Shilpa Shetty Diet: ಫಿಟ್ ಆಗಿರಲು ಕರಾವಳಿ ಬೆಡಗಿ ತಿನ್ನೋದೇನು?
ಸೆಲೆಬ್ರಿಟಿಗಳ ಮೇಲೆ ಜನಸಾಮಾನ್ಯರ ಕಣ್ಣಿರುತ್ತೆ. ಒಂದು ಮಗುವಾದ್ಮೇಲೂ ಸಿಕ್ಕಾಪಟ್ಟೆ ಫಿಟ್ ಆಗಿರುವ ನಟಿ ಶಿಲ್ಪಾ ಜೀವನಶೈಲಿ ತಿಳಿಯಲು ಅನೇಕರು ಆಸಕ್ತಿ ಹೊಂದಿದ್ದಾರೆ. ಸದಾ ಆಕ್ಟಿವ್ ಆಗಿರುವ ನಟಿ ಏನು ತಿಂತಾರೆ ಮತ್ತೆ ಅದನ್ನು ಹೇಗೆ ತಯಾರಿಸ್ತಾರೆ ಅನ್ನೋದನ್ನು ನಾವಿಂದು ಹೇಳ್ತೆವೆ.
ಬಾಲಿವುಡ್ (Bollywood) ಬೆಡಗಿ ಶಿಲ್ಪಾ ಶೆಟ್ಟಿ (Shilpa Shetty) ಬಗ್ಗೆ ಯಾರಿಗೆ ತಿಳಿದಿಲ್ಲ. ಸಿನಿಮಾದಿಂದ ದೂರವಿದ್ದರೂ ಶಿಲ್ಪಾ ಶೆಟ್ಟಿ ಅಭಿಮಾನಿಗಳ ಸಂಖ್ಯೆ ಕಡಿಮೆಯೇನಾಗಿಲ್ಲ. ಕಿರುತೆರೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ನಟಿ ಶಿಲ್ಪಾ ಸಕ್ರಿಯವಾಗಿದ್ದಾರೆ. ಶಿಲ್ಪಾ ನಟನೆಗೆ ಮಾತ್ರವಲ್ಲ ಜೊತೆಗೆ ಫಿಟ್ನೆಸ್‌ಗೆ ಹೆಸರುವಾಸಿಯಾಗಿದ್ದಾರೆ. ಇದಕ್ಕಾಗಿ ಶಿಲ್ಪಾ ಶೆಟ್ಟಿ ವ್ಯಾಯಾಮದ ಜೊತೆ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ. ಉತ್ತರ ಕರ್ನಾಟಕದ ಮುಖ್ಯ ಊಟ ಜೋಳದ ರೊಟ್ಟಿ. ಇತ್ತೀಚಿನ ದಿನಗಳಲ್ಲಿ ಬೆಂಗಳೂರಿಗೂ ಜೋಳದ ರೊಟ್ಟಿ ಇಷ್ಟಪಡ್ತಿದ್ದಾರೆ.ಜೋಳ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದು ನಟಿ ಶಿಲ್ಪಾ ಶೆಟ್ಟಿಗೆ ಗೊತ್ತಿರುವ ಸಂಗತಿ. ಹಾಗಾಗಿಯೇ ಶಿಲ್ಪಾ ದಿನನಿತ್ಯದ ಆಹಾರದಲ್ಲಿ ಗೋಧಿ ಹಿಟ್ಟಿನ ಬದಲು ಜೋಳ (Jowar)ದ ಹಿಟ್ಟನ್ನು ಬಳಸ್ತಾರೆ. ಶಿಲ್ಪಾ ಶೆಟ್ಟಿ, ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೊ ಒಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಜೋಳದ ರೊಟ್ಟಿ ಮಾಡುವುದನ್ನು ನೋಡಬಹುದು. ಜೋಳದ ರೊಟ್ಟಿಯನ್ನು ಹೇಗೆ ಮಾಡುವುದು ಮತ್ತು ಅದನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳು ಏನು ಎಂಬುದನ್ನೂ ಶಿಲ್ಪಾ ಶೆಟ್ಟಿ ಹೇಳಿದ್ದಾರೆ. ಇಂದು ಶಿಲ್ಪಾ ಶೆಟ್ಟಿ ಸ್ಟೈಲ್ ನಲ್ಲಿ ಜೋಳದ ರೊಟ್ಟಿ ಮಾಡುವ ವಿಧಾನ ತಿಳಿಯೋಣ.
ಜೋಳದಲ್ಲಿ ಇರುವ ಪೋಷಕಾಂಶಗಳು : ಜೋಳದಲ್ಲಿ ಖನಿಜ, ಪ್ರೋಟೀನ್, ವಿಟಮಿನ್ ಬಿ ಕಾಂಪ್ಲೆಕ್ಸ್, ಪೊಟ್ಯಾಸಿಯಮ್, ರಂಜಕ, ಕ್ಯಾಲ್ಸಿಯಂ ಮತ್ತು ಕಬ್ಬಿಣ ಕಂಡುಬರುತ್ತದೆ. ಇದರೊಂದಿಗೆ, ಕ್ಯಾಲೋರಿಗಳು ಮತ್ತು ಗ್ಲುಟನ್ ಇದರಲ್ಲಿ ಬಹಳ ಕಡಿಮೆ ಇರುತ್ತದೆ. ಫಿಟ್ ಮತ್ತು ಫೈನ್ ಆಗಿರಲು ದೈನಂದಿನ ಆಹಾರದಲ್ಲಿ ಗೋಧಿ ಬದಲಿಗೆ ಜೋಳದ ರೊಟ್ಟಿಯನ್ನು ನೀವು ಉಪಯೋಗಿಸುವುದು ಉಪಯುಕ್ತ.
GARLIC MILK BENEFITS: ಮಲಬದ್ಧತೆ ಸಮಸ್ಯೆನಾ ? ಬೆಳ್ಳುಳ್ಳಿ ಹಾಲು ಕುಡ್ದು ನೋಡಿ
ನಟಿ ಶಿಲ್ಪಾ ಶೆಟ್ಟಿ ಮಾಡಿದ ಜೋಳದ ರೊಟ್ಟಿ :
ಶಿಲ್ಪಾ ಶೆಟ್ಟಿ ಜೋಳದ ರೊಟ್ಟಿ ಹೇಗೆ ಮಾಡ್ಬೇಕೆಂದು ಹೇಳಿದ್ದಾರೆ. ಇದಕ್ಕಾಗಿ ಬಾಣಲೆಗೆ ಒಂದು ಕಪ್ ನೀರು ಮತ್ತು ಸ್ವಲ್ಪ ಉಪ್ಪನ್ನು ಹಾಕಿ, ಕುದಿಸಿದ್ದಾರೆ.
ನೀರು ಕುದಿಯುವಾಗ, ಒಂದು ಕಪ್ ಜೋಳದ ಹಿಟ್ಟನ್ನು ಸೇರಿಸಿದ್ದಾರೆ. ಜೋಳದ ಹಿಟ್ಟನ್ನು ಕುದಿಯುವ ನೀರಿನಲ್ಲಿ ಕೆಲವು ಸೆಕೆಂಡುಗಳ ಕಾಲ ಬೇಯಿಸಿದ್ದಾರೆ.
ನಂತರ ಚೆನ್ನಾಗಿ ಬೆಂದ ಹಿಟ್ಟನ್ನು ಒಂದು ಬಟ್ಟಲಿಗೆ ಹಾಕಿಕೊಂಡಿದ್ದಾರೆ. ಒಂದು ಚಮಚ ತುಪ್ಪ, 1-1 ಚಮಚ ಕಪ್ಪು ಮತ್ತು ಬಿಳಿ ಎಳ್ಳನ್ನು ಬೆರೆಸಿ ಹಿಟ್ಟನ್ನು ಚೆನ್ನಾಗಿ ಬೆರೆಸಿದ್ದಾರೆ. ಹಿಟ್ಟನ್ನು ಚೆನ್ನಾಗಿ ನಾದಿದ ನಂತ್ರ ತವಾವನ್ನು ಬಿಸಿ ಮಾಡಿಕೊಂಡಿದ್ದಾರೆ. ಹಿಟ್ಟಿನ ಸಣ್ಣ ಉಂಡೆಗಳನ್ನು ತೆಗೆದುಕೊಂಡು ರೊಟ್ಟಿಗಳನ್ನು ತಯಾರಿಸಿದ್ದಾರೆ. ಅದನ್ನು ತವಾಕ್ಕೆ ಹಾಕಿ ಚೆನ್ನಾಗಿ ಬೇಯಿಸಿದ್ದಾರೆ. ಬಿಸಿಬಿಸಿ ಜೋಳದ ರೊಟ್ಟಿ ಸಿದ್ಧವಾಗಿದೆ.
ಜೋಳದ ರೊಟ್ಟಿ ತಿನ್ನುವ ಪ್ರಯೋಜನಗಳು :
ಮಧುಮೇಹಿಗಳಿಗೆ ಪ್ರಯೋಜನಕಾರಿ : ಆರೋಗ್ಯ ತಜ್ಞರ ಪ್ರಕಾರ, ಜೋಳದ ರೊಟ್ಟಿ ಮಧುಮೇಹಿಗಳಿಗೆ ಪ್ರಯೋಜನಕಾರಿಯಾಗಿದೆ. ಇದರಲ್ಲಿರುವ ಟ್ಯಾನಿನ್ ಎಂಬ ಅಂಶವು ದೇಹದಲ್ಲಿ ಕಂಡುಬರುವ ಪಿಷ್ಟವನ್ನು ಹೀರಿಕೊಳ್ಳುವ ಕಿಣ್ವಗಳ ಉತ್ಪಾದನೆಯನ್ನು ತಡೆಯುತ್ತದೆ. ಇದರೊಂದಿಗೆ, ದೇಹದಲ್ಲಿ ಇನ್ಸುಲಿನ್ ಮತ್ತು ಗ್ಲೂಕೋಸ್ ಮಟ್ಟವನ್ನು ಸಾಮಾನ್ಯಗೊಳಿಸುತ್ತದೆ.
ಆಯಾಸ,ದೌರ್ಬಲ್ಯಕ್ಕೆ ಮದ್ದು : ಜೋಳದ ರೊಟ್ಟಿಯನ್ನು ಸೇವಿಸುವುದ್ರಿಂದ ಆಯಾಸ ಕಡಿಮೆಯಾಗುತ್ತದೆ.ದಿನವಿಡಿ ಶಕ್ತಿ ತುಂಬಿರುತ್ತದೆ.
Health Tips: ಸ್ಟಾರ್ ಫ್ರೂಟ್ ತಿನ್ನೋದ್ರಿಂದ ಆರೋಗ್ಯಕ್ಕೆ ಎಷ್ಟು ಲಾಭವಿದೆ ಗೊತ್ತಾ ?
ರೋಗದಿಂದ ದೂರ : ಜೋಳ ಗ್ಲುಟನ್ ಮುಕ್ತವಾಗಿದೆ. ಇದನ್ನು ಸೇವಿಸುವುದರಿಂದ ದೇಹವು ರೋಗಗಳಿಂದ ರಕ್ಷಣೆ ಪಡೆಯುತ್ತದೆ.
ಜೀರ್ಣಾಂಗ ವ್ಯವಸ್ಥೆ ಬಲಗೊಳ್ಳುತ್ತದೆ: ಜೋಳದಲ್ಲಿ ಫೈಬರ್ ಹೆಚ್ಚು ಕಂಡುಬರುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮವಾಗಿಡುತ್ತದೆ. ಹೊಟ್ಟೆ ನೋವು, ಗ್ಯಾಸ್, ಅಸಿಡಿಟಿ, ಅಜೀರ್ಣ ಮುಂತಾದ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ.
ಮೂಳೆಗಳಿಗೆ ಶಕ್ತಿ : ಇದರಲ್ಲಿ ಮೆಗ್ನೀಸಿಯಮ್ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ. ಇದು ದೇಹದಲ್ಲಿ ಕ್ಯಾಲ್ಸಿಯಂ ಹೀರಿಕೊಳ್ಳಲು ಸಹಾಯ ಮಾಡುತ್ತದೆ.
ತೂಕ ಇಳಿಕೆ : ನಾರಿನಂಶವಿರುವ ಜೋಳದ ರೊಟ್ಟಿಯನ್ನು ತಿನ್ನುವುದರಿಂದ ಹೊಟ್ಟೆಯು ದೀರ್ಘಕಾಲದವರೆಗೆ ತುಂಬಿರುತ್ತದೆ. ಇದ್ರಿಂದ ತೂಕ ನಿಯಂತ್ರಣಕ್ಕೆ ಬರುತ್ತದೆ.