Asianet Suvarna News Asianet Suvarna News

ದಿನಕ್ಕೆರಡು ಬಾರಿ ಹಲ್ಲುಜ್ಜುವ ಅಭ್ಯಾಸದಿಂದ ಹೆಚ್ಚುತ್ತೆ ಆಯಸ್ಸು

ಬಾಯಿ (Mouth)ಯನ್ನು ಸ್ವಚ್ಛವಾಗಿಟ್ಟುಕೊಂಡರೆ ಮಾತ್ರ ಆರೋಗ್ಯ (Health)ವಾಗಿರುತ್ತೇವೆ. ಬಾಯಿ ಸ್ವಚ್ಛವಾಗಿಲ್ಲದಿದ್ದರೆ, ಎಲ್ಲಾ ರೋಗಗಳು (Disease) ಆವರಿಸಿಕೊಳ್ಳುತ್ತೆ. ಇತ್ತೀಚಿನ ಅಧ್ಯಯನದ ಪ್ರಕಾರ, ಹಲ್ಲುಗಳು (Teeth) ಸ್ವಚ್ಛವಾದಷ್ಟೂ ನಾವು ಹೆಚ್ಚು ಕಾಲ ಬದುಕುತ್ತವೆ ಎಂಬುದು ತಿಳಿದುಬಂದಿದೆ.

Brushing Teeth Two Times A Day Is Linked To Longer Life, Says Study Vin
Author
Bengaluru, First Published Jul 6, 2022, 11:11 AM IST

ಮನುಷ್ಯ (Human) ಆರೋಗ್ಯವಾಗಿರಲು ಮೌಖಿಕ ನೈಮರ್ಲ್ಯ (Clean) ತುಂಬಾ ಮುಖ್ಯ,. ದೇಹದ ಎಲ್ಲಾ ಭಾಗಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಇಲ್ಲವಾದಲ್ಲಿ ಕಾಯಿಲೆಗಳು (Disease) ಕಾಡುತ್ತವೆ, ಆರೋಗ್ಯ ಸಮಸ್ಯೆ (Health problem) ಹೆಚ್ಚಾಗುತ್ತದೆ. ದೇಹದ ಎಲ್ಲಾ ಭಾಗಗಳಂತೆ ಆಹಾರ ಸೇವಿಸುವ ಬಾಯಿಯ (Mouth) ಸ್ವಚ್ಛತೆಯೂ ಮುಖ್ಯ. ಬಾಯಿಯ ಸ್ವಚ್ಛತೆ ಎಂದರೆ ನಿಯಮಿತವಾಗಿ ಹಲ್ಲುಜ್ಜುವ ಅಭ್ಯಾಸವಾಗಿದೆ.  ಹಲ್ಲುಗಳ ನಡುವೆ ನಿಂತಿರುವ ಕೊಳೆಯನ್ನು ಸ್ವಚ್ಛಗೊಳಿಸುವ ಮೂಲಕ ಒಬ್ಬರ ಬಾಯಿಯನ್ನು ಸ್ವಚ್ಛವಾಗಿಟ್ಟುಕೊಳ್ಳಬಹುದು. ಇದು ದಂತ ರೋಗಗಳು ಮತ್ತು ದುರ್ವಾಸನೆಯಿಂದ ಮುಕ್ತವಾಗಿಡುವ ಅಭ್ಯಾಸವಾಗಿದೆ. ಈ ರೀತಿ ನಿಮ್ಮ ಹಲ್ಲುಗಳನ್ನು (Teeth) ಆರೋಗ್ಯಕರವಾಗಿ ಇಟ್ಟುಕೊಳ್ಳುವುದು ದೀರ್ಘಾವಧಿಯ (Longer Life) ಜೀವನಕ್ಕೆ ಸಂಬಂಧಿಸಿದೆ ಎಂದರೆ ನೀವು ನಂಬುತ್ತೀರಾ ?

ಹೌದು, ನಿರ್ದಿಷ್ಟ ಸಮಯದಲ್ಲಿ ನಿಮ್ಮ ಹಲ್ಲುಗಳನ್ನು ಹಲ್ಲುಜ್ಜುವುದು ಉತ್ತಮ ದೀರ್ಘಾಯುಷ್ಯಕ್ಕೆ ಸಂಬಂಧಿಸಿದೆ. ಬಾಯಿಯ ಆರೋಗ್ಯ ಮತ್ತು ನೀವು ಎಷ್ಟು ಕಾಲ ಬದುಕುತ್ತೀರಿ ಎಂಬುದರ ನಡುವಿನ  ಆಶ್ಚರ್ಯಕರ ಲಿಂಕ್ ಅನ್ನು ಸಂಶೋಧನೆಯೊಂದು ಬಹಿರಂಗಪಡಿಸಿದೆ.

ಜಪಾನಿಯರ ದೀರ್ಘ ಆಯಸ್ಸಿನ ಗುಟ್ಟೇನು ಗೊತ್ತಾ ?

ಬಾಯಿಯ ಸ್ವಚ್ಛತೆಗೂ ದೀರ್ಘಾಯುಷ್ಯದ ನಡುವಿನ ಸಂಬಂಧವೇನು ?
ಜರ್ನಲ್ ಆಫ್ ಏಜಿಂಗ್‌ನಲ್ಲಿ ಪ್ರಕಟವಾದ ಸಂಶೋಧನೆಯು ಉತ್ತಮ ಬಾಯಿಯ ಆರೋಗ್ಯವು ದೀರ್ಘಾಯುಷ್ಯಕ್ಕೆ ಕೊಡುಗೆ ನೀಡುತ್ತದೆ ಎಂದು ಕಂಡುಹಿಡಿದಿದೆ. ಅವರು 1992ರಿಂದ 2009 ರವರೆಗೆ 5,611 ವಯಸ್ಸಾದ ವಯಸ್ಕರಲ್ಲಿ ಹಲ್ಲಿನ ಆರೋಗ್ಯ ಸಮಸ್ಯೆಗಳು ಮತ್ತು ಇದಕ್ಕೆ ಕಾರಣವಾದ  ಸ್ಥಿತಿಯನ್ನು ಅಧ್ಯಯನ ಮಾಡಿದರು. ಪುರುಷರು ಮತ್ತು ಮಹಿಳೆಯರಲ್ಲಿ ಅಪಾಯದ ಅಂದಾಜುಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಲಾಗಿತು. ಸಂಪೂರ್ಣ ಅಧ್ಯಯನದ ಬಳಿಕ ತಂಡ ಲಿಂಗ, ಬಾಡಿ ಮಾಸ್ ಇಂಡೆಕ್ಸ್ (BMI),ಶಿಕ್ಷಣ, ಧೂಮಪಾನದ ಸ್ಥಿತಿ ಮತ್ತು ಭಾಗವಹಿಸುವವರ ದೀರ್ಘಕಾಲದ ಕಾಯಿಲೆಯನ್ನು ಗಣನೆಗೆ ತೆಗೆದುಕೊಂಡರು. 

ಸಂಶೋಧನೆಯಿಂದ ತಿಳಿದುಬಂದಿದ್ದೇನು ?
ರಾತ್ರಿ ಮಲಗುವ ಮುನ್ನ ಹಲ್ಲುಜ್ಜುವುದು ದೀರ್ಘಾಯುಷ್ಯಕ್ಕೆ ಸಂಬಂಧಿಸಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಇದಲ್ಲದೆ, ದೈನಂದಿನ ದಂತ ಸ್ವಚ್ಛತಾ ಉಪಕರಣ ಬಳಸುವುದು ಮತ್ತು ದಂತವೈದ್ಯರನ್ನು ಭೇಟಿ ಮಾಡುವಂತಹ ಆರೋಗ್ಯಕರ ಮೌಖಿಕ ನೈರ್ಮಲ್ಯ ಅಭ್ಯಾಸಗಳು ದೀರ್ಘಾಯುಷ್ಯದೊಂದಿಗೆ ಸಂಬಂಧಿಸಿವೆ. ಎರಡು ಅಥವಾ ಅದಕ್ಕಿಂತ ಹೆಚ್ಚು ಬಾರಿ ದಂತವೈದ್ಯರನ್ನು ಭೇಟಿ ಮಾಡುವುದಕ್ಕೆ ಹೋಲಿಸಿದರೆ ಕಳೆದ 1 ವರ್ಷದಲ್ಲಿ ದಂತವೈದ್ಯರನ್ನು ಭೇಟಿ ಮಾಡದಿರುವುದು ಮರಣದ ಅಪಾಯವನ್ನು 30-50 ಪ್ರತಿಶತದಷ್ಟು ಹೆಚ್ಚಿಸಿದೆ ಎಂದು ತಿಳಿದುಬಂದಿದೆ.

ರಾತ್ರಿ ಹಲ್ಲುಜ್ಜುವ ಅಭ್ಯಾಸದಿಂದ ಸಾವಿನ ಅಪಾಯ ಕಡಿಮೆ
ಮತ್ತೊಂದೆಡೆ, ಪ್ರತಿದಿನ ಹಲ್ಲುಜ್ಜುವುದಕ್ಕೆ ಹೋಲಿಸಿದರೆ ರಾತ್ರಿಯಲ್ಲಿ ಎಂದಿಗೂ ಹಲ್ಲುಜ್ಜುವುದು ಸಾವಿನ ಅಪಾಯವನ್ನು 20-35 ಪ್ರತಿಶತದಷ್ಟು ಹೆಚ್ಚಿಸುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಹಲ್ಲುಗಳ ಸಂಖ್ಯೆ ಹೆಚ್ಚಾಗುವುದರೊಂದಿಗೆ, ನಿಮ್ಮ ಮರಣ ಪ್ರಮಾಣವೂ ಹೆಚ್ಚಾಗುತ್ತದೆ. 20 ಪ್ಲಸ್ ಹಲ್ಲುಗಳನ್ನು ಹೊಂದಿರುವವರಿಗೆ ಹೋಲಿಸಿದರೆ ಹಲ್ಲಿಲ್ಲದ ಜನರು ಸಾವಿನ ಅಪಾಯವನ್ನು 30 ಪ್ರತಿಶತದಷ್ಟು ಹೊಂದಿರುತ್ತಾರೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

Health Tips : ಆಯಸ್ಸು ಹೆಚ್ಚಿಸಬೇಕಂದ್ರೆ ತಿನ್ನಿ ಈ ಆಹಾರ

ಕಮ್ಯುನಿಟಿ ಡೆಂಟಿಸ್ಟ್ರಿ ಮತ್ತು ಓರಲ್ ಎಪಿಡೆಮಿಯಾಲಜಿ ಜರ್ನಲ್‌ನಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನವು ಆರೋಗ್ಯಕರ ಹಲ್ಲುಗಳನ್ನು ಕಾಪಾಡಿಕೊಳ್ಳುವುದು ವಯಸ್ಸಾದ ವಯಸ್ಕರಲ್ಲಿ ಬದುಕುಳಿಯುವಿಕೆಯನ್ನು ಉತ್ತೇಜಿಸುತ್ತದೆ ಎಂದು ತೋರಿಸಿದೆ. 70 ವರ್ಷ ವಯಸ್ಸಿನಲ್ಲಿ 20 ಅಥವಾ ಅದಕ್ಕಿಂತ ಹೆಚ್ಚು ಹಲ್ಲುಗಳನ್ನು ಹೊಂದಿರುವ ಜನರು 20 ಕ್ಕಿಂತ ಕಡಿಮೆ ಹಲ್ಲುಗಳನ್ನು ಹೊಂದಿರುವ ಜನರಿಗಿಂತ ಹೆಚ್ಚು ಕಾಲ ಬದುಕುವ ಅವಕಾಶವನ್ನು ಹೊಂದಿರುತ್ತಾರೆ ಎಂದು ಅಧ್ಯಯನವು ಕಂಡುಹಿಡಿದಿದೆ. ದೀರ್ಘಾಯುಷ್ಯದ ಹೊರತಾಗಿ, ಹೃದ್ರೋಗ, ಹೃದಯಾಘಾತ, ಪಾರ್ಶ್ವವಾಯು, ಮಧುಮೇಹ, ಬುದ್ಧಿಮಾಂದ್ಯತೆ ಮತ್ತು ಗರ್ಭಾವಸ್ಥೆಯಲ್ಲಿನ ಸಮಸ್ಯೆಗಳಂತಹ ಹಲವಾರು ಸಾಮಾನ್ಯ ಆರೋಗ್ಯ ಸಮಸ್ಯೆಗಳಿಗೆ ಬಾಯಿಯ ಆರೋಗ್ಯ ಸೂಚಕಗಳು ಸಂಬಂಧಿಸಿವೆ.

ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ ?
ಆರೋಗ್ಯಕರ ಬಾಯಿಯನ್ನು ಕಾಪಾಡಿಕೊಳ್ಳಲು, ತಜ್ಞರು ಫ್ಲೋರೈಡ್ ಟೂತ್‌ಪೇಸ್ಟ್‌ನಿಂದ ದಿನಕ್ಕೆ ಎರಡು ಬಾರಿ ಹಲ್ಲುಜ್ಜಲು ಶಿಫಾರಸು ಮಾಡುತ್ತಾರೆ. ಸಕ್ಕರೆ ಆಹಾರಗಳು ಮತ್ತು ಪಾನೀಯಗಳನ್ನು ಸೇವಿಸುವುದನ್ನು ಕಡಿಮೆ ಮಾಡಬೇಕು ಮತ್ತು ಪ್ರತಿ ಊಟದ ನಂತರ ನಿಮ್ಮ ಬಾಯಿಯನ್ನು ತೊಳೆಯಬೇಕು. ದಂತವೈದ್ಯರನ್ನು ನಿಯಮಿತವಾಗಿ ಭೇಟಿ ಮಾಡುವುದು ನಿಮ್ಮ ಯಾವುದೇ ಕಾಯಿಲೆಯನ್ನು ಅಭಿವೃದ್ಧಿಪಡಿಸುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ.

ಬಾಯಿಯ ದುರ್ನಾತವನ್ನು ಸಹ ಹೋಗಲಾಡಿಸುತ್ತದೆ. ನಿಮ್ಮ ಹಲ್ಲುಗಳನ್ನು ಚೆನ್ನಾಗಿ ನೋಡಿಕೊಳ್ಳುವುದು ನಿಮ್ಮ ಬಾಯಿಯ ಆರೋಗ್ಯಕ್ಕೆ ಪ್ರಯೋಜನವನ್ನು ನೀಡುತ್ತದೆ. ಇದು ನಿಮ್ಮ ದೇಹದ ಮೇಲೆ ಧನಾತ್ಮಕವಾಗಿ ಪರಿಣಾಮ ಬೀರುತ್ತದೆ. ಹೀಗಾಗಿ ಇದರಿಂದ ಸಹಜವಾಗಿಯೇ ಆಯಸ್ಸು ಹೆಚ್ಚುತ್ತದೆ. 

Follow Us:
Download App:
  • android
  • ios