Health
ಯೋಗ ಮನಸ್ಸು ಹಾಗೂ ದೇಹವನ್ನು ಶಾಂತಗೊಳಿಸುತ್ತದೆ. ಮಾತ್ರವಲ್ಲ ಮನಸ್ಸಿನ ಒತ್ತಡವನ್ನು ನಿವಾರಿಸಲು ಇದು ಅತ್ಯುತ್ತಮ ದಾರಿ.
ಧ್ಯಾನ ಮಾಡುವುದರಿಂದ ಮನಸ್ಸಿನಲ್ಲಿ ಏಕಾಗ್ರತೆ ಮೂಡುತ್ತದೆ. ಒತ್ತಡ ಕಡಿಮೆಯಾಗಿ ರಿಲ್ಯಾಕ್ಸ್ ಫೀಲ್ ಆಗುತ್ತದೆ. ಸ್ಟ್ರಸ್ ಕಡಿಮೆಯಾಗಲು ದಿನದಲ್ಲಿ 20ರಿಂದ 30 ನಿಮಿಷ ಧ್ಯಾನ ಮಾಡಿ
ಮನಸ್ಸಿನ ಒತ್ತಡ ನಿವಾರಣೆಗೆ ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಒಳ್ಳೆಯದು. ಯಾವುದೇ ನಿರ್ಧಿಷ್ಟ ವಿಷಯಗಳಲ್ಲಿ ತೊಡಗಿಸಿಕೊಳ್ಳುವುದು ಮನಸ್ಸಿನಿಂದ ಒತ್ತಡವನ್ನು ದೂರ ಮಾಡುತ್ತದೆ.
ಕುಟುಂಬ ಸದಸ್ಯರೊಂದಿಗೆ ಮನಬಿಚ್ಚಿ ಮಾತನಾಡಿ. ಹೊಸ ಹೊಸ ಸ್ನೇಹಿತರನ್ನು ಮಾಡಿಕೊಳ್ಳಿ, ಅವರೊಂದಿಗೆ ಸಮಯ ಕಳೆಯಿರಿ. ಅವರು ನಿಜವಾಗಿಯೂ ನ್ಯಾಚುರಲ್ ಸ್ಟ್ರೆಸ್ ರಿಲೀವರ್ಸ್.
ಬರೆಯುವ ಅಭ್ಯಾಸ ಯಾವಾಗಲೂ ಮನಸ್ಸನ್ನು ಹಗುರಗೊಳಿಸುತ್ತದೆ. ಬರೆಯುವ ಅಭ್ಯಾಸ ರೂಢಿಸಿಕೊಳ್ಳಿ. ಮೋಟಿವೇಟ್ ಮಾಡುವಂತೆ ದಿನಕ್ಕೆ ಒಂದಿಷ್ಟು ವಾಕ್ಯಗಳನ್ನು ಬರೆಯುತ್ತಿರಿ.
ನಗು ಆರೋಗ್ಯವನ್ನು ವೃದ್ಧಿಸುವ ಕೆಲಸ ಮಾಡುತ್ತದೆ. ನಗು, ದೈಹಿಕ ಆರೋಗ್ಯಕ್ಕೆ ಮಾತ್ರವಲ್ಲ, ಮಾನಸಿಕ ಆರೋಗ್ಯಕ್ಕೂ ಬಹಳ ಮುಖ್ಯ. ಅತಿಯಾದ ಒತ್ತಡ ಮತ್ತು ಆತಂಕದಿಂದಾಗಿ ಆರೋಗ್ಯ ಹಾಳಾಗಿದ್ರೆ ಮನಸ್ಸು ಬಿಚ್ಚಿ ನಕ್ಕರೆ ಸಾಕು.