Asianet Suvarna News Asianet Suvarna News

ಈಕೆಗೆ ಕಿಸ್‌ ಕೊಡ್ತೀರಾ? ಅವಳ ಪ್ರಾಣಾನೇ ಹೋಗಬಹುದು ಹುಷಾರ್!‌

ಬಾಯ್‌ಫ್ರೆಂಡ್‌ ತನ್ನನ್ನು ಚುಂಬಿಸುವುದರಿಂದ ತನ್ನ ಪ್ರಾಣವನ್ನೇ ಕಳೆದುಕೊಳ್ಳಬೇಕಾಗಬಹುದು ಎಂದು ತಿಳಿದಿರುವ ಯುವತಿಯೊಬ್ಬಳು ತನ್ನನ್ನು ಕಿಸ್‌ ಮಾಡುವ ಪುರುಷರಿಗಾಗಿ ಕೆಲವು ಕಟ್ಟುನಿಟ್ಟಾದ ನಿಯಮಗಳನ್ನು ಹಾಕಿದ್ದಾಳೆ. ಇವಳೇಕೆ ಹೀಗೆ?

She will get killed if you kiss her what is this allergy bni
Author
First Published Oct 4, 2024, 8:00 PM IST | Last Updated Oct 4, 2024, 8:00 PM IST

ಚುಂಬನ ಅನಂದದಾಯಕ. ಗಂಡು- ಹೆಣ್ಣಿನ ಅಧರಗಳು ಮಧುರವಾಗಿ ಸೋಂಕಿದಾಗ ಇಬ್ಬರ ಮೈಗಳೂ ಜುಮ್ಮೆನ್ನುತ್ತವೆ. ಮೈಯಲ್ಲಿ ಕೂದಲುಗಳು ನಿಮಿರಿ ನಿಲ್ಲುತ್ತವೆ. ಇಬ್ಬರ ದೇಹಗಳು ಆನಂದ ಅನುಭವಿಸಬಹುದು, ಮುಂದಿನ ಮಿಲನಕ್ಕೆ ಸಜ್ಜಾಗಬಹುದು. ಆದರೆ ಇಲ್ಲೊಬ್ಬಳಿದ್ದಾಳೆ ನೋಡಿ. ಇವಳ ತುಟಿಯಲ್ಲಿ ನೀವು ತುಟಿಯಿಟ್ಟಿರೋ, ಆಕೆಯ ಕತೆ ಮಟಾಶ್‌ ಅಂತ್ಲೇ ಅರ್ಥ!

ಇದಕ್ಕಾಗಿಯೇ ಆಕೆ ತನ್ನನ್ನು ಕಿಸ್‌ ಮಾಡುವ ಪುರುಷ ಪುಂಗವನಿಗೆ ಕಟ್ಟುನಿಟ್ಟಾದ ಕೆಲವು ರೂಲ್‌ಗಳನ್ನು ಹಾಕಿದ್ದಾಳೆ.  ಯಾಕಂದ್ರೆ ಬಾಯ್‌ಫ್ರೆಂಡ್‌ ತನ್ನನ್ನು ಚುಂಬಿಸುವುದರಿಂದ ತನ್ನ ಪ್ರಾಣವನ್ನೇ ಕಳೆದುಕೊಳ್ಳಬೇಕಾಗಬಹುದು ಎನ್ನುವುದು ಆಕೆಗೆ ಗೊತ್ತು. ಈಕೆ ಬೋಸ್ಟನ್ ಮೂಲದ ಒಬ್ಬ ಯುವತಿ. ಇವಳ ಹೆಸರು ಕ್ಯಾರೊಲಿನ್ ಕ್ರೇ ಕ್ವಿನ್. ಟಿಕ್‌ಟಾಕ್‌ ಬಳಕೆದಾರ್ತಿ. ಅದರಲ್ಲೇ ತನ್ನ ಬಗ್ಗೆ ಹೇಳಿಕೊಂಡಿದ್ದಾಳೆ. ಯಾಕೆ ಹೀಗೆ? ಅವಳಿಗೇನು ಸಮಸ್ಯೆ?

ಅವಳು ಮಾಸ್ಟ್ ಸೆಲ್ ಆಕ್ಟಿವೇಶನ್ ಸಿಂಡ್ರೋಮ್ (ಎಂಸಿಎಎಸ್) ಎಂಬ ಕಾಯಿಲೆಯಿಂದ ಬಳಲುತ್ತಿದ್ದಾಳಂತೆ. ಅದು ಉಲ್ಬಣಿಸಿದರೆ ಆಕೆಯ ಪ್ರಾಣವೇ ಹೋಗಬಹುದು. ಅದಕ್ಕಾಗಿಯೇ ಸಂಭಾವ್ಯ ಅಪಾಯದಿಂದ ತನ್ನನ್ನು ರಕ್ಷಿಸಿಕೊಳ್ಳಲು ತನ್ನ ಸಂಗಾತಿಗೆ ಕೆಲವು ಕಟ್ಟುನಿಟ್ಟಾದ ನಿಯಮಗಳನ್ನು ಮಾಡಿದ್ದಾಳೆ. 

ಆ ನಿಯಮಗಳೇನು? ಮೊದಲ ನಿಯಮವೆಂದರೆ, ಆಕೆಯನ್ನು ಚುಂಬಿಸುವ 24 ಗಂಟೆಗಳ ಮೊದಲು, ಆಕೆಯನ್ನು ಕಿಸ್‌ ಮಾಡುವವನು ಆರು ಪ್ರಮುಖ ಅನಾಫಿಲ್ಯಾಕ್ಟಿಕ್ ಅಲರ್ಜಿನ್‌ಗಳಲ್ಲಿ (ಅಂದರೆ ಈ ಅಲರ್ಜಿ ಉಂಟುಮಾಡುವ ಆಹಾರ ಪದಾರ್ಥಗಳಾದ ಕಡಲೆಕಾಯಿ, ಬೀಜಗಳು, ಎಳ್ಳು, ಕಿವಿ ಹಣ್ಣು, ಸಾಸಿವೆ ಅಥವಾ ಸಮುದ್ರ ಆಹಾರ) ಯಾವುದನ್ನೂ ತಿನ್ನಬಾರದು. ಎರಡನೆಯ ನಿಯಮವೆಂದರೆ, ಆತ ಆಕೆಯನ್ನು ಕಿಸ್‌ ಮಾಡುವ ಮೂರು ಗಂಟೆಗಳ ಮೊದಲಿನಿಂದ ಯಾವುದೇ ಆಹಾರ ಸೇವಿಸಿರಬಾರದು. ಮೂರನೆಯ ನಿಯಮದ ಪ್ರಕಾರ, ಅವಳು ಚುಂಬಿಸುವ ವ್ಯಕ್ತಿ ಕ್ಲೀನ್‌ ಆಗಿ ಹಲ್ಲುಜ್ಜಿರಲೇಬೇಕು! 

ಹಲ್ಲುಜ್ಜಿರುವುದೇನೋ ಸರಿ. ಉಳಿದ ನಿಯಮಗಳು ಯಾಕೆ? ಇವುಗಳನ್ನು ಅನುಸರಿಸದಿದ್ದರೆ ಏನಾಗುತ್ತದೆ? ಇದೆಲ್ಲವನ್ನೂ ಮಾಡದಿದ್ದರೆ, ಅವಳ ಚುಂಬನದ ಆಹ್ಲಾದಕರ ಅನುಭವವು ದುಃಸ್ವಪ್ನವಾಗಿ ಬದಲಾಗಬಹುದು. ಅವಳ ಕಾಯಿಲೆಯು ಆಕೆಯನ್ನು ಹಿಂಡಿಬಿಡುತ್ತದೆ. ಆಕೆಯ ಜೀವಕೋಶಗಳು ಕಿಸ್‌ ಮೂಲಕ ಆಕೆಯ ಬಾಡಿಗೆ ವರ್ಗಾವಣೆಯಾಗುವ ಜೊಲ್ಲಿನಲ್ಲಿರುವ ಅಲರ್ಜಿಕಾರಣ ಸೆಲ್‌ಗಳನ್ನು ಅಪಾಯಕಾರಿ ಎಂದು ಗುರುತಿಸುತ್ತದೆ. ಕೂಡಲೇ ಚರ್ಮದಲ್ಲಿ ಗುಳ್ಳೆಗಳು ಏಳುತ್ತವೆ. ಅತಿಸಾರ- ಭೇದಿ ಉಂಟಾಗಬಹುದು. ವಾಂತಿ ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ಸಮಸ್ಯೆ ತೀರಾ ಅತಿಯಾದರೆ, ಜೀವಕ್ಕೂ ಅಪಾಯವನ್ನು ಉಂಟುಮಾಡಬಹುದು. ಈ ಅಪಾಯಕಾರಿ ಅಲರ್ಜಿನ್‌ಗಳು ನಾವು ಸೇವಿಸುವ ಆಹಾರ, ಪ್ರಾಣಿಗಳ ತುಪ್ಪಳ, ರೋಮ, ಧೂಳು, ಶಾಖ ಮತ್ತು ಕೆಲವು ವಾಸನೆಗಳಲ್ಲಿ ಇರುತ್ತದೆ.

ಟೀ ಜೊತೆ ಸಿಗರೇಟು ಸೇದುವ ಅಭ್ಯಾಸ ನಿಮಗಿದೆಯಾ? ಈ ಸಮಸ್ಯೆ ಕಟ್ಟಿಟ್ಟ ಬುತ್ತಿ!

ಅನಾಫಿಲ್ಯಾಕ್ಸಿಸ್ ಸಮಸ್ಯೆ ಈಕೆಗಿರುವುದು 2017ರಲ್ಲಿ ಪತ್ತೆಯಾಯಿತು. ಅದರ ನಂತರ ಆಕೆ ಮುತ್ತು ಕೊಡುವುದನ್ನು ತಪ್ಪಿಸಿಕೊಳ್ಳುತ್ತಾಳೆ. ಬಾಯ್‌ಫ್ರೆಂಡುಗಳೇನೋ ಆಕೆಗೆ ಬಂದು ಹೋಗಿದ್ದಾರೆ. ಆದರೆ ಈಕೆಯ ಸಮಸ್ಯೆಯಿಂದಾಗಿ ಅವರೇ ದೂರ ಹೋಗಿದ್ದಾರೆ ಅಥವಾ ಆಕೆಯೇ ಇವರನ್ನು ದೂರವಿಟ್ಟಿದ್ದಾಳೆ. "ಹುಡುಗರನ್ನು ಚುಂಬಿಸುವುದೇನೋ ನನಗೆ ಇಷ್ಟ. ಆದರೆ ಅದು ನನ್ನ ದೇಹಕ್ಕೆ ಸಂಕಷ್ಟ. ಹಾಗಾಗಿ ನಾನು ಸ್ವಲ್ಪ ಲೆಕ್ಕಾಚಾರದ ರಿಸ್ಕ್‌ ತೆಗೆದುಕೊಳ್ಳಲು ಬಯಸುತ್ತೇನೆ. ಈ ನಿಯಮಗಳನ್ನು ಪಾಲಿಸುವವರು ಜೊತೆಗಾರರಾದರೆ ನಾನು ಪೂರ್ಣ ಮತ್ತು ಸಂತೋಷದ ಜೀವನವನ್ನು ನಡೆಸಬಹುದು" ಎಂದು ಕ್ವಿನ್‌ ಹೇಳುತ್ತಾಳೆ. "ಹಾಗೆ ನನ್ನನ್ನು ನಿಜವಾಗಿಯೂ ಪ್ರೀತಿಸುವವರು ಇದ್ದರೆ ಖಂಡಿತವಾಗಿಯೂ ನನ್ನನ್ನು ಚುಂಬಿಸುವ ಮೊದಲು ಈ ನಿಯಮಗಳನ್ನು ಅನುಸರಿಸುತ್ತಾರೆ. ನಿಸ್ಸಂಶಯವಾಗಿ ನನ್ನ ಬಗ್ಗೆ ಕಾಳಜಿ ವಹಿಸುತ್ತಾರೆ ಎನ್ನುವುದು ನನ್ನ ನಂಬಿಕೆ" ಅನ್ನುತ್ತಾಳೆ ಅವಳು.

ಸಂಗಾತಿಗೆ ಮೋಸ, ಸಾರ್ವಜನಿಕವಾಗಿ ನಗ್ನ ಸೇರಿ ಈ 54 ಕನಸು ಎಲ್ಲರಿಗೂ ಬೀಳುತ್ತೆ;ಏನಿದರರ್ಥ?
 

Latest Videos
Follow Us:
Download App:
  • android
  • ios