Asianet Suvarna News Asianet Suvarna News

70ರ ಇಳಿ ವಯಸಲ್ಲಿ ಅವಳಿಗೆ ಜನ್ಮವಿತ್ತ ಉಗಾಂಡಾದ ಮಹಿಳೆ

ಉಗಾಂಡಾದ 70 ವರ್ಷದ ವೃದ್ಧೆಯೊಬ್ಬರು ಸಂತಾನೋತ್ಪತ್ತಿ ಚಿಕಿತ್ಸೆ ಪಡೆದ ಬಳಿಕ ಅವಳಿ ಮಕ್ಕಳಿಗೆ ಜನ್ಮ ನೀಡಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. 70ರ ಇಳಿ ವಯಸ್ಸಿನಲ್ಲಿ ತಾಯಿಯಾಗಿರುವ ಸಫೀನಾ ನಮುಕ್ವಾಯಾ ಸದ್ಯ ವಿಶ್ವದ ಹಿರಿಯ ತಾಯಂದಿರಲ್ಲಿ ಒಬ್ಬರಾಗಿದ್ದಾರೆ.

Worlds Oldest mother 70 Year Old Uganda woman gave birth to tween baby Via IVF treatment akb
Author
First Published Dec 3, 2023, 11:31 AM IST

ಕಂಪಾಲ: ಉಗಾಂಡಾದ 70 ವರ್ಷದ ವೃದ್ಧೆಯೊಬ್ಬರು ಸಂತಾನೋತ್ಪತ್ತಿ ಚಿಕಿತ್ಸೆ ಪಡೆದ ಬಳಿಕ ಅವಳಿ ಮಕ್ಕಳಿಗೆ ಜನ್ಮ ನೀಡಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. 70ರ ಇಳಿ ವಯಸ್ಸಿನಲ್ಲಿ ತಾಯಿಯಾಗಿರುವ ಸಫೀನಾ ನಮುಕ್ವಾಯಾ ಸದ್ಯ ವಿಶ್ವದ ಹಿರಿಯ ತಾಯಂದಿರಲ್ಲಿ ಒಬ್ಬರಾಗಿದ್ದಾರೆ.  ಬುಧವಾರ ಒಂದು ಗಂಡು ಮತ್ತು ಒಂದು ಹೆಣ್ಣು ಮಗುವಿಗೆ ಸಫೀನಾ ಜನ್ಮ ನೀಡಿದ್ದಾರೆ. ಇವರಿಗೆ ವಿಟ್ರೋ ಫರ್ಟಿಲೈಜೇಶನ್‌ ಎಂಬ ಚಿಕಿತ್ಸೆ ನೀಡಲಾಗಿತ್ತು. ಇದೀಗ ಸಫೀನಾ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇದೇ ಚಿಕಿತ್ಸೆ ಬಳಿಕ ಭಾರತದಲ್ಲೂ 2019ರಲ್ಲಿ 73ರ ವೃದ್ಧೆಯೊಬ್ಬರು ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದರು.

ಇಂಟ್ರೊವೆನಸ್ ಫರ್ಟಿಲಿಟಿ ಚಿಕಿತ್ಸೆ ನಂತರ ಅವರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು, ಈ ಮೂಲಕ ಮಗುವಿಗೆ ಇಳಿವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡಿದ ವಿಶ್ವದ ಕೆಲವೇ ಮಹಿಳೆಯರಲ್ಲಿ ಸಫೀನ ಕೂಡ ಒಬ್ಬರೆನಿಸಿದ್ದಾರೆ. ಸಿ ಸೆಕ್ಷನ್ (ಸಿಸೇರಿಯನ್ )ಮೂಲಕ ಇವರು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಹಾಗೂ ಮಕ್ಕಳು ಎಲ್ಲರೂ ಆರೋಗ್ಯವಾಗಿದ್ದಾರೆ ಎಂದು ಆಕೆಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಯ ವಕ್ತಾರರು ಹೇಳಿದ್ದಾರೆ. ಆಕೆ ಆರೋಗ್ಯವಾಗಿದ್ದಾಳೆ, ಮಾತನಾಡುತ್ತಾಳೆ. ವಾಕ್ ಮಾಡಿ ಎಂದರೆ ಆಸ್ಪತ್ರೆ ಸುತ್ತ ವಾಕ್ ಮಾಡುತ್ತಾರೆ ಎಂದು ಆಸ್ಪತ್ರೆ ವಕ್ತಾರ ಅರ್ಥೂರ್ ಮತ್ಸಿಕೊ ಹೇಳಿದ್ದಾರೆ. ಸೈಫಿನಾ ಅವರು 2020ರಲ್ಲಿ ಇದೇ ರೀತಿ ಐವಿಎಫ್ ಚಿಕಿತ್ಸೆ ಮೂಲಕ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. 

ಇದು ವೈದ್ಯಕೀಯ ಯಶಸ್ಸಿಗಿಂತ ದೊಡ್ಡ ಸಾಹಸವಾಗಿದ್ದು, ಇದು ಮಾನವ ಚೇತನದ ಶಕ್ತಿ ಮತ್ತು ಸ್ಥಿತಿಸ್ಥಾಪಕತ್ವಕ್ಕೆ ಸಾಕ್ಷಿಎಂದು ಆಸ್ಪತ್ರೆ ಹೇಳಿದೆ. ದಾನಿಯೊಬ್ಬರು ನೀಡಿದ ಅಂಡಾಣು ಹಾಗೂ ಆಕೆಯ ಗಂಡನ ವೀರ್ಯಾಣುವನ್ನು ಐವಿಎಫ್ ಮೂಲಕ ಮಹಿಳೆಯ ಗರ್ಭದಲ್ಲಿ ಇರಿಸಲಾಗಿತ್ತು. ಮಕ್ಕಳು ಅವಧಿಗೆ ಮೊದಲೇ ಅಂದರೆ 31ನೇ ವಾರದಲ್ಲೇ ಜನಿಸಿದ್ದು, (ಸಾಮಾನ್ಯವಾಗಿ 34ರಿಂದ 36 ವಾರಗಳು )ಮಕ್ಕಳನ್ನು ಇನ್‌ಕ್ಯೂಬೆಟರ್‌ನಲ್ಲಿ ಇಡಲಾಗಿದ್ದು, ಮಕ್ಕಳ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರಾದ ಡಾ. ಸಾಲಿ ಹೇಳಿದ್ದಾರೆ. 

ಅವಳಿ ಮಕ್ಕಳಿರುವ ಬಗ್ಗೆ ತಿಳಿದು ನನ್ನ ಸಂಗಾತಿ ನನ್ನನ್ನು ಮಧ್ಯದಲ್ಲೇ ಕೈಬಿಟ್ಟಿದ್ದರಿಂದ ನನಗೆ ಈ ಗರ್ಭಾವಸ್ಥೆ ಕಷ್ಟಕರವಾಗಿತ್ತು. ನಾನು ಆಸ್ಪತ್ರೆಗೆ ದಾಖಲಾದಾಗಿನಿಂದ ಒಮ್ಮೆಯೂ ನನ್ನ ಸಂಗಾತಿ ಈ ಕಡೆ ತಲೆ ಹಾಕಿಲ್ಲ ಎಂದು ಸೈಫೀನಾ ಹೇಳಿಕೊಂಡಿದ್ದಾರೆ. ಮಕ್ಕಳಿಲ್ಲ ಎಂದು ಅಪಹಾಸ್ಯಕ್ಕೀಡಾದ ನಂತರ ತಾನು ಮಕ್ಕಳ ಪಡೆಯಲು ಬಯಸಿದೆ ಎಂದು ಅವರು ಹೇಳಿಕೊಂಡಿದ್ದಾರೆ.     

ಐವಿಎಫ್‌ ಹೇಗೆ ಕೆಲಸ ಮಾಡುತ್ತದೆ?

ಐವಿಎಫ್ ಮಗುವಿಗೆ ಜನ್ಮ ನೀಡುವ ಪ್ರಕ್ರಿಯೆಗಳ ಸಂಕೀರ್ಣ ವ್ಯವಸ್ಥೆ, ಸಹಜವಾಗಿ ಮಗುವಿಗೆ ಜನ್ಮ ನೀಡಲು ಸಾಧ್ಯವಾಗದ ಮಹಿಳೆಯರು ಈ ವ್ಯವಸ್ಥೆಯ ಮೂಲಕ ಮಕ್ಕಳನ್ನು ಪಡೆಯುತ್ತಾರೆ. ಕಾರ್ಯವಿಧಾನದ ಸಮಯದಲ್ಲಿ, ಪ್ರೌಢ ಉತ್ತಮ ಗುಣಮಟ್ಟದ ಅಂಡಾಣುಗಳನ್ನು ಅಂಡಾಶಯದಿಂದ ಸಂಗ್ರಹಿಸಲಾಗುತ್ತದೆ ಮತ್ತು ಪ್ರಯೋಗಾಲಯದಲ್ಲಿ ವೀರ್ಯದಿಂದ ಫಲವತ್ತಾಗಿಸಲಾಗುತ್ತದೆ. ನಂತರ ಒಂದು ಅಥವಾ ಹೆಚ್ಚಿನ ಫಲವತ್ತಾದ ಅಂಡಾಣುಗಳನ್ನು  ಭ್ರೂಣಗಳು ( embryos) ಎಂದು ಕರೆಯಲ್ಪಡುವ ಒಂದು ಕಾರ್ಯವಿಧಾನದ ಮೂಲಕ ಗರ್ಭಾಶಯದಲ್ಲಿ ಇರಿಸಲಾಗುತ್ತದೆ, ಅಲ್ಲಿ ಶಿಶುಗಳು ಬೆಳೆಯುತ್ತವೆ.

Follow Us:
Download App:
  • android
  • ios