Yoga and Fitness: ಶಿಲ್ಪಾ ಶೆಟ್ಟಿಯ ನಟರಾಜಾಸನದ ಮೋಡಿ ನೋಡಿ

ಶಿಲ್ಪಾ ಶೆಟ್ಟಿ ಕುಂದ್ರಾ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿರುವ ವಿಡಿಯೋ ಹವಾ ಸೃಷ್ಟಿಸಿದೆ. ವಿವಿಧ ಯೋಗಾಸನಗಳನ್ನು ಮಾಡಿರುವ ವಿಡಿಯೋದಲ್ಲಿ ಶಿಲ್ಪಾ ಶೆಟ್ಟಿ ಮಿಂಚಿದ್ದಾರೆ. ಯೋಗಾಸನ ಆರೋಗ್ಯಕ್ಕೆ ಎಷ್ಟು ಅನುಕೂಲಕರ ಎಂದೂ ಅವರು ಹೇಳಿದ್ದಾರೆ. 
 

Bollywood actress Shilpa Shetty shares self video about yoga

ಬಾಲಿವುಡ್ ತಾರೆಯರು (Bollywood Stars) ಆಗಾಗ ತಮ್ಮ ಸೌಂದರ್ಯ (Beauty) ಹಾಗೂ ಫಿಟ್ ನೆಸ್(Fitness) ನ ಗುಟ್ಟುಗಳನ್ನು ಬಿಟ್ಟುಕೊಡುತ್ತಾರೆ. ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವ, ಓಡುತ್ತಿರುವ, ಬೆವರು ಹರಿಸುತ್ತಿರುವ ಫೋಟೊಗಳನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಂಚಿಕೊಳ್ಳುತ್ತಾರೆ. ಅದರಲ್ಲೂ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ (Shilpa Shetty Kundra) ಇದರಲ್ಲಿ ಒಂದು ಹೆಜ್ಜೆ ಮುಂದೆ.ದೈಹಿಕ ಸದೃಢತೆ (Fitness) ಹಾಗೂ ಮಾನಸಿಕ ಆರೋಗ್ಯ (Mental Health) ಕಾಯ್ದುಕೊಳ್ಳಲು ಶಿಲ್ಪಾ ಶೆಟ್ಟಿ ಅನೇಕ ವರ್ಷಗಳಿಂದಲೂ ಯೋಗದ (Yoga) ಮೊರೆ ಹೋಗಿರುವುದು ಎಲ್ಲರಿಗೂ ತಿಳಿದಿದೆ. ಇದನ್ನು ಅವರು ಎಂದಿನಿಂದಲೂ ಬಹಿರಂಗವಾಗಿ ಹೇಳುತ್ತಲೇ ಬಂದಿದ್ದಾರೆ. ಅಷ್ಟೇ ಅಲ್ಲ, ತಾವೇ ಸ್ವತಃ ಸಾರ್ವಜನಿಕ ವೇದಿಕೆಗಳಲ್ಲಿ ಯೋಗ ಮಾಡಿ ಪ್ರಚಾರವನ್ನೂ ಕೈಗೊಂಡಿದ್ದಾರೆ. 

ದಿನವೂ ಯೋಗ (Yogasana)
ಯೋಗವನ್ನು ಶಿಲ್ಪಾ ಶೆಟ್ಟಿ ದೈನಂದಿನ ಫಿಟ್ ನೆಸ್ ಭಾಗವಾಗಿಸಿಕೊಂಡಿದ್ದಾರೆ. ಎರಡು ಮಕ್ಕಳ ತಾಯಿಯಾಗಿದ್ದರೂ, ಮದುವೆಯಾಗಿ ಇಷ್ಟೆಲ್ಲ ವರ್ಷಗಳಾಗಿದ್ದರೂ ಶಿಲ್ಪಾ ಶೆಟ್ಟಿ ಎಂದರೆ ಶಿಲ್ಪಾ ಶೆಟ್ಟಿಯೇ. ಅವರಿಗೆ ಬೇರ್ಯಾರೂ ಸಾಟಿಯಿಲ್ಲ. ಎಲ್ಲರೂ ಒಮ್ಮೆ ಅಸೂಯೆ ಪಡುವಷ್ಟು ದೈಹಿಕ ಅಂದಚೆಂದ ಕಾಪಾಡಿಕೊಂಡು, ಫಿಗರ್ (Figure) ಮೆಂಟೇನ್ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಮತ್ತೊಮ್ಮೆ ತಮ್ಮ ಸೌಂದರ್ಯದ ಗುಟ್ಟನ್ನು ಅನಾವರಣಗೊಳಿಸಿದ್ದಾರೆ. ತಮ್ಮ ಈ ಚೆಲುವಿಗೆ ಯೋಗವೇ ಕಾರಣ ಎಂದು ಇನ್ ಸ್ಟಾಗ್ರಾಮ್ (Instagram) ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. 

ಶಿಲ್ಪಾ ಶೆಟ್ಟಿ ಇತ್ತೀಚೆಗೆ ಸ್ವಲ್ಪ ಕಷ್ಟದ ದಿನಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಬಹುದು. ಪತಿ ರಾಜ್ ಕುಂದ್ರಾ (Raj Kundra) ಬಂಧನ, ತಮ್ಮ ಮೇಲೆ ಬಂದಿರುವ ಮೋಸದ ಆರೋಪ ಇತ್ಯಾದಿಗಳಲ್ಲಿ ಅವರು ಸಿಲುಕಿದ್ದಾರೆ. ಈ ನಡುವೆಯೂ ಅವರು ಯೋಗಾಸನ ಮಾಡುವುದನ್ನು ನಿಲ್ಲಿಸಿಲ್ಲ. ಬದಲಿಗೆ, ಮನಸ್ಸನ್ನು ಚೆನ್ನಾಗಿಟ್ಟುಕೊಳ್ಳಲು ಯೋಗ ಅಗತ್ಯ ಎಂದು ಪ್ರತಿಪಾದಿಸಿದ್ದಾರೆ.  
ಜಿಮ್ ನಲ್ಲಿ ಬೆವರು ಹರಿಸುವ ಮಂದಿಗಿಂತ ಶಿಲ್ಪಾ ಶೆಟ್ಟಿ ಭಿನ್ನ. ತಮ್ಮ ಮನೆಯ ಆವರಣದಲ್ಲಿಯೇ ಮುಕ್ತ ವಾತಾವರಣದಲ್ಲಿ (Open Weather) ಬೆಳಗಿನ ಹೊತ್ತು ಯೋಗ ಮಾಡುತ್ತಾರೆ. ಹೊಸ ಹೊಸ ಆಸನಗಳನ್ನು ಮಾಡುವುದು, ದಿನವೂ ವಿಭಿನ್ನ ಆಸನಗಳನ್ನು ಟ್ರೈ ಮಾಡುವುದು ಅವರ ಇಷ್ಟದ ಕೆಲಸ. 

ಯೋಗದೊಂದಿಗೆ ದಿನಾರಂಭ
“ಯೋಗದೊಂದಿಗೆ ದಿನವನ್ನು ಆರಂಭಿಸುವಷ್ಟು ಉತ್ತಮವಾದ ಕಾರ್ಯ ಬೇರೆ ಇಲ್ಲ. ಯೋಗ ಮನಸ್ಸು, ದೇಹ ಹಾಗೂ ಆತ್ಮಗಳನ್ನು ಮುಂದಿನ ಅದ್ಭುತ ಬದುಕಿಗೆ ಸಿದ್ಧಗೊಳಿಸುತ್ತದೆ’ ಎಂದು ಹೇಳಿಕೊಂಡಿದ್ದಾರೆ. ಜತೆಗೆ, ತಾವು ಯೋಗ ಮಾಡುತ್ತಿರುವ ವಿಡಿಯೋ (Video) ಒಂದನ್ನು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಅವರು ವೃಕ್ಷಾಸನದಿಂದ (Vrikshasana) ಆರಂಭಿಸಿದ್ದು, ವೀರಭದ್ರಾಸನ-3ನೇ ಪೋಸ್ (Virbhadrasana-3) ಹಾಗೂ ಅಂತಿಮವಾಗಿ ನಟರಾಜಾಸನಗಳನ್ನು (Natarajasana) ಮಾಡಿದ್ದಾರೆ. 

ಮನಸ್ಸು-ದೇಹದ ಸಮನ್ವಯ
“ಈ ಆಸನಗಳು ಪಾದದ (Ankle) ಜಾಯಿಂಟ್, ಹಿಂಭಾಗ (Hip) ಮತ್ತು ಕಾಲುಗಳನ್ನು ಬಲಪಡಿಸುತ್ತವೆ. ಹಾಗೆಯೇ ದೇಹದ ಸಮತೋಲನ (Balance), ಭಂಗಿ, ಫ್ಲೆಕ್ಸಿಬಿಲಿಟಿ (Flexibility), ಏಕಾಗ್ರತೆ, ಕೇಂದ್ರೀಕರಿಸುವ ಬುದ್ಧಿಯನ್ನು ಜಾಗೃತಗೊಳಿಸುತ್ತವೆ. ಜತೆಗೆ, ಮನಸ್ಸು ಮತ್ತು ದೇಹವನ್ನು ಸಮನ್ವಯಗೊಳಿಸುತ್ತವೆ. ಇವೆಲ್ಲದರೊಂದಿಗೆ, ತಾಜಾ ಆಮ್ಲಜನಕ ಉಸಿರಾಡಿಸುವುದು ಮತ್ತೊಂದು ಬೋನಸ್ (Bonus)’ ಎಂದು ಬರೆದುಕೊಂಡಿದ್ದಾರೆ. 

ಅವರ ಇನ್ ಸ್ಟಾಗ್ರಾಮ್ ಖಾತೆಯಲ್ಲಿರುವ ವಿಡಿಯೋ ನೋಡಿಕೊಂಡು ನೀವೂ ಟ್ರೈ ಮಾಡಬಹುದು. ದೇಹವನ್ನು ಸ್ಟ್ರೆಚ್ (Streach-ಹಿಗ್ಗಿಸುವುದು, ಎಳೆಯುವುದು) ಮಾಡುವುದರಿಂದ ರಕ್ತಪರಿಚಲನೆ (Blood Circulation) ಸುಗಮವಾಗುತ್ತದೆ ಹಾಗೂ ದೇಹದ ಬಿಗಿ ಕಡಿಮೆಯಾಗುತ್ತದೆ. ದೇಹವನ್ನು ಬಾಗಿಸುವುದು ಮತ್ತು ಆಳವಾದ ಉಸಿರಾಟ ಮಾಡುವುದರಿಂದ ದೇಹಕ್ಕೆ ಬಹಳಷ್ಟು ಪ್ರಯೋಜನವಿದೆ ಎನ್ನುವುದು ಎಲ್ಲರಿಗೂ ತಿಳಿದೇ ಇದೆ. ಇದನ್ನು ಅರಿತಿರುವ ಶಿಲ್ಪಾ ಶೆಟ್ಟಿ ಯೋಗವನ್ನು ತಮ್ಮ ದೈನಂದಿನ ಜೀವನದ ಭಾಗವಾಗಿಸಿಕೊಂಡಿದ್ದಾರೆ. ನೀವು..?
 

Latest Videos
Follow Us:
Download App:
  • android
  • ios