ ಪುರುಷರು ಇದನ್ನು ಗಮನಿಸೋದಿಲ್ಲ. ಆಕೆಗೆ ನೋವಾದ್ರೆ ನಮಗೇನು ಎನ್ನುವ ಭಾವನೆಯಲ್ಲಿರ್ತಾರೆ. ಅದು ಪತ್ನಿಯನ್ನು ಮತ್ತಷ್ಟು ನೋವಿಗೆ ತಳ್ಳುತ್ತದೆ. ಅದೇ ಆಕೆ ಬಳಿ ಬಂದು ಸಾಂತ್ವಾನ ಹೇಳಿದ್ರೆ ಆಕೆಗೆ ಧೈರ್ಯ ಬರುತ್ತದೆ. ಭಾವನಾತ್ಮಕವಾಗಿ ಅವಳು ಗಟ್ಟಿಯಾಗ್ತಾಳೆ. ಯಾವುದೇ ಪ್ರಯತ್ನವಿಲ್ಲದೆ ಆಕೆಯನ್ನು ನೀವು ಖುಷಿಪಡಿಸಬಹುದು.

ಪತ್ನಿ ಮಾತನ್ನು ಆಲಿಸಿ : ಪತಿಯಾದವನು ತನ್ನ ಮಾತು ಆಲಿಸಲ್ಲ ಎನ್ನುವುದು ಬಹುತೇಕ ಮಹಿಳೆಯರ ಕಂಪ್ಲೇಂಟ್. ಮನೆಗೆ ಬಂದು ಆರಾಮವಾಗಿ ಕುಳಿತುಕೊಳ್ಳುವ ಪುರುಷರು, ಪತ್ನಿ ಹೇಳಿದ್ದನ್ನು ಆಲಿಸೋದಿಲ್ಲ. ಅವಳ ಮಾತನ್ನು ನಿರ್ಲಕ್ಷ್ಯ ಮಾಡ್ತಾರೆ. ಇದು ತಪ್ಪು. ಆಕೆ ಏನು ಹೇಳ್ತಿದ್ದಾಳೆ ಅನ್ನೋದನ್ನು ಮೊಬೈಲ್ ಬದಿಗಿಟ್ಟು ಆಲಿಸಬೇಕು. ಅದಕ್ಕೆ ಸ್ಪಂದಿಸಬೇಕು. ತನ್ನ ಮಾತು ಕೇಳುವ ಜನರೂ ನನ್ನ ಸುತ್ತಲಿದ್ದಾರೆ ಎಂಬುದು ಗೊತ್ತಾದಾಗ ಪತ್ನಿ ಖುಷಿಯಾಗ್ತಾಳೆ. ನೀವು ನೀಡಿದ ಪ್ರೀತಿಯ ಡಬಲ್ ಪ್ರೀತಿ ಆಕೆಯಿಂದ ಬಂದಿರುತ್ತದೆ.

ಸಾಮಾನ್ಯವಾಗಿ ಪತ್ನಿ ಯಾವುದೇ ಸಮಸ್ಯೆ ತಂದಿರಲಿ ಅದನ್ನು ಪುರುಷರು ಕ್ಷುಲ್ಲಕವಾಗಿ ನೋಡ್ತಾರೆ. ಅದೊಂದು ಸಮಸ್ಯೆಯೇ ಅಲ್ಲ ಎನ್ನುವಂತೆ ವರ್ತನೆ ಮಾಡ್ತಾರೆ. ತಮ್ಮ ಸಮಸ್ಯೆಯನ್ನು ಮಾತ್ರ ದೊಡ್ಡ ಸಮಸ್ಯೆ ಎಂದು ಭಾವಿಸುವ ಪುರುಷರಿಗೆ ಪತ್ನಿಯ ಯಾವುದೇ ಮಾತು ಸಿರಿಯಸ್ ಆಗಿ ಕಾಣೋದೇ ಇಲ್ಲ. ಮಾತಿಗೆ ಮೊದಲೇ, ಯಾಕೆ ಟೆನ್ಷನ್, ಬಿಟ್ಬಿಡು ಎನ್ನುತ್ತಾರೆ. ಪತ್ನಿಯಾದವಳಿಗೆ ಈ ಮಾತು ಕೇಳಲು ಇಷ್ಟವಿರೋದಿಲ್ಲ. ಪತಿಯಾದವನು ಎಂದಿಗೂ ಈ ತಪ್ಪನ್ನು ಮಾಡ್ಬಾರದು. ಪ್ರತಿಯೊಬ್ಬರ ಪ್ರಪಂಚ ಬೇರೆ, ಸಮಸ್ಯೆ ಬೇರೆ. ಹಾಗಾಗಿ ಪತ್ನಿಯ ಸಮಸ್ಯೆಯನ್ನು ಆಲಿಸಬೇಕು. ಆಕೆ ನಿಮ್ಮಿಂದ ಪರಿಹಾರ ಬಯಸದೆ ಇರಬಹುದು, ನೋವು ಕೇಳುವ ಕಿವಿಯ ಅಗತ್ಯವಿರುತ್ತದೆ. ಪತ್ನಿಯನ್ನು ಯಾವಾಗ್ಲೂ ಒಳ್ಳೆ ಪಾರ್ಟನರ್ ರೀತಿಯಲ್ಲಿ ನೋಡಿದಾಗ, ಆಕೆಯ ಮಾತು ಕೇಳಿದಾಗ, ಸ್ಪಂದಿಸಿದಾಗ ಆಕೆ ಸದಾ ಖುಷಿಯಾಗಿರಲು ಸಾಧ್ಯ. 

Latest Videos
Follow Us:
Download App:
  • android
  • ios