Asianet Suvarna News Asianet Suvarna News

ವರ್ಕ್‌ಔಟ್ ಮಾಡಿಯಾದ ಮೇಲೆ ಅಪ್ಪಿತಪ್ಪಿಯೂ ಇಂಥಾ ತಪ್ಪು ಮಾಡ್ಲೇಬೇಡಿ

ದೇಹ (Body)ವನ್ನು ಹುರಿಗೊಳಿಸಿಕೊಳ್ಳಲು ಜಿಮ್ (Gym)ಗೆ ಹೋಗುವುದು, ಬೆವರು ಹರಿಸಿ ವರ್ಕೌಟ್ (Workout) ಮಾಡುವುದೆಂದರೆ ಯುವಕರಿಗೆ ಅದೇನೋ ಕ್ರೇಜ್. ಆದ್ರೆ ವರ್ಕ್‌ಔಟ್‌ ಮಾಡೋದು, ಸಿಕ್ಸ್ ಪ್ಯಾಕ್ ತರಿಸಿಕೊಳ್ಳೋದೇನೋ ಸರಿ, ಆದ್ರೆ ವರ್ಕೌಟ್‌ ಮಾಡಿಯಾದ ಮೇಲೆ ಇಂಥಾ ತಪ್ಪು (Mistake)ಮಾಡ್ಲೇಬೇಡಿ

Post Workout Mistakes That Can Seriously Hit Your Fitness Vin
Author
Bengaluru, First Published Jun 12, 2022, 1:38 PM IST

ಇತ್ತೀಚೆಗಂತೂ ದೇಹ (Body) ಬೆಳೆಸಿಕೊಳ್ಳಲು ಜಿಮ್ (Gym)ಗೆ ಹೋಗಿ ಕಸರತ್ತು ಮಾಡುವ ಯುವಕರ ಸಂಖ್ಯೆ ಹೆಚ್ಚಾಗಿದೆ. ಬೆಳಗಾದರೆ, ಜಿಮ್ ಗಳು ಭರ್ತಿಯಾಗಿರುತ್ತದೆ. ಬೆಳಗಿನ ಸ್ಲಾಟ್ ಸಿಗುವುದಿಲ್ಲ. ಅಷ್ಟರಮಟ್ಟಿಗೆ ಎಲ್ಲ ಜಿಮ್ ಗಳೂ ಭರ್ತಿ. ಹೆಚ್ಚಿನ ವರ್ಕೌಟ್ (Workout) ಮಾಡುವುದಕ್ಕೆ ದೇಹಕ್ಕೆ ಶಕ್ತಿ ಬೇಕು ತಾನೇ? ಅದಕ್ಕಾಗಿ, ದಿನಕ್ಕಿಷ್ಟು ಎಂದು ಲೆಕ್ಕವಿಟ್ಟು ಮೊಟ್ಟೆ ಸೇವನೆ ಮಾಡುವುದು, ಮಾಂಸಖಂಡಗಳನ್ನು ಬಲಪಡಿಸಲು ಸ್ಟಿರಾಯ್ಡ್ ಸೇವಿಸುವುದು, ಜಿಮ್ ಗಳಲ್ಲಿ ನೀಡುವ ಶಕ್ತಿವರ್ಧಕ ಜ್ಯೂಸ್ ಕುಡಿಯುವುದು ಇವೆಲ್ಲ ಸಾಮಾನ್ಯ. ಇವು ನಿಧಾನವಾಗಿ ದೇಹಕ್ಕೆ ತೊಂದರೆ ಒಡ್ಡುತ್ತವೆ ಎನ್ನುವುದು ಇತ್ತೀಚಿನ ಅಧ್ಯಯನಗಳಲ್ಲಿ ತಿಳಿದುಬಂದಿದೆ. ಹಾಗೆಯೇ ವರ್ಕ್‌ಔಟ್ ಮಾಡಿದ ಬಳಿಕ ಕೆಲವೊಂದು ವಿಷ್ಯಗಳನ್ನು ಮಾಡಿದ್ರೆ, ಕೆಲವೊಂದು ವಿಷ್ಯಗಳನ್ನು ಮಾಡದಿದ್ರೆ ಆರೋಗ್ಯಕ್ಕೆ ಅಪಾಯ. ಅದೇನು ತಿಳ್ಕೊಳ್ಳೋಣ.

ವರ್ಕೌಟ್‌ ಮಾಡಿದ ನಂತರ ಎಲ್ಲರೂ ಮಾಡುವ ಸಾಮಾನ್ಯ ತಪ್ಪುಗಳು

1. ಶವರ್ ಸ್ಕಿಪ್ ಮಾಡಬೇಡಿ (Skipping shower): ವರ್ಕ್‌ಔಟ್‌ ಅನ್ನೋದು ಒಂದು ದೈಹಿಕವಾಗಿ ಶ್ರಮದಾಯಕವಾಗಿರುವ ಕೆಲಸವಾಗಿದೆ. ಹೀಗಾಗಿ ವರ್ಕೌಟ್ ಮಾಡುವಾಗ ದೇಹ ದಣಿದು ಬೆವರು ಬರುವುದು ಸಹಜ. ಹೀಗಾಗಿ ವರ್ಕ್‌ ಔಟ್‌ಮ ಮಾಡುವ ಸಂದರ್ಭದಲ್ಲಿ ಬೆವರನ್ನು ಆಗಾಗ ಒರೆಸಬೇಕು. ವರ್ಕ್‌ಔಟ್ ಮಾಡಿದ ನಂತರ ಸ್ನಾನ ಮಾಡೋದು ಅತ್ಯವಶ್ಯಕ. ಇಲ್ಲದೇ ಇದ್ದಲ್ಲಿ ಅತಿಯಾದ ಬೆವರಿನಿಂದ ಚರ್ಮದ ಮೇಲೆ ಬ್ಯಾಕ್ಟಿರೀಯಾಗಳು, ಸೋಂಕುಗಳು, ದದ್ದುಗಳು ಮೊದಲಾದ ಚರ್ಮ ಸಂಬಂಧಿತ ಸಮಸ್ಯೆಗಳನ್ನು ಉಂಟುಮಾಡಬಹುದು. ಪ್ರತಿ ತಾಲೀಮು ಅವಧಿಯ ನಂತರ ದೇಹವನ್ನು ಸರಿಯಾಗಿ ಸ್ವಚ್ಛಗೊಳಿಸುವುದು ತುಂಬಾ ಮುಖ್ಯವಾಗಿದೆ.

Over Exercising Effect: ಜಿಮ್ ವರ್ಕೌಟ್ ಅತಿ ಬೇಡ, ಪುರುಷತ್ವವೇ ಹೋಗ್ಬೋದು!

2. ವರ್ಕೌಟ್‌ ನಂತರ ತಿನ್ನದೇ ಇರಬೇಡಿ (Learn to eat after workout:): ತುಂಬಾ ಹೊತ್ತು ವರ್ಕೌಟ್‌ ಮಾಡುವುದರಿಂದ ಕ್ಯಾಲೊರಿಗಳನ್ನು ಬರ್ನ್ ಮಾಡಬಹುದು. ಚೆನ್ನಾಗಿ ವರ್ಕ್‌ಔಟ್ ಮಾಡಿ ಆಯ್ತಲ್ಲ, ಇನ್ನೇನು ಏನ್ ಬೇಕಾದ್ರೂ ತಿನ್ಬೋದು ಅನ್ನೋ ಮನೋಭಾವನೆಯಿಂದ ಹೊರಬನ್ನಿ. ಬದಲಿಗೆ ಆರೋಗ್ಯಕರ ಆಹಾರವನ್ನು ಮಾತ್ರ ಸೇವಿಸಿ. ವ್ಯಾಯಾಮ ಮಾಡಿದ ನಂತರ ಹೆಚ್ಚು ಹೊತ್ತು ಖಾಲಿ ಹೊಟ್ಟೆಯಲ್ಲಿ ಇರಬೇಡಿ. ಅದು ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ನಿಮ್ಮ ದೇಹವು ವ್ಯಾಯಾಮದ ನಂತರ ಶಕ್ತಿ, ದ್ರವಗಳು ಮತ್ತು ಕೊಬ್ಬನ್ನು ಕಳೆದುಕೊಂಡ ನಂತರ ಇಂಧನ ತುಂಬುವ ಅಗತ್ಯವಿದೆ. ಹೀಗಾಗಿ ನೀವು ವರ್ಕೌಟ್‌ ಪೂರ್ಣಗೊಳಿಸಿದಾಗ ಸೇವಿಸಲು ಸೂಕ್ತವಾದ ವ್ಯಾಯಾಮದ ನಂತರದ ತಿಂಡಿ ಅಥವಾ ದ್ರವಗಳ ಕಿಟ್ ಅನ್ನು ನಿಮ್ಮ ಬಳಿ ಇರಿಸಿಕೊಳ್ಳಿ.

3.ಹೆಚ್ಚು ನೀರು ಕುಡಿಯಿರಿ (Drink More Water): ಕಠಿಣವಾದ ವ್ಯಾಯಾಮದ ನಂತರ ದೇಹ ದಣಿದಿರುತ್ತದೆ. ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಿರಿ. ಇದು ದೇಹವನ್ನು ಚೈತನ್ಯ ಪೂರ್ಣವಾಗಿರಿಸುತ್ತದೆ. ಮತ್ತು ವ್ಯಾಯಾಮ ಮಾಡಿದ ಕೂಡಲೇ ದೇಹ ಬಳಲುವುದನ್ನು ತಪ್ಪಿಸುತ್ತದೆ. ಹಣ್ಣಿನ ರಸ, ಸ್ಮೂಥಿಯ ಸೇವನೆಯಾದರೂ ಸಹ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

Fat-To-Fit Transformation: ಎಲ್ಲ ಹುಬ್ಬೇರಿಸುವಂತೆ ತೂಕ ಇಳಿಸಿದ ಬಿ ಟೌನ್ ಬೆಡಗಿಯರು, ಗುಟ್ಟೇನು ಗೊತ್ತಾ?

4. ಪ್ರೋಟೀನ್ ಪೌಡರ್ ಹೆಚ್ಚು ಸೇವಿಸದಿರಿ( Protein deficient diet intake:): ನಿಮ್ಮ ದೇಹದ ತೂಕ ಅಥವಾ ದಷ್ಟಪುಷ್ಟವಾಗಿ ಕಾಣಿಸಲು ಸ್ನಾಯುಗಳನ್ನು ನಿರ್ಮಿಸಲು ಮತ್ತು ಚೇತರಿಸಿಕೊಳ್ಳಲು ಪ್ರೋಟೀನ್ ತೆಗೆದುಕೊಳ್ಳುತ್ತದೆ. ಹಾಗೆಂದು ಹೆಚ್ಚು ಪ್ರೋಟೀನ್ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಸಿಕ್ಸ್‌ ಪ್ಯಾಕ್‌ ಬಾಡಿ ಬೇಕು ಎಂಬ ಕನಸಿಟ್ಟುಕೊಂಡವರು ಅತಿಯಾಗಿ ಪ್ರೋಟೀನ್ ಪೌಡರ್ ಸೇವಿಸುತ್ತಿರುತ್ತಾರೆ. ಇದು ಆರೋಗ್ಯದ ಮೇಲೆ ಅಡ್ಡ ಪರಿಣಾಮವನ್ನು ಬೀರಬಹುದು. ಹೀಗಾಗಿ ಪ್ರೋಟೀನ್ ಪೌಡರ್ ಮಿತ ಪ್ರಮಾಣದಲ್ಲಿ ಸೇವಿಸೋದನ್ನು ಅಭ್ಯಾಸ ಮಾಡಿಕೊಳ್ಳಿ

Follow Us:
Download App:
  • android
  • ios