Asianet Suvarna News Asianet Suvarna News

Winter : ನಿಮ್ಮಲ್ಲೂ ಕರೆಂಟ್ ಪಾಸ್ ಆಗ್ತಿದೆ! ಚಳೀಲಿ ಮುಟ್ಟಿದರೆ ಶಾಕ್ ಹೊಡೆಯುವುದೇಕೆ?

ಇವತ್ತು 10 ಸಲ ಶಾಕ್ ಹೊಡೆಸ್ಕೊಂಡೆ ಏನ್ ಮುಟ್ಟೊಕೂ ಭಯ ಅಂತಾ ಜಯಾ ಹೇಳಿದಾಗ್ಲೇ ನೆನಪಾಗಿದ್ದು.. ಯಸ್ ನನಗೂ ನಾಲ್ಕೈದು ಬಾರಿ ಈ ಶಾಕ್ ಅನುಭವ ಆಗಿದೆ ಅಂತ. ಇದಕ್ಕೆ ಕಾರಣ ಏನು ಅಂತಾ ನೋಡಿದಾಗ ಗೊತ್ತಾಯ್ತು ಈ ವಿಷ್ಯ. 
 

Why More Electric Shocks In Winters
Author
First Published Jan 12, 2023, 12:43 PM IST

ಯಪ್ಪಾ, ನೀವು ಶಾಕ್ ಹೊಡಿತಿಯಾ ಅಂತಾ ನಿಮ್ಮ ಬಳಿ ಯಾರಾದ್ರೂ ಹೇಳಿರಬಹುದು. ಅಥವಾ ನೀವು ಯಾರಿಗಾದ್ರೂ ಹೇಳಿರಬಹುದು. ಕೆಲವರನ್ನು ಸ್ಪರ್ಶಿಸಿದಾಗ ಅಥವಾ ಕೆಲ ವಸ್ತುಗಳನ್ನು ಮುಟ್ಟಿದಾಗ ಚಟ್ ಎನ್ನುತ್ತೆ. ಕರೆಂಟ್ ಶಾಕ್ ಹೊಡೆದ ಅನುಭವವಾಗುತ್ತದೆ. ಆ ನಂತ್ರ ಅವರನ್ನು ಅಥವಾ ವಸ್ತುವನ್ನು ಮುಟ್ಟೋಕೆ ಭಯವಾಗುತ್ತದೆ. ನಿಧಾನವಾಗಿ ಅದನ್ನು ಸ್ಪರ್ಶಿಸುತ್ತೇವೆ. ಮಳೆಗಾಲ, ಬೇಸಿಗೆಗಿಂತ ಚಳಿಗಾಲದಲ್ಲಿ ಈ ಶಾಕ್ ಹೊಡೆಯುವುದು ಹೆಚ್ಚು. ನಿಮಗೆ ಶಾಕ್ ಯಾಕೆ ಹೊಡಿತು ಅಥವಾ ನೀವ್ಯಾಕೆ ಶಾಕ್ ಹೊಡೆದ್ರೆ ಎಂಬುದನ್ನು ಎಂದಾದ್ರೂ ಆಲೋಚನೆ ಮಾಡಿದ್ದೀರಾ? ಇದ್ರ ಹಿಂದೆ ವೈಜ್ಞಾನಿಕ ಕಾರಣವಿದೆ. ನಾವಿಂದು ಮನುಷ್ಯನಲ್ಲಿ ಕರೆಂಟ್ ಪಾಸ್ ಆಗೋದು ಏಕೆ, ಆತ ಶಾಕ್ ಹೊಡೆಯೋದು ಏಕೆ ಎಂಬುದನ್ನು ಹೇಳ್ತೆವೆ.

ನಿಮಗೆ ಶಾಕ್ (Shock) ಹೊಡೆಯೋದು ಏಕೆ ? : ಎಲ್ಲಾ ವಸ್ತು (Material) ಗಳು ಪರಮಾಣುಗಳಿಂದ ಮಾಡಲ್ಪಟ್ಟಿದೆ. ಪರಮಾಣುಗಳು 3 ಕಣಗಳಿಂದ ಮಾಡಲ್ಪಟ್ಟಿರುತ್ತವೆ. ಎಲೆಕ್ಟ್ರಾನ್ (Electron), ಪ್ರೋಟಾನ್, ನ್ಯೂಟ್ರಾನ್  ನಿಂದ ಮಾಡಲ್ಪಟ್ಟಿರುತ್ತವೆ. ಎಲೆಕ್ಟ್ರಾನ್‌ಗಳು ಋಣಾತ್ಮಕ (-) ಚಾರ್ಜ್ ಅನ್ನು ಹೊಂದಿರುತ್ತವೆ, ಪ್ರೋಟಾನ್‌ಗಳು ಧನಾತ್ಮಕ (+) ಚಾರ್ಜ್ ಅನ್ನು ಹೊಂದಿರುತ್ತವೆ. ನ್ಯೂಟ್ರಾನ್‌ಗಳು ಸಂಪೂರ್ಣವಾಗಿ ತಟಸ್ಥವಾಗಿರುತ್ತವೆ. ನಮ್ಮ ದೇಹದಲ್ಲೂ ಪ್ರೋಟಾನ್, ಎಲೆಕ್ಟ್ರಾನ್ ಮತ್ತು ನ್ಯೂಟ್ರಾನ್ ಇವೆ. ಪ್ರೋಟಾನ್‌ಗಳು ಮತ್ತು ಎಲೆಕ್ಟ್ರಾನ್‌ಗಳು ಪರಸ್ಪರ ಸಮತೋಲನ ಸಾಧಿಸಲು ಕೆಲಸ ಮಾಡುತ್ತವೆ. ಎಲೆಕ್ಟ್ರಾನ್‌ಗಳು ಮತ್ತು ಪ್ರೋಟಾನ್‌ಗಳು ಸಮಾನ ಸಂಖ್ಯೆಯಲ್ಲಿ ಇರುವವರೆಗೆ ಪರಮಾಣು ಸ್ಥಿರವಾಗಿರುತ್ತದೆ. ಆದ್ರೆ ಒಬ್ಬ ವ್ಯಕ್ತಿ ಅಥವಾ ವಸ್ತುವಿನಲ್ಲಿ ಎಲೆಕ್ಟ್ರಾನ್‌ಗಳ ಸಂಖ್ಯೆ ಹೆಚ್ಚಾದಾಗ ಅದರ ಮೇಲೆ ಋಣಾತ್ಮಕ ಆವೇಶ ಹೆಚ್ಚಾಗುತ್ತದೆ. ಎಲೆಕ್ಟ್ರಾನ್‌ಗಳು ವ್ಯಕ್ತಿ ಅಥವಾ ಇತರ ವಸ್ತುವಿನಲ್ಲಿರುವ ಧನಾತ್ಮಕ ಎಲೆಕ್ಟ್ರಾನ್‌ಗಳನ್ನು ಆಕರ್ಷಿಸುತ್ತವೆ. ಇದರಿಂದಾಗಿ ಶಾಕ್ ಹೊಡೆದ ಅನುಭವವಾಗುತ್ತದೆ.  

ಏನ್ ಚಳೀನಪ್ಪಾ ಅಂದ್ಕೊಂಡು ಸ್ವೆಟ್ಟರ್ ಹಾಕಿ ಮಲಗಿದ್ರೆ ಜೀವಾನೇ ಹೋಗ್ಬೋದು !

ಚಳಿಗಾಲದಲ್ಲಿ ಈ ಅನುಭವ ಹೆಚ್ಚಾಗಲು ಕಾರಣವೇನು? : ಶೀತ ವಾತಾವರಣದಲ್ಲಿ, ಗಾಳಿಯು ಶುಷ್ಕವಾಗಿರುತ್ತದೆ. ಇದರಿಂದಾಗಿ ಎಲೆಕ್ಟ್ರಾನ್ ಗಳು ಒಂದೇ ಸ್ಥಳದಲ್ಲಿ ವೇಗವಾಗಿ ಸಂಗ್ರಹಿಸಲು ಪ್ರಾರಂಭಿಸುತ್ತವೆ. ಈ ಎಲೆಕ್ಟ್ರಾನ್ ಗಳು ಮಾನವ ಚರ್ಮದ ಮೇಲ್ಮೈಯಲ್ಲಿ ಸುಲಭವಾಗಿ ಸಂಗ್ರಹಗೊಳ್ಳುತ್ತವೆ. ನಕಾರಾತ್ಮಕ ವಿದ್ಯುದಾವೇಶವನ್ನು ಹೊಂದಿರುವ ಎಲೆಕ್ಟ್ರಾನ್ ವಸ್ತು ಅಥವಾ ಧನಾತ್ಮಕ ಆವೇಶವನ್ನು ಹೊಂದಿರುವ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬಂದಾಗ ಬೆಳಕಿನ ಪ್ರವಾಹವು ಸ್ಪಾರ್ಕ್ ನಂತೆ ಭಾಸವಾಗುತ್ತದೆ. ಬೇಸಿಗೆಯಲ್ಲಿ ಇದು ಕಡಿಮೆ ಇರುತ್ತದೆ. ಯಾಕೆಂದ್ರೆ ಹವಾಮಾನದಲ್ಲಿ ತೇವಾಂಶವಿರುವ ಕಾರಣ ಎಲೆಕ್ಟ್ರಾನ್ ಗಳು ಒಂದೇ ಜಾಗದಲ್ಲಿ ಸಂಗ್ರಹವಾಗುವುದಿಲ್ಲ. 

ಇದ್ರಿಂದ ಹೆಚ್ಚಾಗುತ್ತೆ : ನಾವು ಬಳಸುವ ವಸ್ತುಗಳು ಕೂಡ ಶಾಕ್ ಹೊಡೆದ ಅನುಭವ ನೀಡಲು ಕಾರಣವಾಗುತ್ತವೆ. ನಾವು ನೈಲಾನ್ ಅಥವಾ ಉಣ್ಣೆಯಿಂದ ಮಾಡಿದ ಕಾರ್ಪೆಟ್‌ಗಳ ಮೇಲೆ ನಡೆಯುವುದು, ಈ ಬಟ್ಟೆ ಧರಿಸುವುದು ಅಥವಾ ರಬ್ಬರ್ ಸೋಲ್ಡ್ ಸ್ಪೋರ್ಟ್ಸ್ ಶೂಗಳನ್ನು ಧರಿಸುವುದ್ರಿಂದ  ಎಲೆಕ್ಟ್ರಾನ್‌ಗಳ ಚಾರ್ಜ್ ದೇಹದಲ್ಲಿ ಹೆಚ್ಚಾಗುತ್ತದೆ. 

ಕೂದಲು ಬಾಚೋದು ಆರೋಗ್ಯಕ್ಕೂ ಒಳ್ಳೇದು, ಆ ಕೆಲ್ಸ ಹೇಗ್ ಮಾಡ್ಬೇಕು?

ಎಲೆಕ್ಟ್ರಿಕ್ ಶಾಕ್ ತಪ್ಪಿಸಲು ಏನು ಮಾಡ್ಬೇಕು ? : ಚಳಿಗಾಲದಲ್ಲಿ ಬೆಚ್ಚಗಿಡಬೇಕೆನ್ನುವ ಕಾರಣಕ್ಕೆ ನಾವು ಕಾಲನ್ನು ನೆಲಕ್ಕೆ ಸ್ಪರ್ಶಿಸುವುದಿಲ್ಲ. ದೀರ್ಘಕಾಲ ಕಾಲು ನೆಲದಿಂದ ಮೇಲಿದ್ದರೆ ಸಮಸ್ಯೆ ಹೆಚ್ಚಾಗುತ್ತದೆ. ನೀವು ಆಗಾಗ ನಿಮ್ಮ ಪಾದಗಳನ್ನು ನೆಲಕ್ಕೆ ಸ್ಪರ್ಶಿಸುತ್ತಿರಬೇಕು. ಹೀಗೆ ಮಾಡಿದಾಗ ಸಂಗ್ರಹವಾಗಿರುವ ಎಲೆಕ್ಟ್ರಾನ್ ಚಾರ್ಜ್ ನೆಲಕ್ಕೆ ಹೋಗುತ್ತದೆ. ಆಗ ನಿಮ್ಮ ದೇಹ ಚಾರ್ಜ್ ಆಗುವುದಿಲ್ಲ. ನೀವು ಬೂಟು ಧರಿಸುತ್ತಿದ್ದರೆ ಸ್ವಲ್ಪ ಸಮಯದ ನಂತರ ನಿಮ್ಮ ಮೊಣಕೈಗಳನ್ನು ಅಥವಾ ಕೈಗಳನ್ನು ಗೋಡೆಗೆ ಸ್ಪರ್ಶಿಸಿ. ಇದು ಯಾವುದೇ ವ್ಯಕ್ತಿ ಅಥವಾ ವಸ್ತುವಿನಿಂದ ನೀವು ವಿದ್ಯುತ್ ಆಘಾತಕ್ಕೊಳಗಾಗುವುದನ್ನು ತಪ್ಪಿಸುತ್ತದೆ. ಹಾಗೆಯೇ ಚಳಿಗಾಲದಲ್ಲಿ ನೈಲಾನ್ ಮತ್ತು ಉಣ್ಣೆ ಬಟ್ಟೆ ಧರಿಸುವುದನ್ನು ಕಡಿಮೆ ಮಾಡಿ. ಸ್ಪೋರ್ಟ್ಸ್ ಶೂ ಬದಲು ನೀವು ಚರ್ಮದ ಶೂ ಧರಿಸಿ. 

Follow Us:
Download App:
  • android
  • ios