ನಾಲ್ಕು ವರ್ಷವಾಯ್ತು, ಈ ವ್ಯಕ್ತಿ ಕಣ್ಣಿನ ರೆಪ್ಪೆಯನ್ನೇ ಮುಚ್ಚಿಲ್ಲ! ಮತ್ತೆ ಹೇಗೆ ನಿದ್ರಿಸುತ್ತಾರೆ!
ನೀನು ಚೆನ್ನಾಗಿಲ್ಲ ಎಂಬ ಕಮೆಂಟ್ ಸಿಕ್ಕಾಗ ಮನಸ್ಸಿಗೆ ನೋವಾಗುತ್ತದೆ. ಸುಂದರವಾಗಿ ಕಾಣಲು ನಾನಾ ಪ್ರಯತ್ನ ಮಾಡ್ತೇವೆ. ಕೆಲವೊಂದು ನಮಗೆ ರಿವರ್ಸ್ ಆಗುತ್ತೆ. ಅದಕ್ಕೆ ಈ ವೃದ್ಧ ಉತ್ತಮ ಉದಾಹರಣೆ.
ಸುಂದರವಾಗಿ ಕಾಣೋದು ಬಹುತೇಕರ ಕನಸು. ಇದಕ್ಕಾಗಿ ಸಾಕಷ್ಟು ಕಸರತ್ತು ಮಾಡ್ತಾರೆ. ವಾರಕ್ಕೆರಡು ಬಾರಿ ಬ್ಯೂಟಿಪಾರ್ಲರ್ ಗೆ ಹೋಗುವ ಜನರಿದ್ದಾರೆ. ಮತ್ತೆ ಕೆಲವರು ಪ್ಲಾಸ್ಟಿಕ್ ಸರ್ಜರಿ, ಶಸ್ತ್ರಚಿಕಿತ್ಸೆ ಅಂತಾ ಮಾಡಿಕೊಳ್ತಾರೆ. ಇನ್ನು ಕೆಲವರು ಮನೆಯಲ್ಲೇ ಬ್ಯೂಟಿ ಉತ್ಪನ್ನಗಳನ್ನು ಬಳಸಿ, ಆಹಾರದಲ್ಲಿ ನಿಯಂತ್ರಣ ಮಾಡಿ, ವ್ಯಾಯಾಮ ಮಾಡಿ ತಮ್ಮ ಸೌಂದರ್ಯ ಕಾಪಾಡಿಕೊಳ್ಳಲು ಮುಂದಾಗ್ತಾರೆ. ಕಾಸ್ಮೆಟಿಕ್ ಸರ್ಜರಿ ಸಫಲವಾಗೋ ಬದಲು ವಿಫಲವಾಗೋದೇ ಹೆಚ್ಚು. ಅನೇಕರು ಕಾಸ್ಮೆಟಿಕ್ ಸರ್ಜರಿ ಮಾಡಿಕೊಂಡು ತೊಂದರೆಗೀಡಾದ ಉದಾಹರಣೆ ಇದೆ.
ಈಗಾಗಲೇ ಕೆಲವರು ಕಾಸ್ಮೆಟಿಕ್ (Cosmetic) ಸರ್ಜರಿ ಮಾಡಿಸಿಕೊಂಡು ಸಾವನ್ನಪ್ಪಿದ್ದಾರೆ. ಇಷ್ಟಾದ್ರೂ ಜನರಿಗೆ ಬುದ್ಧಿ ಬಂದಿಲ್ಲ. ಸಣ್ಣ ವಯಸ್ಸಿನಲ್ಲಿ ಕಾಸ್ಮೆಟಿಕ್ ಸರ್ಜರಿಗೆ ಒಳಗಾಗೋದು ಸಾಮಾನ್ಯವಾದ್ರೂ ಇಳಿ ವಯಸ್ಸಿನಲ್ಲಿ ಈ ಹುಚ್ಚಾಟಕ್ಕೆ ಹೋದ್ರೆ ಮತ್ತಷ್ಟು ತೊಂದರೆ ಅನುಭವಿಸಬೇಕಾಗುತ್ತದೆ. ಇದಕ್ಕೆ ಈ ವೃದ್ಧ ಉತ್ತಮ ನಿದರ್ಶನ. ಯುವಕರಂತೆ ಸುಂದರ (Beautiful) ವಾಗಿ ಕಾಣಿಸಿಕೊಳ್ಳುವ ಆಸೆಯಲ್ಲಿ ಈತ ಯಡವಟ್ಟು ಮಾಡಿಕೊಂಡಿದ್ದಾನೆ. ಈಗ ಅದನ್ನು ಸರಿಪಡಿಸಲು ಸಾಧ್ಯವಾಗ್ತಿಲ್ಲ.
ಅನಿಮಲ್ ಸಿನಿಮಾದಲ್ಲಿ ಬೆತ್ತಲಾಗಿ ನಟಿಸಿದ ತೃಪ್ತಿ ದಿಮ್ರಿ: ಮೈತುಂಬ ಬಟ್ಟೆಗಿಂತ ತುಂಡುಡುಗೆ ತೊಟ್ಟಿದ್ದೇ ಹೆಚ್ಚು!
ಆತನಿಗೆ 81 ವರ್ಷ ವಯಸ್ಸು. ಹೆಸರು ಪೀಟ್ ಬ್ರಾಡ್‌ಹರ್ಸ್ಟ್. ಕಳೆದ 4 ವರ್ಷಗಳಿಂದ ಒಂದು ನಿಮಿಷವೂ ಈತ ಮಲಗಲಿಲ್ಲ. ನಮ್ಮ ಕಣ್ಣಿನ ರೆಪ್ಪೆ ಆಗಾಗ ಹೊಡೆದುಕೊಳ್ತಿರುತ್ತದೆ. ಆದ್ರೆ ಪೀಟ್ ಕಣ್ಣಿನ ರೆಪ್ಪೆ ಬಡಿಯೋದೇ ಇಲ್ಲ. ಈತ ಬಯಸಿದ್ರೂ ಕಣ್ಣುಗಳ ರೆಪ್ಪೆಯನ್ನು ಮಿಟುಕಿಸಲು ಸಾಧ್ಯವಾಗ್ತಿಲ್ಲ.
ಉರ್ಫಿ ಫ್ಯಾನ್ಸ್ಗೆ ಭಾರಿ ಶಾಕ್! ಇನ್ಸ್ಟಾಗ್ರಾಮ್ ಸಸ್ಪೆಂಡ್: ಇನ್ನೆಲ್ಲಿ ನೋಡೋದು ಕೇಳ್ತಿದ್ದಾರೆ ಅಭಿಮಾನಿಗಳು!
ವಾಸ್ತವವಾಗಿ ಪೀಟ್ ಗೆ ತನ್ನ ಊದಿಕೊಂಡಿದ್ದ ಕೆನ್ನೆಗಳು ಇಷ್ಟವಾಗ್ತಿರಲಿಲ್ಲ. ಅದಕ್ಕಾಗಿಯೇ 2019 ರಲ್ಲಿ ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆಯ ಮೂಲಕ ಅವುಗಳನ್ನು ಸರಿಪಡಿಸಲು ನಿರ್ಧರಿಸಿದ್ದ. ಆದ್ರೆ ತನ್ನ ಈ ಒಂದು ನಿರ್ಧಾರ ತನ್ನ ಇಡೀ ಜೀವನವನ್ನು ಹಾಳು ಮಾಡಲಿದೆ ಎಂಬ ಕಲ್ಪನೆಯೂ ಪೀಟ್ ಗೆ ಇರಲಿಲ್ಲ. ಇದ್ರಿಂದ ಜೀವನ ಪರ್ಯಂತ ತಾನು ನೋವು., ದುಃಖದಲ್ಲೇ ದಿನ ಕಳೆಯಬೇಕು ಎಂಬುದನ್ನು ಆತ ಊಹಿಸಿಕೊಂಡಿರಲಿಲ್ಲ. ಈ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ವೈದ್ಯರು ಪೀಟ್ ಮುಖದಿಂದ ಅತಿಯಾದ ಅಂಗಾಂಶವನ್ನು ತೆಗೆದುಹಾಕಿದ್ದಾರೆ. ಇದ್ರಿಂದ ಪೀಟ್ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಆತನ ಕಣ್ಣುಗಳನ್ನು ಮಿಟುಕಿಸಲು ಸಾಧ್ಯವಾಗ್ತಿಲ್ಲ. ಕಣ್ಣು ಮಿಟುಕಿಸದೆ ಮತ್ತು ಮಲಗದೆ ಬದುಕುವುದು ಎಷ್ಟು ಕಷ್ಟ ಎಂಬುದನ್ನು ಪ್ರತ್ಯೇಕವಾಗಿ ಹೇಳ್ಬೇಕಾಗಿಲ್ಲ.
ಬರ್ಮಿಂಗ್ಹ್ಯಾಮ್‌ನ ನಿವೃತ್ತ ವರ್ಣಚಿತ್ರಕಾರ ಮತ್ತು ಡೆಕೋರೇಟರ್ ಪೀಟ್ ತನ್ನ ತಪ್ಪಿಗೆ ಈಗ ಪಶ್ಚಾತಾಪಪಡ್ತಿದ್ದಾನೆ. ಏನೇ ಆದ್ರೂ ಕೊನೆಯಲ್ಲಿ ನನ್ನ ಬದುಕೇ ನಾಶವಾಗಿದೆ. ನನ್ನ ಜೀವನದಲ್ಲಿ ನಾನು ಆರಾಮಾಗಿದ್ದೆ. ಆದ್ರೆ ಅದ್ರಲ್ಲಿ ನನಗೆ ತೃಪ್ತಿ ಇರಲಿಲ್ಲ. ನನ್ನ ಸೌಂದರ್ಯವನ್ನು ಬದಲಿಸುವ ಗೀಳಿಗೆ ಬಿದ್ದು ಜೀವನವನ್ನೇ ಹಾಳು ಮಾಡಿಕೊಂಡೆ. ನನ್ನ ಮುಖವನ್ನು ನಾನು ಕನ್ನಡಿಯಲ್ಲಿ ನೋಡಿಕೊಂಡ್ರೆ ಖಾಯಿಲೆ ಬಂದವರಂತೆ ಕಾಣಿಸುತ್ತೇನೆ. ನನ್ನಂತೆ ನೀವು ತಪ್ಪು ಮಾಡ್ಬೇಡಿ ಎಂದು ನಾನು ನಿಮ್ಮಲ್ಲಿ ವಿನಂತಿ ಮಾಡ್ತೇನೆ ಎನ್ನುತ್ತಾನೆ ಪೀಟ್.
1959 ರಲ್ಲಿ ಹಲ್ಲಿನ ಸಮಸ್ಯೆಯಿಂದ ಪೀಟ್ ಕೆನ್ನೆಗಳು ಊದಿಕೊಂಡಿದ್ದವು. ಆತ ಒಂದು ವರ್ಷ ರಿಲೇಶನ್ಶಿಪ್ ನಲ್ಲಿದ್ದ ನಂತ್ರ ಆತನ ಹುಡುಗಿ ಬಿಟ್ಟು ಹೋಗಿದ್ದಳು. ತನ್ನ ಬಳಿ ಎಲ್ಲವೂ ಇದೆ, ಯಾಕೆ ಬಿಟ್ಟು ಹೋಗ್ತಿಯಾ ಎಂದು ಪೀಟ್ ಕೇಳಿದ್ದಾಗ, ನಿನ್ನ ಮುಖವನ್ನು ಕನ್ನಡಿಯಲ್ಲಿ ನೋಡ್ಕೋ ಎಂದಿದ್ದಳಂತೆ. ಅಲ್ಲಿಂದ ತನ್ನ ಸೌಂದರ್ಯದ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿದ್ದ ಪೀಟ್, ಸುಂದರವಾಗಿ ಕಾಣಲು ನಾನಾ ಕಸರತ್ತು ಮಾಡ್ತಿದ್ದ. 2019 ರ 9 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆದಿತ್ತು. ಆದ್ರೆ ಕಣ್ಣಿನ ಸಮಸ್ಯೆ ಶುರುವಾಯ್ತು. ಮತ್ತೆ ಒಂದು ಗಂಟೆ ಶಸ್ತ್ರಚಿಕಿತ್ಸೆ ಮಾಡಿ ಐ ಡ್ರಾಪ್ ನೀಡಿದ್ದರು. ಅದ್ರಲ್ಲೂ ಸಮಸ್ಯೆ ಬಗೆಹರಿದಿರಲಿಲ್ಲ. 2023 ರಲ್ಲಿ ಥೈಲ್ಯಾಂಡ್‌ನ ಒರಿಜಿನ್ ಕ್ಲಿನಿಕ್‌ಗೆ ಹೋಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಈಗ ಪೀಟ್ ಸ್ಥಿತಿ ಸ್ವಲ್ಪ ಸುಧಾರಿಸಿದೆ.