Asianet Suvarna News Asianet Suvarna News

Home Remedy: ನಿತ್ಯ ಕಾಡುವ ಆ್ಯಸಿಡಿಟಿ ತಲೆನೋವಿಗೆ ಇದೇ ಬೆಸ್ಟ್ ಮದ್ದು

ಸಮಯಕ್ಕೆ ಸರಿಯಾಗಿ ಊಟ, ಉಪಹಾರ ಆಗಿಲ್ಲ ಎಂದಾಗ, ಅತಿಯಾದ ಸುತ್ತಾಟ, ಕೆಲಸದ ಒತ್ತಡ ಎಲ್ಲವೂ ಎಸಿಡಿಟಿಗೆ ಕಾರಣವಾಗುತ್ತೆ. ಎಸಿಡಿಟಿ ಹೆಚ್ಚಾಗ್ತಿದ್ದಂತೆ ವಿಪರೀತ ತಲೆನೋವು ಬರುತ್ತೆ. ನೀವೂ ಇದ್ರಿಂದ ಬೇಸತ್ತಿದ್ದರೆ ಈ ಟಿಪ್ಸ್ ಫಾಲೋ ಮಾಡಿ.
 

Simple Home Remedy For Acidity And Headache roo
Author
First Published Jun 29, 2023, 5:18 PM IST

ಜೀವನಶೈಲಿ ಹಾಗೂ ಆಹಾರದಲ್ಲಾದ ಬದಲಾವಣೆಯಿಂದ ಅನೇಕ ಸಮಸ್ಯೆಗಳು ಆರಂಭವಾಗಿದೆ. ಇಂತಹ ಸಮಸ್ಯೆಗಳಲ್ಲಿ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆ, ಮಲಬದ್ಧತೆ, ಎಸಿಡಿಟಿ ಮತ್ತು ತಲೆನೋವು ಮುಂತಾದವು ಈಗೀಗ ಹೆಚ್ಚಾಗುತ್ತಿವೆ. ಈ ಎಲ್ಲ ಸಮಸ್ಯೆಗಳಿಗೆ ಮೂಲ ನಮ್ಮ ಆಹಾರ ಪದ್ಧತಿಯೇ ಆಗಿದೆ. ಸಮಯಕ್ಕೆ ಸರಿಯಾಗಿ ಆಹಾರ ಸೇವಿಸದೇ ಇರುವುದು, ಪೌಷ್ಟಿಕಾಂಶವಿರುವ ಆಹಾರಗಳನ್ನು ಸೇವಿಸದೇ ಇರುವುದು, ಸರಿಯಾಗಿ ನಿದ್ದೆ ಮಾಡದೇ ಇರುವುದರಿಂದ ಅನೇಕ ಸಮಸ್ಯೆಗಳು ಉದ್ಭವವಾಗುತ್ತದೆ.

ಆರೋಗ್ಯ (Health) ದಲ್ಲಿ ಏನಾದರೂ ಏರುಪೇರಾದರೆ ನಾವು ವೈದ್ಯರ ಬಳಿ ಹೋಗುತ್ತೇವೆ. ಆರೋಗ್ಯ ಸಮಸ್ಯೆಗಳು ಎದುರಾದಾಗ ವೈದ್ಯರ ಸಲಹೆ ಪಡೆಯುವುದು ಉತ್ತಮವೇ ಆದರೆ ಕೆಲವು ಚಿಕ್ಕ ಪುಟ್ಟ ಸಮಸ್ಯೆಗಳಿಗೆ ನಾವು ಮನೆಯಲ್ಲಿಯೇ ಪರಿಹಾರ ಕಂಡುಕೊಳ್ಳಬಹುದು. ಅಂತಹ ಕೆಲವು ಮನೆಮದ್ದಿನಿಂದಲೇ ಎಸಿಡಿಟಿ, ಮಲಬದ್ಧತೆ (Constipation) , ತಲೆನೋವು, ಕೂದಲು ಉದುರುವುದು ಮುಂತಾದವುಗಳನ್ನು ಕಡಿಮೆಮಾಡಿಕೊಳ್ಳಬಹುದು.

ಹೆಲ್ದೀ ಆಗಿದ್ರೂ ಮಳೆಗಾಲದಲ್ಲಿ ಮಾತ್ರ ಈ ತರಕಾರಿ ತಿನ್ಲೇಬೇಡಿ

ಮನೆಮದ್ದಿ (Home Remedy ) ನ ಬಗ್ಗೆ ತಜ್ಞರು ಹೀಗೆ ಹೇಳ್ತಾರೆ : ಬೆಳಿಗ್ಗೆ ಎದ್ದೊಡನೆ ಅರ್ಧ ಚಮಚ ಎ2 ಆಕಳ ತುಪ್ಪವನ್ನು ಒಂದು ಕಪ್ ಬಿಸಿ ನೀರಿನ ಜೊತೆ ಸೇವಿಸಬೇಕು. ಇದೇ ರೀತಿ ರಾತ್ರಿ ಮಲಗುವಾಗ ಕೂಡ ಮಾಡಬೇಕು. ಈ ವಿಧಾನವನ್ನು ಪ್ರತಿದಿನವೂ ಅನುಸರಿಸಿದರೆ ಎಸಿಡಿಟಿ, ಮಲಬದ್ಧತೆ, ತಲೆನೋವು, ಕೂದಲು ಉದುರುವುದನ್ನು ತಡೆಗಟ್ಟಬಹುದು.

ಎ2 ತುಪ್ಪ ಎಂದರೇನು? : ಎ2 ಎಂಬುದು ಸ್ಥಳೀಯ ಹಸುವಿನ ಹಾಲಿನಲ್ಲಿ ಕಂಡುಬರುವ ಪ್ರೋಟೀನ್ ಆಗಿದೆ. ಎ2 ಪ್ರೋಟೀನ್ ಗೀರ್ ತಳಿಯ ಆಕಳ ಹಾಲಿನಲ್ಲಿ ಹೆಚ್ಚಿಗೆ ಕಂಡುಬರುತ್ತದೆ. ಎ2 ಪ್ರೋಟೀನ್ ತಾಯಿಯ ಎದೆ ಹಾಲಿನಲ್ಲಿಯೂ ಕಂಡುಬರುತ್ತದೆ. ಹೆಚ್ಚು ಪ್ರೋಟೀನ್ ಅನ್ನು ಹೊಂದಿರುವ ಕಾರಣದಿಂದಲೇ ಎ2 ತುಪ್ಪವನ್ನು ಸೇವಿಸುವುದು ಆರೋಗ್ಯಕ್ಕೆ ಉತ್ತಮ ಎಂದು ಹೇಳಲಾಗುತ್ತೆ. ಇದರಲ್ಲಿ ಎಮಿನೋ ಎಸಿಡ್ ಕೂಡ ಅಧಿಕ ಪ್ರಮಾಣದಲ್ಲಿರುತ್ತದೆ. ಇದರಿಂದ ರೋಗನಿರೋಧಕ ಶಕ್ತಿ ಕೂಡ ಹೆಚ್ಚುತ್ತದೆ.

ಎ2 ತುಪ್ಪದಿಂದಾಗುವ ಉಪಯೋಗಗಳು :

ಮಲಬದ್ಧತೆ (Constipation): ಈಗಿನ ಪಾಸ್ಟ್ ಫುಡ್ ಹಾಗೂ ಕೆಲವು ಆಹಾರಗಳಿಂದ ಅನೇಕರಲ್ಲಿ ಮಲಬದ್ಧತೆಯ ಸಮಸ್ಯೆ ಕಾಣಿಸುತ್ತದೆ. ಮಲಬದ್ಧತೆಯನ್ನು ಹೋಗಲಾಡಿಸಲು ಎ2 ತುಪ್ಪ ದಿವ್ಯೌಷಧವಾಗಿದೆ. ಇದನ್ನು ಬೆಳಿಗ್ಗೆ ಮತ್ತು ರಾತ್ರಿ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸಬಹುದು.

Health Tips : ಆರೋಗ್ಯವಾಗಿರರ್ಬೇಕಾ? ಒಂದೇ ಒಂದು ತಿಂಗಳು ಪೂರ್ತಿ ಪೆಗ್ ಹಾಕೋದ ಬಿಟ್ಟು ಬಿಡಿ!

ಎಸಿಡಿಟಿ (Acidity): ಬಹಳ ಖಾರದ ಪದಾರ್ಥ ಅಥವಾ ಎಣ್ಣೆ ಪದಾರ್ಥಗಳನ್ನು ತಿಂದಾಗ ಎಸಿಡಿಟಿ ಸಮಸ್ಯೆ ಕಂಡುಬರುತ್ತೆ. ಇತ್ತೀಚಿಗೆ ಹೆಚ್ಚು ಫೇಮಸ್ ಆಗಿರುವ ಪಿಜ್ಜಾ, ಪಾಸ್ತಾ, ಚಿಪ್ಸ್ ಮುಂತಾದವುಗಳಿಂದ ಎಸಿಡಿಟಿ ಕಟ್ಟಿಟ್ಟ ಬುತ್ತಿ. ಹೆಚ್ಚಿನ ಪ್ರಮಾಣದಲ್ಲಿ ಕಾಫಿ, ಟೀ ಸೇವನೆ ಕೂಡ ಎಸಿಡಿಟಿಗೆ ಕಾರಣವಾಗುತ್ತದೆ. ಇವೆಲ್ಲವುಗಳಿಂದ ದೇಹದಲ್ಲಿನ ಪಿಎಚ್ ಪ್ರಮಾಣದಲ್ಲಿ ವ್ಯತ್ಯಾಸವಾಗಿ ಎಸಿಡಿಟಿ ಉಂಟಾಗುತ್ತದೆ.  ಎ2 ತುಪ್ಪವು ದೇಹವನ್ನು ನೈಸರ್ಗಿಕವಾಗಿ ತಂಪುಮಾಡುತ್ತದೆ. ಇದರಿಂದ ಎಸಿಡಿಟಿ ಸಮಸ್ಯೆ ದೂರವಾಗುತ್ತದೆ. ತುಪ್ಪದಿಂದ ಶರೀರದಲ್ಲಿ ಚಯಾಪಚಯ ಕ್ರಿಯೆಯಲ್ಲೂ ಸುಧಾರಣೆ ಕಂಡುಬರುತ್ತದೆ.

ತಲೆನೋವು (Headache) ಮತ್ತು ಕೂದಲು ಉದುರುವುದು : ಈಗಾಗಲೇ ಹೇಳಿದಂತೆ ಎಲ್ಲ ಸಮಸ್ಯೆಗಳಿಗೂ ಮೂಲ ನಮ್ಮ ಆಹಾರ ಪದ್ಧತಿ ಹಾಗೂ ಜೀವನ ಶೈಲಿಯೇ ಆಗಿದೆ. ಒತ್ತಡ, ನಿದ್ರೆಯ ಕೊರತೆ, ಗ್ಯಾಸ್, ಮೈಗ್ರೇನ್ ಮುಂತಾದವುಗಳಿಂದ ತಲೆ ನೋವು ಉಂಟಾಗುತ್ತದೆ. ಇದರ ಹೊರತಾಗಿ ವಾತ, ಪಿತ್ತ, ಕಫ ಮುಂತಾದ ತೊಂದರೆಗಳಿದ್ದಾಗಲೂ ತಲೆನೋವು ಬರುತ್ತದೆ. ಈ ಸಮಸ್ಯೆಗೂ ಕೂಡ ತುಪ್ಪ ಪರಿಹಾರ ನೀಡುತ್ತದೆ.

ತುಪ್ಪದಿಂದ ಶರೀರ ಹೆಚ್ಚಿನ ಪ್ರಮಾಣದ ಪೋಷಕಾಂಶಗಳನ್ನು ಹೀರಿಕೊಳ್ಳುತ್ತದೆ. ಇದರಿಂದ ಕೂದಲಿಗೆ ಹೆಚ್ಚಿ ವಿಟಮನ್ ಗಳು ಸಿಗುವುದರಿಂದ ಕೂದಲು ಉದುರುವುದು ನಿಂತು ಕೂದಲಿನ ಬೆಳವಣಿಗೆ ಚೆನ್ನಾಗಿ ಆಗುತ್ತದೆ. ಹಿಂದಿನ ಕಾಲದಲ್ಲಿ ಆಕಳ ಹಾಲನ್ನು ಕುಡಿದರೆ ಆನೆಯ ಕಸುವು ಬರುತ್ತದೆ ಎಂದು ಹೇಳಲಾಗುತ್ತಿತ್ತು. ಆಕಳ ಹಾಲು ಹಾಗೂ ಅದರಿಂದ ತಯಾರಿಸುವ ತುಪ್ಪದಲ್ಲಿರುವ ಔಷಧೀಯ ಗುಣದಿಂದಲೇ ಅದು ಮನೆಮಾತಾಗಿದೆ.

Follow Us:
Download App:
  • android
  • ios