ಫೇಮಸ್ ಬಾಡಿ ಬಿಲ್ಡರ್, ಫಿಟ್‌ನೆಸ್ ಪ್ರಭಾವಿಯಾಗಿದ್ದ ಮಹಿಳೆ ನಿಧನ; ಸಾವಿಗೆ ಕಾರಣ ನಿಗೂಢ
ಫಿಟ್‌ನೆಸ್ ಹೆಸರಲ್ಲಿ ಬೇಕಾಬಿಟ್ಟಿ ವರ್ಕೌಟ್, ಡಯೆಟ್ ಮಾಡುವುದು ಇತ್ತೀಚಿಗೆ ಸಾಮಾನ್ಯವಾಗಿದೆ. ತಿನ್ನೋ ಆಹಾರ ಹೇಗಿರಬೇಕು, ವ್ಯಾಯಾಮ ಯಾವ ರೀತಿ ಮಾಡಬೇಕು ಎಂದು ಸೂಚಿಲು ಫಿಟ್‌ನೆಸ್ ಇನ್‌ಫ್ಲುಯೆನ್ಸರ್‌ಗಳೇ ಇದ್ದಾರೆ. ಆದ್ರೆ ಇಲ್ಲೊಬ್ಬ ಫಿಟ್‌ನೆಸ್ ಪ್ರಭಾವಿ ದಿಢಿರ್ ಸಾವನ್ನಪ್ಪಿದ್ದು, ಸಾವಿಗೆ ಕಾರಣ ನಿಗೂಢವಾಗಿದೆ.
ನವದೆಹಲಿ: ನ್ಯೂಜಿಲೆಂಡ್‌ನ ಜನಪ್ರಿಯ ಬಾಡಿ ಬಿಲ್ಡರ್ ಮತ್ತು ಫಿಟ್‌ನೆಸ್ ಪ್ರಭಾವಿ ರೇಚೆಲ್ ಚೇಸ್ ನಿಧನರಾಗಿದ್ದಾರೆ. ಚೇಸ್, 5 ಮಕ್ಕಳ ತಾಯಿ. ಫೇಸ್‌ಬುಕ್‌ನಲ್ಲಿ 1.4 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದರು. ಆಗಾಗ ಫಿಟ್‌ನೆಸ್ ಮತ್ತು ಸಿಂಗಲ್ ಪೇರೆಂಟಿಂಗ್ ಬಗ್ಗೆ ಸ್ಪೂರ್ತಿದಾಯಕ ಪೋಸ್ಟ್‌ಗಳನ್ನು ಮಾಡುತ್ತಿದ್ದರು. ಅವರಿಗೆ 41 ವರ್ಷ ವಯಸ್ಸಾಗಿತ್ತು. ಸಾವಿನ ಬಗ್ಗೆ ಮಗಳು ಸ್ಪರ್ಶ ಹೇಳಿಕೆಯಲ್ಲಿ ಖಚಿತಪಡಿಸಿದ್ದಾರೆ. ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ ಮತ್ತು ನ್ಯೂಜಿಲೆಂಡ್ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ರೇಚೆಲ್ ಚೇಸ್ ಹಿರಿಯ ಮಗಳು ಅನ್ನಾ ಮಾತನಾಡಿ, 'ತಾಯಿ ಯಾವಾಗಲೂ ಜೀವನದ ಬಗ್ಗೆ ನಮಗೆ ಉತ್ತಮ ಸಲಹೆಯನ್ನು ನೀಡುತ್ತಿದ್ದರು. ಅವರು ಕಷ್ಟದ ದಿನಗಳಲ್ಲಿಯೂ ತಮ್ಮ ಜೀವನದ ಬಗ್ಗೆ ಹೆಚ್ಚು ಮಹತ್ವಾಕಾಂಕ್ಷೆಯನ್ನು ಹೊಂದಿದ್ದರು. ಪ್ರಪಂಚದಾದ್ಯಂತ ಲಕ್ಷಾಂತರ ಜನರನ್ನು ಪ್ರೇರೇಪಿಸಿದ್ದಾರೆ. ಅವರ ಸ್ಪೂರ್ತಿ ಮಾತುಗಳು ನಾನು ಜೀವನದಲ್ಲಿ ಸರಿಯಾಗಿ ಮುನ್ನಡೆಯುವಂತೆ ಮಾಡುತ್ತದೆ' ಎಂದು ತಿಳಿಸಿದ್ದಾರೆ.
ಫಿಟ್‌ನೆಸ್ ಚಾಲೆಂಜ್‌ಗಾಗಿ ಅತಿ ಹೆಚ್ಚು ನೀರು ಕುಡಿದ ಟಿಕ್‌ಟಾಕರ್ ಆಸ್ಪತ್ರೆಗೆ ದಾಖಲು
ಕ್ರಿಸ್ ಚೇಸ್, ತಮ್ಮ ವೈವಾಹಿಕ ಜೀವನದಿಂದ ವಿಚ್ಛೇದನ ಪಡೆದರು. ಆ ನಂತರ ಕ್ರಿಸ್ ನಂತರ ಮಾದಕವಸ್ತು ಕಳ್ಳಸಾಗಣೆಯಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಸಿಕ್ಕಿಬಿದ್ದರು. 10 ವರ್ಷಗಳ ಕಾಲ ಜೈಲಿನಲ್ಲಿದ್ದರು. ಅವರು ಚಿಕ್ಕ ವಯಸ್ಸಿನಿಂದಲೇ ದೇಹದಾರ್ಢ್ಯವನ್ನು ಪಡೆದರು. ನ್ಯೂಜಿಲೆಂಡ್‌ನಲ್ಲಿ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದರು. 2011ರಲ್ಲಿ, ಲಾಸ್ ವೇಗಾಸ್‌ನಲ್ಲಿ ನಡೆದ ಪ್ರತಿಷ್ಠಿತ ಒಲಂಪಿಯಾ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ ನ್ಯೂಜಿಲೆಂಡ್‌ನ ಮೊದಲ ಮಹಿಳೆ ಎಂದು ರೇಚೆಲ್ ಚೇಸ್ ಗುರುತಿಸಿಕೊಂಡಿದ್ದಾರೆ.
2016ರಲ್ಲಿ ರೇಚೆಲ್, ವೈವಾಹಿಕ ಜೀವನದ ಸಮಸ್ಯೆಯನ್ನು ಎದುರಿಸುವ ಬಗ್ಗೆ ಲೇಖನ ಬರೆದಿದ್ದರು. ವಿಶೇಷವಾಗಿ ಮಕ್ಕಳ ಸಲುವಾಗಿ ನಿಂದನೀಯ ಸಂಬಂಧಗಳನ್ನು ಬಿಡುವಂತೆ ಜನರಿಗೆ ಸಲಹೆ ನೀಡಿದ್ದರು. ಫೇಸ್‌ಬುಕ್‌ನಲ್ಲಿನ ಅವರ ಅಂತಿಮ ಪೋಸ್ಟ್‌ನಲ್ಲಿ, ಅವರು ಆಕ್ಸಿಜನ್ ಮ್ಯಾಗಜೀನ್‌ಗಾಗಿ ಚಿತ್ರೀಕರಣದಿಂದ ತಮ್ಮ ಫೋಟೋಗಳಲ್ಲಿ ಒಂದನ್ನು ಪೋಸ್ಟ್ ಮಾಡಿದ್ದಾರೆ. ಇದು ಅವರ ವೃತ್ತಿಜೀವನದ ಅವಧಿಯಲ್ಲಿ ಅವರು ಕಾಣಿಸಿಕೊಂಡ 14 ಕವರ್‌ಗಳಲ್ಲಿ ಒಂದಾಗಿದೆ ಎಂದು ತಿಳಿದುಬಂದಿದೆ.
ಅತಿಯಾದ ಬಾಡಿಬಿಲ್ಡಿಂಗ್ ಜೋ ಲಿಂಡ್ನರ್ ಜೀವಕ್ಕೇ ಮುಳುವಾಯ್ತಾ? ಏನಿದು ರಿಪ್ಲಿಂಗ್ ಮಸಲ್ ಕಾಯಿಲೆ?
ಒಂದೇ ವರ್ಷದಲ್ಲಿ 45 ಕೆಜಿ ಕಳೆದುಕೊಂಡಿದ್ದ ಫಿಟ್‌ನೆಸ್ ಇನ್‌ಫ್ಲುಯೆನ್ಸರ್ ಸಾವು
ಬ್ರೆಜಿಲ್‌ನ ಹೆಲ್ತ್ ಇನ್‌ಫ್ಲುಯೆನ್ಸರ್ 49 ವರ್ಷದ ಅಡ್ರಿಯಾನಾ ಥೈಸೆನ್ ಹಲವು ಆರೋಗ್ಯ ಸಲಹೆಗಳು ನೀಡುತ್ತಿದ್ದರು. ಅಡ್ರಿಯಾನಾ ಥೈಸೆನ್, ಒಂದೇ ವರ್ಷದಲ್ಲಿ 45 ಕೆಜಿ ಕಳೆದುಕೊಂಡಿದ್ದರು. ಇನ್‌ಸ್ಟಾಗ್ರಾಂನಲ್ಲಿ ತಮ್ಮ ವೈಟ್ ಲಾಸ್ ಜರ್ನಿಯ ಬಗ್ಗೆ ಮಾಹಿತಿ ಸಹ ಹಂಚಿಕೊಂಡಿದ್ದರು. ಆದರೆ ವಿಚಿತ್ರವಾದ ಕಾಯಿಲೆಯಿಂದ ಅವರು ಮೃತಪಟ್ಟಿದ್ದರು. ಬ್ರೆಜಿಲಿಯನ್‌ನ ಇವರ ಕುಟುಂಬ ಸಾವಿಗೆ ಕಾರಣವನ್ನು ಬಹಿರಂಗಪಡಿಸಿಲ್ಲ.
ಬ್ರೆಜಿಲಿಯನ್ ಫಿಟ್‌ನೆಸ್ ಮತ್ತು ಆರೋಗ್ಯ ಪ್ರಭಾವಿ ಅಡ್ರಿಯಾನಾ ಥೈಸೆನ್ ಅವರು 49 ನೇ ವಯಸ್ಸಿನಲ್ಲಿ ನಿಗೂಢ ಕಾಯಿಲೆಯಿಂದ ನಿಧನರಾದರು ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿತ್ತು. ಡ್ರಿಕಾ ಎಂದೂ ಕರೆಯಲ್ಪಡುವ ಮಿಸ್ ಥೈಸೆನ್, ಸಾವೊ ಪಾಲೊದಲ್ಲಿನ ಉಬರ್‌ಲ್ಯಾಂಡಿಯಾ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ವರದಿ ಮಾಡಲಾಗಿತ್ತು. ಆದರೆ ಅವರ ಸಾವಿಗೆ ನಿಖರವಾದ ಕಾರಣ ತಿಳಿದಿಲ್ಲ. Ms Thyssen ಇನ್‌ಸ್ಟಾಗ್ರಾಂನಲ್ಲಿ 600,000ಕ್ಕಿಂತಲೂ ಹೆಚ್ಚಿನ ಅನುಯಾಯಿಗಳನ್ನು ಹೊಂದಿದ್ದರು. ಅಲ್ಲಿ ಅವರು ತಮ್ಮ ತೂಕ ನಷ್ಟ ಪ್ರಯತ್ನಗಳನ್ನು ನಿಯಮಿತವಾಗಿ ದಾಖಲಿಸುತ್ತಿದ್ದರು. ವ್ಯಾಯಾಮದ ನಿಯಮಗಳು ಮತ್ತು ಆರೋಗ್ಯಕರ ಆಹಾರ ಸಲಹೆಗಳನ್ನು ಹಂಚಿಕೊಳ್ಳುತ್ತಿದ್ದರು.
ತಾನು ಹದಿಹರೆಯದವಳಾಗಿದ್ದಾಗಲೂ ಅಧಿಕ ತೂಕದಿಂದ ಬಳಲುತ್ತಿದ್ದೆ ಎಂದು ಅವಳು ಈ ಹಿಂದೆ ಹೇಳಿಕೊಂಡಿದ್ದರು 39ನೇ ವಯಸ್ಸಿನಲ್ಲಿ, ಆರೋಗ್ಯ ಪ್ರಭಾವಿಯು 220 ಪೌಂಡ್‌ಗಳಿಗಿಂತ ಹೆಚ್ಚು (ಸುಮಾರು 100 ಕೆಜಿ) ತೂಕ ಗಳಿಸಿದ್ದರು. ಅಲ್ಲಿಂದ ಮುಂದೆ, ಸಮತೋಲಿತ ಆಹಾರ ಮತ್ತು ಕಠಿಣ ವ್ಯಾಯಾಮದ ಕಟ್ಟುಪಾಡುಗಳನ್ನು ಅನುಸರಿಸುವ ಮೂಲಕ ತೂಕ ಇಳಿಸಿಕೊಂಡರು.