Zombie Virus: ಸೈಬೀರಿಯಾದಲ್ಲಿ 48,500 ವರ್ಷಗಳ ಹಿಂದಿನ ಝೋಂಬಿ ವೈರಸ್‌ ಪತ್ತೆ

ರಷ್ಯಾ, ಜರ್ಮನಿ ಹಾಗೂ ಫ್ರಾನ್ಸಿನ ವಿಜ್ಞಾನಿಗಳು ಜಂಟಿಯಾಗಿ ಅಧ್ಯಯನ ನಡೆಸಿ ರಷ್ಯಾದ ಶೀತಲ ಮರುಭೂಮಿಯಾಗಿರುವ ಸೈಬೀರಿಯಾದಲ್ಲಿ ಹಿಮದಡಿಯಲ್ಲಿ ಹೂತಿರುವ 24ಕ್ಕೂ ಹೆಚ್ಚು ವೈರಸ್‌ಗಳನ್ನು ಪತ್ತೆ ಹಚ್ಚಿದ್ದಾರೆ. ಅದರಲ್ಲೊಂದು 48,500 ವರ್ಷಗಳ ಹಿಂದಿನ  ಝೋಂಬಿ ವೈರಸ್‌ ಪತ್ತೆಯಾಗಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Researchers Unearth Zombie Virus Frozen Under Siberian Lake Vin

ಮಾಸ್ಕೋ: ಜಾಗತಿಕ ತಾಪಮಾನ ಏರಿಕೆಯಿಂದಾಗಿ ಉಂಟಾಗುವ ದುಷ್ಪರಿಣಾಮಗಳ ಪಟ್ಟಿಯಲ್ಲಿ ಪುರಾತನ ವೈರಸ್‌ಗಳು ಮರುಕಳಿಸುವ ಭೀತಿಯು ಹೊಸದಾಗಿ ಸೇರ್ಪಡೆಯಾಗಿದೆ. ಜಾಗತಿಕ ತಾಪಮಾನ (Temperature) ಹೀಗೆ ಎಗ್ಗಿಲ್ಲದೇ ಮುಂದುವರೆಯುತ್ತಲೇ ಇದ್ದರೆ ಶೀತಲ ಮರುಭೂಮಿಯಲ್ಲಿ ಸಹಸ್ರಾರು ವರ್ಷಗಳಿಂದ ಹೆಪ್ಪುಗಟ್ಟಿರುವ ವೈರಸ್‌ಗಳು ಮತ್ತೆ ಮರುಕಳಿಸಿ ಸೋಂಕು (Virus) ಹರಡಬಹುದು ಎಂದು ವಿಜ್ಞಾನಿಗಳು ಆತಂಕವನ್ನು ವ್ಯಕ್ತಪಡಿಸಿದ್ದಾರೆ.

ತಾಪಮಾನ ಏರುತ್ತಿದ್ದರೆ ಹಳೆ ವೈರಸ್‌ನಿಂದ ಸೋಂಕಿನ ಭೀತಿ
ರಷ್ಯಾ, ಜರ್ಮನಿ ಹಾಗೂ ಫ್ರಾನ್ಸಿನ ವಿಜ್ಞಾನಿಗಳು ಜಂಟಿಯಾಗಿ ಅಧ್ಯಯನ ನಡೆಸಿ ರಷ್ಯಾದ ಶೀತಲ ಮರುಭೂಮಿಯಾಗಿರುವ ಸೈಬೀರಿಯಾದಲ್ಲಿ ಹಿಮದಡಿಯಲ್ಲಿ ಹೂತಿರುವ 24ಕ್ಕೂ ಹೆಚ್ಚು ವೈರಸ್‌ಗಳನ್ನು ಪತ್ತೆ ಹಚ್ಚಿದ್ದಾರೆ. ಇವುಗಳಲ್ಲಿ ಒಂದು ವೈರಸ್‌ 48,500 ವರ್ಷಗಳಿಂದಲೂ ಕೆರೆಯೊಂದರಲ್ಲಿ ಹೆಪ್ಪುಗಟ್ಟಿದೆ ಎನ್ನಲಾಗಿದೆ. ‘ಝೋಂಬಿ ವೈರಸ್‌’ ಎಂದು ಹೆಸರಿಸಲಾದ ಈ ಪುರಾತನ ವೈರಸ್‌ಗಳು ಸಹಸ್ರಾರು ವರ್ಷದಿಂದ ನೀರಿನಲ್ಲಿ ಹೆಪ್ಪುಗಟ್ಟಿದ್ದರೂ ಅವು ಇನ್ನೂ ಸಾಂಕ್ರಾಮಿಕವಾಗಿವೆ. ಎಂದರೆ ಇನ್ನೂ ರೋಗವನ್ನು (Disease) ಹರಡುವ ಸಾಮರ್ಥ್ಯವನ್ನು ಉಳಿಸಿಕೊಂಡಿವೆ.

ಚಳಿಗಾಲದಲ್ಲಿ ಬೆಳಗ್ಗೆ ಹೃದಯಾಘಾತದ ಅಪಾಯ ಹೆಚ್ಚು, ತಪ್ಪಿಸಲು ಏನ್ ಮಾಡ್ಬೇಕು ?

ಈ ವೈರಸ್‌ಗಳು ಅಧಿಕ ತಾಪಮಾನದ ಪ್ರದೇಶಗಳಲ್ಲಿ ಎಷ್ಟುಅವಧಿಯವರೆಗೆ ರೋಗ ಹರಡುವ ಸಾಮರ್ಥ್ಯವನ್ನು ಉಳಿಸಿಕೊಳ್ಳಬಹುದು ಎಂಬ ಬಗ್ಗೆ ಸದ್ಯಕ್ಕೆ ಅಂದಾಜಿಸುವುದು ಕಷ್ಟವಾಗಿದ್ದರೂ, ಜಾಗತಿಕ ತಾಪಮಾನ ಏರಿಕೆಯಾಗುತ್ತಿದ್ದಂತೆ ಹಿಮವು ಕರಗಿ ನೀರಿನ ಮೂಲಗಳಲ್ಲಿ ಸೇರ್ಪಡೆಯಾಗುತ್ತಿದ್ದಂತೆ ಈ ವೈರಸ್‌ಗಳು ಜಾಗೃತವಾಗಬಹುದು. ಅವುಗಳಲ್ಲಿ ಇನ್ನೂ ಸೋಂಕು ಹರಡುವ ಸಾಮರ್ಥ್ಯವಿದೆ. ಹೀಗಾಗಿ ಇದು ಪ್ರಾಣಿಗಳು (Animals) ಹಾಗೂ ಮನುಷ್ಯರಿಗೆ (Human) ಅಪಾಯ ತಂದೊಡ್ಡಬಹುದು ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

48,500 ವರ್ಷಗಳ ಹಿಂದಿನ ಮಾರಣಾಂತಿಕ ವೈರಸ್‌
ಸುಮಾರು 48,500 ವರ್ಷಗಳ ಹಿಂದೆ ಸರೋವರದ ಅಡಿಯಲ್ಲಿ ಹೂತಿದ್ದ ವೈರಸ್‌ ಇದಾಗಿದೆ. ವಾತಾವರಣದ ತಾಪಮಾನ ಏರಿಕೆಯಿಂದಾಗಿ ಪರ್ಮಾಫ್ರಾಸ್ಟ್  ಕರಗುವಿಕೆಯು ಈ ಹಿಂದೆ ಸಿಕ್ಕಿಬಿದ್ದಿರುವ ಮಿಥೇನ್‌ನಂತಹ ಹಸಿರುಮನೆ ಅನಿಲಗಳನ್ನು ಮುಕ್ತಗೊಳಿಸುವ ಮೂಲಕ ಹವಾಮಾನ ಬದಲಾವಣೆಯನ್ನು ಇನ್ನಷ್ಟು ಹದಗೆಡಿಸುತ್ತಾ ಹೋಗುತ್ತಿದೆ. ಹೀಗಾಗಿಯೇ ಈ ವೈರಸ್ ದೀರ್ಘಕಾಲದ ವರೆಗೆ ಸಾಂಕ್ರಾಮಿಕವಾಗಿ ಉಳಿಯಬಹುದು. ಒಮ್ಮೆ ಇವು ಹೊರಾಂಗಣ ಪರಿಸ್ಥಿತಿಗೆ ಹೊಂದಿಕೊಂಡರೆ ನಂತರದಲ್ಲಿ ಯಾವ ಪ್ರಮಾಣದಲ್ಲಿ ಸೋಂಕು ಹರಡುತ್ತದೆ, ಎಷ್ಟು ಪ್ರಮಾಣದಲ್ಲಿ ಅಪಾಯ ಬೀರುತ್ತದೆ ಅನ್ನೋದನ್ನ ಅಂದಾಜು ಮಾಡಲು ಸಾಧ್ಯವಿಲ್ಲ ಎಂದು ತಜ್ಞರು ಹೇಳುತ್ತಾರೆ.

ಮಾರಕ ಕಾಯಿಲೆಗೆ ಕಾರಣವಾಗೋ ಐದು ಬ್ಯಾಕ್ಟಿರೀಯಾ; ಎಲ್ಲೆಲ್ಲಿ ಇರುತ್ತವೆ ತಿಳ್ಕೊಳ್ಳಿ

ಜೊಂಬಿ ವೈರಸ್‌ಗಳು ಯಾವುವು?
ರಷ್ಯಾದ ಸೈಬೀರಿಯನ್ ಪ್ರದೇಶದಲ್ಲಿ ಪರ್ಮಾಫ್ರಾಸ್ಟ್‌ನಿಂದ 13 ಹೊಸ ರೋಗಕಾರಕಗಳನ್ನು ಪುನರುಜ್ಜೀವನಗೊಳಿಸಲಾಗಿದೆ. ಜೊಂಬಿ ವೈರಸ್‌ಗಳು ಎಂದು ಕರೆಯಲ್ಪಡುವ ರೋಗಕಾರಕಗಳು ಅನೇಕ ಸಹಸ್ರಮಾನಗಳನ್ನು ಹೆಪ್ಪುಗಟ್ಟಿದ ನೆಲದಲ್ಲಿ ಸಿಕ್ಕಿಹಾಕಿಕೊಂಡಿದ್ದರೂ ಸಹ ಸಾಂಕ್ರಾಮಿಕವಾಗಿ ಉಳಿದಿವೆ ಎಂದು ಕಂಡುಬಂದಿದೆ.

ಈ ವೈರಸ್‌ಗಳು ಮನುಷ್ಯರಿಗೆ ಸೋಂಕು ತರಬಹುದೇ?
ರಷ್ಯಾ, ಜರ್ಮನಿ ಮತ್ತು ಫ್ರಾನ್ಸ್‌ನ ಸಂಶೋಧಕರ ತಂಡದ ಪ್ರಕಾರ, ಅಧ್ಯಯನ ಮಾಡಿದ ವೈರಸ್‌ಗಳನ್ನು ಪುನಶ್ಚೇತನಗೊಳಿಸುವ ಜೈವಿಕ ಅಪಾಯವು ಅವರು ಗುರಿಪಡಿಸಿದ ತಳಿಗಳಿಂದ ಕಡಿಮೆ ಆಗಿದೆ. ಈ ವೈರಸ್‌ಗಳು ಮುಖ್ಯವಾಗಿ ಅಮೀಬಾ ಸೂಕ್ಷ್ಮಾಣುಜೀವಿಗಳಿಗೆ ಸೋಂಕು ತರುತ್ತವೆ. ಪ್ರಾಣಿಗಳು ಅಥವಾ ಮನುಷ್ಯರಿಗೆ ಸೋಂಕು ತಗುಲಿಸುವ ವೈರಸ್‌ನ ಸಂಭಾವ್ಯ ಪುನರುಜ್ಜೀವನವು ಹೆಚ್ಚು ಸಮಸ್ಯಾತ್ಮಕವಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಪ್ರಿಪ್ರಿಂಟ್ ರೆಪೊಸಿಟರಿ bioRxiv ನಲ್ಲಿ ಪೋಸ್ಟ್ ಮಾಡಿದ ಲೇಖನದಲ್ಲಿ, ಪ್ರಾಚೀನ ಪರ್ಮಾಫ್ರಾಸ್ಟ್ ಕರಗಿದ ನಂತರ ಈ ಅಜ್ಞಾತ ವೈರಸ್‌ಗಳನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂದು ಸಂಶೋಧಕರು ಬರೆದಿದ್ದಾರೆ. ಹೊರಾಂಗಣ ಪರಿಸ್ಥಿತಿಗಳಿಗೆ ಒಮ್ಮೆ ಒಡ್ಡಿಕೊಂಡಾಗ ಈ ವೈರಸ್‌ಗಳು ಎಷ್ಟು ಸಮಯದವರೆಗೆ ಸಾಂಕ್ರಾಮಿಕವಾಗಿ ಉಳಿಯಬಹುದು ಮತ್ತು ಮಧ್ಯಂತರದಲ್ಲಿ ಸೋಂಕಿಗೆ ಒಳಗಾಗುವ ಸಾಧ್ಯತೆಯನ್ನು ಅಂದಾಜು ಮಾಡುವುದು ಅಸಾಧ್ಯವೆಂದು ಅವರು ಬರೆದಿದ್ದಾರೆ.

Latest Videos
Follow Us:
Download App:
  • android
  • ios