ಮನೆಯಿಂದಾನೇ ಶುರುವಾಗಲಿ ಪರಿಸರ ರಕ್ಷಣೆ, ಆಗಲಿ ಪ್ಲಾಸ್ಟಿಕ್ ಬ್ಯಾನ್
ಪ್ಲಾಸ್ಟಿಕ್ ಪರಿಸರಕ್ಕೆ ಎಷ್ಟು ಹಾನಿಕಾರಕ ಎಂಬುದು ನಮಗೆಲ್ಲ ತಿಳಿದಿದೆ. ಆದ್ರೂ ನಾವು ಬಳಕೆ ಕಡಿಮೆ ಮಾಡ್ತಿಲ್ಲ. ಮನೆಯ ಮೂಲೆ ಮೂಲೆಯಲ್ಲಿ ನಾವು ಪ್ಲಾಸ್ಟಿಕ್ ವಸ್ತುಗಳನ್ನು ನೋಡ್ಬಹುದು. ಆರೋಗ್ಯ ಹಾಳು ಮಾಡುವ ಈ ಪ್ಲಾಸ್ಟಿಕ್ ನಿಂದ ನಮ್ಮ ಮನೆ ದೂರವಿಡ್ಬೇಕು.
ಪ್ಲಾಸ್ಟಿಕ್ (Plastic) ಅಥವಾ ಪಾಲಿಥಿನ್ (Polythene) ನಿಂದ ಮಾಡಿದ ಚೀಲಗಳು ನಮ್ಮ ಪರಿಸರ (Environment) ಕ್ಕೆ ಹಾನಿಕಾರಕ. ಈ ವಿಷಯದ ಗಂಭೀರತೆಯನ್ನು ಅರಿತು ಜುಲೈ 1, 2022 ರಿಂದ, ಇಡೀ ದೇಶದಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ಮತ್ತು ಅದರಿಂದ ತಯಾರಿಸಿದ ವಸ್ತುಗಳು, ಪಾಲಿಥಿನ್ ಚೀಲಗಳು ಇತ್ಯಾದಿಗಳನ್ನು ನಿಷೇಧಿಸಲಾಗಿದೆ. ಈಗ ಮನೆಯಿಂದ ಹೊರಗೆ ಸಾಮಾನು ಕೊಳ್ಳಲು ಹೋದರೆ ಅಂಗಡಿಯಲ್ಲಿ ಪಾಲಿಥಿನ್ ಅಥವಾ ಪ್ಲಾಸ್ಟಿಕ್ ನಿಂದ ಮಾಡಿದ ಚೀಲಗಳು ಸಿಗೋದಿಲ್ಲ. ಆದರೆ ಮಾರುಕಟ್ಟೆಗಿಂತ ಹೆಚ್ಚು ಪಾಲಿಥಿನ್ ಅಥವಾ ಪ್ಲಾಸ್ಟಿಕ್ ಅನ್ನು ನಾವು ಮನೆಯಲ್ಲಿ ಬಳಸುತ್ತೇವೆ. ಯಸ್, ಈಗಾಗಲೇ ತಂದ ಪ್ಲಾಸ್ಟಿಕ್ ಅಥವಾ ಪಾಲಿಥಿನ್ ಕವರ್ ಬಳಕೆಯನ್ನು ನಾವು ಮುಂದುವರೆಸುತ್ತಿದ್ದೇವೆ. ಇದ್ರ ಜೊತೆಗೆ ಮನೆಯಲ್ಲೇ ಅನೇಕ ಅನೇಕ ಪ್ಲಾಸ್ಟಿಕ್ ವಸ್ತುಗಳಿವೆ. ಮಾರುಕಟ್ಟೆಯಲ್ಲಿ ಅದರ ಬಳಕೆ ತಪ್ಪಿಸುವ ಜೊತೆಗೆ ಮನೆಯಲ್ಲೂ ನಾವು ಪ್ಲಾಸ್ಟಿಕ್ ಬಳಕೆ ತಪ್ಪಿಸಬೇಕು. ಆಗ ಮಾತ್ರ ಪರಿಸರದ ಜೊತೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ. ಹಾಗಾಗಿ ಕುಟುಂಬದ ಪ್ರತಿ ಮಗುವಿಗೆ ಪರಿಸರ ಸಂರಕ್ಷಣೆಗಾಗಿ ಪ್ಲಾಸ್ಟಿಕ್ ಮತ್ತು ಪಾಲಿಥಿನ್ ನಿಂದ ದೂರವಿರಲು ಕಲಿಸುವುದು ಅಗತ್ಯವಾಗಿದೆ. ಮನೆಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕುಟುಂಬದ ಸದಸ್ಯರು ಹೇಗೆ ಕಡಿಮೆ ಮಾಡಬಹುದು ಎಂದು ನಾವಿಂದು ನಿಮಗೆ ಹೇಳ್ತೇವೆ.
ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಲು ಟಿಪ್ಸ್ :
ಹಲ್ಲುಜ್ಜುವ ಬ್ರಷ್ : ನಮ್ಮ ಬೆಳಿಗ್ಗಿನ ಆರಂಭವೇ ಪ್ಲಾಸ್ಟಿಕ್ ನಿಂದಾಗುತ್ತದೆ. ಬೆಳಿಗ್ಗೆ ನೀವು ಹಲ್ಲುಜ್ಜುವ ಬ್ರಷ್ ಅನ್ನು ಬಳಸುತ್ತೀರಿ. ವರದಿಯ ಪ್ರಕಾರ, ಪ್ರತಿ ವರ್ಷ 4.7 ಬಿಲಿಯನ್ ಪ್ಲಾಸ್ಟಿಕ್ ಟೂತ್ ಬ್ರಷ್‌ಗಳು ಕಸದಲ್ಲಿ ಕಂಡುಬರುತ್ತವೆ. ಆದ್ದರಿಂದ, ಪ್ಲಾಸ್ಟಿಕ್ ನಿಂದ ಮಾಡಿದ ಬ್ರಷ್ ಬದಲಿಗೆ ನೀವು ಮರದ ಕುಂಚ ಅಥವಾ ಟೂತ್ಪಿಕ್ ಅನ್ನು ಬಳಸಬಹುದು. ಪ್ಲಾಸ್ಟಿಕ್‌ನಿಂದ ಉಂಟಾಗುವ ಹಾನಿಯಿಂದ ಪರಿಸರವನ್ನು ರಕ್ಷಿಸುವುದಲ್ಲದೆ, ನಿಮ್ಮ ಹಲ್ಲುಗಳ ಆರೋಗ್ಯಕ್ಕೂ ಇದು ಪ್ರಯೋಜನಕಾರಿಯಾಗಿದೆ.
ದಿನಕ್ಕೆರಡು ಬಾರಿ ಹಲ್ಲುಜ್ಜುವ ಅಭ್ಯಾಸದಿಂದ ಹೆಚ್ಚುತ್ತೆ ಆಯಸ್ಸು
ಪ್ಲಾಸ್ಟಿಕ್ ಬಾಟಲಿ ಬದಲಿಸಿ : ನೀರಿಗಾಗಿ ನಾವು ಬಾಟಲಿ ಉಪಯೋಗಿಸ್ತೇವೆ. ಪ್ಲಾಸ್ಟಿಕ್ ಬಾಟಲಿಯಲ್ಲಿ ನೀವು ತೆಗೆದುಕೊಂಡು ಹೋಗುವ ಬದಲು ಸ್ಟೀಲ್ ಅಥವಾ ಗಾಜಿನ ಬಾಟಲಿಯನ್ನು ನೀವು ಬಳಸಬಹುದು. ಮನೆಯಲ್ಲಿ ಗ್ಲಾಸ್ ಅಥವಾ ಸ್ಟೀಲ್ ಬಾಟಲ್ ಇಟ್ಟುಕೊಂಡರೂ ಹೊರಗೆ ಹೋಗುವಾಗ ಪ್ಲಾಸ್ಟಿಕ್ ಬಾಟಲಿ ಖರೀದಿಸಿ ನೀರು ಕುಡಿಯುತ್ತೇವೆ. ಇದರ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಮಕ್ಕಳು ಮತ್ತು ಕುಟುಂಬ ಸದಸ್ಯರು ಹೊರಗೆ ಹೋಗುವಾಗ ತಮ್ಮ ಬಾಟಲಿಯನ್ನು ತಮ್ಮೊಂದಿಗೆ ಕೊಂಡೊಯ್ಯುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು.
ತಿನ್ನುವ ಪ್ಲೇಟ್ ಹಾಗೂ ಟಿಫನ್ ಬಾಕ್ಸ್ : ಪ್ಲಾಸ್ಟಿಕ್ ನಲ್ಲಿ ನಿಮಗೆ ವೆರೈಟಿ ಪ್ಲೇಟ್ ಗಳು ಸಿಗುತ್ತವೆ. ಅವುಗಳ ಡಿಸೈನ್ ಭಿನ್ನವಾಗಿರುವ ಕಾರಣ ಎಲ್ಲರನ್ನೂ ಆಕರ್ಷಿಸುತ್ತವೆ. ಆದ್ರೆ ಈ ಪ್ಲಾಸ್ಟಿಕ್ ಪ್ಲೇಟ್ ನಲ್ಲಿ ಆಹಾರ ಸೇವನೆ ಮಾಡುವುದು ಯೋಗ್ಯವಲ್ಲ. ಮಕ್ಕಳ ಆರೋಗ್ಯದ ಜೊತೆ ಪರಿಸರ ರಕ್ಷಣೆಯಾಗ್ಬೇಕೆಂದ್ರೆ ನೀವು ಸ್ಟೀಲ್ ಅಥವಾ ಬೆಳ್ಳಿ ಪಾತ್ರೆಯಲ್ಲಿ ಮಕ್ಕಳಿಗೆ ಆಹಾರವನ್ನು ನೀಡಿ. ಹಾಗೆಯೇ ಟಿಫನ್ ಬಾಕ್ಸ್ ಗಳ ಆಯ್ಕೆ ವೇಳೆಯೂ ಪ್ಲಾಸ್ಟಿಕ್ ಬದಲು ಸ್ಟೀಲ್ ಬಾಕ್ಸ್ ಗಳನ್ನು ಆಯ್ಕೆ ಮಾಡಿಕೊಳ್ಳಿ.
ಹೃದಯ ವೈಫಲ್ಯಕ್ಕೆ ನಿದ್ರೆಯೂ ಒಂದು ಕಾರಣವಂತೆ!
ಸ್ಟ್ರಾ ಬಳಕೆ ಬಿಟ್ಬಿಡಿ : ಸ್ಟ್ರಾನಲ್ಲಿ ಆಹಾರ ಸೇವನೆ ಮಾಡಲು ಮಕ್ಕಳು ಇಷ್ಟಪಡ್ತಾರೆ. ಆದ್ರೆ ಅದು ಒಳ್ಳೆಯದಲ್ಲ. ಸ್ಟ್ರಾ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತದೆ. ಹಾಗಾಗಿ ಪ್ಲಾಸ್ಟಿಕ್ ಸ್ಟ್ರಾ ಬಳಸದಂತೆ ಮಕ್ಕಳಿಗೆ ಸಲಹೆ ನೀಡಿ. ವರದಿಯ ಪ್ರಕಾರ, ಪ್ರತಿ ವರ್ಷ 8.3 ಬಿಲಿಯನ್ ಪ್ಲಾಸ್ಟಿಕ್ ಸ್ಟ್ರಾಗಳನ್ನು ಎಸೆಯಲಾಗುತ್ತದೆ. ಹಾಗೆ ಸ್ಟೀಲ್ ಸ್ಟ್ರಾ ಖರೀದಿಸಿ ಅದನ್ನು ಸದಾ ನಿಮ್ಮ ಜೊತೆ ಇಟ್ಟುಕೊಳ್ಳಿ.