Yoga Hack: ಕರಾವಳಿ ಬೆಡಗಿ ಹೇಳಿ ಕೊಟ್ಟ ಟ್ರಿಕ್ಸ್
ಯೋಗ (Yoga) ಮಾಡೋದು ದೇಹ ಮತ್ತು ಮನಸ್ಸಿನ ಆರೋಗ್ಯ (Health)ಕ್ಕೆ ಅತ್ಯುತ್ತಮ ಅನ್ನೋದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಯಾವಾಗ್ಲೂ ಒಂದೇ ಥರ ಯೋಗ ಮಾಡೋದು ಹಲವರಿಗೆ ಬೇಜಾರಿನ ವಿಷಯ. ಯಾವಾಗ್ಲೂ ಒಂದೇ ಥರ ಯೋಗ ಮಾಡಿ ಬೇಜಾರಾಗಿದ್ರೆ ಶಿಲ್ಪಾ ಶೆಟ್ಟಿ (Shilpa shetty) ಕೆಲವೊಂದು ಟ್ರಿಕ್ಸ್ ಹೇಳಿಕೊಟ್ಟಿದ್ದಾರೆ ನೋಡಿ.
ದಿನಂಪ್ರತಿ ನಿಯಮಿತವಾಗಿ ಯೋಗ (Yoga) ಮಾಡುವುದರಿಂದ ಆರೋಗ್ಯ (Health) ಉತ್ತಮವಾಗಿರುತ್ತದೆ. ಆದರೆ ಪ್ರತಿದಿನ ಅದಕ್ಕೋಸ್ಕಾರನೇ ಗಂಟೆಗಟ್ಟಲೆ ಸಮಯವನ್ನು ಮೀಸಲಿಡಲು ಹಲವರಿಗೆ ಸಾಧ್ಯವಾಗುವುದಿಲ್ಲ. ಅಲ್ಲದೆ ಕೆಲವೊಬ್ಬರಿಗೆ ಒಂದೇ ರೀತಿಯ ಯೋಗ ಪ್ರತಿನಿತ್ಯ ಮಾಡುವುದು ಬೇಜಾರು. ಹೀಗಾದಾಗ ಯೋಗ ಮಾಡುವುದನ್ನು ನಿಲ್ಲಿಸುವ ಬದಲು, ಬೇರೇನು ಮಾಡ್ಬೋದು. ಕರಾವಳಿ ಬೆಡಗಿ ಶಿಲ್ಪಾಶೆಟ್ಟಿ (Shilpa Shetty) ಇನ್‌ಸ್ಟಾಗ್ರಾಂನಲ್ಲಿ ಕೆಲವೊಂದು ಟಿಪ್ಸ್ ಕೊಟ್ಟಿದ್ದಾರೆ ನೋಡಿ.
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಇನ್‌ಸ್ಟಾಗ್ರಾಂನಲ್ಲಿ ವೀಡಿಯೋ (Video)ದಲ್ಲಿ ಎರಡು ಯೋಗಾಸನಗಳನ್ನು ಅಭ್ಯಾಸ ಮಾಡಿದ್ದಾರೆ, ಗತ್ಯಾತ್ಮಕ ಆಂಜನೇಯಾಸನ ಮತ್ತು ಬದ್ಧ ತ್ರಿಕೋನಾಸನವನ್ನು ಪರಿಚಯಿಸಿದ್ದು, ಈ ಯೋಗಾಸನ ಮಾಡುವುದರಿಂದ ಸಿಗುವ ಪ್ರಯೋಜನಗಳನ್ನು ಸಹ ಪಟ್ಟಿ ಮಾಡಿದ್ದಾರೆ.
ಯೋಗ ಮಾಡುವುದು ಅತ್ಯಂತ ಪ್ರಯೋಜನಕಾರಿಯಾಗಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೂ ಏಕಾಗ್ರತೆಯಿಂದ ಪ್ರತಿದಿನವೂ ಯೋಗ ಮಾಡಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಬಿಡುವಿನ ಕೆಲಸ, ಅನಾರೋಗ್ಯ ಹೀಗೆ ಹಲವು ಕಾರಣದಿಂದಾಗಿ ದೈನಂದಿನ ಯೋಗಾಭ್ಯಾಸದ ದಿನಚರಿಯನ್ನು ತಪ್ಪಿಸಬೇಕಾಗುತ್ತದೆ. ಹೀಗೆ ಯೋಗ ಮಾಡುವ ಶೆಡ್ಯೂಲ್ ತಪ್ಪಿದ ನಂತರ ಅನೇಕರಿಗೆ ಮೊದಲಿನ ವೇಳಾಪಟ್ಟಿಗೆ ಮರಳಲು ಕಷ್ಟವಾಗುತ್ತದೆ. ನೀವು ಇದೇ ಸಮಸ್ಯೆಯಿಂದ ಬಳಲುತ್ತಿದ್ದರೆ ಶಿಲ್ಪಾ ಶೆಟ್ಟಿಗೆ ಯೋಗ ಹ್ಯಾಕ್ ನಿಮಗೆ ಉಪಯೋಗವಾಗುವುದು ಖಂಡಿತ. ಯಾಕೆಂದರೆ ಇದು ಯೋಗ ಮಾಡುವುದನ್ನು ಎನರ್ಜಿಟಿಕ್ ಮಾಡಲು ಇರುವ ಕೆಲವೊಂದು ಟಿಪ್ಸ್.
Yoga and Fitness: ಶಿಲ್ಪಾ ಶೆಟ್ಟಿಯ ನಟರಾಜಾಸನದ ಮೋಡಿ ನೋಡಿ
ಇನ್‌ಸ್ಟಾಗ್ರಾಂನಲ್ಲಿ ಶಿಲ್ಪಾ ಶೆಟ್ಟಿ ತನ್ನ ತಾಲೀಮು ದಿನಚರಿಯನ್ನು ನೀರಸಗೊಳಿಸುವುದನ್ನು ತಪ್ಪಿಸುವ ಮಾರ್ಗಗಳ ಬಗ್ಗೆ ಹೇಳಿದ್ದಾರೆ. ಇದರಲ್ಲಿ ಗತ್ಯಾತ್ಮಕ ಆಂಜನೇಯಾಸನ ಮತ್ತು ಬದ್ಧ ತ್ರಿಕೋನಾಸನವನ್ನು ಪರಿಚಯಿಸಿದ್ದು, ಇದು ಯೋಗಾಭ್ಯಾಸವನ್ನು ಉಲ್ಲಾಸಭರಿತಗೊಳಿಸುತ್ತದೆ ಎಂದಿದ್ದಾರೆ.
ಯಾವಾಗಲೂ ಒಂದೇ ರೀತಿಯ ಯೋಗ ತಾಲೀಮು ದಿನಚರಿಗಳನ್ನು ತಪ್ಪಿಸಲು ಈ ರೀತಿಯ ಯೋಗಾಭ್ಯಾಸಗಳನ್ನು ಮಾಡಬಹುದು ಎಂದು ಶಿಲ್ಪಾಶೆಟ್ಟಿ ವೀಡಿಯೋದಲ್ಲಿ ತಿಳಿಸಿದ್ದಾರೆ. ಗತ್ಯಾತ್ಮಕ ಆಂಜನೇಯಾಸನ (ಕಡಿಮೆ ಲಂಜ್ ಭಂಗಿಯ ಬದಲಾವಣೆ) ಮತ್ತು ಬದ್ಧ ತ್ರಿಕೋನಾಸನ ಅಥವಾ ಬೌಂಡ್ ಟ್ರಯಾಂಗಲ್ ಪೋಸ್. ಅವರು ಈ ಭಂಗಿಗಳನ್ನು ಮಾಡುವುದರಿಂದ ಕೆಲವು ಪ್ರಯೋಜನಗಳನ್ನು ಬಗ್ಗೆ ತಿಳಿಸಿದ್ದಾರೆ.
Shilpa Shetty Diet: ಫಿಟ್ ಆಗಿರಲು ಕರಾವಳಿ ಬೆಡಗಿ ತಿನ್ನೋದೇನು?
ಗತ್ಯಾತ್ಮಕ ಆಂಜನೇಯಾಸನ ಮತ್ತು ಬದ್ಧ ತ್ರಿಕೋನಾಸನದ ಪ್ರಯೋಜನಗಳು
ಯೋಗದಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ನಿರಂತರವಾಗಿ ಯೋಗಾಭ್ಯಾಸ ಮಾಡುವುದು ಮನಸ್ಸಿನ ಒತ್ತಡವನ್ನು ನಿವಾರಿಸುತ್ತದೆ. ಮಾನಸಿಕ, ಭಾವನಾತ್ಮಕ, ಆರೋಗ್ಯ, ನಿದ್ರೆ (Sleep) ಮತ್ತು ಸಮತೋಲನವನ್ನು ಸುಧಾರಿಸುವ ಮೂಲಕ ಸಾಮಾನ್ಯ ಸ್ವಾಸ್ಥ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಸಂಶೋಧನೆ ಸೂಚಿಸುತ್ತದೆ. ಯೋಗಾಭ್ಯಾಸ ಬೆನ್ನು ನೋವು, ಕುತ್ತಿಗೆ ನೋವು, ತಲೆನೋವು ಮತ್ತು ಮೊಣಕಾಲಿನ ಅಸ್ಥಿಸಂಧಿವಾತದಂತಹಾ ನೋವನ್ನು ನಿವಾರಿಸುತ್ತದೆ. ಇವಿಷ್ಟೇ ಅಲ್ಲದೆ ಯೋಗಾಭ್ಯಾಸದಲ್ಲಿ ವಿವಿಧ ರೀತಿಯ ಆಸನಗಳು ವಿವಿಧ ರೀತಿಯ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ.
ಇನ್‌ಸ್ಟಾಗ್ರಾಂನಲ್ಲಿ ಶಿಲ್ಪಾ ಶೆಟ್ಟಿ, ಒಂದೇ ರೀತಿಯಿದ್ದಾಗ ಯಾವುದೇ ದಿನಚರಿ ಬೇಸರವಾಗಲು ಪ್ರಾರಂಭಿಸುತ್ತದೆ. ಆದ್ದರಿಂದ, ನಿಮ್ಮ ದಿನಚರಿಯಿಂದಾಗಿ ನೀವು ಎಂದಾದರೂ ಡಿಮೋಟಿವೇಟ್ ಆಗಿದ್ದರೆ, ಅಭ್ಯಾಸವನ್ನು ಸಂಪೂರ್ಣವಾಗಿ ಬಿಡುವ ಬದಲು ಹೊಸದನ್ನು ಪ್ರಯೋಗಿಸುವುದನ್ನು ಖಚಿತಪಡಿಸಿಕೊಳ್ಳಿ. ಮನಸ್ಸು, ದೇಹ (Body) ಮತ್ತು ಆತ್ಮದ ಮೇಲೆ ಕೇಂದ್ರೀಕರಿಸುವ ಆಸನಗಳ ವಿಭಿನ್ನ ಸಂಯೋಜನೆಗಳನ್ನು ಅಭ್ಯಾಸ ಮಾಡಲು ನಾನು ಇಷ್ಟಪಡುತ್ತೇನೆ. ಇಂದು, ಆಸನಗಳ ಹರಿವು ಗತ್ಯಾತ್ಮಕ ಆಂಜನೇಯಾಸನ ಮತ್ತು ಬದ್ಧ ತ್ರಿಕೋನಾಸನವನ್ನು ಒಳಗೊಂಡಿದೆ ಎಂದು ಅವರು ಹೇಳಿದ್ದಾರೆ.
ಶಿಲ್ಪಾ ಶೆಟ್ಟಿ ಪ್ರಕಾರ, ಗತ್ಯಾತ್ಮಕ ಆಂಜನೇಯಾಸನ ಮತ್ತು ಬದ್ಧ ತ್ರಿಕೋನಾಸನಗಳು ಮಂಡಿರಜ್ಜುಗಳನ್ನು ಬಲಪಡಿಸಲು" ಸಹಾಯ ಮಾಡುತ್ತದೆ. ಇದು ಹಿಪ್ ಫ್ಲೆಕ್ಟರ್‌ಗಳನ್ನು ತೆರೆಯುತ್ತದೆ. ಮೊಣಕಾಲು ಮತ್ತು ತೊಡೆಗಳನ್ನು ಬಲಪಡಿಸುತ್ತದೆ. ಮತ್ತೊಂದು ಹೆಚ್ಚುವರಿ ಪ್ರಯೋಜನವೆಂದರೆ ಅದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.