ಬೇಗ ತೂಕ ಇಳಿಸಿಕೊಳ್ಳಬೇಕಾ? ಮಲಗೋ ಮುನ್ನ ಈ 4 ಕೆಲಸ ಮಾಡಿ

First Published Feb 22, 2021, 3:58 PM IST

ಇತ್ತೀಚಿನ ದಿನಗಳಲ್ಲಿ ಬೊಜ್ಜು ಮತ್ತು ತೂಕ ಹೆಚ್ಚಳದ ಸಮಸ್ಯೆ ಸಾಂಕ್ರಾಮಿಕ ರೋಗದಂತೆ ಬೆಳೆಯುತ್ತಿದೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ತೂಕ ಬೆಳೆಯುತ್ತಿರುವ ಬಗ್ಗೆ ಚಿಂತಿತನಾಗಿರುತ್ತಾನೆ. ಬೊಜ್ಜು ಕಡಿಮೆ ಮಾಡಲು ಡಯಟ್ ಮಾಡಿದರೆ ಯೋಗ ಮತ್ತು ವ್ಯಾಯಾಮ ಮಾಡೋದಿಲ್ಲ. ಆದರೆ ಕೆಲವೊಮ್ಮೆ ಕಠಿಣ ಪರಿಶ್ರಮದ ನಂತರವೂ ಫಲಿತಾಂಶ ದೊರೆಯುವುದಿಲ್ಲ. ಸರಿಯಾದ ಆಹಾರ ಮತ್ತು ವ್ಯಾಯಾಮದ ಮೂಲಕ, ನಿದ್ದೆಯ ವಿಧಾನದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದರೆ, ಅದು ತೂಕ ಇಳಿಕೆಗೂ ಸಹಾಯ ಮಾಡುತ್ತದೆ. ಹೇಗೆ ಎಂಬುದನ್ನು ಇಲ್ಲಿ ತಿಳಿಯಿರಿ.