ಸಮಯಪ್ರಜ್ಞೆ ಮೆರೆದು ಗರ್ಭಿಣಿಗೆ ದಾರಿ ಮಧ್ಯೆ ಆ್ಯಂಬುಲೆನ್ಸ್ ನಲ್ಲಿಯೇ ಹೆರಿಗೆ ಮಾಡಿಸಿದ ಸಿಬ್ಬಂದಿಗಳು
ತೀವ್ರ ಹೆರಿಗೆ ನೋವಿನಿಂದ ಬಳಲುತಿದ್ದ ಗರ್ಭಿಣಿಗೆ ಆಸ್ಪತ್ರೆಗೆ ಹೋಗುವಾಗ ಮಾರ್ಗ ಮಧ್ಯೆ ಆ್ಯಂಬುಲೆನ್ಸ್ ನಲ್ಲಿಯೇ ಹೆರಿಗೆಯಾಗಿದೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕಕ್ಕೇರಾದಲ್ಲಿ ಘಟನೆ ನಡೆದಿದೆ.
ಯಾದಗಿರಿ (ಮೇ.26): ತೀವ್ರ ಹೆರಿಗೆ ನೋವಿನಿಂದ ಬಳಲುತಿದ್ದ ಗರ್ಭಿಣಿಗೆ ಆಸ್ಪತ್ರೆಗೆ ಹೋಗುವಾಗ ಮಾರ್ಗ ಮಧ್ಯೆ ಆ್ಯಂಬುಲೆನ್ಸ್ ನಲ್ಲಿಯೇ ಹೆರಿಗೆಯಾಗಿದೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕಕ್ಕೇರಾದಲ್ಲಿ ಘಟನೆ ನಡೆದಿದ್ದು, ಕಕ್ಕೇರಾದಿಂದ ರಾಯಚೂರಿನ ಲಿಂಗಸಗೂರು ಆಸ್ಪತ್ರೆಗೆ ಹೋಗುವಾಗ ಈ ಘಟನೆ ನಡೆದಿದೆ. ಮಹಿಳೆಗೆ ಮಾರ್ಗಮಧ್ಯೆ ತೀವ್ರವಾಗಿ ಹೆರಿಗೆ ನೋವು ಕಾಣಿಸಿಕೊಂಡಿದೆ ಹೀಗಾಗಿ ಎಚ್ಚೆತ್ತುಕೊಂಡ ಆ್ಯಂಬುಲೆನ್ಸ್ ಸಿಬ್ಬಂದಿ ಗರ್ಭಿಣಿಗೆ ಮಾರ್ಗ ಮಧ್ಯೆ ಸುರಕ್ಷಿತ ಹೆರಿಗೆ ಮಾಡಿಸಿದ್ದಾರೆ. ಹೆಣ್ಣು ಮಗುವಿಗೆ ಮಹಿಳೆ ಜನ್ಮ ನೀಡಿದ್ದು, ಮಗು ಮತ್ತು ಬಾಣಂತಿ ಸುರಕ್ಷಿತವಾಗಿದ್ದಾರೆ.
ಆ್ಯಂಬುಲೆನ್ಸ್ ನಲ್ಲಿಯೇ ಹೆಣ್ಣು ಮಗುವಿಗ ಜನ್ಮ ನೀಡಿದ ಮಹಿಳೆ ಸುರಪುರ ತಾಲೂಕಿನ ಶಾಂತಪುರ ಗ್ರಾಮದ ಮಲ್ಲಮ್ಮ. ಮಗುವಿನ ತೂಕ ಹೆಚ್ಚಾಗಿದ್ರಿಂದ ವೈದ್ಯರು ಲಿಂಗಸಗೂರು ಆಸ್ಪತ್ರೆಗೆ ರೆಫರ್ ಮಾಡಿದ್ದರು. ಹೀಗಾಗಿ ಮಲ್ಲಮ್ಮ ಅವರನ್ನು ಆಸ್ಪತ್ರೆಗೆ ಕರೆದೊಯ್ಯುಲಾಗುತ್ತಿತ್ತು. ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಹೆಣ್ಣು ಮಗು ಜನಿಸಿದೆ. ಆ್ಯಂಬುಲೆನ್ಸ್ ಸಿಬ್ಬಂದಿ ಮಹಾಂತೇಶ ಹಾಗೂ ಲಾಲಸಾಬ್ ಅವರು ಸುರಕ್ಷಿತ ಹೆರಿಗೆ ಮಾಡಿಸಿದ್ದು, ಹೆರಿಗೆ ನಂತರ ತಾಯಿ-ಮಗು ಆರೋಗ್ಯವಾಗಿದ್ದು, ಲಿಂಗಸಗೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಾಜಿ ಆರೋಗ್ಯ ಸಚಿವರಿಗೆ ತೀವ್ರ ಅನಾರೋಗ್ಯ: ಶೌಚಾಲಯದಲ್ಲಿ ಕುಸಿದು ಬಿದ್ದು ಆಸ್ಪತ್ರೆಗೆ ದಾಖಲು
ಇತ್ತೀಚೆಗೆ ಕೋಲಾರದಲ್ಲೂ ಆ್ಯಂಬುಲೆನ್ಸ್ ನಲ್ಲೇ ಅವಳಿ ಮಕ್ಕಳಿ ಮಕ್ಕಳ ಜನನವಾಗಿತ್ತು. ಮಾಲೂರು ತಾಲೂಕಿನ ಕನವನಹಳ್ಳಿಯ ಸುಜಾತ ಎಂಬವರಿಗೆ ಮೇ.15ರಂದು ಬೆಳಗ್ಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ನಂತರ ಆಕೆಯ ಪತಿ 108 ಆಂಬುಲೆನ್ಸ್‌ಗೆ ಕರೆ ಮಾಡಿ ಕೋಲಾರ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿಯ ವೈದ್ಯರು, ಕೂಡಲೇ ಜಾಲಪ್ಪ ಆಸ್ಪತ್ರೆಗೆ ಹೋಗಲು ಸೂಚಿಸಿದ್ದರು.
ಬೆಳಗಾವಿ: ಗರ್ಭಕೋಶದಲ್ಲಿ 2.5 ಕೆಜಿ ಗಡ್ಡೆ ಪತ್ತೆ; ಶಸ್ತ್ರ ಚಿಕಿತ್ಸೆ ಯಶಸ್ವಿ
ಸುಜಾತರಿಗೆ ಹೆರಿಗೆ ನೊವು ಜಾಸ್ತಿಯಾದಾಗ ತಾಲೂಕಿನ ವಕ್ಕಲೇರಿ ಸಮೀಪ ಆ್ಯಂಬುಲೆನ್ಸ್ ಶುಶ್ರೂಷಾ ಸಿಬ್ಬಂದಿ ಹರೀಶ್ ಮತ್ತು ಚಾಲಕರಾದ ಕರಿಯಪ್ಪ ಸುರಕ್ಷಿತವಾಗಿ ಆ್ಯಂಬುಲೆನ್ಸ್‌ನಲ್ಲಿಯೇ ಹೆರಿಗೆ ಮಾಡಿಸುವ ಮೂಲಕ ಸಮಯ ಪ್ರಜ್ಞೆ ಮೆರೆದಿದ್ದರು. ಇವರಿಬ್ಬರ ಕರ್ತವ್ಯ ಪ್ರಜ್ಞೆಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿತ್ತು. ಸುಜಾತ ಇಬ್ಬರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ನಂತರ ಬಾಣಂತಿಯನ್ನು ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿತ್ತು.