Asianet Suvarna News Asianet Suvarna News

ಹೃದಯ ವೈಫಲ್ಯಕ್ಕೆ ನಿದ್ರೆಯೂ ಒಂದು ಕಾರಣವಂತೆ!

ಹೊಟ್ಟೆಗೆ ಊಟ(Food), ಮೈಮುಚ್ಚೋಕ್ಕೆ ಬಟ್ಟೆ(Cloth), ಆರೋಗ್ಯವಾಗಿರುವುದಕ್ಕೆ ಚೆಂದದ ನಿದ್ರೆ(Sleep) ಇಷ್ಟಿದ್ದರೆ ಮನುಷ್ಯ ನೂರು ಕಾಲ ಬೇಕಾದರೂ ಬದುಕುತ್ತಾನೆ. ಹೌದು ನಿದ್ರೆ ಪ್ರತಿಯೊಬ್ಬರ ಜೀವನದಲ್ಲೂ(Life) ಬಹು ಮುಖ್ಯ ಪಾತ್ರವಹಿಸುತ್ತದೆ. ಚೆನ್ನಾಗಿ ನಿದ್ರೆ ಮಾಡಿದರೆ ಹೃದಯವೂ(Heart) ಆರೋಗ್ಯವಾಗಿರುತ್ತದೆ. ಕೆಲವರಿದ್ದಾರೆ ಎಷ್ಟೇ ಸುಸ್ತಾದಾಗಿದ್ದರೂ ನಿದ್ರೆ ಮಾತ್ರ ಬಾ ಎಂದರೂ ಬರುವುದಿಲ್ಲ. ಅದು ಬೇರೆಯೇ ಕಾಯಿಲೆ ಬಿಡಿ. ಆದರೆ ನಿದ್ರೆ ಸರಿಯಾಗದಿದ್ದರೆ ಹೃದಯ ಸಂಬAಧಿ ಕಾಯಿಲೆ(Heart Disease) ಹೆಚ್ಚೆಂದು ಇತ್ತೀಚಿನ ಅಧ್ಯಯನದಿಂದ ತಿಳಿದುಬಂದಿದೆ. 

Sleeping also Leads to Heart Problems
Author
Bangalore, First Published Jul 5, 2022, 6:38 PM IST

ಪ್ರತಿಯೊಬ್ಬ ವ್ಯಕ್ತಿಗೂ(Person) ನಿದ್ರೆ ಬಹಳ ಮುಖ್ಯ. ನಿದ್ರೆ ಸರಿಯಾಗಿ ಮಾಡಿದರೆ ಮನುಷ್ಯ ಇನ್ನಷ್ಟು ಆಯಕ್ಟಿವ್(Active) ಆಗಿರುತ್ತಾನೆ ಹಾಗೂ ಆರೋಗ್ಯವೂ(Health) ಚೆನ್ನಾಗಿರುತ್ತದೆ. ರಾತ್ರಿ ನಿದ್ರೆ(Night Sleep) ಎಲ್ಲರಿಗೂ ಒಳ್ಳೆಯದು. ಒಂದು ವೇಳೆ ನೀವು ರಾತ್ರಿ ನಿದ್ರೆ ಕಳೆದುಕೊಳ್ಳುತ್ತಿದ್ದೀರಿ ಎಂದಾದರೆ ನಿಮ್ಮ ಹೃದಯಕ್ಕೆ(Heart) ಅಪಾಯವಿದೆ ಎಂದರ್ಥ. ಹೌದು ರಾತ್ರಿ ನಿದ್ರೆ ಸರಿಯಾಗಿ ಆಗದಿದ್ದರೆ, ಈ ರೀತಿ ಪ್ರತಿ ಬಾರಿಯೂ ಆಗುತ್ತಿದ್ದರೆ ಹೃದಯಕ್ಕೆ ಅಪಾಯ ಹೆಚ್ಚು ಎಂದು ಅಧ್ಯಯನದಿಂದ ತಿಳಿದುಬಂದಿದೆ.

ಇತ್ತೀಚೆಗೆ ಅಮೇರಿಕನ್ ಹಾರ್ಟ್ ಅಸೋಸಿಯೇಷನ್(American Heart Association) ಉತ್ತಮ ನಿದ್ರೆಯಿಂದ ಹೃದಯರಕ್ತನಾಳದ(Cardiovascular) ಗುಣಮಟ್ಟದ ಬಗ್ಗೆ ಅಧ್ಯಯನ ನಡೆಸಿದೆ. ಇದು ಮನುಷ್ಯನ ದೈನಂದಿನ ಆಹಾರ ಕ್ರಮ, ದೈಹಿಕ ಚಟುವಟಿಕೆ(Physical Activities), ನಿಕೊಟಿನ್(Nicotine) ಮಾನ್ಯತೆ, ತೂಕ(Weight), ಕೊಬ್ಬು(Cholesterol), ರಕ್ತದಲ್ಲಿನ ಸಕ್ಕರೆ(Blood Sugar), ರಕ್ತದೊತ್ತಡ(Blood Pressure) ಎಲ್ಲವೂ ಒಳಗೊಂಡಿದೆ. 

ನಿದ್ರೆಯ ಅವಧಿಯ ಹೊಸ ಮೆಟ್ರಿಕ್ ಇತ್ತೀಚಿನ ಸಂಶೋಧನೆಗಳನ್ನು(Research) ಪ್ರತಿಬಿಂಬಿಸುತ್ತದೆ. ನಿದ್ರೆಯು ಮನುಷ್ಯನ ಸಂಪೂರ್ಣ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಯಾರು ನಿದ್ರೆ ಚೆನ್ನಾಗಿ ಮಾಡುತ್ತಾರೊ ಅವರಿಗೆ ತೂಕ(Weight), ರಕ್ತದೊತ್ತಡ(Bloood Pressure) ಅಥವಾ ಟೈಪ್ 2 ಡಯಾಬಿಟಿಸ್‌ನಿಂದ(Type 2 Diabetes) ಮುಕ್ತರಾಗಿರುತ್ತಾರೆ. 

ಇದನ್ನೂ ಓದಿ: ಮಧ್ಯಾಹ್ನ ನಿದ್ದೆ ಮಾಡಿದ್ರೆ ಸೋಮಾರಿಯಾಗಲ್ಲ, ಸೂಪರ್ ಆ್ಯಕ್ಟಿವ್ ಆಗ್ತಾರೆ

ಅತಿಯಾದ ಅಥವಾ ಕಡಿಮೆ ನಿದ್ರೆಯಿಂದ ಏನಾಗುತ್ತದೆ?
ಒಬ್ಬ ವ್ಯಕ್ತಿ ಸರಿಯಾಗಿ ನಿದ್ರೆ ಮಾಡುತ್ತಿಲ್ಲ ಎಂದರೆ ಅದಕ್ಕೆ ನಾನಾ ಕಾರಣಗಳಿರಬಹುದು. ಇದು ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಹೃದಯಾಘಾತವನ್ನು(Heart Attack) ಹೊಂದುವ ಅಥವಾ ಕಳಪೆ ಹೃದಯರಕ್ತನಾಳದ ಫಲಿತಾಂಶಗಳಿAದ ಬಳಲುತ್ತಿರುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ ಎಂದು ಸಂಶೋಧನೆಯಲ್ಲಿ ತಿಳಿಸಲಾಗಿದೆ.
ಸ್ಥೂಲಕಾಯತೆ ಅಥವಾ ಪ್ರತಿಬಂಧಕ ನಿದ್ರೆಯಲ್ಲಿ ಉಸಿರುಕಟ್ಟುವಿಕೆಯಿಂದ ಬಳಲುತ್ತಿರುವ ಜನರಲ್ಲಿ ಗಮನಿಸಿದಂತೆ ವ್ಯಕ್ತಿಯು ಅಗತ್ಯಕ್ಕಿಂತ ಹೆಚ್ಚು ನಿದ್ರಿಸಿದರೆ ದೀರ್ಘಕಾಲದ ತೊಂದರೆಗಳು ಹೊರಹೊಮ್ಮಬಹುದು ಎಂದು ಹೃದ್ರಗಶಾಸ್ತçಜ್ಞರು(Cardiologist) ಹೇಳುತ್ತಾರೆ. 

ನಿದ್ರೆ ಹೇಗೆ ಹೃದಯಕ್ಕೆ ತೊಂದರೆ ಮಾಡುತ್ತದೆ?
ಮನುಷ್ಯನಿಗೆ ನಿತ್ಯ 7-9 ಗಂಟೆಗಳ ಕಾಲ ಅಡೆತಡೆ ಇಲ್ಲದ(Undisturbed) ನಿದ್ರೆ ಬೇಕಾಗುತ್ತದೆ. ಬೆಳಗ್ಗಿನ ಜಾವದ ನಿದ್ರೆಯಲ್ಲಿ(Morning Sleep) ನಮ್ಮ ದೇಹ ಕ್ಯಾಟೆಕೊಲಮೈನ್(Catecholamines) ಅನ್ನು ಉತ್ಪತ್ತಿ ಮಾಡುತ್ತದೆ. ಇದು ಸಾಮಾನ್ಯವಾಗಿ ನಮ್ಮ ದೇಹದಲ್ಲು ಭಯ(Fear) ಅಥವಾ ಆತಂಕದ(Anxiety) ಸಮಯದಲ್ಲಿ ಉತ್ಪತ್ತಿಯಾಗುತ್ತದೆ. 
ನಿರಂತರವಾಗಿ ಜೀವನದ ಬಗ್ಗೆ ಆತಂಕ ಅಥವಾ ಚಿಂತಿತರಾಗಿರುವ ವ್ಯಕ್ತಿಯಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಟೆಕೊಲಮೈನ್‌ಗಳನ್ನು(Catecholamines) ಉತ್ಪಾದಿಸುತ್ತಾನೆ. ಅದು ರಕ್ತನಾಳ ಮತ್ತು ಲಿಪಿಡ್ ಪ್ರೊಫೈಲ್(Lipid Profile) ಅನ್ನು ಹಾನಿಗೊಳಿಸುತ್ತದೆ. ಈ ರೀತಿಯ ವ್ಯಕ್ತಿಗಳು ಹೃದಯ ವೈಫಲ್ಯಕ್ಕೆ ಒಳಗಾಗಬಹುದು ಅಥವಾ ಹೃದಯ ವೈಫಲ್ಯ ರೋಗಲಕ್ಷಣಗಳಿಂದ ಬಳಲಬಹುದು.
ಅತಿಯಾದ ಕ್ಯಾಟೆಕೊಲಮೈನ್‌ ಉತ್ಪಾದನೆಯಿಂದ ವ್ಯಕ್ತಿಯು ಬೆಳಗ್ಗೆ 4-8 ಗಂಟೆಯಲ್ಲಿ ಹೃದಯ ವೈಫಲ್ಯ ಅಥವಾ ಸ್ಟೊçÃಕ್‌ಗೆ(Stroke) ಒಳಗಾಗುವ ಸಾಧ್ಯತೆಗಳು ಹೆಚ್ಚು. ಹಾಗಾಗಿ ಯಾರು ನಿದ್ರೆಯ ತೊಂದರೆ ಅಥವಾ ಅತಿಯಾದ ನಿದ್ರೆ ಮಾಡುತ್ತಾರೊ ಅವರು ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಏಕೆಂದರೆ ಇದು ದೀರ್ಘ ಕಾಲದಲ್ಲಿ ಹೃದಯಕ್ಕೆ ತೊಂದರೆ ಉಂಟುಮಾಡಬಹುದು. 

ಇದನ್ನೂ ಓದಿ: ಮನುಷ್ಯ ನಿದ್ದೆಯೇ ಮಾಡದೆ ಎಷ್ಟು ದಿನ ಬದುಕಬಹುದು ಗೊತ್ತಾ?

ಎಷ್ಟು ಹೊತ್ತು ನಿದ್ರಿಸಬೇಕು
ಒಬ್ಬ ವ್ಯಕ್ತಿಗೆ ಅಡೆತಡೆ ಇಲ್ಲದೆ 7-8 ಗಂಟೆಗಳ ಕಾಲ ಸಂಪೂರ್ಣ ನಿದ್ರೆ ಅತ್ಯವಶ್ಯಕ. 5-6 ವರ್ಷದ ಮಗುವಿಗೆ(Child) 12 ರಿಂದ 14 ಗಂಟೆಗಳ ಕಾಲ ನಿದ್ರೆ ಬೇಕಾಗುತ್ತದೆ. ವಯಸ್ಕರಲ್ಲಿ(Adults) ಇದು ಸ್ವಲ್ಪ ಕಡಿಮೆಯಾಗುತ್ತದೆ. 35-40 ವಯಸ್ಸಿನವರಿಗೆ 7-8 ಗಂಟೆಗಳ ನಿದ್ರೆ ಬೇಕಾಗುತ್ತದೆ. ಹೀಗಿದ್ದಲ್ಲಿ ಮಾತ್ರ ವ್ಯಕ್ತಿಯು ಆರೋಗ್ಯ(Healthy) ಹಾಗೂ ಚಟುವಟಿಕೆಯಿಂದ ಇರುತ್ತಾನೆ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.

ಘಾಡ ನಿದ್ರೆಗೆ ಕೆಲ ಟಿಪ್ಸ್
1. ಇಂತಿಷ್ಟು ಸಮಯ ಎಂದು ಮೊದಲೇ ನಿಗದಿಪಡಿಸಿಕೊಳ್ಳಬೇಕು. ಒಂದು ಟೈಮ್ ಫಿಕ್ಸ್ ಮಾಡಿಕೊಂಡು ನಿದ್ರಿಸಬೇಕು. ರಾತ್ರಿ 10 ಗಂಟೆಗೆ ಮಲಗಲೇ ಬೇಕು ಹಾಗೂ ಬೆಳಗ್ಗೆ 6 ಗಂಟೆಗೆ ಏಳಬೇಕು ಎಂದು ಡಿಸೈಡ್(Decide) ಮಾಡಿ ಮಲಗಬೇಕು. ಅಂದರೆ 7-8 ಗಂಟೆ ನಿದ್ರೆ ಮಾಡಲೇಬೇಕೆಂದು ನಿರ್ಧರಿಸಬೇಕು. ಇದೇ ರೀತಿ ದಿನವೂ ಅನುಸರಿಸಬೇಕು. ಹೀಗೆ ಮಾಡಿದಲ್ಲಿ ದಿನದಲ್ಲಿನ ಕೆಲಸ(Daily Work) ಹಾಗೂ ಕಾರ್ಯ ಚಟುವಟಿಕೆಯಲ್ಲಿ ಆಯಕ್ಟಿವ್(Active) ಆಗಿ ಕೆಲಸ ಮಾಡಬಹುದು. ಒಂದು ವೇಳೆ ಮಲಗಿದ ಮೇಲೂ 20 ನಿಮಿಷಗಳ ಕಾಲ ನಿದ್ರೆ ಬಾರದಿದ್ದಲ್ಲಿ ವಾಕಿಂಗ್‌ಗೆ(Walking) ಹೋಗುವುದು ಅಥವಾ ಪುಸ್ತಕ ಓದುವುದು(Reading Books) ಅಥವಾ ಸಂಗೀತ ಕೇಳುವುದು(Listening Music) ಒಳ್ಳೆಯದು. ಹೀಗೆ ಮಾಡಿದ ನಂತರ ನಿದ್ರೆ ಖಂಡಿತವಾಗಿಯೂ ಬರುತ್ತದೆ. 
2. ಮಲಗುವ 1ರಿಂದ 2 ಗಂಟೆಗೂ ಮೊದಲೇ ರಾತ್ರಿ ಆಹಾರ(Dinner) ಸೇವಿಸಬೇಕು. ನಿಕೋಟಿನ್(Nicotine), ಕೆಫೀನ್(Caffeine) ಅಥವಾ ಆಲ್ಕೋಹಾಲ್(Alcohol) ಸೇವನೆಯ ಸಂದರ್ಭದಲ್ಲಿ, ವ್ಯಕ್ತಿಯು ನಿದ್ರೆಯ ತೊಂದರೆ ಎದುರಿಸುತ್ತಾನೆ. ಅಲ್ಲದೆ ರಾತ್ರಿ ಖಾಲಿ ಹೊಟ್ಟೆಯಲ್ಲಿ ಎಂದಿಗೂ ಮಲಗಬಾರದು. ಏಕೆಂದರೆ ಊಟ ಮಾಡದೇ ಮಲಗಿದಲ್ಲಿ ಸರಿಯಾದ ನಿದ್ರೆ ಬರುವುದಿಲ್ಲ.
3. ಮಲಗುವ ವಾತಾವರಣ(Environment) ಬಹಳ ಮುಖ್ಯ. ಅಲ್ಲಿ ಯಾವುದೇ ರೀತಿಯ ಲೈಟ್(Light), ಶಬ್ಧ(Sound), ಟಿವಿ(TV), ಕಂಪ್ಯೂಟರ್(Computer) ಆನ್‌ನಲ್ಲಿ ಇರಬಾರದು. ಒಳ್ಳೆಯ ನಿದ್ರೆ ಮಾಡಲು ಸಂಜೆ ಸಮಯದಲ್ಲಿ ಸ್ನಾನ ಮಾಡಿ ಯೋಗ(Yoga) ಮಾಡುವುದು ಅಥವಾ ಬ್ರೀಥಿಂಗ್ ಎಕ್ರ‍್ಸೆöÊಸ್(Breathing Exercise) ಮಾಡಬೇಕು. ಹೀಗೆ ಮಾಡಿದಲ್ಲಿ ಸುಖ ನಿದ್ರೆ ನಿಮ್ಮದಾಗಬಹುದು.
4. ಹಗಲಲ್ಲಿ ಮಲಗುವುದು(Day time Sleep) ಒಳ್ಳೆಯದಲ್ಲ. 30 ನಿಮಿಷಕ್ಕೂ ಹೆಚ್ಚು ಕಾಲ ಹಗಲಲ್ಲಿ ಮಲಗಿದರೆ ರಾತ್ರಿಯ ನಿದ್ರೆಯಲ್ಲಿ ತೊಂದರೆಯಾಗಬಹದು. ಹಾಗಾಗಿ ಸಂಜೆಯ ಸಮಯದಲ್ಲಿ ದೈಹಿಕ ಚಟುವಟಿಕೆಗಳನ್ನು(Physical Activities) ಮಾಡುವುದು ಒಳ್ಳೆಯದು. ಜಾಗಿಂಗ್(Jogging), ವಾಕಿಂಗ್(Walking), ಓಡುವುದು(Running) ಹೀಗೆ ಮಾಡಿದ್ದಲ್ಲಿ ರಾತ್ರಿ ನಿದ್ರೆ ಚೆನ್ನಾಗಿರುತ್ತದೆ.
5. ಮಲಗುವ ಮುನ್ನ ಯಾವುದೇ ರೀತಿಯ ದೀರ್ಘಾಲೋಚನೆ(Deep Thinking) ಮಾಡುವುದು ಒಳ್ಳೆಯದಲ್ಲ. ಅತಿಯಾದ ಯೋಚನೆಯೂ ನಿದ್ರೆ ಕೆಡಿಸುತ್ತದೆ ಅಥವಾ ಆಗಾಗ್ಗೆ ಎದ್ದೇಳುವಂತೆ ಮಾಡಬಹುದು.

Follow Us:
Download App:
  • android
  • ios