ಕೆಲವರಿಗೆ ವಿಚಿತ್ರ ಖಯಾಲಿ. ಟ್ರೆಂಡ್‌ಗಳು ವಿಚಿತ್ರ ಹಾಗೂ ವಿಕಾರವಾಗಿದ್ದಷ್ಟೂ ಅಂಥವರಿಗೆ ಮಜಾ. ಹಾಗೇ ಕಳೆದ ಐದು ವರ್ಷಗಳಿಂದ ಈಚೆಗೆ ಕೆಲವು ಸೆಲೆಬ್ರಟಿ ವಲಯದಲ್ಲಿ ರಹಸ್ಯವಾಗಿ ಟ್ರೆಂಡಿಂಗ್ ಆಗಿರೋ ಒಂದು ಟ್ರೆಂಡ್ ಎಂದರೆ ವೀರ್ಯದ ಫೇಶಿಯಲ್.

ಇದೇನಪ್ಪಾ ವಿಚಿತ್ರ ಎನ್ನಬೇಡಿ. ವೀರ್ಯದಿಂದಲೂ ಫೇಶಿಯಲ್ ಮಾಡಿಕೊಳ್ಳಬಹುದು. ಹಾಗೆ ನೋಡಿದರೆ ವೀರ್ಯ ಎಂದೇನು, ಸೆಗಣಿಯ ಫೇಶಿಯಲ್ ಕೂಡ ಮಾಡಿಕೊಳ್ಳಬಹುದು. ಅದಿರಲಿ, ವೀರ್ಯಕ್ಕೆ ಇಷ್ಟೊಂದು ಡಿಮಾಂಡ್ ಬರೋಕೆ ಕಾರಣವೇನು?

ಬೈಪೋಲಾರ್ ಡಿಸಾರ್ಡರ್ ... ಈ ಮಾನಸಿಕ ಕಾಯಿಲೆ ಬಗ್ಗೆ ಇಲ್ಲಿದೆ ಮಾಹಿತಿ ...

ಐದು ವರ್ಷಗಳ ಹಿಂದೆ, ಲಂಡನ್‌ನ ಒಬ್ಬಾಕೆ ಸೆಲೆಬ್ರಿಟಿ ಮೊದಲು ಇದನ್ನು ಪರಿಚಯಿಸಿದಳು. ಫ್ರೆಶ್ ವೀರ್ಯವನ್ನು ಮುಖಕ್ಕೆ ಲೇಪಿಸಿಕೊಂಡು ಅರ್ಧ ಗಂಟೆಯ ಬಳಿಕ ಅದನ್ನು ತೊಳೆದುಕೊಂಡು ಪರಿಮಳ ದ್ರವ್ಯ ಹಚ್ಚಿಕೊಂಡರೆ ಆಯ್ತು. ವೀರ್ಯವೇ ಯಾಕೆ..? ಯಾಕೆಂದರೆ ಅದು ಪುರುಷನ ಬಾಡಿ ಫ್ಲೂಯಿಡ್ ಆಗಿರುವ ಕಾರಣದಿಂದ, ಅದರಲ್ಲಿ ಸಾಕಷ್ಟು ಮಲ್ಟಿವಿಟಮಿನ್‌ಗಳು ಹಾಗೂ ಪ್ರೊಟೀನ್‌ಗಳು ಇರುತ್ತವೆ, ಅದು ಮುಖದ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ ಹಾಗೂ ಆರೋಗ್ಯವಾಗಿ ಇಡುತ್ತದೆ ಎಂಬುದು.

ಇದಂತೂ ನಿಜ. ವೀರ್ಯದಲ್ಲಿ ಪ್ರೊಟೀನ್ ಸಾಕಷ್ಟಿದೆ. ಯಾಕೆಂದರೆ, ವೀರ್ಯಾಣುವನ್ನು ರಕ್ಷಿಸಲು ಇರುವ ಈ ವೀರ್ಯದ್ರವ, ಸಾಕಷ್ಟು ಸ್ಟ್ರಾಂಗ್ ಆಗಿರುವುದು ಸಹಜ. ಯಾಕೆಂದರೆ ಅದು ದಿನಗಟ್ಟಲೆ ಪುರುಷನ ದೇಹದಲ್ಲಿ ಹಾಗೂ ಸ್ಖಲನ ಆದ ಬಳಿಕ ಸ್ತ್ರೀಯ ದೇಹಕ್ಕೆ ಹೋಗಿ ಅಲ್ಲಿ ಅಂಡವನ್ನು ಸೇರುವವರೆಗೂ ವೀರ್ಯಾಣುವನ್ನು ಪ್ರೊಟೆಕ್ಟ್ ಮಾಡಬೇಕಲ್ಲಾ. ಅದಕ್ಕಾಗಿಯೇ ವೀರ್ಯವು ಪ್ರೊಟೀನ್‌ನಲ್ಲಿ ರಿಚ್ ಆಗಿರುತ್ತದೆ.

ಬೇಗ ತೂಕ ಇಳಿಸಿಕೊಳ್ಳಬೇಕಾ? ಮಲಗೋ ಮುನ್ನ ಈ 4 ಕೆಲಸ ಮಾಡಿ ...

ವೀರ್ಯದ ಫೇಶಿಯಲ್‌ನಿಂದ ಮುಖದ ಮೇಲಿನ ಮೊಡವೆಗಳ ಸಮಸ್ಯೆ ಮಾಯವಾಗುತ್ತದೆ, ಚರ್ಮದ ಮೇಲಿನ ತೇವಾಂಶವನ್ನು ಕಾಪಾಡುತ್ತದೆ, ಚರ್ಮ ಕೆಂಪಾಗುವುದನ್ನು ತಪ್ಪಿಸುತ್ತದೆ, ಮುಖಕ್ಕೆ ಪ್ರಾಯವಾಗುವದನ್ನು ತಪ್ಪಿಸುತ್ತದೆ ಎಂದೆಲ್ಲ ಫೇಶುಯಲ್ ಎಕ್ಸ್‌ಪರ್ಟ್‌ಗಳು ಕೂಡ ಹೇಳತೊಡಗಿದರು. ಕೆಲವು ಸೆಲೆಬ್ರಿಟಿಗಳು ಇದರ ವಿಡಿಯೋ ಮಾಡಿ ಕೂಡ ಜನಪ್ರಿಯಗೊಳಿಸಿದರು. ಹೀಗಾಗಿ ಇದನ್ನು ನೋಡಿದವರೆಲ್ಲರೂ ನಿಜ ಎಂದೇ ನಂಬಿದರು. ಗುಪ್ತ್ ಗುಪ್ತ್ ಆಗಿ ವೀರ್ಯದ ಫೇಶಿಯಲ್ ಬಳಸತೊಡಗಿದರು. ಒಂದು ವಲಯದಲ್ಲಿ ಇದು ಸಾಕಷ್ಟು ಜನಪ್ರಿಯವೂ ಆಯಿತೆನ್ನಿ.

ಆದ್ರೆ ಇದರಿಂದ ಸೈಡ್ ಎಫೆಕ್ಟ್ ಕೂಡ ಇದೆ ಅಂತ ಈಗೀಗ ಕೆಲವು ತಜ್ಞರು ಹೇಳುತ್ತಿದಾರೆ. ಅವು ಏನು? ಪುರುಷನಿಗೆ ಎಲ್ಲಿಯಾದರೂ ಗುಪ್ತ ರೋಗಗಳಿದ್ದರೆ, ಲೈಂಗಿಕ ಕಾಯಿಲೆಗಳಿದ್ದರೆ, ಅವು ಫೇಶಿಯಲ್ ಮೂಲಕ ಸ್ತ್ರೀಯ ದೇಹಕ್ಕೆ ಟ್ರಾನ್ಸ್‌ಫರ್ ಆಗಬಹುದಾದ ಚಾನ್ಸ್ ಇದೆ. ಹಾಗೇ ಕಣ್ಣಿನ ಆರೋಗ್ಯವನ್ನು ಕೂಡ ಇದು ಕೆಡಿಸಬಹುದು. ವೀರ್ಯದಲ್ಲಿರುವ ಒಂದು ಬಗೆಯ ಪ್ರೊಟೀನ್, ಕಣ್ಣಿನ ನೇರ ಸಂಪರ್ಕಕ್ಕೆ ಬರುವುದು ಅಷ್ಟೊಂದು ಒಳ್ಳೆಯದಲ್ಲ. ಅದು ಹರ್ಪಿಸ್ ಉಂಟುಮಾಡಬಹುದು.

ಯಾವ ಚಟುವಟಿಕೆ ಎಷ್ಟು ಕ್ಯಾಲೊರಿ ಬರ್ನ್ ಮಾಡುತ್ತೆ..? ತಿಳ್ಕೊಳ್ಳಿ ...

ವೀರ್ಯದಲ್ಲಿ ಸ್ಪೆರ್ಮೈನ್ ಎಂಬ ಒಂದು ಜೈವಿಕಾಂಶ ಇದೆ. ಇದು ಮುಖದ ಚರ್ಮದಲ್ಲಿ ಅಲರ್ಜಿ ಉಂಟುಮಾಡಬಹುದು ಕೆಲವರಿಗೆ. ಇದನ್ನು ಅಪ್ಲೈ ಮಾಡಿದ ಕೆಲವೇ ನಿಮಿಷಗಳಲ್ಲಿ ಅಲರ್ಜಿ, ತುರಿಕೆ ಆರಂಭವಾಗುತ್ತದೆ. ಮುಖ ಕೆಂಪಾಗಬಹುದು. 
ಹ್ಯೂಮನ್ ಪ್ಯಾಪಿಲೋಮಾ ವೈರಸ್ ಎಂಬ ಒಂದು ವೈರಸ್ ಮನುಷ್ಯನ ದೇಹದ ದ್ರವಗಳಲ್ಲಿ ಇರುತ್ತದೆ. ಇದು ಆತನ ದೇಹದಿಂದ ಹೊರಬಿದ್ದ ಮೇಲೆಯೂ ಬಹಳ ಕಾಲ ಜೀವಂತವಾಗಿ ಇರುವ ಸಾಮರ್ಥ್ಯ ಹೊಂದಿದೆ. ಇದು ಕೆಲವು ಬಗೆಯ ವೈರಲ್ ಸೋಂಕು ಉಂಟುಮಾಡುವ ಸಾಮರ್ಥ್ಯ ಹೊಂದಿದೆ. 

ಪುರುಷನ ವೀರ್ಯದಲ್ಲಿ ಟೆಸ್ಟೋಸ್ಟಿರಾನ್‌ನ ಭಾಗ ಹೆಚ್ಚು. ಇದು ಪುರುಷನಲ್ಲಿ ಲೈಂಗಿಕ ಇಚ್ಛೆ ಹಾಗೂ ಸಾಮರ್ಥ್ಯವನ್ನು ಕೆರಳಿಸುವ ಹಾರ್ಮೋನು. ಆದರೆ ಇದನ್ನು ಮುಖದ ಮೇಲೆ ಹಚ್ಚಿದಾಗ, ಮುಖದ ಮೇಲಿರುವ ಮೊಡವೆಗಳನ್ನು ಹೆಚ್ಚು ಮಾಡಬಹುದು. ತೈಲದ ಅಂಶ ಹೊಂದಿರುವ ಚರ್ಮ ಹೊಂದಿರುವವರಿಗೆ ಇದು ಅಪಾಯಕಾರಿ. ಇದಕ್ಕಾಗಿ ವೀರ್ಯದಾನ ಮಾಡುವವರಂತೂ ಒಳ್ಳೆಯ ಆರೋಗ್ಯ ಹೊಂದಿರಲೇಬೇಕು. ಆತ ವೀರ್ಯದಾನ ಮಾಡುವ ಅರ್ಧ ದಿನ ಮೊದಲು ಧೂಮಪಾನ, ಮದ್ಯಪಾನ ಮಾಡಿರಬಾರದು, ಆತ ಡ್ರಗ್ಸ್ ಸೇವಿಸಬಾರದು. ಸಾಕಷ್ಟು ನೀರು ಸೇವಿಸಬೇಕು.