Asianet Suvarna News Asianet Suvarna News

Stay Young: ಯಾವಾಗಲೂ ಯಂಗ್ ಆಗಿರಬೇಕಾದರೆ ಈ ಆಹಾರವನ್ನು ಸೇವಿಸಿ

ಮನುಷ್ಯ ಅಂದ್ಮೇಲೆ ವರ್ಷದಿಂದ ವರ್ಷಕ್ಕೆ ವಯಸ್ಸಾಗುತ್ತಾ ಹೋಗುತ್ತದೆ. ಮುಖದ ಕಾಂತಿ ಕಳೆದುಕೊಳ್ಳುವುದು, ಚರ್ಮ (Skin) ಸುಕ್ಕುಗಟ್ಟುವುದು ಮೊದಲಾದ ರೀತಿಯಲ್ಲಿ ವಯಸ್ಸು ಗೊತ್ತಾಗುತ್ತದೆ. ಆದರೆ ನಿಮಗೆ ಗೊತ್ತಾ. ನಿಮಗೆ ಎಷ್ಟು ವಯಸ್ಸಾದರೂ ನೀವು ಯಂಗ್ (Young) ಆಗಿಯೇ ಕಾಣಬಹುದು. ಅದಕ್ಕೆ ನೀವು ಮಾಡಬೇಕಾಗಿರುವುದು ಇಷ್ಟೇ.
 

Secret Eating Habits to Reverse Aging
Author
Bengaluru, First Published Jan 10, 2022, 7:32 PM IST

ಸುಂದರವಾಗಿ ಕಾಣಬೇಕು, ಯಾವಾಗಲೂ ಯಂಗ್ ಆಗಿರಬೇಕು ಅನ್ನೋದು ಪ್ರತಿಯೊಬ್ಬರ ಆಸೆ. ಆದರೆ, ಮನುಷ್ಯ ಅಂದ್ಮೇಲೆ ವರ್ಷದಿಂದ ವರ್ಷಕ್ಕೆ ವಯಸ್ಸಾಗುತ್ತಾ ಹೋಗುತ್ತದೆ. ಆದರೆ, ಸಮರ್ಪಕ ಜೀವನಶೈಲಿ, ವ್ಯಾಯಾಮ, ಯೋಗ ಮೊದಲಾದವುಗಳನ್ನು ಅನುಸರಿಸುವುದರಿಂದ ನೀವು ಯಾವಾಗಲೂ ಯಂಗ್ ಆಗಿ ಕಾಣಬಹುದು. ಹಾಗೆಯೇ ಆರೋಗ್ಯಕರ ಆಹಾರಾಭ್ಯಾಸಗಳನ್ನು ಅಳವಡಿಸಿಕೊಳ್ಳುವುದು ಮುಖ್ಯ. ವಯಸ್ಸಾಗುವ ಪ್ರಕ್ರಿಯೆಯು ಅನಿವಾರ್ಯವಾಗಿದೆ. ವರ್ಷಗಳು ಕಳೆದಂತೆ, ದೇಹವು ಕೆಲವೊಂದು ನಿಲ್ಲಿಸಲಾಗದ ಬದಲಾವಣೆಗಳಿಗೆ ಒಳಗಾಗುತ್ತದೆ. ಈ ವಯಸ್ಸಿಗೆ ಸಂಬಂಧಿಸಿದ ಬದಲಾವಣೆಗಳನ್ನು ನಿಲ್ಲಿಸಲು ಯಾವುದೇ ಪರಿಹಾರವಿಲ್ಲದಿದ್ದರೂ, ಕೆಲವು ಆಹಾರ ಪದ್ಧತಿಗಳು ಮತ್ತು ಜೀವನಶೈಲಿಯ ಆಯ್ಕೆಗಳು ವಯಸ್ಸಾಗುವ ಪ್ರಕ್ರಿಯೆಯನ್ನು ಸ್ವಲ್ಪ ನಿಧಾನಗೊಳಿಸಲು ಸಹಾಯ ಮಾಡುತ್ತದೆ. ಹಾಗಿದ್ರೆ ವಯಸ್ಸಾಗದಂತೆ ಕಾಣಲು, ಯಾವಾಗಲೂ ಯಂಗ್ ಆಗಿರಲು ಯಾವ ರೀತಿಯ ಹಾರಗಳನ್ನು ಸೇವಿಸುವುದು ಉತ್ತಮ.

ಜಂಕ್ ಫುಡ್ ಸೇವನೆಯನ್ನು ಮಿತಿಗೊಳಿಸಿ
ಜಂಕ್ ಫುಡ್ ಆರೋಗ್ಯಕ್ಕೆ ಉತ್ತಮವಲ್ಲ ಅನ್ನೋದು ಎಲ್ಲರಿಗೂ ತಿಳಿದಿರುವ ವಿಷಯ. ಹಾಗೆಯೇ ಜಂಕ್ ಫುಡ್ ಸೇವನೆ ವಯಸ್ಸಾಗುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಹೀಗಾಗಿ ಕರಿದ ತಿಂಡಿ, ಪ್ಯಾಕೆಟ್ ತಿಂಡಿ ಮೊದಲಾದ ಜಂಕ್ ಫುಡ್‌ಗಳನ್ನು ತಿನ್ನದಿರಿ. ಸಕ್ಕರೆಯ ಬಳಕೆಯನ್ನು ಕಡಿಮೆ ಮಾಡಿ. ಸಿಹಿ ತಿನಿಸುಗಳನ್ನು, ಪಾನೀಯಗಳ ಸೇವನೆಯನ್ನು ಕಡಿಮೆ ಮಾಡಿ.

Stop these Mistakes : ಈ ತಪ್ಪು ಮಾಡಿದ್ರೆ ಸಣ್ಣ ವಯಸ್ಸಲ್ಲೇ ಮುದುಕರಂತೆ ಕಾಣ್ತೀರಿ..

ಹೆಚ್ಚು ಜಂಕ್ ಫುಡ್ (Junk Food) ತಿನ್ನುವುದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಅದು ಈಗಿನಿಂದ 10 ಅಥವಾ 20 ವರ್ಷಗಳ ನಂತರ ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ ನೀವು ದೀರ್ಘ, ಆರೋಗ್ಯಕರ ಜೀವನವನ್ನು ನಡೆಸಲು ಬಯಸಿದರೆ, ಜಂಕ್ ಫುಡ್‌ಗಳ ಸೇವನೆಯನ್ನು ತಪ್ಪಿಸಿ. ಇದರ ಬದಲು ಹೆಚ್ಚು ಸೊಪ್ಪು-ತರಕಾರಿಗಳನ್ನು ತಿನ್ನಿರಿ.

ಮೀನಿನ ಖಾದ್ಯವನ್ನು ಸೇವಿಸಿ
ಆಹಾರದಲ್ಲಿ ಮೀನಿನ ಖಾದ್ಯಗಳನ್ನು ಸೇರಿಸುವುದು ಆರೋಗ್ಯಕ್ಕೆ ಹಲವಾರು ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ, ಮೀನು (Fish) ತಿನ್ನುವವರಿಗೆ ವಯಸ್ಸೇ ಆಗುವುದಿಲ್ಲ. ಮೀನಿನಲ್ಲಿರುವ ಒಮೆಗಾ -3 ಕೊಬ್ಬಿನಾಮ್ಲಗಳಿಂದ ತುಂಬಿದೆ. ಇದು ದೇಹವನ್ನು ರೋಗಗಳಿಂದ ರಕ್ಷಿಸುತ್ತದೆ. ಒಮೆಗಾ-3 ಕೊಬ್ಬಿನಾಮ್ಲಗಳು ಹೃದಯ (Heart) ಸಮಸ್ಯೆಗಳು, ಖಿನ್ನತೆ ಮೊದಲಾದ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ನೀವು ಸಸ್ಯಾಹಾರಿಯಾಗಿದ್ದರೆ, ಮೀನಿನ ಬದಲು ಒಮೆಗಾ -3 ಪೂರಕ ಅಂಶವಿರುವ ಆಹಾರಗಳನ್ನು ಸೇವಿಸಬಹುದು.

Young @ 50 : ಮದ್ಯ ವಯಸ್ಸಿನಲ್ಲಿಯೂ ಯಂಗ್ ಕಾಣಲು ಏನು ತಿನ್ನಬೇಕು?

ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ
ಸಾಕಷ್ಟು ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನುವುದು ವಯಸ್ಸಾದ ಪ್ರಕ್ರಿಯೆಯ ವಿರುದ್ಧ ಹೋರಾಡಲು ಸಹಾಯಕ ಮಾಡುವ ಅಭ್ಯಾಸವಾಗಿದೆ. ಹಣ್ಣು (Fruits), ತರಕಾರಿಗಳಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಫೈಬರ್ ಸಮೃದ್ಧವಾಗಿದೆ, ಇದು ವಯಸ್ಸಾಗುವ ಋಣಾತ್ಮಕ ಪರಿಣಾಮಗಳನ್ನು ಎದುರಿಸುತ್ತದೆ.

ಸಸ್ಯ ಆಧಾರಿತ ಪ್ರೋಟೀನ್ ಸೇವನೆಯನ್ನು ಹೆಚ್ಚಿಸಿ
ಮಾಂಸ ಸೇವನೆಯನ್ನು ಕಡಿಮೆ ಮಾಡುವುದು. ಮಾಂಸದ ಬದಲಿಗೆ ಬೀನ್ಸ್ ಮತ್ತು ದ್ವಿದಳ ಧಾನ್ಯಗಳಂತಹ ಸಸ್ಯ ಆಧಾರಿತ ಪ್ರೋಟೀನ್‌ (Protein)ಗಳ ಸೇವನೆಯನ್ನು ಹೆಚ್ಚಿಸುವುದು ವಯಸ್ಸಾದ ಪ್ರಕ್ರಿಯೆಯನ್ನು ನಿಧಾನಗೊಳಿಸಲು ಸಹಾಯ ಮಾಡುತ್ತದೆ. ಊಟದಲ್ಲಿ ಹೆಚ್ಚು ಸೊಪ್ಪನ್ನು ಸೇರಿಸುವುದರಿಂದ ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಈ ಮೂಲಕ ವಯಸ್ಸಾದ ಪ್ರಕ್ರಿಯೆಯನ್ನು ನಿಧಾನಗೊಳ್ಳುತ್ತದೆ, ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನೂ ಸ್ಥಿರಗೊಳಿಸಬಹುದು, ಉರಿಯೂತವನ್ನು ಕಡಿಮೆ ಮಾಡಬಹುದು.

ಹೈಡ್ರೇಟೆಡ್ ಆಗಿರಿ
ಅನೇಕರಲ್ಲಿ ನಿರ್ಜಲೀಕರಣದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹೆಚ್ಚೆಚ್ಚು ನೀರು (Water) ಕುಡಿದಷ್ಟೂ ಆರೋಗ್ಯಕ್ಕೆ ಒಳ್ಳೆಯದು. ನಾವು ನೀರು ಕುಡಿಯುವುದನ್ನು ಕಡಿಮೆ ಮಾಡಿದಾಗ ಹಲವು ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ಹೀಗಾಗಿ ದೈನಂದಿನ ಆಹಾರಕ್ರಮದಲ್ಲಿ ಹೈಡ್ರೇಟಿಂಗ್ ಆಹಾರವನ್ನು ಸೇರಿಸಬಹುದು. ಸೌತೆಕಾಯಿ, ಕುಂಬಳಕಾಯಿ, ಚೀನೀಕಾಯಿ, ಟೊಮೇಟೊಗಳು, ಸ್ಟ್ರಾಬೆರಿಗಳು, ಕಲ್ಲಂಗಡಿ ಮೊದಲಾದವುಗಳು ಹೆಚ್ಚಿನ ನೀರಿನ ಅಂಶವನ್ನು ಹೊಂದಿರುತ್ತವೆ. ಹೀಗಾಗಿ ಇವೆಲ್ಲವನ್ನೂ ಸೇವಿಸುವುದರಿಂದ ದೇಹ ಯಾವಾಗಲೂ ಹೈಡ್ರೇಟ್ ಆಗಿರುತ್ತದೆ.

Follow Us:
Download App:
  • android
  • ios