Food
ಮಳೆಗಾಲದಲ್ಲಿ ಈ ಕೆಲವು ಆಹಾರವನ್ನು ತಿನ್ನೋದು ಆರೋಗ್ಯಕ್ಕೆ ಒಳ್ಳೆಯದಲ್ಲ.
ಎಲೆಕೋಸು ಅನೇಕ ಬಿಳಿ ಪದರುಗಳನ್ನು ಹೊಂದಿದೆ. ಹೀಗಾಗಿ ಬ್ಯಾಕ್ಟಿರೀಯಾ ಜೊತೆಗೆ ಬಿಳಿ ಹುಳುಗಳು ಸಹ ಇದರಲ್ಲಿ ಬೆಳೆಯುತ್ತವೆ. ಹೀಗಾಗಿ ಇದನ್ನು ಸೇವಿಸಿದರೆ ಆರೋಗ್ಯ ಹದಗೆಡೋದು ಗ್ಯಾರಂಟಿ.
ಹೂಕೋಸು ಮತ್ತು ಕೋಸುಗಡ್ಡೆ ಒಳಗಡೆ ತೇವಾಂಶವನ್ನು ಉಳಿಸಿಕೊಳ್ಳುತ್ತದೆ. ಹೀಗಾಗಿ ಇದು ಮಾನ್ಸೂನ್ ಸಮಯದಲ್ಲಿ ಬೇಗನೇ ಬೂಸ್ಟ್ ಹಿಡಿಯುತ್ತದೆ. ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ಮರಿಹುಳುಗಳು ಇದರಲ್ಲಿ ಬೆಳೆಯುತ್ತವೆ.
ಮಳೆಗಾಲದಲ್ಲಿ ಮೀನು, ಸಿಗಡಿ, ಚಿಪ್ಪು ಮೀನುಗಳಂತಹಾ ಸಮುದ್ರಾಹಾರವನ್ನು ತಿನ್ನುವುದನ್ನು ತಪ್ಪಿಸಿ. ಏಕೆಂದರೆ ಇವು ಬೇಗನೇ ಕಲುಷಿತಗೊಳ್ಳುತ್ತವೆ. ಹೀಗಾಗಿ ಫುಡ್ ಪಾಯ್ಸನಿಂಗ್ ಆಗೋ ಸಾಧ್ಯತೆ ಹೆಚ್ಚು.
ಪಾಲಕ್, ಮೆಂತ್ಯ, ಹರಿವೆ ಮೊದಲಾದ ಸೊಪ್ಪು ತರಕಾರಿಗಳನ್ನು ಮಳೆಗಾಲದಲ್ಲಿ ದೂರವಿಡಬೇಕು. ಯಾಕೆಂದರೆ ಇವುಗಳಲ್ಲಿ ಮಳೆಗಾಲದಲ್ಲಿ ಸುಲಭವಾಗಿ ಕೀಟ, ಬ್ಯಾಕ್ಟಿರೀಯಾಗಳು ಸೇರಿಕೊಳ್ಳುತ್ತವೆ.
ಅಣಬೆಗಳು ಬೇಗನೇ ಕೆಡುತ್ತವೆ. ಮಳೆಯ ತೇವಾಂಶದಿಂದಾಗಿ ಬೇಗನೇ ಬ್ಯಾಕ್ಟಿರೀಯಾ ಬೆಳೆಯುತ್ತದೆ. ಹೀಗಾಗಿ ಮಳೆಗಾದಲ್ಲಿ ಅಣಬೆಯನ್ನು ಸೇವಿಸದಿರೋದು ಒಳ್ಳೆಯದು.
ಟೊಮೆಟೋ, ಸೌತೆಕಾಯಿ, ಕ್ಯಾರೆಟ್ ಮೊದಲಾದ ಹಸಿ ತರಕಾರಿಗಳನ್ನು ಸೇರಿಸಿದ ಸಲಾಡ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದ್ರೆ ಮಳೆಗಾಲದಲ್ಲಿ ತುಸು ಬೇಯಿಸಿದ ನಂತರವಷ್ಟೇ ಇದು ತಿನ್ನಲು ಯೋಗ್ಯ.
ಬಾಟಲ್ ಸೋರೆಕಾಯಿಯಲ್ಲಿ ಹೆಚ್ಚಿನ ನೀರಿನಂಶವಿದ್ದು, ಮಳೆಗಾಲದಲ್ಲಿ ಸುಲಭವಾಗಿ ಕೆಡುತ್ತದೆ. ಹೀಗಾಗಿ ಇದನ್ನು ಅಡುಗೆಯಲ್ಲಿ ಬಳಸುವುದನ್ನು ಕಡಿಮೆ ಮಾಡುವುದು ಒಳ್ಳೆಯದು.