ಮಕ್ಕಳು ಚುರುಕಾಗ್ಬೇಕಾ? ಓದಿಗಿಂತ ಮೊದಲಿರಲಿ ವರ್ಕ್ ಔಟ್
ಸದಾ ಪುಸ್ತಕದ ಮುಂದೆ ಕುಳಿತು ಎಷ್ಟು ಓದಿದ್ರೂ ವಿಷ್ಯ ತಲೆಯಲ್ಲಿ ನಿಲ್ಲೋದಿಲ್ಲ. ಹೆಚ್ಚು ಓದ್ಬೇಕು, ಹೆಚ್ಚೆಚ್ಚು ಅಂಕ ಬರಬೇಕು ಅಂದ್ರೆ ಮಕ್ಕಳು ದೈಹಿಕವಾಗಿ ಆಕ್ಟಿವ್ ಆಗಿರಬೇಕು. ಈ ಬಗ್ಗೆ ಅಧ್ಯಯನ ಏನು ಹೇಳುತ್ತೆ ಗೊತ್ತಾ?
ಈಗಿನ ಮಕ್ಕಳಿಗೆ ದೈಹಿಕ ವ್ಯಾಯಾಮ ಮಾಡಲು ಸಮಯ ಸಿಕ್ತಿಲ್ಲ ಅಂದ್ರೆ ಅದು ಅತಿಶಯೋಕ್ತಿಯಲ್ಲ. ಹಿಂದೆ ಶಾಲೆಯಲ್ಲಿಯೇ ಮಕ್ಕಳಿಗೆ ಅನೇಕ ದೈಹಿಕ ವ್ಯಾಯಾಮಗಳನ್ನು ಮಾಡಲಾಗ್ತಿತ್ತು. ಅದಲ್ಲದೆ ಮೈಲುಗಟ್ಟಲೆ ನಡೆದು ಮನೆಗೆ ಬರ್ತಿದ್ದ ಮಕ್ಕಳು, ಹೊಟ್ಟೆಗೆ ಒಂದಿಷ್ಟು ಸೇವಿಸಿ ಮತ್ತೆ ಆಟಕ್ಕೆ ಇಳಿಯುತ್ತಿದ್ರು. ಕತ್ತಲಾಗ್ತಿದ್ದಂತೆ ಅವರ ಓದು ಶುರುವಾಗ್ತಾ ಇತ್ತು. ಈಗಿನ ಮಕ್ಕಳಿಗೆ ಆಟಕ್ಕೆ ಸಮಯವಿಲ್ಲವಾಗಿದೆ. ಶಾಲೆಯಲ್ಲೂ ಓದಿಗೆ ಹೆಚ್ಚು ಒತ್ತು ನೀಡುವ ಕಾರಣ, ಶಾಲೆ, ಮಕ್ಕಳು, ಪಾಲಕರು ಅಂಕಗಳ ಹಿಂದೆ ಓಡ್ತಿರುತ್ತಾರೆ.
ಶಾಲೆ (School) ಮುಗಿಸಿ ಮನೆಗೆ ಬರುವ ಮಕ್ಕಳಿಗೆ ಟ್ಯೂಷನ್ (Tuition) ಹೊರೆ ಇರುತ್ತದೆ. ಕೆಲ ಮಕ್ಕಳು ಮನೆಯಲ್ಲಿಯೇ ಓದು ಮುಂದುವರೆಸುತ್ತಾರೆ. ಶಾಲೆ ಹಾಗೂ ಓದಿನ ಮಧ್ಯೆ ವಿಶ್ರಾಂತಿ ನೆಪದಲ್ಲಿ ಮಕ್ಕಳು ಆಟದ ಬದಲು ಮೊಬೈಲ್ ಹಿಡಿಯುತ್ತಾರೆ. ಇಲ್ಲವೆ ಟಿವಿ ಮುಂದೆ ಕುಳಿತುಕೊಳ್ತಾರೆ. ಸೋಫಾದಿಂದ ಅವರ ಜಾಗ ಸ್ಟಡಿ ಟೇಬಲ್ ಗೆ ಶಿಫ್ಟ್ ಆಗುತ್ತ್ಯೆ ವಿನಃ ದೈಹಿಕ ಚಟುವಟಿಕೆ ಅಲ್ಲಿ ನಡೆಯೋದಿಲ್ಲ.
Parenting Tips: ಮಗಳು ಮುದ್ದಾಗಿದ್ರೆ ಸಾಲದು ಆಕೆಗೊಂದಿಷ್ಟು ತಿಳಿದಿರಬೇಕು..
ಮಕ್ಕಳಿಗೆ ಹೆಚ್ಚು ಅಂಕ ಬರಬೇಕು, ಮಕ್ಕಳು ಬುದ್ಧಿವಂತರಾಗ್ಬೇಕು ಎಂದು ಬಯಸುವ ಪಾಲಕರು, ಸದಾ ಮಕ್ಕಳಿಗೆ ಓದಿನ ಪ್ರೆಶರ್ ಹಾಕ್ತಿರುತ್ತಾರೆ. ಇಡೀ ದಿನ ಓದಿದ್ರೂ ಮಕ್ಕಳಿಗೆ ವಿದ್ಯಾಭ್ಯಾಸ ತಲೆಯಲ್ಲಿ ನಿಲ್ಲೋದಿಲ್ಲ. ದೈಹಿಕ ವ್ಯಾಯಾಮ (Exercise) ದ ಕೊರತೆ ಇದಕ್ಕೆ ಕಾರಣ. ಹಿಂದೆ ಹಿರಿಯರು ಆಟವಾಡುವಂತೆ ಮಕ್ಕಳಿಗೆ ಒತ್ತಾಯ ಮಾಡ್ತಿದ್ದರು. ಅದ್ರ ಹಿಂದಿನ ಕಾರಣವೂ ಇದೇ ಆಗಿದೆ.
ಬಹುತೇಕ ಪಾಲಕರು ವ್ಯಾಯಾಮಕ್ಕೆ ವಯಸ್ಸು (Age) ನಿಗದಿ ಮಾಡ್ತಾರೆ. ಆಟವಾಡಲು, ವ್ಯಾಯಾಮ ಮಾಡಲು ಇದು ವಯಸ್ಸಲ್ಲ. ಇದು ಓದುವ ಸಮಯ ಎನ್ನುವ ಪಾಲಕರು, ಮಕ್ಕಳನ್ನು ಮನೆಯಿಂದ ಹೊರಗೆ ಹೋಗಲು ಬಿಡೋದಿಲ್ಲ. ಆದ್ರೆ ಓದುವ ಮೊದಲು ವ್ಯಾಯಾಮ ಮಾಡೋದು ಬಹಳ ಮುಖ್ಯವೆಂದು ಅನೇಕ ಅಧ್ಯಯನಗಳು ಹೇಳಿವೆ.
ಅಧ್ಯಯನದಲ್ಲಿ ಏನು ಹೇಳಲಾಗಿದೆ? : ಸ್ವಲ್ಪ ಹೊತ್ತು ವ್ಯಾಯಾಮ ಮಾಡಿದ ನಂತರ ಓದಲು ಕುಳಿತುಕೊಳ್ಳುವ ಮಕ್ಕಳ ಮೆದುಳು ವೇಗವಾಗಿ ಕೆಲಸ ಮಾಡುತ್ತದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ವ್ಯಾಯಾಮ ಮಾಡುವುದ್ರಿಂದ ಮೆದುಳಿಗೆ ರಕ್ತದ ಹರಿವು ಹೆಚ್ಚಾಗುತ್ತದೆ. ಇದು ನ್ಯೂರಾನ್‌ಗಳನ್ನು ಸಕ್ರಿಯಗೊಳಿಸುತ್ತದೆ. ಇದು ಹಿಪೊಕ್ಯಾಂಪಸ್‌ನಲ್ಲಿ ಜೀವಕೋಶದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಭಾವನೆಗಳನ್ನು ನಿಯಂತ್ರಿಸುವ ಶಕ್ತಿಯನ್ನು ಹೆಚ್ಚಿಸುತ್ತದೆ. ದೈಹಿಕವಾಗಿ ಸಕ್ರಿಯವಾಗಿರುವ ಮಕ್ಕಳು ತಮ್ಮ ಅಧ್ಯಯನಕ್ಕೆ ಹೆಚ್ಚು ಗಮನ ನೀಡುತ್ತಾರೆ. ವಿಷಯಗಳನ್ನು ತ್ವರಿತವಾಗಿ ಅರ್ಥಮಾಡಿಕೊಳ್ಳುತ್ತಾರೆ. ಅಧ್ಯಯನ ಮಾಡುವ ಮೊದಲು ಕೇವಲ 20 ನಿಮಿಷಗಳ ವ್ಯಾಯಾಮ ಏಕಾಗ್ರತೆಯನ್ನು ಸುಧಾರಿಸುತ್ತದೆ. ದೈಹಿಕ ಚಟುವಟಿಕೆಯಿಂದ ಎಂಡಾರ್ಪಿನ್ ಮಟ್ಟ ಹೆಚ್ಚಾಗುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ. ಇದು ಮೆದುಳಿನ ಕಾರ್ಯನಿರ್ವಹಣೆ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಕೆಲ ವ್ಯಾಯಾಮಗಳು ಒತ್ತಡವನ್ನು ಕಡಿಮೆ ಮಾಡಿ, ಧನಾತ್ಮಕ ಶಕ್ತಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ.
Cleaning Tips : ಮಕ್ಕಳ ಖಾಸಗಿ ಅಂಗದ ಸ್ವಚ್ಛತೆ ಹೀಗ್ ಮಾಡಿ
ಯಾವ ವ್ಯಾಯಾಮ ಮಾಡ್ಬೇಕು? : ವಿದ್ಯಾಭ್ಯಾಸಕ್ಕಿಂತ ಮೊದಲು ಯಾವ ವ್ಯಾಯಾಮ ಮಾಡ್ಬೇಕು ಎನ್ನುವ ಪ್ರಶ್ನೆ ಏಳುವುದು ಸಹಜ. ದೈಹಿಕ ಸದೃಢತೆ ಹಾಗೂ ಶೈಕ್ಷಣಿಕ ಕಾರ್ಯಕ್ಷಮತೆ ಮಧ್ಯೆ ಸಂಬಂಧವಿದೆ. ಕೆಲ ವ್ಯಾಯಾಮಗಳು ಶಕ್ತಿಯ ಮಟ್ಟವನ್ನು ಹೆಚ್ಚಿಸಿ, ಸುದೀರ್ಘ ಅಧ್ಯಯನಕ್ಕೆ ನೆರವಾಗುತ್ತವೆ. ತೂಕ ಇಳಿಸಿಕೊಳ್ಳುವ ವ್ಯಾಯಾಮವನ್ನು ಮಕ್ಕಳು ಮಾಡ್ಬೇಕಾಗಿಲ್ಲ. ಬುದ್ದಿ ಚುರುಕಾಗುವಂತಹ ವ್ಯಾಯಾಮಗಳನ್ನು ಅವರು ಮಾಡ್ಬೇಕು. ಏರೋಬಿಕ್ಸ್ ಅತ್ಯುತ್ತಮ ವ್ಯಾಯಾಮವಾಗಿದೆ. ಇದು ಇಷ್ಟವಿಲ್ಲ ಎನ್ನುವವರು ಈಜು, ಸೈಕ್ಲಿಂಗ್, ಜಾಗಿಂಗ್ ಅಥವಾ ಓಟದಂತಹ ವ್ಯಾಯಾಮ ಮಾಡಬಹುದು. ಓದುವ ಕೆಲ ನಿಮಿಷ ಮಕ್ಕಳಿಗೆ ವಾಕಿಂಗ್ ಮಾಡುವಂತೆ ಸಲಹೆ ನೀಡಬೇಕು.