Asianet Suvarna News Asianet Suvarna News

Fat-To-Fit Transformation: ಎಲ್ಲ ಹುಬ್ಬೇರಿಸುವಂತೆ ತೂಕ ಇಳಿಸಿದ ಬಿ ಟೌನ್ ಬೆಡಗಿಯರು, ಗುಟ್ಟೇನು ಗೊತ್ತಾ?

ಬಾಲಿವುಡ್‌ನ ಬಹುತೇಕ ನಟಿಯರ ಹಳೆ ಫೋಟೋಗಳನ್ನು ನೋಡಿದರೆ, ಅವರನ್ನು ಗುರುತಿಸುವುದೇ ಕಷ್ಟ ಎನಿಸುತ್ತದೆ. ಅಷ್ಟು ಡುಮ್ಮಕ್ಕ, ಡುಮ್ಮಣ್ಣಗಳಾಗಿದ್ದವರು, ಕೆಲವೇ ಸಮಯದಲ್ಲಿ ತೂಕ ಇಳಿಸಿಕೊಂಡು ಸಿನಿಮಾ ತೆರೆ ಮೇಲೆ ತಮ್ಮ ತೆಳ್ಳಗಿನ ದೇಹವನ್ನು ಪ್ರದರ್ಶಿಸುತ್ತಿರುತ್ತಾರೆ. ಅಷ್ಟೊಂದು ಬೇಗ ಅವರೆಲ್ಲ ತೂಕ ಇಳಿಸುವುದಾದರೂ ಹೇಗೆ? ಏನಿದರ ಗುಟ್ಟು? ಇವರು ಹೊಟ್ಟೆಗೇನ್ ತಿಂತಾರೆ?

How Bollywood Actresses Lose Weight Fast skr
Author
Bangalore, First Published Nov 29, 2021, 12:25 PM IST
  • Facebook
  • Twitter
  • Whatsapp

ಬಾಲಿವುಡ್(Bollywood) ನಟಿ ಎಂದರೆ ಯಾವಾಗಲೂ ಫಿಟ್ ಆ್ಯಂಟ್ ಫೈನ್ ಆಗಿ ಕಾಣಿಸಬೇಕು. ಹೋದಲ್ಲೆಲ್ಲ ಹಿಂದೆ ಬೀಳುವ ಪಾಪಾರಜಿಗಳು ಹೊಗಳುವಂತಿರಲು ಸಾಕಷ್ಟು ಶ್ರಮ ಹಾಕಬೇಕು. ದೇಹದ ತೂಕ ಸ್ವಲ್ಪ ಏರಿದರೂ ಅದೇ ದೊಡ್ಡ ಸುದ್ದಿಯಾಗುತ್ತದೆ. ಅವಕಾಶಗಳು ಕಡಿಮೆಯಾಗುತ್ತವೆ. ಸಾರಾ ಅಲಿ ಖಾನ್, ಆಲಿಯಾ ಭಟ್, ಸೊನಾಕ್ಷಿ ಸಿನ್ಹಾ, ಭೂಮಿ ಪೆಡ್ನೇಕರ್, ಸೋನಂ ಕಪೂರ್, ಪರಿಣೀತಿ ಛೋಪ್ರಾ ಸೇರಿದಂತೆ ಬಹಳಷ್ಟು ಬಾಲಿವುಡ್ ನಟಿಯರು ಒಂದೊಮ್ಮೆ ಡುಮ್ಮಿ ಎಂದು ನಗೆಪಾಟಲಿಗೀಡಾದವರೇ. ಆ ಅವಮಾನಗಳನ್ನೆಲ್ಲ ಮೀರಲು ಹಟಕ್ಕೆ ಬಿದ್ದು ಫ್ಯಾಟ್ ಟು ಫಿಟ್ ಜರ್ನಿಯಲ್ಲಿ ಗೆದ್ದು- ಸೈ ಎನಿಸಿಕೊಂಡವರು. ಆಡಿಕೊಂಡವರು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದವರು. ಈ ನಟಿಯರೇನೋ ಪರ್ಸ್‌ನಲ್ ಟ್ರೇನರ್, ನ್ಯೂಟ್ರಿಶನಿಸ್ಟ್ ಹೊಂದಬಲ್ಲರು. ಆದರೆ, ಎಲ್ಲರಿಂದಲೂ ಅದು ಸಾಧ್ಯವಿಲ್ಲವಲ್ಲ.. ಹಾಗಾಗಿ, ಗೆದ್ದವರ ಕತೆ, ನಡೆದ ದಾರಿಗಳನ್ನೇ ಸಾಮಾನ್ಯರು ಸ್ಪೂರ್ತಿಯಾಗಿ ತೆಗೆದುಕೊಂಡರೆ ಬಹಳಷ್ಟನ್ನು ಬದಲಾಯಿಸಬಹುದು. ಈ ನಟಿಯರ ಡಯಟ್(diet) ಹಾಗೂ ವರ್ಕೌಟ್ ಪ್ಲ್ಯಾನ್(workout plan) ಏನು, ಕಳೆದುಕೊಂಡದ್ದೆಷ್ಟು ತೂಕ ಎಲ್ಲವೂ ಇಲ್ಲಿದೆ ನೋಡಿ. 

ಆಲಿಯಾ ಭಟ್(Alia Bhatt)
ಕ್ಯೂಟೆಸ್ಟ್ ನಟಿ ಎನಿಸಿಕೊಂಡಿರುವ ಆಲಿಯಾ ಭಟ್ ತಮ್ಮ ಮೊದಲ ಮೂವಿ 'ಸ್ಟೂಡೆಂಟ್ ಆಫ್ ದಿ ಇಯರ್' ಸೆಟ್ಟೇರುವ ಮುನ್ನ ಚಬ್ಬಿ ಚಬ್ಬಿಯಾಗಿದ್ದರು. ಅವರನ್ನು ನೋಡಿದ ಕರಣ್ ಜೋಹರ್ 20 ಕೆಜಿ ತೂಕ ಇಳಿಸಿಕೊಂಡು ಬಂದರೆ ಮಾತ್ರ ಹೀರೋಯಿನ್ನಾಗಿ ಹಾಕಿಕೊಳ್ಳುತ್ತೇನೆ ಎಂದಿದ್ದರಂತೆ. ಕರಣ್ ಮಾತನ್ನು ಗಂಭೀರವಾಗಿ ಪರಿಗಣಿಸಿದ ಆಲಿಯಾ 20 ಕೆಜಿ ತೂಕ ಇಳಿಸಿದ್ದಷ್ಟೇ ಅಲ್ಲ, ವೋಟಿಂಗ್‌ನಲ್ಲಿ ಗೆದ್ದು  'ಸೆಕ್ಸಿಯೆಸ್ಟ್ ಏಷ್ಯನ್ ವುಮನ್' ಎನಿಸಿಕೊಂಡಿದ್ದಾರೆ. 
ಬೆಳಗ್ಗೆ: ಹರ್ಬಲ್ ಟೀ ಅಥವಾ ಶುಗರ್ಲೆಸ್ ಕಾಫಿ, ಎಗ್ ಸ್ಯಾಂಡ್‌ವಿಚ್, ಅವಲಕ್ಕಿ
ಸಂಜೆ: ಪೀನಟ್ಸ್, ಮಕಾನಾ
ರಾತ್ರಿ: ದಾಲ್ ರೈಸ್, ಕರ್ಡ್ ರೈಸ್
ವರ್ಕೌಟ್ ಮೀಲ್: ಎಳನೀರು, ಲೆಮನೇಡ್

How Bollywood Actresses Lose Weight Fast skr

First Night Anxiety : ಮಧುರ ಸಮಯವನ್ನು ನಿಭಾಯಿಸಲು ಇಲ್ಲಿವೆ ಟಿಪ್ಸ್

ಸಾರಾ ಅಲಿ ಖಾನ್(Sara Ali Khan)
ಸಾರಾಳ ಟ್ರಾನ್ಸ್‌ಫಾರ್ಮೇಶನ್ನಂತೂ ನಂಬಲು ಕಷ್ಟವೇ ಎನ್ನುವಷ್ಟಿದೆ. ಹಾರ್ಮೋನ್ ಸಮಸ್ಯೆ(harmone problem) ಹಾಗೂ ಕೆಟ್ಟ ಜೀವನಶೈಲಿ(lifestyle)ಯ ಕಾರಣದಿಂದಾಗಿ ಸಾರಾ ತನ್ನ ಟೀನೇಜ್ ದಿನಗಳಲ್ಲಿ ಹತ್ತಿರತ್ತಿರ 100 ಕೆಜಿ ಇದ್ದಳು. ಆದರೆ, ತೂಕ ಇಳಿಸಿಕೊಳ್ಳಲು ನಿರ್ಧರಿಸಿದ ಮೇಲೆ ತನ್ನ ಮನೋಬಲದಿಂದಾಗಿ ಅತಿ ಕಡಿಮೆ ಸಮಯದಲ್ಲಿ 40 ಕೆಜಿಯಷ್ಟು ತೂಕ ಕಳೆದುಕೊಂಡು ಬಳುಕುವ ಬಳ್ಳಿಯಾದಳು. ಇವಳ ತೂಕ ಇಳಿಕೆಯ ವೇಗ ನೋಡಿದವರೆಲ್ಲ ಬೇರಿಯಾಟ್ರಿಕ್ ಸರ್ಜರಿ ಮಾಡಿಸಿಕೊಂಡಿರಬಹುದು ಎಂದು ಅನುಮಾನಿಸುತ್ತಾರೆ. ಆದರೆ, ಅವೆಲ್ಲವನ್ನೂ ಅಲ್ಲಗೆಳೆಯುವ ಸಾರಾ ತನ್ನ ಫಿಟ್ನೆಸ್ ಗುಟ್ಟು ಡಯಟ್ ಹಾಗೂ ವರ್ಕೌಟ್ ಎಂದು ಹೇಳುತ್ತಾಳೆ. 
ಸಾರಾಳ ಡಯಟ್ ಹೀಗಿದೆ...
ತಿಂಡಿಗೆ: ಇಡ್ಲಿ, ಎಗ್ ವೈಟ್, ಬ್ರೆಡ್ ಟೋಸ್ಟ್
ಊಟ: ಚಪಾತಿ, ದಾಲ್, ರೈಸ್, ತರಕಾರಿಗಳು ಹಾಗೂ ಸಲಾಡ್
ಸಂಜೆ: ಉಪ್ಪಿಟ್ಟು
ವರ್ಕೌಟ್ ಮೀಲ್: ಹಣ್ಣುಗಳು, ಓಟ್ಸ್, ಪ್ರೋಟೀನ್ ಶೇಕ್
ರಾತ್ರಿ: ಆದಷ್ಟು ಕಡಿಮೆ ಕ್ಯಾಲೋರಿಯ ಊಟ
ಈ ಡಯಟ್‌ನೊಂದಿಗೆ ಸಾರಾ ಬಹಳ ಸ್ಟ್ರಿಕ್ಟ್ ಆಗಿ ವಾರದ ಆರು ದಿನಗಳ ವರ್ಕೌಟ್ ಮಾಡುತ್ತಾಳೆ. 

How Bollywood Actresses Lose Weight Fast skr

Winter Effect : ಚಳಿಗಾಲದಲ್ಲಿ ಈ ಆಹಾರ ತಿನ್ನದಿದ್ದರೆ ಒಳಿತು!!

ಭೂಮಿ ಪೆಡ್ನೇಕರ್ (Bhumi Pednekar)
ಭೂಮಿ ಪೆಡ್ನೇಕರ್ ತನ್ನ ಮೊದಲ ಚಿತ್ರ 'ಧಮ್ ಲಗಾ ಕೆ ಐಸಾ'ದಲ್ಲಿ ಇದ್ದದ್ದು 89 ಕೆಜಿ. ಅದರಲ್ಲಿನ ಪಾತ್ರವೂ ತೂಕದ ವಧುವನ್ನೇ ಕೇಳುತ್ತಿದ್ದುದರಿಂದ ಭೂಮಿಗೆ ಈ ಪಾತ್ರ ಸಿಕ್ಕಿತ್ತು. ಆದರೆ, ಆರು ತಿಂಗಳ ಬಳಿಕ ಈ ಚಿತ್ರದ ಪಾತ್ರಕ್ಕಾಗಿ ಫಿಲ್ಮ್‌ಫೇರ್ ಅವಾರ್ಡ್ ಪಡೆಯುವಾಗ ವೇದಿಕೆ ಹತ್ತಿದ ಭೂಮಿಯನ್ನು ನೋಡಿದವರೆಲ್ಲ ದಂಗಾಗಿ ಹೋಗಿದ್ದರು. ಆರೇ ತಿಂಗಳಲ್ಲಿ 32 ಕೆಜಿ ತೂಕವನ್ನು ಭೂಮಿ ಕಳೆದುಕೊಂಡಿದ್ದಳು. 
ತಿಂಡಿ: ಸ್ಕಿಮ್ಡ್ ಮಿಲ್ಕ್, ಸೂರ್ಯಕಾಂತಿ ಬೀಜಗಳು, ಬ್ರೆಡ್, ಎಗ್ ವೈಟ್ ಆಮ್ಲೆಟ್, ಹಣ್ಣುಗಳು
ಊಟ: ಮಲ್ಟಿಗ್ರೇನ್ ರೋಟಿ, ಬೆಣ್ಣೆ, ದಾಲ್ ತಡ್ಕಾ, ತರಕಾರಿ, ಮೊಸರು, ಮಜ್ಜಿಗೆ
ಸಂಜೆ: ಫ್ರೂಟ್ಸ್, ವಾಲ್‌ನಟ್ಸ್, ಗ್ರೀನ್ ಟೀ
ವರ್ಕೌಟ್ ಮೀಲ್: ಬಾಯ್ಲ್ಡ್ ಎಗ್
ಇವೆಲ್ಲದರೊಂದಿಗೆ ಇಂಟೆನ್ಸ್ ವರ್ಕೌಟ್ ಮಾಡುತ್ತಾಳೆ ಭೂಮಿ. 

How Bollywood Actresses Lose Weight Fast skr

ಸೋನಂ ಕಪೂರ್(Sonam Kapoor)
ಮೂವಿಗಳಲ್ಲಿ ಸೋನಂ ಕಪೂರ್‌ಳನ್ನು ನೋಡಿದವರಿಗೆ ಅವಳೊಂದು ಕಾಲದಲ್ಲಿ 90 ಕೆಜಿ ಮೀರಿದ್ದಳು ಎಂದು ಊಹಿಸುವುದೂ ಕಷ್ಟ. 2007ರಲ್ಲಿ ಸಂಜಯ್ ಲೀಲಾ ಬನ್ಸಾಲಿ ಸೋನಂಗೆ ತೂಕ ಇಳಿಸಿಕೊಂಡು ಬರಲು ಹೇಳಿದರಂತೆ. ನಂತರ ಡಾಕ್ಟರ್ ಹಾಗೂ ತಾಯಿಯ ಸಹಾಯದಿಂದ ಸೋನಂ ಇಳಿಸಿದ್ದು ಬರೋಬ್ಬರಿ 32 ಕೆಜಿಗಳು. ಅಂದಿನಿಂದ ಇಂದಿನವರೆಗೂ ತನ್ನ ಫಿಟ್ನೆಸ್ ಕಾಯ್ದುಕೊಂಡಿದ್ದಾಳೆ ಸೋನಂ. 

How Bollywood Actresses Lose Weight Fast skr

ಪರಿಣೀತಿ ಛೋಪ್ರಾ (Parineeti Chopra)
ಕಾಲೇಜಿನ ದಿನಗಳಲ್ಲಿ ಪರಿಣೀತಿ ಛೋಪ್ರಾ ಕೂಡಾ ತನ್ನ ದಪ್ಪಗಿನ ದೇಹ ಹಾಗೂ ಮುಖಕ್ಕಾಗಿ ಹಲವಾರು ಅಡ್ಡ ಹೆಸರುಗಳನ್ನು ಹೊಂದಿದ್ದಳು. ದೇಹದ ಬಗ್ಗೆ ಆ ಅಡ್ಡ ಹೆಸರುಗಳು, ಅವಮಾನಗಳೇ ಅವಳನ್ನು ತೂಕ ಇಳಿಸಲು ಪ್ರೇರೇಪಿಸಿತಂತೆ. ಒಮ್ಮೆ ತೂಕ ಇಳಿಸಿಜ ಮೇಲೆ ಪರಿಣೀತಿ ಸುಂದರಿ ಎನಿಸಿಕೊಂಡಿದ್ದಷ್ಟೇ ಅಲ್ಲ, ಬಾಲಿವುಡ್‌ನಲ್ಲೂ ಅವಕಾಶಗಳನ್ನು ಗಿಟ್ಟಿಸಿದಳು. 
How Bollywood Actresses Lose Weight Fast skr

ಸೊನಾಕ್ಷಿ ಸಿನ್ಹಾ(Sonakshi Sinha)
ಸೊನಾಕ್ಷಿ ಚಿತ್ರಗಳಲ್ಲಿ ನಟಿಸುವ ಮೊದಲಿದ್ದದ್ದು 90 ಕೆಜಿಗಳು. ಆಗೆಲ್ಲ ತನ್ನ ಹೊಟ್ಟೆಯ ಫ್ಯಾಟ್ ಮುಚ್ಚಿಕೊಳ್ಳಲು ಸೊನಾಕ್ಷಿ ದೊಗಳೆ ಬಟ್ಟೆಗಳನ್ನು ಹಾಕುತ್ತಿದ್ದಳಂತೆ. ನಂತರದಲ್ಲಿ 30 ಕೆಜಿಗಳನ್ನು ಇಳಿಸಿಕೊಂಡ ಸೊನಾಕ್ಷಿಯ ಸೊಂಟ ನೋಡಿದವರೆಲ್ಲ ಅಲ್ಲೊಂದು ಕಾಲದಲ್ಲಿ ಬೊಜ್ಜು ತುಂಬಿತ್ತು ಎನ್ನುವುದನ್ನೇ ನಂಬಲು ಕಷ್ಟಪಡುವಂತಾಯಿತು. 

How Bollywood Actresses Lose Weight Fast skr

ವೇಯ್ಟ್‌ಲಾಸ್(weight loss) ಸರ್ಜರಿಯ ವಿಷಯ ಬದಿಗಿಡಿ. ಅದನ್ನು ಮಾಡಿಸಿಕೊಂಡವರು ಹೇಳಿಕೊಳ್ಳುವುದಿಲ್ಲ.  ಅದು ಆರೋಗ್ಯಕರವೂ ಅಲ್ಲ, ಆದರೆ, ಆರೋಗ್ಯಕರವಾಗಿ ತೂಕ ಕಳೆದುಕೊಳ್ಳಬೇಕೆಂದರೆ ಸ್ಟ್ರಿಕ್ಟ್ ಡಯಟ್ ಹಾಗೂ ವರ್ಕೌಟ್ ಬೇಕೇಬೇಕು ಎನ್ನುವುದು ಈ ಬಾಲಿವುಡ್ ಬೆಡಗಿಯರ ಫ್ಯಾಟ್- ಟು- ಫಿಟ್ ಟ್ರಾನ್ಸ್‌ಫಾರ್ಮೇಶನ್(Fat-to-fit transformation) ನೋಡಿದರೆ ತಿಳಿಯುತ್ತದೆ. 

Follow Us:
Download App:
  • android
  • ios