Health Tips: ರಾತ್ರಿ ನಿದ್ರೆಯೇ ಬರೋಲ್ವಾ? ಮಲಗೋ ಮುಂಚೆ ಈ ಹಣ್ಣು ತಿಂದ್ಬಿಡಿ ಸಾಕು
ಈಗಿನ ಜೀವನಶೈಲಿ, ಒತ್ತಡ ಮನುಷ್ಯನ ದಿನಚರಿಯಲ್ಲಿ ಬದಲಾವಣೆ ತಂದಿದೆ. ಯಾವಾಗ್ಲೋ ತಿನ್ನು, ಯಾವಾಗ್ಲೋ ಮಲಗು ಎನ್ನುವ ಸ್ಥಿತಿ ಇದೆ. ಇದ್ರಿಂದ ಅನೇಕರು ನಿದ್ರಾಹೀನತೆಗೆ ಒಳಗಾಗ್ತಿದ್ದಾರೆ. ರಾತ್ರಿ ನಿದ್ರೆ ಸರಿಯಾಗಿ ಆಗ್ಬೇಕೆಂದ್ರೆ ಏನು ಮಾಡ್ಬೇಕು ಗೊತ್ತಾ?
ವಿಶ್ವದಾದ್ಯಂತ ರಾತ್ರಿ ನಿದ್ರೆ ಬರಲ್ಲ ಎನ್ನುವವರ ಸಂಖ್ಯೆ ಸಿಕ್ಕಾಪಟ್ಟೆ ಇದೆ. ಏನೇ ಕಸರತ್ತು ಮಾಡಿದ್ರೂ ಕೆಲವರಿಗೆ ರಾತ್ರಿ ನಿದ್ರೆ ಬರೋದಿಲ್ಲ. ನಿದ್ರೆ ಇಲ್ಲ ಅಂದ್ರೆ ಮರುದಿನ ಪೂರ್ತಿ ಹಾಳು. ಹಗಲಿನಲ್ಲಿ ಕುಳಿತಲ್ಲೇ ನಿದ್ರೆ ಬರ್ತಿರುತ್ತದೆ. ಸುಸ್ತು ಕಾಡ್ತಿರುತ್ತದೆ. ಕೆಲಸ ಮಾಡಲು ಉತ್ಸಾಹ ಇರೋದಿಲ್ಲ. ಇದ್ರ ಜೊತೆ ದೀರ್ಘಾವದಿಯಲ್ಲಿ ಆರೋಗ್ಯವೂ ಹಾಳು. ನಿದ್ರಾಹೀನತೆಯಿಂದ ಮಾನಸಿಕ ಹಾಗೂ ದೈಹಿಕ ಎರಡೂ ಆರೋಗ್ಯ ಹದಗೆಡುತ್ತದೆ.
ಆರೋಗ್ಯ (Health) ಕರ ಮತ್ತು ಸಂತೋಷದ ಜೀವನ ನಡೆಸಲು ನಿದ್ರೆ (Sleep) ಅತ್ಯಗತ್ಯ. ಉತ್ತಮ ನಿದ್ರೆ ನಿಮ್ಮ ದಿನಚರಿಯಾದ್ರೆ ಮತ್ತು ಅದಕ್ಕೆ ನೀವು ಅಂಟಿಕೊಂಡ್ರೆ ಧನಾತ್ಮಕತೆ (Positivity) ಹೆಚ್ಚಾಗುತ್ತದೆ. ನಿಮ್ಮ ಒತ್ತಡದ ಮಟ್ಟ ಕಡಿಮೆ ಆಗುತ್ತದೆ. ಪ್ರತಿ ದಿನವನ್ನು ನೀವು ಉಲ್ಲಾಸದಿಂದ ಶುರು ಮಾಡಲು ಇದು ನೆರವಾಗುತ್ತದೆ. ಆದ್ರೆ ಈ ನಿದ್ರೆ ಸುಖ ಅನೇಕರಿಗಿಲ್ಲ. ಪ್ರತಿ ದಿನ ನಿದ್ರೆಯದ್ದೇ ದೊಡ್ಡ ಸಮಸ್ಯೆ ಎನ್ನುವವರು ನೀವಾಗಿದ್ದರೆ ನಿಮಗೊಂದು ಖುಷಿ ಸುದ್ದಿ ಇದೆ. ಒಂದೇ ಒಂದು ಟ್ರಿಕ್ ಫಾಲೋ ಮಾಡಿದ್ರೆ ನೀವು ರಾತ್ರಿ ಪೂರ್ತಿ ಸುಖವಾಗಿ ನಿದ್ರೆ ಮಾಡ್ಬಹುದು. ನಿದ್ರೆಯ ಸಮಸ್ಯೆಗಳನ್ನು ನಿಭಾಯಿಸಲು ಒಂದು ಹಣ್ಣು ಸಾಕು ಎಂದು ನಿದ್ರೆಗೆ ಸಂಬಂಧಿಸಿದ ಚಾರಿಟಿಯೊಂದು ಹೇಳಿದೆ. 2024 ರಲ್ಲಿ ಉತ್ತಮ ಗುಣಮಟ್ಟದ ನಿದ್ರೆಯನ್ನು ಹೇಗೆ ಪಡೆಯುವುದು ಎಂಬುದರ ಕುರಿತು ಸ್ಲೀಪ್ ಚಾರಿಟಿ ತನ್ನ ಪ್ರಮುಖ ಐದು ಸಲಹೆಗಳನ್ನು ಬಿಡುಗಡೆ ಮಾಡಿದೆ.
ನಾಲ್ಕು ವರ್ಷವಾಯ್ತು, ಈ ವ್ಯಕ್ತಿ ಕಣ್ಣಿನ ರೆಪ್ಪೆಯನ್ನೇ ಮುಚ್ಚಿಲ್ಲ! ಮತ್ತೆ ಹೇಗೆ ನಿದ್ರಿಸುತ್ತಾರೆ!
ರಾತ್ರಿ ನಿದ್ರೆ ಬರಬೇಕೆಂದ್ರೆ ಈ ಹಣ್ಣು ತಿನ್ನಿ : ನಿಮಗೆ ರಾತ್ರಿ ಸರಿಯಾಗಿ ನಿದ್ರೆ ಬರಬೇಕೆಂದ್ರೆ ನೀವು ಒಂದು ಹಣ್ಣನ್ನು ತಿನ್ನಬೇಕೆಂದು ಸ್ಲೀಪ್ ಚಾರಿಟಿ ಹೇಳಿದ್ದು, ಆ ಹಣ್ಣು ಬೇರ್ಯಾವುದೂ ಅಲ್ಲ ಬಾಳೆಹಣ್ಣು. ಬಾಳೆಹಣ್ಣಿನಲ್ಲಿ ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಸಮೃದ್ಧವಾಗಿದೆ. ಈ ಎರಡೂ ಅಂಶಗಳು ಮಾನವನ ದೇಹದಲ್ಲಿ ಉಂಟಾಗುವ ಒತ್ತಡವನ್ನು ಕಡಿಮೆ ಮಾಡಲು ಸಹಕಾರಿಯಾಗಿದ್ದು, ಇದು ಸ್ನಾಯುಗಳಿಗೆ ವಿಶ್ರಾಂತಿ ನೀಡುತ್ತದೆ. ಮಾನವ ದೇಹದಲ್ಲಿ ಉಂಟಾಗುವ ಒತ್ತಡವನ್ನು ಕಡಿಮೆ ಮಾಡಲು ಇವು ಸಹಾಯಕವಾಗಿವೆ. ಇದು ಸ್ನಾಯುಗಳನ್ನು ವಿಶ್ರಾಂತಿಗೊಳಿಸುತ್ತದೆ. ಬಾಳೆಹಣ್ಣಿನಲ್ಲಿ ಟ್ರಿಪ್ಟೊಫಾನ್ ಎಂಬ ಅಮೈನೋ ಆಮ್ಲವೂ ಇದೆ. ಇದು ಮೆದುಳನ್ನು ಶಾಂತಗೊಳಿಸುವ ಹಾರ್ಮೋನುಗಳ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಬಾಳೆಹಣ್ಣು ಮೆಲಟೋನಿನ್ ಉತ್ಪಾದನೆಯನ್ನು ಉತ್ತೇಜಿಸುವ ಹಣ್ಣು ಎಂದು ಚಾರಿಟಿ ಹೇಳುತ್ತದೆ. ಈ ಮೆಲಟೋನಿನ್ ನಿಮ್ಮ ನಿದ್ರೆಯಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ. ಬಾಳೆಹಣ್ಣು ಮಾತ್ರವಲ್ಲದೆ ದ್ರಾಕ್ಷಿಗಳು, ಟಾರ್ಟ್ ಚೆರ್ರಿಗಳು ಮತ್ತು ಸ್ಟ್ರಾಬೆರಿಗಳು ಮೆಲಟೋನಿನ್‌ನ ಅತ್ಯುತ್ತಮ ಮೂಲಗಳಾಗಿವೆ.
70ರ ಇಳಿ ವಯಸಲ್ಲಿ ಅವಳಿಗೆ ಜನ್ಮವಿತ್ತ ಉಗಾಂಡಾದ ಮಹಿಳೆ
ಇವೂ ನಿದ್ರೆಗೆ ಸಹಕಾರಿ : ಕೇವಲ ಬಾಳೆ ಹಣ್ಣು ಮಾತ್ರವಲ್ಲ ಬಾದಾಮಿ (Almond), ಮೀನು, ಧಾನ್ಯಗಳು (Cereals) ಮತ್ತು ಚೀಸ್ (Cheese) ಹೊಂದಿರುವ ಓಟ್‌ಕೇಕ್‌ಗಳು ಒಬ್ಬ ವ್ಯಕ್ತಿಯ ಒತ್ತಡವನ್ನು (Stress) ಕಡಿಮೆ ಮಾಡುತ್ತವೆ. ಇದ್ರಿಂದ ವ್ಯಕ್ತಿ ಆಳವಾದ ನಿದ್ರೆ (Deep Sleep) ಮಾಡಲು ಸಾಧ್ಯವಾಗುತ್ತದೆ.ನಿದ್ರೆ ಬರ್ತಿಲ್ಲ ಎನ್ನುವವರು ಈ ಆಹಾರದಿಂದ ದೂರವಿರಿ : ರಾತ್ರಿ ನಾವು ಮಲಗುವ ಮೊದಲು ಏನು ಸೇವನೆ ಮಾಡ್ತೇವೆ ಎನ್ನುವುದು ನಿದ್ರೆ ಮೇಲೆ ಪರಿಣಾಮ ಬೀರುತ್ತದೆ ಎಂದು ಸ್ಲೀಪ್ ಚಾರಿಟಿ (Sleep Charity) ಹೇಳುತ್ತದೆ. ಅದ್ರ ಪ್ರಕಾರ, ನಾವು ಬ್ರೆಡ್, ಪಾಸ್ತಾ ಮತ್ತು ಅಕ್ಕಿಯಂತಹ ಹೆಚ್ಚಿನ ಕಾರ್ಬೋಹೈಡ್ರೇಟ್ (Corbohydrates) ಆಹಾರಗಳು ಆಮ್ಲ ಉತ್ಪಾದನೆಯನ್ನು ಉತ್ತೇಜಿಸಬಹುದು. ಈ ಕಾರಣದಿಂದಾಗಿ ವ್ಯಕ್ತಿಗೆ ರಾತ್ರಿ ಸರಿಯಾಗಿ ನಿದ್ರೆ ಬರದೆ ಇರಬಹುದು. ನೀವು ಬೇರೆ ಬೇರೆ ರೀತಿಯ ಚಾಕೋಲೇಟ್ ಸೇವನೆ ಮಾಡ್ತಿದ್ದರೆ ಅದು ಕೂಡ ಅನೇಕ ರೀತಿಯ ಸಮಸ್ಯೆಯನ್ನು ತಂದೊಡ್ಡುತ್ತದೆ.