Asianet Suvarna News Asianet Suvarna News

ಚೀನಾದಲ್ಲಿ ಕೋವಿಡ್ ನಂತ್ರ ಮತ್ತೊಂದು ನಿಗೂಢ ಸಾಂಕ್ರಾಮಿಕ, ನಮ್ ದೇಶಕ್ಕೂ ಕಾಲಿಡುತ್ತಾ?

ವರ್ಷಗಳ ಹಿಂದೆ ಚೀನಾದ ವುಹಾನ್‌ನಿಂದ ಆರಂಭವಾಗಿದ್ದ ಪುಟ್ಟ ವೈರಸ್ ಕೋವಿಡ್ ಸಂಪೂರ್ಣ ಜಗತ್ತನ್ನೇ ತಲ್ಲಣಗೊಳಿಸಿತ್ತು. ಈ ಸಾಂಕ್ರಾಮಿಕದಿಂದ ಉಂಟಾದ ಸಂಕಷ್ಟದಿಂದ ಇನ್ನೂ ಹೊರಬರದ ಚೀನಾ, ಈಗ ಹೊಸ ಸಾಂಕ್ರಾಮಿಕ ರೋಗದ ಭೀತಿಯಲ್ಲಿದೆ. ಚೀನಾದಲ್ಲಿ ಏಕಾಏಕಿ ನಿಗೂಢವಾದ ನ್ಯುಮೋನಿಯಾ ಪ್ರಕರಣದಲ್ಲಿ ಹೆಚ್ಚಳವಾಗಿದೆ. ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಸಹ ಎಚ್ಚರಿಕೆ ನೀಡಿದೆ.

Pneumonia Outbreak Scare in China as Hospitals full with Sick Kids, WHO gives Precautions Vin
Author
First Published Nov 23, 2023, 11:49 AM IST

ಚೀನಾ: COVID-19 ಸಾಂಕ್ರಾಮಿಕದಿಂದ ಉಂಟಾದ ಸಂಕಷ್ಟದಿಂದ ಇನ್ನೂ ಹೊರಬರದ ಚೀನಾ, ಈಗ ಹೊಸ ಸಾಂಕ್ರಾಮಿಕ ರೋಗದ ಭೀತಿಯಲ್ಲಿದೆ. ಚೀನಾದಲ್ಲಿ ಏಕಾಏಕಿ ನಿಗೂಢವಾದ ನ್ಯುಮೋನಿಯಾ ಪ್ರಕರಣದಲ್ಲಿ ಹೆಚ್ಚಳವಾಗಿದೆ. ನರ್ಸರಿ, ಶಾಲೆಗಳಲ್ಲಿ ಮಕ್ಕಳಲ್ಲಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ವರದಿಯಾಗುತ್ತಿವೆ. ಬೀಜಿಂಗ್ ಸೇರಿದಂತೆ ದೇಶದಾದ್ಯಂತದ ನಗರಗಳಲ್ಲಿ ನ್ಯುಮೋನಿಯಾ ಪ್ರಕರಣಗಳು ಉಲ್ಬಣಗೊಳ್ಳುತ್ತಿದೆ. ಚೀನಾದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಆಗಮಿಸುವುತ್ತಿರುವುದಾಗಿ ವರದಿಯಾಗಿದೆ. 

ಶಾಲಾ ಮಕ್ಕಳಲ್ಲಿ ನಿಗೂಢ ನ್ಯುಮೋನಿಯಾ ಸೋಂಕಿನ ಹೆಚ್ಚಳ, ಇಲ್ಲಿನ ಜನತೆಗೆ ಕೋವಿಡ್‌ ಬಿಕ್ಕಟ್ಟಿನ ಆರಂಭಿಕ ದಿನಗಳನ್ನು ನೆನಪಿಸುತ್ತಿದೆ. ಹೀಗಾಗಿ ಮಕ್ಕಳಲ್ಲಿ ಉಸಿರಾಟದ ಕಾಯಿಲೆಗಳು ಮತ್ತು ನ್ಯುಮೋನಿಯಾ ಪ್ರಕರಣಗಳ ಹೆಚ್ಚಳದ ಕುರಿತು ವಿಶ್ವ ಆರೋಗ್ಯ ಸಂಸ್ಥೆ (WHO) ಅಧಿಕೃತವಾಗಿ ಚೀನಾದಿಂದ ವಿವರವಾದ ವರದಿಯನ್ನು ಕೋರಿದೆ.

 35 ದಿನದಲ್ಲಿ 60,000 ಸಾವು, ಈ ತಿಂಗಳಲ್ಲಿ ಬೀಜಿಂಗ್ ಸಂಪೂರ್ಣ ನಿವಾಸಿಗಳಿಗೆ ಕೋವಿಡ್ ಸೋಂಕು!

ಮಕ್ಕಳಿಂದ ತುಂಬಿ ತುಳುಕುತ್ತಿರುವ ಆಸ್ಪತ್ರೆ, ವೈದ್ಯರ ಪರದಾಟ
ಬೀಜಿಂಗ್ ಮತ್ತು ಲಿಯಾನಿಂಗ್‌ನಲ್ಲಿರುವ ಆಸ್ಪತ್ರೆಗಳು ಅನಾರೋಗ್ಯದ ಮಕ್ಕಳಿಂದ ತುಂಬಿ ತುಳುಕುತ್ತಿದ್ದು, ವೈದ್ಯರು ಚಿಕಿತ್ಸೆ (Treatment) ನೀಡಲು ಅಗತ್ಯವಾದ ಸೌಲಭ್ಯಗಳ ಕೊರತೆಯನ್ನು ಅನುಭವಿಸುತ್ತಿದ್ದಾರೆ. ಏಕಾಏಕಿ ಶಾಲೆ ಮುಚ್ಚುವ ಪರಿಸ್ಥಿತಿ ಎದುರಾಗಿದೆ ಎಂದು ಸ್ಥಳೀಯ ಮಾಧ್ಯಮ ವರದಿಗಳು ಸೂಚಿಸುತ್ತವೆ. ಪೀಡಿತ ಮಕ್ಕಳು ಶ್ವಾಸಕೋಶದ (Lungs) ಉರಿಯೂತ ಮತ್ತು ಅಧಿಕ ಜ್ವರ ಸೇರಿದಂತೆ ಅಸಾಮಾನ್ಯ ಲಕ್ಷಣಗಳನ್ನು ಹೊಂದಿರುತ್ತಾರೆ.ಆದರೆ ವಿಶಿಷ್ಟವಾದ ಕೆಮ್ಮು ಮತ್ತು ಜ್ವರ, RSV ಮತ್ತು ಇತರ ಉಸಿರಾಟದ ಕಾಯಿಲೆಗಳಿಗೆ ಸಂಬಂಧಿಸಿದ ಇತರ ಚಿಹ್ನೆಗಳನ್ನು ಹೊಂದಿರುವುದಿಲ್ಲ ಎಂದು ತಿಳಿದುಬಂದಿದೆ.

ನವೆಂಬರ್ 23ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ಆರೋಗ್ಯ ಆಯೋಗದ ಚೀನಾದ ಅಧಿಕಾರಿಗಳು ಚೀನಾದಲ್ಲಿ ಉಸಿರಾಟದ ಕಾಯಿಲೆಗಳ ಹೆಚ್ಚಳವನ್ನು ವರದಿ ಮಾಡಿದ್ದಾರೆ ಎಂದು WHO ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಚೀನೀ ಅಧಿಕಾರಿಗಳು ನ್ಯುಮೋನಿಯಾ ಹೆಚ್ಚಳಕ್ಕೆ 'ಉಸಿರಾಟದ ಸಿನ್ಸಿಟಿಯಲ್ ವೈರಸ್ (RSV) ಮತ್ತು SARS-CoVನಂತಹ ಬ್ಯಾಕ್ಟಿರೀಯಾಗಳು' ಕಾರಣವಾಗಿದೆ ಎಂದು ತಿಳಿಸಿದೆ. ಹೀಗಾಗಿ ಎಚ್ಚರಿಕೆಯಿಂದ ಇರುವಂತೆ ಜನರಿಗೆ ಸೂಚನೆ ನೀಡಲಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ನ್ಯುಮೋನಿಯಾ ಹರಡುವುದನ್ನು ತಡೆಗಟ್ಟಲು ಈ ಕೆಳಗಿನ ಕೆಲವು ವಿಷಯಗಳನ್ನು ಪಾಲಿಸುವಂತೆ ಸೂಚನೆ ನೀಡಲಾಗಿದೆ.

ಅಮೇರಿಕಾದಲ್ಲಿ ಡೇಂಜರಸ್ ವಾಂಪೈರ್ ವೈರಸ್ ಪತ್ತೆ; ಇದ್ರಿಂದ ತಿನ್ನೋಕೆ ಆಹಾರಾನೇ ಸಿಗದಂತೆ ಆಗ್ಬೋದು!

ಸಾರ್ವಜನಿಕರಿಗೆ ಸೂಚನೆ ನೀಡಿದ WHO
• ಅನಾರೋಗ್ಯದಿಂದ ಬಳಲುತ್ತಿರುವ ಜನರಿಂದ ಅಂತರ ಕಾಯ್ದುಕೊಳ್ಳಿ.
• ಅನಾರೋಗ್ಯದ ಸಂದರ್ಭದಲ್ಲಿ ಮನೆಯಲ್ಲಿಯೇ ಇರುಬೇಕು.
• ಅಗತ್ಯವಿದ್ದಾಗ ವೈದ್ಯಕೀಯ ಪರೀಕ್ಷೆ ಮತ್ತು ವೈದ್ಯಕೀಯ ಆರೈಕೆಯನ್ನು ಪಡೆಯುವುದು.
• ಸೂಕ್ತವಾದ ಮಾಸ್ಕ್‌ಗಳನ್ನು ಧರಿಸುವುದು.
• ನಿಯಮಿತವಾಗಿ ಕೈ ತೊಳೆಯುವುದು.
• ಸ್ವಚ್ಛತೆಯನ್ನು ಕಾಪಾಡುವುದು.
• ,ಹಣ್ಣು, ತರಕಾರಿಗಳನ್ನು ತೊಳೆದ ನಂತರವಷ್ಟೇ ಬಳಸುವುದು.

ಚೀನಾದಲ್ಲಿ ಹೊಸ ನ್ಯುಮೋನಿಯಾ ಪತ್ತೆಯಾಗಿದ್ದು ಹೇಗೆ?
ವಿಶ್ವಾದ್ಯಂತ ಮಾನವ ಮತ್ತು ಪ್ರಾಣಿಗಳ ರೋಗಗಳ ಏಕಾಏಕಿ ಮೇಲ್ವಿಚಾರಣೆ ಮಾಡುವ, ಸಾರ್ವಜನಿಕವಾಗಿ ಲಭ್ಯವಿರುವ ಕಣ್ಗಾವಲು ವ್ಯವಸ್ಥೆಯಾದ 'ಪ್ರೊಮೆಡ್' ತಡರಾತ್ರಿಯಲ್ಲಿ ಮಕ್ಕಳಲ್ಲಿ ನ್ಯುಮೋನಿಯಾ ಸಾಂಕ್ರಾಮಿಕ ರೋಗ ಹರಡುತ್ತಿರುವುದನ್ನು ಪತ್ತೆಹಚ್ಚಿದೆ. ಇದು ಡಿಸೆಂಬರ್ 2019ರ ಅಂತ್ಯದಲ್ಲಿ ಪ್ರೊಮೆಡ್ ಎಚ್ಚರಿಕೆಯಾಗಿದ್ದು, ನಂತರ ಸಾರ್ಸ್-ಕೋವ್ -2 ಎಂದು ಹೆಸರಿಸಲಾದ ನಿಗೂಢ ವೈರಸ್ ಅನ್ನು WHO ನ ಹಿರಿಯ ಅಧಿಕಾರಿಗಳು ಸೇರಿದಂತೆ ಅನೇಕ ವೈದ್ಯರು ಮತ್ತು ವಿಜ್ಞಾನಿಗಳ ಗಮನಕ್ಕೆ ತಂದರು ಎಂದು ವರದಿ ಹೇಳಿದೆ.

ಒಟ್ಟಿನಲ್ಲಿ ಕೋವಿಡ್‌ನಿಂದ ಜಗತ್ತು ಸ್ಪಲ್ಪ ಸ್ಪಲ್ಲವೇ ಚೇತರಿಸಿಕೊಳ್ಳುತ್ತಿರುವಾಗಲೇ ಚೀನಾದಲ್ಲಿ ಕಾಣಿಸಿಕೊಂಡಿರೋ ಈ ನಿಗೂಢ ವೈರಸ್‌ ಕೇವಲ ಚೀನಾವನ್ನು ಮಾತ್ರ ಜಗತ್ತಿನ ಇತರ ದೇಶಗಳನ್ನು ಸಹ ಚಿಂತೆಗೀಡು ಮಾಡುತ್ತಿರೋದಂತೂ ನಿಜ.

Follow Us:
Download App:
  • android
  • ios