ನ್ಯುಮೊನಿಯ ಕಿಡ್ನಿ ವೈಫಲ್ಯ ಇನ್ನು ಏನೇನೆಲ್ಲಾ: ನಿಧಾನವಾಗಿ ನಿಮ್ಮನ್ನ ಕೊಲ್ಲುತ್ತೆ ಪಾತ್ರೆ ತೊಳೆಯುವ ಸ್ಪಾಂಜ್
ನಿಮ್ಮ ಅಡುಗೆ ಮನೆಯಲ್ಲಿ ಪಾತ್ರೆ ತೊಳೆಯಲು ಬಳಸುವ ಸ್ಪಾಂಜ್, ಸ್ವಚ್ಛವಾಗಿ ಕಂಡರೂ, ಅಪಾಯಕಾರಿ ಬ್ಯಾಕ್ಟೀರಿಯಾಗಳ ತಾಣವಾಗಿರಬಹುದು. ಈ ಬ್ಯಾಕ್ಟೀರಿಯಾಗಳು ಆಹಾರದಿಂದ ಹರಡುವ ರೋಗಗಳಿಗೆ ಕಾರಣವಾಗಬಹುದು ಮತ್ತು ನಿಮ್ಮ ಆರೋಗ್ಯವನ್ನು ಅಪಾಯಕ್ಕೆ ಸಿಲುಕಿಸಬಹುದು.
ಬೆಂಗಳೂರು: ಹೊರಗಿನ ಆಹಾರಗಳೆಲ್ಲಾ ಬಹುತೇಕ ಕಲಬೆರಕೆ ವಿಷಕಾರಿ ಎನಿಸಿರುವ ಈಗಿನ ಸ್ಥಿತಿಯಲ್ಲಿ ನಿಮ್ಮ ಮನೆಯೇ ನಿಮ್ಮ ಆರೋಗ್ಯದ ರಕ್ಷಣಾ ಕೇಂದ್ರ ಅಲ್ಲಿ ನೀವು ಸ್ವಚ್ಛತೆಗೆ ಇನ್ನಿಲ್ಲದ ಮಹತ್ವ ನೀಡುತ್ತಿರಿ. ಆರೋಗ್ಯವನ್ನು ಕಾಪಾಡುವುದಕ್ಕಾಗಿ ಇಡೀ ಮನೆಯನ್ನು ದಿನಕ್ಕೊಮ್ಮೆಯಾದರು ಉಜ್ಜಿ ಉಜ್ಜಿ ತೊಳೆಯುತ್ತಿರಿ, ಮನೆಯ ಧೂಳು ಹೊಡೆಯುತ್ತೀರಿ, ಅಡುಗೆ ಮಾಡುವ ಪಾತ್ರಗಳನ್ನು ಚೆನ್ನಾಗಿ ತೊಳೆದು ಒಣಗಿಸುತ್ತೀರಿ. ಆದರೆ ಹೀಗೆ ಪಾತ್ರೆಗಳನ್ನು ಸ್ವಚ್ಛ ಮಾಡಲು ನೀವು ಬಳಸುವ ಕಿಚನ್ ಸ್ಪಾಂಜ್ ಕೂಡ ನಿಮ್ಮ ಜೀವಕ್ಕೆ ಸ್ಲೋ ಪಾಯಿಸನ್( ನಿಧಾನವಾಗಿ ಏರುವ ವಿಷ) ಆಗಬಹುದು ಎಂಬ ವಿಚಾರ ನಿಮಗೆ ಗೊತ್ತಾ?
ಅಡುಗೆ ಮನೆಯಲ್ಲಿ ಪಾತ್ರೆ ತೊಳೆಯಲು ಬಳಸು ಈ ಸ್ಪಾಂಜ್ ನೋಡುವುದಕ್ಕೆ ನಿಮಗೆ ತುಂಬಾ ಮುಗ್ಧ ಹಾನಿ ಇಲ್ಲದ ವಸ್ತುವಿನಂತೆ ಕಾಣಿಸಬಹುದು. ಆದರೆ ಅದು ಅಪಾಯಕಾರಿ ಬ್ಯಾಕ್ಟೀರಿಯಾಗಳ ಪ್ರಮುಖ ತಾಣವಾಗಿದ್ದು, ಅದು ನಿಮ್ಮ ಮನೆಮಂದಿಯ ಆರೋಗ್ಯವನ್ನು ಅಪಾಯಕ್ಕೆ ದೂಡಬಲ್ಲದು. ಹಾಗಾದ್ರೆ ಕಿಚನ್ ಸ್ಪಾಂಜ್‌ಗಳು ಹೇಗೆ ನಿಮ್ಮ ಆರೋಗ್ಯಕ್ಕೆ ಅಪಾಯಕಾರಿಯಾಗಬಲ್ಲದು ಇಲ್ಲಿದೆ ಮಾಹಿತಿ.
ಕಿಚನ್ ಸ್ಪಾಂಜ್‌ಗಳು ಹೇಗೆ ಅಪಾಯಕಾರಿ?
ಅಧ್ಯಯನ ವರದಿಯೊಂದರ ಪ್ರಕಾರ ಕಿಚನ್‌ನ ಸ್ಪಾಂಜ್‌ಗಳು ಟಾಯ್ಲೆಟ್ ಸೀಟ್‌ನಲ್ಲಿರುವ ಬ್ಯಾಕ್ಟಿರಿಯಾಗಳಿಗಿಂತಲೂ ಹೆಚ್ಚು ಬ್ಯಾಕ್ಟಿರಿಯಾಗಳಿಗೆ ಆಶ್ರಯ ನೀಡುತ್ತದೆಯಂತೆ. ಹೀಗಾಗಿ ಈ ಕಿಚನ್ ಸ್ಪಾಂಜ್‌ಗಳನ್ನು ಮನೆಯ ಒಂದು ಅತ್ಯಂತ ಕೊಳಕು ವಸ್ತು ಎಂದು ಅಧ್ಯಯನವೊಂದು ಪರಿಗಣಿಸಿದೆ. ನಾವು ಪಾತ್ರ ತೊಳೆಯಲು ಬಯಸುವ ಒಂದು ಸಣ್ಣ ಸ್ಪಾಂಜ್‌ನ ಪರ್ ಕ್ಯೂಬಿಕ್ ಸೆಂಟಿಮಿಟರ್‌ನಲ್ಲಿ 54 ಶತಕೋಟಿ ಬ್ಯಾಕ್ಟಿರಿಯಾಗಳಿಗೆ ಆಶ್ರಯ ನೀಡುತ್ತದೆ. ಅಲ್ಲದೇ ತಾನು ಸ್ಪರ್ಶಿಸುವ ವಸ್ತುಗಳನ್ನು ಅದು ಮಲಿನಗೊಳಿಸುತ್ತದೆ.
ಖರ್ಜೂರವನ್ನ ಈ ರೀತಿ ಕುದಿಸಿ ಕುಡಿದ್ರೆ ಎಲ್ಲಾ ರೀತಿಯ ಕೆಮ್ಮು ನಿವಾರಣೆಯಾಗುತ್ತೆ!
ಈ ಬ್ಯಾಕ್ಟಿರಿಯಾಗಳಲ್ಲಿ ಆಹಾರದಿಂದ ಹರಡುವ ರೋಗಕಾರಕ ಬ್ಯಾಕ್ಟಿರಿಯಾಗಳು ಕೂಡ ಇದ್ದು, ಫುಡ್ ಪಾಯಿಸನ್ (ವಿಷಾಹಾರ) ಆಗಲು ಕಾರಣವಾಗುತ್ತದೆ. ಒಂದು ಉದಾಹರಣೆ ಮೂಲಕ ಹೇಳುವುದಾದರೆ ಇಂತಹ ಕಿಚನ್ ಸ್ಪಾಂಜ್‌ಗಳು ಕಚ್ಚಾ ಆಹಾರಗಳಾದ ಕೋಳಿ ಮಾಂಸದ ಸಂಪರ್ಕಕ್ಕೆ ಬಂದಾಗ ಕರುಳಿನ ಸೋಂಕು ಉಂಟು ಮಾಡಬಹುದಾದ, ಹಾಗೂ ಆಹಾರವನ್ನು ವಿಷವಾಗಿಸಬಲ್ಲ ಸಲ್ಮೊನೆಲ್ಲಾದ ಸೋಂಕಿಗೆ ಕಾರಣವಾಗುತ್ತದೆ.
ಡ್ಯುಕ್ ಯೂನಿವರ್ಸಿಟಿಯ ಬಯೋ ಮೆಡಿಕಲ್ ಎಂಜಿನಿಯರ್‌ಗಳು ಈ ವಿಚಾರವನ್ನು ತಮ್ಮ ಅಧ್ಯಯನದಿಂದ ಖಚಿತಪಡಿಸಿದ್ದಾರೆ. ಸ್ಪಾಂಜ್‌ನ ರಚನೆಯು ಸೂಕ್ಷ್ಮಜೀವಿಗಳಿಗೆ ಹೇಳಿ ಮಾಡಿಸಿದ ಆವಾಸಸ್ಥಾನವಾಗಿದೆ. ಬ್ಯಾಕ್ಟೀರಿಯಾದ ಬೆಳವಣಿಗೆಗೆ ಪ್ರಯೋಗಾಲಯಗಳಲ್ಲಿ ಬಳಸುವ ಪ್ರಮಾಣಿತ ಅಗರ್ ಪ್ಲೇಟ್‌ಗಳಿಗಿಂತಲೂ ಹೆಚ್ಚು ಬ್ಯಾಕ್ಟಿರಿಯಾಗಳನ್ನು ಈ ಕಿಚನ್ ಸ್ಪಂಜುಗಳು ಬೆಳೆಸಬಲ್ಲವು ಎಂದು ಅಧ್ಯಯನ ವರದಿ ಹೇಳಿದೆ.
ಎಳನೀರು ಆರೋಗ್ಯಕ್ಕೆ ಒಳ್ಳೆಯದು, ಆದರೆ ಈ ಕಾಯಿಲೆ ಇರುವವರು ಕುಡಿಯಬಾರದು ಏಕೆ?
ಸ್ಪಾಂಜ್‌ಗಳ ಈ ವಿಷದಿಂದ ಆರೋಗ್ಯಕ್ಕೇನು ಹಾನಿ?
ಸ್ಪಂಜುಗಳಲ್ಲಿ ಕಂಡುಬರುವ ಈ ಬ್ಯಾಕ್ಟೀರಿಯಾವು ಸಣ್ಣದಾದ ಹೊಟ್ಟೆ ಸಮಸ್ಯೆಗಳಿಂದ ಹಿಡಿದು ನ್ಯುಮೋನಿಯಾ, ಮೆನಿಂಜೈಟಿಸ್ ಮತ್ತು ರಕ್ತ ವಿಷದಂತಹ ಪ್ರಾಣಕ್ಕೆ ಅಪಾಯ ತರುವ ತೀವ್ರವಾದ ಸೋಂಕುಗಳಿಗೂ ಕಾರಣವಾಗಬಹುದು.
ಸ್ಪಂಜುಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಕೆಲವು ಹಾನಿಕಾರಕ ಬ್ಯಾಕ್ಟೀರಿಯಾಗಳು ಇಲ್ಲಿವೆ.
- ಕ್ಯಾಂಪಿಲೋಬ್ಯಾಕ್ಟರ್: ಭೇದಿ, ಜ್ವರ ಮತ್ತು ಕಿಬ್ಬೊಟ್ಟೆಯಲ್ಲಿ ನೋವನ್ನು ಉಂಟು ಮಾಡುತ್ತದೆ ಎಂದು ತಿಳಿದಿದೆ. ಈ ಬ್ಯಾಕ್ಟೀರಿಯಾವು ಹೆಚ್ಚಾಗಿ ಬೇಯಿಸದ ಕೋಳಿಯಲ್ಲಿ ಕಂಡುಬರುತ್ತದೆ.
- ಎಂಟರೊಬ್ಯಾಕ್ಟರ್ ಕ್ಲೋಕೇ: ಸಾಮಾನ್ಯವಾಗಿ ದೇಹದ ಕರುಳಿನ ಭಾಗವಾಗಿರುವ ಈ ಬ್ಯಾಕ್ಟೀರಿಯಾವು ನ್ಯುಮೋನಿಯಾದಂತಹ ಸೋಂಕುಗಳಿಗೆ ಕಾರಣವಾಗಬಹುದು,
- ಅದರಲ್ಲೂ ರೋಗನಿರೋಧಕ ವ್ಯವಸ್ಥೆ ಕಡಿಮೆ ಇರುವವರಿಗೆ ಇದು ತೀವ್ರ ಹಾನಿಯುಂಟು ಮಾಡುತ್ತದೆ.
- ಈ. ಕೊಲಿ: ಆಹಾರದಿಂದ ಹರಡುವ ಅನಾರೋಗ್ಯಕ್ಕೆ ಈ ಬ್ಯಾಕ್ಟಿರಿಯಾವೂ ಪ್ರಮುಖ ಕಾರಣ. ಇದು ತೀವ್ರವಾದ ಹೊಟ್ಟೆ ನೋವು, ಅತಿಸಾರ ಮತ್ತು ತೀವ್ರತರವಾದ ಪ್ರಕರಣಗಳಲ್ಲಿ ಮೂತ್ರಪಿಂಡಕ್ಕೂ ಹಾನಿಯುಂಟು ಮಾಡುತ್ತದೆ.