ದೊಡ್ಡ ಸುರಂಗದೊಳಗಿದ್ದೇವೆ ಅಂತ ಕಲ್ಪಿಸಿಕೊಳ್ಳಿ. ಎಲ್ಲೂ ಬೆಳಕಿಲ್ಲ. ಅಲ್ಲೇ ರೈಲ್ವೇ ಹಳಿಯೂ ಇದೆ. ಯಾವ ಸಮಯದಲ್ಲೂ ರೈಲು ಬರಬಹುದು. ಹಾಗೇನಾದರೂ ಆದರೆ ಸೈಡ್‌ಗೆ ನಿಲ್ಲೋ ಹಾಗಿಲ್ಲ. ಏಕೆಂದರೆ ಅಲ್ಲಿ ಬದಿಗಳೇ ಇಲ್ಲ.

ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯ ಮನಸ್ಥಿತಿಗೆ ಮೇಲಿನ ರೂಪಕವನ್ನು ಹೋಲಿಸುತ್ತಾರೆ. ಸುರಂಗದಾಚೆಗೆ ಬೆಳಕಿದೆ ಅನ್ನೋದನ್ನೇ ಮರೆತಿರುತ್ತಾರೆ. ಆಚೆ ಹೋಗುವ ಪ್ರಯತ್ನವನ್ನೂ ಮಾಡದೇ ಉದ್ವೇಗ, ಭಯ, ಹತಾಶೆಗಳಿಂದ ನಿಂತಲ್ಲೇ ಕಂಪಿಸುತ್ತಿರುತ್ತಾರೆ.

‘ಏನೇನೋ ಸನ್ನಿವೇಶಗಳು ಬಂದು ನೀವು ಅಸಹಾಯತೆಯಲ್ಲಿ ಸಿಲುಕಿರುತ್ತೀರಿ. ಆ ಹೆಲ್ಪ್‌ಲೆಸ್‌ನೆಸ್‌ ಅನ್ನೋದು ಡೇಂಜರ್‌ ಅಲ್ಲ. ಈ ಅಸಹಾಯತೆಯಿಂದ ಭರವಸೆ ಕಳೆದುಕೊಂಡು ಬಿಡುತ್ತೇವಲ್ಲಾ.. ಅದು ಬಹಳ ಡೇಜರ್‌’ ಅಂತಾರೆ ಗೋರ್‌ ಗೋಪಾಲ್‌ ದಾಸ್‌. ಅವರು ಮೇಲಿನ ಮಾತು ಹೇಳುವ ಸಂದರ್ಭದಲ್ಲಿ ಅವರ ಬದುಕಿನಲ್ಲಿ ಅವರು ಕಂಡ ಎರಡು ಆತ್ಮಹತ್ಯೆಯ ಸನ್ನಿವೇಶವನ್ನು ವಿವರಿಸುತ್ತಾರೆ.

ಪ್ರತಿ 40 ಸೆಕೆಂಡ್‌ಗಳಿಗೊಬ್ಬ ಆತ್ಮಹತ್ಯೆ! ಉಳಿಸುವ ಬಗೆ ಹೇಗೆ ?

 ‘ಈಗ ಕ್ಯಾಮರದ ಲೆನ್ಸ್‌ಅನ್ನು ದೃಷ್ಟಿಸುತ್ತಿರುವ ಇವೇ ಕಣ್ಣುಗಳು ನನ್ನ ಅತ್ತೆಯ ಆತ್ಮಹತ್ಯೆಯನ್ನೂ ಕಂಡಿದ್ದವು. ಅತ್ತೆಗೆ ನಮ್ಮ ಮಾವ ದೈಹಿಕ, ಮಾನಸಿಕ ಕಿರುಕುಳ ನೀಡುತ್ತಿದ್ದರು. ಇದಕ್ಕಾಗಿ ಅವರನ್ನು ತೊರೆದು ನಮ್ಮ ಜೊತೆಗೆ ಇದ್ದರು. ಒಂದು ದಿನ ಇದ್ದಕ್ಕಿದ್ದ ಹಾಗೆ ಕಿರುಚುತ್ತಾ ಬಂದವರೇ ಸೀಮೆಎಣ್ಣೆಯನ್ನು ಮೈ ಮೇಲೆ ಸುರಿದು ಬೆಂಕಿ ಹಚ್ಚಿಕೊಂಡೇ ಬಿಟ್ಟರು. ತಾನು ತಂದೆ ತಾಯಿಗೆ, ತಮ್ಮನಿಗೆ ಹೊರೆಯಾಗುತ್ತಿರುವೆ, ಏನೂ ಮಾಡಲಾಗುತ್ತಿಲ್ಲವಲ್ಲ ಅನ್ನುವ ಅಸಹಾಯಕತೆ, ಅದು ಬದುಕುವ ಭರವಸೆಯನ್ನೂ ಕಳೆದುಹಾಕಿತ್ತು.

ಇನ್ನೊಂದು ನನ್ನ ಗೆಳೆಯನ ಮಗನ ಆತ್ಮಹತ್ಯೆ. ಆತ ಮೆಡಿಕಲ್‌ ವಿದ್ಯಾರ್ಥಿ. ಕ್ಲಾಸ್‌ನಲ್ಲೇ ಟಾಪರ್‌. ಎಕ್ಸಾಂ ರಿಸಲ್ಟ್‌ ಬರುವ ಹಿಂದಿನ ದಿನ ಆತ್ಮಹತ್ಯೆ ಮಾಡಿಕೊಂಡ. ಯಾವತ್ತೂ ಟಾಪರ್‌ ಆಗಿರೋ ತಾನು ಎಲ್ಲಿ ಎರಡನೇ ಸ್ಥಾನ ಪಡೆಯುತ್ತೇನೋ ಅನ್ನುವ ಆತಂಕದಲ್ಲಿ ಆತ ಜೀವ ತೆಗೆದುಕೊಂಡಿದ್ದ. ಮಾರನೇ ದಿನ ರಿಸಲ್ಟ್‌ ಬಂತು. ಯುನಿವರ್ಸಿಟಿಗೇ ಅತೀ ಹೆಚ್ಚು ಅಂಕ ಪಡೆದಿದ್ದ. ಅಂತ್ಯಸಂಸ್ಕಾರದಲ್ಲಿ ಆತನ ಮಾರ್ಕ್ಸ್‌ ಕಾರ್ಡ್‌ಅನ್ನೂ ಚಿತೆ ಮೇಲಿಟ್ಟರು ಆತನ ತಂದೆ..’

ಈ ಐದು ವಿಷಯ ನಿಮ್ಮ ಗಮನದಲ್ಲಿರಲಿ.

1. ನೀವು ಎಷ್ಟುದೊಡ್ಡ ವ್ಯಕ್ತಿಯೇ ಆಗಿರಬಹುದು, ಎಷ್ಟುಚಿಕ್ಕ ವ್ಯಕ್ತಿಯೂ ಆಗಿರಬಹುದು. ಜಗತ್ತಿನಲ್ಲಿರುವ ಯಾರೊಬ್ಬರೂ ಸಮಸ್ಯೆಗಳಿಂದ ಮುಕ್ತರಲ್ಲ.

2. ಸಮಸ್ಯೆಗಳಿಲ್ಲದೇ ಇರೋದೆಂದರೆ ಸಮುದ್ರಕ್ಕೆ ಬರಿಮೈಯಲ್ಲಿ ಜಿಗಿದು ಮೈ ಒದ್ದೆಯಾಗಬಾರದು ಅಂದ ಹಾಗೆ. ಈ ಜಗತ್ತು ಅನ್ನೋ ಮಹಾಸಮುದ್ರಕ್ಕೆ ಬಿದ್ದ ಮೇಲೆ ಸಮಸ್ಯೆಗಳಿಲ್ಲದೇ ಇರೋದೇ ಇಲ್ಲ. ಸಮಸ್ಯೆಯ ರೀತಿಯಲ್ಲಿ ವ್ಯತ್ಯಾಸ ಇರಬಹುದಷ್ಟೇ.

3. ಇಸಿಜಿ ಮೆಶಿನ್‌ ಗಮನಿಸಿ. ಹೃದಯ ಬಡಿತ ಮೇಲೆ ಕೆಳಗೆ ಜಿಗಿಯೋದು ಕಾಣಿಸುತ್ತದೆ. ಆ ಗೆರೆಗಳು ಮೇಲೆ ಕೆಳಗೆ ಹೋಗದೇ ಒಂದೇ ಲೆವೆನ್‌ನಲ್ಲಿರುವಾಗ ನಾವು ಶವಾಗಾರ ತಲುಪಿರುತ್ತೇವೆ! ಲೈಫ್‌ನ ಕತೆಯೂ ಹೀಗೇ.

ಗ್ರಹಗಳ ದಿಕ್ಕನ್ನೇ ಬದಲಿಸುವ ಶಕ್ತಿ ಧ್ಯಾನಕ್ಕಿದೆ, ನೀವೂ ಹೀಗೆ ಮಾಡಿ ಆರೋಗ್ಯವಾಗಿರಿ

 4. ಭಾವನಾತ್ಮಕ ಸಮಸ್ಯೆಗಳು ಬಹಳ ದೊಡ್ಡವು. ಇದರಿಂದ ಅಸಹಾಯಕತೆ ಹೆಚ್ಚುತ್ತದೆ. ಈ ಸ್ಥಿತಿ ಭರವಸೆಯ ಕಿರಣಗಳನ್ನು ಒಳ ಬಿಟ್ಟುಕೊಳ್ಳದಿದ್ದಾಗ ಆತ್ಮಹತ್ಯೆಯಂಥಾ ಯೋಚನೆಗಳು ಬರುತ್ತದೆ.

5. ಬ್ಯುಸಿನೆಸ್‌ಮ್ಯಾನ್‌ ಸೇತುವೆ ಮೇಲಿಂದ ಜಿಗಿಯೋದು, ಹುಡುಗ ಪ್ರೆಶರ್‌ನಿಂದ ಸ್ವಿಸೈಡ್‌ ಮಾಡೋದು, ನಟನೊಬ್ಬ ನೇಣಿಗೆ ಕೊರಳು ಕೊಡೋದಕ್ಕೆ ಬಹಳ ಮುಖ್ಯ ಕಾರಣ ಸಮಸ್ಯೆಯಲ್ಲ, ಹೋಪ್‌ಲೆಸ್‌ನೆಸ್‌ ಅರ್ಥಾತ್‌ ಭರವಸೆ ಕಳೆದುಕೊಳ್ಳೋದು.

ಆತ್ಮಹತ್ಯಾ ಯೋಚನೆಗಳಿಂದ ಹೊರಬರೋದು ಹೇಗೆ?

1. ಮನಸ್ಸು ಬಿಚ್ಚಿ ಮಾತಾಡಿ.

ನಮ್ಮ ಒಳಗಿರುವ ಎಲ್ಲ ಫ್ರಸ್ಟೇರ್‍ಶನ್‌ಗಳನ್ನು ಹೊರಗೆ ಹಾಕಬೇಕು. ಆತ್ಮೀಯರ ಬಳಿ ನಿಮ್ಮ ಮನಸ್ಸಿನ ನೋವನ್ನೆಲ್ಲ ಹೇಳಿಕೊಳ್ಳಿ. ಶೇ.70ಷ್ಟುರಿಲ್ಯಾಕ್ಸೇಶನ್‌ ಇದರಿಂದ ಸಿಗುತ್ತೆ. ಸ್ನೇಹಿತರು, ಆತ್ಮೀಯರ ನಡುವಿನ ಪಾಸಿಟಿವ್‌ ಸಂಬಂಧಕ್ಕೆ ನೀರೆರೆಯುತ್ತಲೇ ಇರಿ.

2. ಮಾರ್ಗದರ್ಶಿಯ ಬಳಿ ನೋವು ಹೇಳಿಕೊಳ್ಳಿ.

ಅಂಥಾ ಆತ್ಮೀಯರು ಯಾರೂ ಇಲ್ಲ, ಅಥವಾ ಹೇಗೆ ನೋವು ತೋಡಿಕೊಂಡರೆ ಇತರರು ನಿಮ್ಮನ್ನು ಜಡ್ಜ್‌ ಮಾಡುವ, ನಿಮ್ಮ ಬಗ್ಗೆ ಗಾಸಿಪ್‌ ಮಾಡುವ ಸಾಧ್ಯತೆ ಇದೆ ಅಂತಾದರೆ ಆಪ್ತ ಸಹಾಯಕರಲ್ಲಿ ಹೋಗಿ ನಿಮ್ಮ ವೇದನೆ ಹಂಚಿಕೊಳ್ಳಿ. ಮೂಡ್‌ ಕೆಫೆ ಅಂತ ಆನ್‌ಲೈನ್‌ನಲ್ಲಿ ಕೌನ್ಸಿಲಿಂಗ್‌ ವ್ಯವಸ್ಥೆ ಇದೆ. ಅಲ್ಲೂ ಸಮಸ್ಯೆ ಹೇಳಿ ಹಗುರಾಗುವ ಜೊತೆಗೆ ಇದರಿಂದ ಹೊರಬರುವ ಬಗೆಗೂ ಸಲಹೆ ಸಿಗುತ್ತೆ.

3. ಸ್ಫೂರ್ತಿಯುತ ಮಾತುಗಳನ್ನು ಕೇಳಿ.

ನಿಮ್ಮ ಹಾಗೆ ಸಮಸ್ಯೆಯಿಂದ ಒದ್ದಾಡಿ ಮೇಲೆದ್ದವರ ಸಾಕಷ್ಟುಪಾಸಿಟಿವ್‌ ಕತೆಗಳು ಗೋಲ್ಕಾಸ್‌ನಂಥಾ ವೆಬ್‌ಸೈಟ್‌ಗಳಲ್ಲಿ ಸಿಗುತ್ತದೆ. ಅವು ನಿಮ್ಮಲ್ಲಿ ಭರವಸೆ ಹುಟ್ಟಿಸಬಹುದು.

ಮನೆಯಲ್ಲೇ ಕುಳಿತು ಖಿನ್ನತೆ ಬೇಕಿದೆ ಎಚ್ಚರ, ತಜ್ಞರ ಸಲಹೆ

4. ಅಧ್ಯಾತ್ಮ

ಇದು ಕೇವಲ ನಿಮ್ಮ ಸ್ಟ್ರೇಸ್‌ ಕಡಿಮೆ ಮಾಡೋದು, ಬೇಗುದಿಯನ್ನು ಶಾಂತಗೊಳಿಸೋದು ಮಾತ್ರವಲ್ಲ, ಮನಸ್ಸನ್ನು ಸ್ಟ್ರಾಂಗ್‌ ಮಾಡುತ್ತದೆ. ಬೆಸ್ಟ್‌ ಆಯ್ಕೆಯೂ ಹೌದು.

ಕೊನೆಯದಾಗಿ ‘ನೋವು ನಮ್ಮ ಕೈ ಮೀರಿದ್ದು, ಆದರೆ ಒದ್ದಾಟ ನಮ್ಮ ಆಯ್ಕೆಗೆ ಬಿಟ್ಟದ್ದು.’