ಮೊಬೈಲ್ ಹಿಡಿದು ರಿಲ್ಯಾಕ್ಸ್ ಆಗೋಕೆ ನೀವು ಟಾಯ್ಲೆಟ್ ಗೆ ಹೋಗ್ತೀರಾ? ಹಾಯ್ ಅನ್ನಿಸುತ್ತೆ ಅಂತ 30 - 40 ನಿಮಿಷ ಕುಳಿತುಕೊಳ್ಳೋರಾಗಿದ್ರೆ ಈ ಸುದ್ದಿ ಮಿಸ್ ಮಾಡ್ದೆ ಓದಿ.
ಈಗ ಬಾತ್ ರೂಮಿನಲ್ಲಿ ಗಂಟೆಗಟ್ಟಲೆ ಕುಳಿತುಕೊಳ್ಳೊದು ಟ್ರೆಂಡ್ ಆಗ್ಬಿಟ್ಟಿದೆ. ಅದಕ್ಕೆ ಜೆನ್ ಜೀ (zen g)ಗಳು ಬಾತ್ ರೂಮ್ ಕ್ಯಾಂಪಿಂಗ್ (bathroom camping) ಅಂತ ನಾಮಕರಣ ಕೂಡ ಮಾಡಿದ್ದಾರೆ. ಕೆಲ್ಸ, ಓದು ಅಂತ ಬ್ಯುಸಿ ಇರುವ ಜನರು ಶಾಂತಿಗಾಗಿ ಟಾಯ್ಲೆಟ್ ಆಯ್ಕೆ ಮಾಡಿಕೊಳ್ತಿದ್ದಾರೆ. ಟಾಯ್ಲೆಟ್ ನಲ್ಲಿ ಕುಳಿತು ತಮಗಿಷ್ಟದ ಕೆಲ್ಸ ಮಾಡ್ತಾರೆ. ಟಾಯ್ಲೆಟ್ ನಲ್ಲಿ ಮೊಬೈಲ್ ಹಿಡಿದು ಕುಳಿತ್ರೆ ಟೈಂ ಹೋಗಿದ್ದೇ ತಿಳಿಯೋದಿಲ್ಲ. ನಿಮಗೆ ಇದು ತಾತ್ಕಾಲಿಕ ನೆಮ್ಮದಿ ನೀಡ್ಬಹುದು. ಮನಸ್ಸು ರಿಲ್ಯಾಕ್ಸ್ ಆಗಿದೆ, ಫ್ರೆಶ್ ಆಗಿದೆ ಅನ್ನಿಸ್ಬಹುದು. ಆದ್ರೆ ಗಂಟೆಗಟ್ಟಲೆ ಒಂದೇ ಸ್ಟೈಲ್ ನಲ್ಲಿ ಕುಳಿತುಕೊಳ್ಳೋದು ಆರೋಗ್ಯಕ್ಕೆ ಹಾನಿಕರ. 30 ನಿಮಿಷ ಟಾಯ್ಲೆಟ್ ನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬನಿಗೆ ಪಾರಾಲಿಸಿಸ್ ಅಟ್ಯಾಕ್ ಆಗಿದೆ. ಇದು ನಿಮಗೆ ಸಣ್ಣ ಅಭ್ಯಾಸ ಅನ್ನಿಸ್ಬಹುದು. ಆದ್ರೆ ಇದೇ ದೊಡ್ಡ ಆರೋಗ್ಯ ಅಪಾಯಗಳಾಗಿ ಬದಲಾಗಬಹುದು.
ಟಾಯ್ಲೆಟ್ ಸೀಟ್ (Toilet Seat) ನಲ್ಲಿ 30 ನಿಮಿಷ ಕುಳಿತುಕೊಳ್ಳೋದು ಏಕೆ ಅಪಾಯಕಾರಿ? :
1.ಒಂದೇ ಭಂಗಿಯಲ್ಲಿ ದೀರ್ಘಕಾಲ ಕುಳಿತುಕೊಳ್ಳೋದ್ರಿಂದ ಬೆನ್ನುಮೂಳೆಯಲ್ಲಿ ಒತ್ತಡ ಹೆಚ್ಚಾಗುತ್ತದೆ. ಇದು ನರಗಳನ್ನು ಸಂಕುಚಿತಗೊಳಿಸುತ್ತದೆ.
2.ಮೆದುಳಿಗೆ ಆಮ್ಲಜನಕ ಪೂರೈಕೆ ಸರಿಯಾಗಿ ಆಗೋದಿಲ್ಲ. ದೀರ್ಘಕಾಲ ಕುಳಿತುಕೊಳ್ಳುವುದು ಬೆನ್ನುಹುರಿಗೆ ಆಮ್ಲಜನಕ ಮತ್ತು ಪೋಷಕಾಂಶಗಳನ್ನು ಸೀಮಿತಗೊಳಿಸುತ್ತದೆ. ಇದು ಪಾರ್ಶ್ವವಾಯುವಿಗೆ ಕಾರಣವಾಗುತ್ತದೆ.
ನುಗ್ಗೆ ಸೊಪ್ಪಿನ ಪೌಡರ್ ದಿನಕ್ಕೆ ಎಷ್ಟು ತಿನ್ನಬೇಕು? ಜಾಸ್ತಿ ತಿಂದ್ರೆ ಏನಾಗುತ್ತೆ?
3.ಇದು ಅಪರೂಪದ ಸ್ಥಿತಿಯಾಗಿದ್ದರೂ, ಟಾಯ್ಲೆಟ್ ಸೀಟ್ ಮೇಲೆ ದೀರ್ಘಕಾಲ ಕುಳಿತುಕೊಳ್ಳುವುದರಿಂದ ಸಿಯಾಟಿಕ್ ನರವು ಕಿರಿಕಿರಿಗೊಳ್ಳುತ್ತದೆ. ನಿಮ್ಮ ಕಾಲಿನಲ್ಲಿ ಜುಮ್ಮೆನಿಸುವಿಕೆ ಮತ್ತು ಮರಗಟ್ಟುವಿಕೆ ಕಾಣಿಸಿಕೊಳ್ಳುತ್ತದೆ. ಕೆಲವರಿಗೆ ಎದ್ದ ತಕ್ಷಣ ಇದು ಸರಿಯಾಗ್ಬಹುದು.
ಶೌಚಾಲಯದಲ್ಲಿ ದೀರ್ಘಕಾಲ ಕುಳಿತುಕೊಂಡವರಿಗೆ ಏನಾಗಿತ್ತು? : ಒಂದು ಪ್ರಕರಣದಲ್ಲಿ ವ್ಯಕ್ತಿಯೊಬ್ಬ 30 ನಿಮಿಷ ಶೌಚಾಲಯದಲ್ಲಿ ಕುಳಿತುಕೊಂಡಿದ್ದ. ಇದ್ರ ಪರಿಣಾಮ ಆತನಿಗೆ ಪಾರಲಿಸಿಸ್ ಅಟ್ಯಾಕ್ ಆಗಿತ್ತು. ಇನ್ನೊಂದು ಪ್ರಕರಣದಲ್ಲಿ 40 ವರ್ಷದ ವ್ಯಕ್ತಿ ಮದ್ಯಪಾನ ಹಾಗೂ ಧೂಮಪಾನ ಮಾಡಿ ಶೌಚಾಲಯಕ್ಕೆ ಹೋಗಿದ್ದ. ಮಂಪರಿನಲ್ಲಿ ಆತ ಅಲ್ಲೇ ನಿದ್ದೆಗೆ ಜಾರಿದ್ದ. ಎಚ್ಚರವಾದಾಗ ಕಾಲು ಮರುಗಟ್ಟಿತ್ತು. ನಿಲ್ಲಲು ಸಾಧ್ಯವಾಗ್ತಿರಲಿಲ್ಲ. ನಂತ್ರ ಆತ ನರಕ್ಕೆ ಸಂಬಂಧಿಸಿದ ಸಿಯಾಟಿಕ್ ಸಮಸ್ಯೆಯಿಂದ ಬಳಲಿದ್ದ. ಚಿಕಿತ್ಸೆ ನಂತ್ರವೂ ಆತ ಸಂಪೂರ್ಣವಾಗಿ ಗುಣಮುಖನಾಗಿಲ್ಲ.
ಎಷ್ಟು ಹೊತ್ತು ಟಾಯ್ಲೆಟ್ ನಲ್ಲಿ ಕುಳಿತುಕೊಳ್ಬೇಕು? :
1.ತಜ್ಞರ ಪ್ರಕಾರ ನೀವು ಟಾಯ್ಲೆಟ್ ನಲ್ಲಿ 10 -15 ನಿಮಿಷ ಕಳೆಯೋದು ಉತ್ತಮ. ಅದಕ್ಕಿಂತ ಹೆಚ್ಚು ಸಮಯ ಟಾಯ್ಲೆಟ್ ಸೀಟಿನ ಮೇಲೆ ಕುಳಿತುಕೊಳ್ಬೇಡಿ
2.ಟಾಯ್ಲೆಟ್ ನಲ್ಲಿ ಫೋನ್ ಸ್ಕ್ರೋಲ್ ಮಾಡುವ ಅಭ್ಯಾಸ ಅಪಾಯಕ್ಕೆ ಕಾರಣವಾಗ್ತಿದೆ. ಟಾಯ್ಲೆಟ್ ಗೆ ಫೋನ್ ತೆಗೆದುಕೊಂಡು ಹೋಗೋದನ್ನು ಸಂಪೂರ್ಣ ತಪ್ಪಿಸಿ. ಟಾಯ್ಲೆಟ್ ಬಳಕೆ ಸಮಯ ಸೀಮಿತವಾಗಿರಲಿ. ಅಲ್ಲಿ ಓದು, ಮೊಬೈಲ್ ಬಳಕೆಯಂತ ನಿಮ್ಮ ಹವ್ಯಾಸಕ್ಕೆ ಅವಕಾಶ ನೀಡ್ಬೇಡಿ.
3.ನೀವು ಪ್ಯಾಡ್ಡ್ ಟಾಯ್ಲೆಟ್ ಸೀಟ್ ಬಳಸುವುದು ಉತ್ತಮ ಆಯ್ಕೆಗಳಲ್ಲಿ ಒಂದು.
4.ಟಾಯ್ಲೆಟ್ ಬಳಸಿದ ನಂತ್ರ ನಿಮ್ಮ ಕಾಲು ಮರುಗಟ್ಟಿದಂತಾದ್ರೆ ತಕ್ಷಣ ವೈದ್ಯರನ್ನು ಭೇಟಿಯಾಗಿ. ಅನೇಕರಿಗೆ ಕೆಲ ಕ್ಷಣದಲ್ಲಿ ಈ ಸಮಸ್ಯೆ ಕಡಿಮೆ ಆಗುತ್ತೆ. ಆದ್ರೆ ದೀರ್ಘಕಾಲದ ಸಮಸ್ಯೆಗೆ ಮುನ್ಸೂಚನೆ ಇದು. ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಕ್ಕಲ್ಲಿ ಪಾರ್ಶ್ವವಾಯುವಿನಂತಹ ಹೆಚ್ಚು ಗಂಭೀರ ಸಮಸ್ಯೆಗಳಿಂದ ಬಚಾವ್ ಆಗ್ಬಹುದು.
