Asianet Suvarna News Asianet Suvarna News

Mental Health : ಸಂತೋಷಕ್ಕೆ ಅಡ್ಡಿ ನಮ್ಮ ನಕಾರಾತ್ಮಕ ಆಲೋಚನೆ

ಲೋಟ ಬಿದ್ರು, ಬ್ಯಾಗ್ ಹರಿದ್ರು ಅಲವತ್ತುಕೊಳ್ಳುವವರಿದ್ದಾರೆ. ನನ್ನ ಲಕ್ ಸರಿ ಇಲ್ಲ ಅಂತಾ ಗೊಣಗ್ತಿರುತ್ತಾರೆ. ಇಡೀ ದಿನ ಮುಂದಾಲೋಚನೆ ಬದಲು ದುರಾಲೋಚನೆ ಮಾಡ್ತಾ ಸಮಯ ಕಳೆಯುತ್ತಾರೆ. ಇವರ ಈ ವರ್ತನೆ ಸದ್ದಿಲ್ಲದೆ ಅವರ ಆರೋಗ್ಯ ಹಾಳು ಮಾಡಿರುತ್ತದೆ. 
 

Side Effects Of Negative Thinking
Author
First Published Jan 12, 2023, 3:35 PM IST

ಅಂದುಕೊಂಡಂತೆ ಎಲ್ಲವೂ ನಡೆದ್ರೆ ಅದು ಜೀವನವಾಗಲು ಸಾಧ್ಯವೇ ಇಲ್ಲ. ಜೀವನದಲ್ಲಿ ಸಾಕಷ್ಟು ಏಳು- ಬೀಳುಗಳಿರುತ್ತವೆ. ಅನೇಕ ಬಾರಿ ನಾವು ಕಂಡ ಕನಸು ನನಸಾಗೋದಿಲ್ಲ. ಸಣ್ಣಪುಟ್ಟ ಕೆಲಸಗಳಲ್ಲಿ ಕೂಡ ಅಡೆತಡೆ ಬರುತ್ತದೆ. ಇಂದಿನ ಕೆಲಸ ಇಂದು ಪೂರ್ಣಗೊಳ್ಳೋದಿಲ್ಲ. ಆಗ ಮನಸ್ಸು ಚಡಪಡಿಸುತ್ತದೆ. ಸಣ್ಣದಿರಲಿ ಇಲ್ಲ ದೊಡ್ಡದಿರಲಿ ಯಾವುದೇ ಸಮಸ್ಯೆ ಬಂದಾಗ್ಲೂ ಮನಸ್ಸು ನೊಂದುಕೊಳ್ಳುತ್ತದೆ. ನನಗೇ ಯಾಕೆ ಹೀಗಾಗುತ್ತೆ? ನಾನು ಕೈ ಹಾಕಿದ್ದೆಲ್ಲ ಹಾಳು, ನನ್ನಿಂದ ಯಾವುದೂ ಸಾಧ್ಯವಿಲ್ಲ, ನಾನಿನ್ನು ಈ ಕೆಲಸ ಮಾಡಲಾರೆ ಹೀಗೆ ಮನಸ್ಸು ಕೆಟ್ಟದನ್ನು ಆಲೋಚಿಸಲು ಶುರು ಮಾಡುತ್ತದೆ. ಈ ನಮ್ಮ ಕೆಟ್ಟ ಆಲೋಚನೆ ನಮ್ಮ ಆರೋಗ್ಯದ ಮೇಲೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುತ್ತದೆ ಎಂಬುದು ನಿಮಗೆ ಗೊತ್ತಾ? .

ನಮ್ಮ ನಕಾರಾತ್ಮಕ (Negative) ಆಲೋಚನೆಗಳು ನಮ್ಮ ಸಂತೋಷ (Happiness) ಕ್ಕೆ ದೊಡ್ಡ ಅಡಚಣೆಯಾಗುತ್ತದೆ. ಇದ್ರಿಂದ ಒತ್ತಡ ಹೆಚ್ಚಾಗುತ್ತದೆ. ಒತ್ತಡ (Stress) ದ ಅಸ್ವಸ್ಥತೆಯ ಸಿಂಡ್ರೋಮ (PTSD)ವನ್ನು ಹೆಚ್ಚಿಸುತ್ತದೆ. ಅನೇಕರು ಕೆಲಸ ಶುರು ಮಾಡುವ ಮೊದಲೇ ನಕಾರಾತ್ಮಕ ಆಲೋಚನೆ ಮಾಡ್ತಾರೆ. ಇದು ಕೂಡ ತಪ್ಪು. ಇದು ಒತ್ತಡವನ್ನು ಐದು ಪಟ್ಟು ಹೆಚ್ಚು ಮಾಡುತ್ತದೆ. ಈ ಬಗ್ಗೆ ಅನೇಕ ಸಂಶೋಧನೆಗಳು ಕೂಡ ನಡೆದಿವೆ. ನಾವು ಕೆಟ್ಟ ಆಲೋಚನೆ ಮಾಡಿದ್ರೆ, ನಕಾರಾತ್ಮಕ ಚಿಂತನೆ ನಡೆಸಿದ್ರೆ ಅಥವಾ ಬೇರೆಯವರಿಗೆ ಕೆಟ್ಟದ್ದಾಗಲಿ ಎಂದು ಬಯಸಿದ್ರೆ ಅದು ನಮ್ಮ ಮೇಲೆಯೇ ಪ್ರಭಾವ ಬೀರುತ್ತದೆ. 

ಮನಸ್ಸು ದುರ್ಬಲಗೊಳ್ಳುತ್ತದೆ : ನಾವು ಯಾವಾಗಲೂ ನಮ್ಮ ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳನ್ನು ಮಾಡ್ತಿದ್ದರೆ, ಅಪಾಯವನ್ನು ನಿರೀಕ್ಷಿಸುತ್ತಿದ್ದರೆ ಅದು ನಮ್ಮ ಮನಸ್ಥಿತಿಯ ಮೇಲೆ ನೇರ ಪರಿಣಾಮ ಬೀರುತ್ತದೆ. ಅದು ನಮ್ಮನ್ನು ಮಾನಸಿಕವಾಗಿ ದುರ್ಬಲಗೊಳಿಸುತ್ತದೆ.  ಚೆನ್ನಾಗಿ ಯೋಚಿಸಲು ಸಾಧ್ಯವಾಗುವುದಿಲ್ಲ. ಸಣ್ಣ ವಿಷ್ಯಕ್ಕೂ ನಮಗೆ ಭಯ ಆವರಿಸುತ್ತದೆ. ದೈಹಿಕವಾಗಿ ನಾವು ದುರ್ಬಲರಾಗ್ತಾ ಹೋಗ್ತೇವೆ. ಮಾನಸಿಕವಾಗಿ ದುರ್ಬಲತೆ ವ್ಯಕ್ತಿಯ ಯಶಸ್ಸನ್ನು ತಡೆಯುತ್ತದೆ. 

THYROID AWARENESS MONTH: ಮಕ್ಕಳಲ್ಲೂ ಇರುತ್ತೆ ಥೈರಾಯ್ಡ್ ಸಮಸ್ಯೆ

ಹಾಳಾಗುತ್ತೆ ಸಮಯ : ಹಿಂದೆ ಆಗಿದ್ದರ ಬಗ್ಗೆ ಅಥವಾ ಮುಂದೆ ಕೆಟ್ಟದ್ದು ಆಗಬಹುದು ಎಂದು ನಿರೀಕ್ಷಿಸುತ್ತ ಕುಳಿತ್ರೆ ಈ ಸಮಯ ಹಾಳಾಗುತ್ತದೆ.  ಸಮಯ ಬಹಳ ಅಮೂಲ್ಯವಾಗಿದೆ. ನಾವು ನಮ್ಮ ಸಮಯವನ್ನು ಸರಿಯಾಗಿ ಮತ್ತು ಒಳ್ಳೆಯ ರೀತಿಯಲ್ಲಿ ಬಳಸಿಕೊಳ್ಳಬೇಕು. ನಮ್ಮ ಜೀವನದಲ್ಲಿ ಮುನ್ನಡೆಯಲು ಮತ್ತು ಸಮಾಜದ ಒಳಿತಿಗಾಗಿ  ಸಮಯ ಮುಖ್ಯ. ಕೆಟ್ಟ ಆಲೋಚನೆ ಮಾಡ್ತಾ ಸಮಯ ವ್ಯರ್ಥ ಮಾಡಬಾರದು. ನಾವೆಷ್ಟು ಹಣ ನೀಡಿದ್ರೂ ಸಮಯ ಮತ್ತೆ ಬರೋದಿಲ್ಲ ಎಂಬುದು ನೆನಪಿರಲಿ. 

ಯಶಸ್ಸಿಗೆ ಅಡ್ಡಿ : ಕೆಟ್ಟದಾಗಿ ಯೋಚಿಸುವ ಮೂಲಕ  ನಾವು ನಮ್ಮ ಯಶಸ್ಸಿಗೆ ಅಡ್ಡಿಯಾಗ್ತೇವೆ. ಮೊದಲೇ ನಾವು ಮುಂದೇನಾಗಬಹುದು ಎಂದು ಊಹಿಸುತ್ತ ಧೈರ್ಯವಾಗಿ ಹೆಜ್ಜೆಯಿಡಲು ಹಿಂದೇಟು ಹಾಕಿದ್ರೆ ಯಶಸ್ಸು ಕೈತಪ್ಪಿ ಹೋಗುತ್ತದೆ.  ಬಂದದ್ದು ಬರಲಿ ಎನ್ನುತ್ತ ಧೈರ್ಯವಾಗಿ ನಾವು ಕೆಲಸ ಮಾಡಿದಾಗ್ಲೇ ಯಶಸ್ಸು ನಮಗೆ ಸಿಗುತ್ತದೆ. ಆಗಿ ಹೋದ ಸಣ್ಣಪುಟ್ಟ ವಿಷ್ಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬಾರದು. ಆಗುವುದೆಲ್ಲ ಒಳ್ಳೆಯದಕ್ಕೆ ಎನ್ನುವ ಸಕಾರಾತ್ಮ ಆಲೋಚನೆ ನಿಮಗಿದ್ದರೆ ನಿಮ್ಮ ಜೀವನದಲ್ಲಿ ಯಶಸ್ಸು ಸಾಧ್ಯವಾಗುತ್ತದೆ. ನಾವು ಸಮಾಜದಲ್ಲಿ ಬದುಕುತ್ತಿದ್ದೇವೆ. ಹಾಗಾಗಿ ನಮ್ಮ ಬಗ್ಗೆ ಮಾತ್ರವಲ್ಲ ಬೇರೆಯವರ ಬಗ್ಗೆಯೂ ಕೆಟ್ಟದಾಗಿ ಆಲೋಚನೆ ಮಾಡಬಾರದು. ಇದು ನಮ್ಮ ಒಂಟಿತನವನ್ನು ಹೆಚ್ಚಿಸುವುದಲ್ಲದೆ ಸಮಾಜದ ಜನರು ನಮ್ಮಿಂದ ದೂರವಾಗಲು ಕಾರಣವಾಗುತ್ತದೆ. 

Winter : ನಿಮ್ಮಲ್ಲೂ ಕರೆಂಟ್ ಪಾಸ್ ಆಗ್ತಿದೆ! ಚಳೀಲಿ ಮುಟ್ಟಿದರೆ ಶಾಕ್ ಹೊಡೆಯುವುದೇಕೆ?

ಖುಷಿಯಾಗಿರಲು ಹೀಗೆ ಮಾಡಿ : ಸಂತೋಷವನ್ನು ಕಂಡುಕೊಳ್ಳಲು ನೀವು ಮಗುವಿನೊಂದಿಗೆ ಮಾತನಾಡುವ ರೀತಿಯಲ್ಲಿ ನಿಮ್ಮೊಂದಿಗೆ ಮಾತನಾಡಬೇಕು. ಸಂತೋಷ ದುಡ್ಡುಕೊಟ್ಟರೆ ಸಿಗುವಂತಹದ್ದಲ್ಲ. ಅದಕ್ಕೆ ನಮ್ಮ ಪ್ರಯತ್ನ ಮುಖ್ಯ. ನೀವು ವಿಫಲರಾಗಿದ್ದೀರಿ ಎಂದು ಭಾವಿಸಿದಾಗ ಮಗುವಿನ ಜೊತೆ ಮಾತನಾಡುವಂತೆ ನಿಮ್ಮ ಜೊತೆ ನೀವೇ ಮಾತನಾಡಿ. ಪ್ರೀತಿ, ಸಹಾನುಭೂತಿ ಮತ್ತು ಪ್ರೋತ್ಸಾಹ ನೀಡಿ. ನಾವು ನಿಜವಾಗಿಯೂ ಏನು ಬಯಸುತ್ತೇವೆಯೋ, ನಮ್ಮ ಮನಸ್ಸು ನಮ್ಮನ್ನು ಆ ದಿಕ್ಕಿನಲ್ಲಿ ಎಳೆಯುತ್ತದೆ. 

Follow Us:
Download App:
  • android
  • ios