ಸರ್ಫರಾಜ್ ಖಾನ್ ಕೇವಲ 2 ತಿಂಗಳಲ್ಲಿ ಬರೋಬ್ಬರಿ 17 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಇಂಗ್ಲೆಂಡ್ ಪ್ರವಾಸದ ಸಮಯದಲ್ಲಿ ಅವರು ತೂಕ ಇಳಿಸಿಕೊಳ್ಳಲು ಪ್ರಾರಂಭಿಸಿದರು. ಈಗಲೂ ಹಾಗೆ ಮಾಡಲು ಟ್ರೈ ಮಾಡ್ತಿದ್ದಾರೆ.

ತಮ್ಮ ಅತ್ಯುತ್ತಮ ಆಟ ಹಾಗೂ ಧಡೂತಿ ದೇಹದ ಮೂಲಕ ಸುದ್ದಿಯಲ್ಲಿರುವ ಸರ್ಫರಾಜ್ ಖಾನ್ (Sarfaraz Khan) ಈಗ ತೂಕ ಇಳಿಸಿಕೊಳ್ಳುವ ಮೂಲಕ ಸುದ್ದಿಯಲ್ಲಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸರ್ಫರಾಜ್ ಜಿಮ್‌ನಲ್ಲಿ ಬೆವರು ಸುರಿಸುತ್ತಿದ್ದಾರೆ ಮತ್ತು ಕಟ್ಟುನಿಟ್ಟಿನ ಆಹಾರಕ್ರಮವನ್ನು ಅನುಸರಿಸುತ್ತಿದ್ದಾರೆ. ಅವರು ಇತ್ತೀಚೆಗೆ ಜಿಮ್‌ನಿಂದ ಸೆಲ್ಫಿಯನ್ನು ಹಂಚಿಕೊಂಡಿದ್ದು, ಅದರಲ್ಲಿ ಈ ಬದಲಾವಣೆ ಸ್ಪಷ್ಟವಾಗಿ ಗೋಚರಿಸುತ್ತದೆ. ಇಂಗ್ಲೆಂಡ್‌ನ ದಂತಕಥೆ ಕೆವಿನ್ ಪೀಟರ್ಸನ್ ಕೂಡ ಸರ್ಫರಾಜ್ ಅವರ ಈ ರೂಪಾಂತರವನ್ನು ನೋಡಿ ಸರ್‌ಪ್ರೈಸ್ ಆದರು.

ಪ್ರವಾಸದ ಆರಂಭದಲ್ಲಿ ತೂಕ ಇಳಿಕೆ ಪ್ರಾರಂಭ
ಕಳೆದ ವರ್ಷ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಸಮಯದಲ್ಲಿ ಸರ್ಫರಾಜ್ ಖಾನ್ ಪಾದಾರ್ಪಣೆ ಮಾಡಿದರು. ಅವರು ಭಾರತಕ್ಕಾಗಿ ಇದುವರೆಗೆ 6 ಟೆಸ್ಟ್ ಪಂದ್ಯಗಳಲ್ಲಿ 37.10 ಸರಾಸರಿಯಲ್ಲಿ 371 ರನ್ ಗಳಿಸಿದ್ದಾರೆ. ಅವರ ಹೆಸರಿಗೆ ಒಂದು ಶತಕ ಮತ್ತು ಮೂರು ಅರ್ಧಶತಕಗಳಿವೆ.

ವರದಿಗಳ ಪ್ರಕಾರ, ಸರ್ಫರಾಜ್ ಖಾನ್ ಎರಡು ತಿಂಗಳಲ್ಲಿ 17 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಜೂನ್‌ನಲ್ಲಿ ಭಾರತದ ಎ ತಂಡದೊಂದಿಗೆ ಸರ್ಫರಾಜ್ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದರು. ಈ ಪ್ರವಾಸದ ಆರಂಭದಲ್ಲಿ ಅವರು ತೂಕ ಇಳಿಸಿಕೊಳ್ಳಲು ಪ್ರಾರಂಭಿಸಿದರು.

ಭಾರತ ಎ ಮತ್ತು ಇಂಗ್ಲೆಂಡ್ ಲಯನ್ಸ್ ನಡುವಿನ ಸರಣಿಯ ಸಮಯದಲ್ಲಿ ಸರ್ಫರಾಜ್ 10 ಕೆಜಿ ತೂಕ ಇಳಿಸಿಕೊಂಡರು. ಸರಣಿಯ ನಂತರ, ಅವರು ಭಾರತಕ್ಕೆ ಮರಳಿದರು ಮತ್ತು ಇಲ್ಲಿಯವರೆಗೆ 7 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಈ ರೀತಿಯಾಗಿ, ಈ ಕ್ರಿಕೆಟಿಗ ಸುಮಾರು 2 ತಿಂಗಳಲ್ಲಿ (Weight Loss In 2 Months) 17 ಕೆಜಿ ತೂಕ ಇಳಿಸಿಕೊಂಡಿದ್ದಾರೆ.

ಸಪೋರ್ಟ್ ಮಾಡ್ತಿರುವ ಫ್ಯಾಮಿಲಿ
ಅಂದಹಾಗೆ ಸರ್ಫರಾಜ್ ಖಾನ್ ಅವರ ತೂಕ ಇಳಿಸಿಕೊಳ್ಳುವ ಪ್ರಯತ್ನಗಳಿಗೆ ಅವರ ಕುಟುಂಬವೂ ಬೆಂಬಲ ನೀಡುತ್ತಿದೆಯಂತೆ. ಕುಟುಂಬವು ತಮ್ಮ ಆಹಾರಕ್ರಮವನ್ನು ಸಂಪೂರ್ಣವಾಗಿ ಬದಲಾಯಿಸಿದೆ ಎಂದು ಸರ್ಫರಾಜ್ ಅವರ ತಂದೆ ನೌಶಾದ್ ಹಿಂದೂಸ್ತಾನ್ ಟೈಮ್ಸ್‌ಗೆ ತಿಳಿಸಿದರು. ಅವರೇ ಹೇಳಿರುವ ಪ್ರಕಾರ, "ನಾವು ನಮ್ಮ ಆಹಾರವನ್ನು ಬಹಳಷ್ಟು ನಿಯಂತ್ರಿಸಿದ್ದೇವೆ. ರೊಟ್ಟಿ ಮತ್ತು ಅನ್ನ ತಿನ್ನುವುದನ್ನು ನಿಲ್ಲಿಸಿದ್ದೇವೆ. ನಾವು 1 ರಿಂದ 1.5 ತಿಂಗಳಿನಿಂದ ಮನೆಯಲ್ಲಿ ರೊಟ್ಟಿ ಅಥವಾ ಅನ್ನ ತಿನ್ನುತ್ತಿಲ್ಲ. ನಾವು ಬ್ರೊಕೊಲಿ, ಕ್ಯಾರೆಟ್, ಸೌತೆಕಾಯಿ ಮತ್ತು ಹಸಿರು ತರಕಾರಿಗಳ ಸಲಾಡ್ ತಿನ್ನುತ್ತೇವೆ. ಇದರೊಂದಿಗೆ, ನಾವು ಗ್ರಿಲ್ ಮಾಡಿದ ಮೀನು, ಗ್ರಿಲ್ ಮಾಡಿದ ಕೋಳಿ, ಬೇಯಿಸಿದ ಕೋಳಿ ಮತ್ತು ಬೇಯಿಸಿದ ಮೊಟ್ಟೆಗಳನ್ನು ತಿನ್ನುತ್ತೇವೆ. ನಾವು ಗ್ರೀನ್ ಟೀ (Green tea) ಮತ್ತು ಗ್ರೀನ್ ಕಾಫಿ (Green Coffee) ಯನ್ನು ಸಹ ಕುಡಿಯುತ್ತಿದ್ದೇವೆ.'

ಈ ಆಹಾರ ಪದ್ಧತಿಯ ಪಟ್ಟಿಗೆ ನೌಶಾದ್ ಇನ್ನೂ ಅನೇಕ ಪದಾರ್ಥ ಸೇರಿಸುತ್ತಾರೆ. 'ನಾವು ಆವಕಾಡೊ ಮತ್ತು ಮೊಳಕೆಯೊಡೆದ ಧಾನ್ಯಗಳನ್ನು ಸಹ ತಿನ್ನುತ್ತೇವೆ. ಆದರೆ ಅತ್ಯಂತ ಮುಖ್ಯವಾದ ವಿಷಯವೆಂದರೆ ರೊಟ್ಟಿ ಮತ್ತು ಅನ್ನ ತಿನ್ನುವುದನ್ನು ನಿಲ್ಲಿಸಿದ್ದೇವೆ. ಈಗ ಸಕ್ಕರೆ ತಿನ್ನುತ್ತಿಲ್ಲ. ಸಂಸ್ಕರಿಸಿದ ಹಿಟ್ಟು ಮತ್ತು ಬೇಕರಿ ವಸ್ತುಗಳಿಂದ ನಾವು ದೂರವಿದ್ದೇವೆ.

ನನಗೆ ಮೊಣಕಾಲು ಸಮಸ್ಯೆ ಇದ್ದ ಕಾರಣ ನಾನು 12 ಕೆಜಿ ತೂಕ ಇಳಿಸಿಕೊಂಡಿದ್ದೇನೆ. ನನ್ನ ಮೊಣಕಾಲು ಬದಲಾಯಿಸಬೇಕಾಗುತ್ತದೆ ಎಂದು ವೈದ್ಯರು ಹೇಳಿದರು. ಅದರ ಪರ್ಯಾಯದ ಬಗ್ಗೆ ನಾನು ಕೇಳಿದಾಗ, ಇದಕ್ಕಾಗಿ ನಾನು ತೂಕ ಇಳಿಸಿಕೊಳ್ಳಬೇಕಾಗುತ್ತದೆ ಎಂದು ಅವರು ನನಗೆ ಹೇಳಿದರು" ಎಂದು ನೌಶಾದ್ ತಿಳಿಸಿದ್ದಾರೆ.

ಕೊನೆಯದಾಗಿ... ಸರ್ಫರಾಜ್ ಖಾನ್ ಅವರ ರೂಪಾಂತರವು ಎಲ್ಲರಿಗೂ ಮಾಡದಿಯಾಗಿದೆ. ಅವರ ಆಹಾರ ಪದ್ಧತಿ ಮತ್ತು ಶಿಸ್ತು ದೊಡ್ಡ ಪಾತ್ರ ವಹಿಸುತ್ತದೆಯಾದರೂ, ಗ್ರೀನ್ ಕಾಫಿಯಂತಹ ಪಾನೀಯಗಳು ಈಗ ಗಮನ ಸೆಳೆಯುತ್ತಿವೆ. ಹಾಗಾಗಿ ಗ್ರೀನ್ ಕಾಫಿ ನಿಮ್ಮ ಆರೋಗ್ಯ ದಿನಚರಿಗೆ ಸೇರ್ಪಡೆಯಾಗಬಹುದು ನೋಡಿ.