ತಿಳಿದೋ, ತಿಳಿಯದೆಯೋ ನೀವು ಮಾಡೊ ಈ ಕೆಲಸದಿಂದ ಬೇಗ ಅಜ್ಜಿಯಾಗ್ತೀರಿ
ನಾವು ವಯಸ್ಸಾದಂತೆ, ಅದರ ಪರಿಣಾಮವು ನಮ್ಮ ಮುಖದ ಮೇಲೆ ಕಂಡುಬರುತ್ತೆ. ವಯಸ್ಸಾಗುವಿಕೆಯನ್ನು ಮರೆ ಮಾಚಲು ಮೇಕಪ್ ಲೇಯರ್ ಸಹ ಹೆಚ್ಚಾಗುತ್ತವೆ. ಆದರೆ, ಇದು ಪ್ರಕೃತಿ ಸಹಜ ಮತ್ತು ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ ಕೆಲವೊಮ್ಮೆ ಇದು ನಮ್ಮ ಅಭ್ಯಾಸಗಳಿಂದಲೂ ಉಂಟಾಗುತ್ತೆ. ಹೇಗೆಂದು ತಿಳಿಯಲು ಮುಂದೆ ಓದಿ.
ನಮ್ಮ ಹದಿಹರೆಯದಲ್ಲಿ, ಚರ್ಮದ ಬಗ್ಗೆ ನಾವು ತುಂಬಾ ಪರ್ಫೆಕ್ಟ್ ಆಗಿದ್ದೆವು. ಸ್ವಲ್ಪ ಫೌಂಡೇಶನ್ ಮತ್ತು ಮಸ್ಕರಾ ನಮ್ಮ ಸಂಪೂರ್ಣ ಮೇಕ್ಅಪ್ ಆಗಿತ್ತು. ಆದರೆ ವಯಸ್ಸು ಹೆಚ್ಚಾದಂತೆ, ಮೇಕಪ್ ಲೇಯರ್ ಸಹ ಹೆಚ್ಚಾಗುತ್ತವೆ. ಆದರೆ, ಇದು ಪ್ರಕೃತಿ ಸಹಜ ಮತ್ತು ಇದನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ ಅನೇಕ ಬಾರಿ ಮಹಿಳೆಯರು ಅಥವಾ ಪುರುಷರು ತಮ್ಮ ವಯಸ್ಸಿಗಿಂತ ಹೆಚ್ಚು ವಯಸ್ಸಾದವರಂತೆ(Aging) ಕಾಣಲು ಪ್ರಾರಂಭಿಸುತ್ತಾರೆ. ಆದರೆ ಅದನ್ನು ಬದಲಾಯಿಸೋದು ಸಂಪೂರ್ಣವಾಗಿ ನಿಮ್ಮ ಕೈಯಲ್ಲಿದೆ. ಕೆಲವೊಂದು ಅಭ್ಯಾಸಗಳನ್ನು ರೂಢಿ ಮಾಡುವ ಮೂಲಕ ಯಾವಾಗಲೂ ಯಂಗ್ ಆಗಿರಿ.
ಅತಿಯಾದ ಸಕ್ಕರೆ (Sugar) ಸೇವನೆ: ನೀವು ಬೆಳಿಗ್ಗೆ ಮತ್ತು ಸಂಜೆ ಚಹಾ ಅಥವಾ ಸ್ನಾಕ್ಸ್ ಗಳಲ್ಲಿ ಸಿಹಿತಿಂಡಿ ಸೇವಿಸುತ್ತಿದ್ದರೆ, ಅದು ದಿನದ ಪ್ರಮಾಣಕ್ಕೆ ಅನುಗುಣವಾಗಿ ಹೆಚ್ಚಿನ ಪ್ರಮಾಣದ ಸಕ್ಕರೆ ಸೇವನೆಯಾಗಿದೆ. ನೀವು ಅದನ್ನು ನಿಯಂತ್ರಿಸಬೇಕು. ಸಕ್ಕರೆ ಕಣಗಳು ಕಾಲಜನ್ ನ ಗ್ಲೈಕೇಶನ್ ಗೆ ಕಾರಣವಾಗುತ್ತವೆ. ಇಲ್ಲದೇ ಇದ್ದರೆ ಆರೋಗ್ಯ ಸಮಸ್ಯೆ ಕಾಡುತ್ತದೆ.
ದೇಹದಲ್ಲಿ ನೀರಿನ ಕೊರತೆ: ನಿರ್ಜಲೀಕರಣವು(Dehydration) ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಮತ್ತು ಇದು ನಿಮ್ಮ ಮುಖದ ಮೇಲೂ ಗೋಚರಿಸುತ್ತೆ. ನೀರಿನ ಕೊರತೆಯಿಂದಾಗಿ ನಿಮ್ಮ ಮುಖ ಮತ್ತು ತುಟಿಗಳಲ್ಲಿ ವಯಸ್ಸಾಗುವಿಕೆ ಲಕ್ಷಣ ಸ್ಪಷ್ಟವಾಗಿ ಗೋಚರಿಸುತ್ತವೆ. ನೀವು ಹೈಡ್ರೇಟ್ ಆಗಿರದಿದ್ದರೆ, ನಿಮ್ಮ ಚರ್ಮದಿಂದ ತೇವಾಂಶವೂ ಕಣ್ಮರೆಯಾಗುತ್ತೆ.
ಆಲ್ಕೋಹಾಲ್ (Alcohol) ಸೇವನೆ: ಮದ್ಯಪಾನವು ಚರ್ಮಕ್ಕೆ ಹಾನಿಕಾರಕ ಮತ್ತು ಅದು ನಿಮ್ಮ ದೈನಂದಿನ ಅಭ್ಯಾಸವಾಗಿದ್ದರೆ, ಅದಕ್ಕೆ ಗುಡ್ ಬೈ ಹೇಳುವ ಸಮಯ ಇದು. ಆಲ್ಕೋಹಾಲ್ ನಿಮ್ಮ ಚರ್ಮದಿಂದ ನೀರಿನ ಅಂಶವನ್ನು ತೆಗೆದುಹಾಕುತ್ತೆ. ಶುಷ್ಕತೆಯಿಂದಾಗಿ ಚರ್ಮ ಸುಕ್ಕುಗಟ್ಟಲು ಹೆಚ್ಚು ಸಮಯ ತೆಗೆದುಕೊಳ್ಳೋದಿಲ್ಲ.
4. ಚರ್ಮವನ್ನು ಮಾಯಿಶ್ಚರೈಸ್(Moisturizer) ಮಾಡದಿರೋದು
ಬೆಳಿಗ್ಗೆ ನೀವು ಬ್ಯುಸಿ ಇರಬಹುದು ಮತ್ತು ರಾತ್ರಿಯ ವೇಳೆಗೆ ನೀವು ತುಂಬಾ ದಣಿದಿರುತ್ತೀರಿ, ಇದರ ನಡುವೆ ಚರ್ಮವನ್ನು ಮಾಯಿಶ್ಚರೈಸ್ ಮಾಡೋದನ್ನು ಸಹ ನೀವು ಮರೆತು ಬಿಡುತ್ತೀರಿ. ಇದು ನಿಮ್ಮ ವಯಸ್ಸಿಗಿಂತ ವಯಸ್ಸಾಗುವಂತೆ ಮಾಡುವ ಒಂದು ಪ್ರವೃತ್ತಿಯಾಗಿದೆ.
ಮಲಗುವ ಮುನ್ನ ಮೇಕಪ್(Makeup) ತೆಗೆಯದಿರೋದು: ಬೆಳಿಗ್ಗೆ ಮೇಕಪ್ ಮಾಡಲು ಟೈಮ್ ಇದೆ ಎಂದಾದ್ರೆ ಮತ್ತು ಗಂಟೆಗಳ ನಂತರ ಸ್ವಲ್ಪ ಟಚ್-ಅಪ್ ಮಾಡುತ್ತಿದ್ದರೆ, ಮೇಕಪ್ ತೆಗೆದುಹಾಕಲು ಸಹ ಸಮಯ ಮಾಡಿಕೊಳ್ಳಬೇಕು. ಮೇಕಪ್ ತೆಗೆಯದೆ ಮಲಗೋದು ನಿಮ್ಮ ಚರ್ಮದ ರಂಧ್ರಗಳನ್ನು ಕುಗ್ಗಿಸುತ್ತೆ ಮತ್ತು ಮೊಡವೆಗಳಿಗೆ ಕಾರಣವಾಗಬಹುದು.
ಅತಿಯಾದ ಎಕ್ಸ್ ಫೋಲಿಯೇಷನ್: ಪ್ರತಿದಿನ ನಿಮ್ಮ ಚರ್ಮವನ್ನು ಎಕ್ಸ್ ಫೋಲಿಯೇಟ್ ಮಾಡುತ್ತಿದ್ದೀರಾ? ಹೌದು ಎಂದಾದಲ್ಲಿ, ಇನ್ನೂ ಇದನ್ನು ಮಾಡಬೇಡಿ ಏಕೆಂದರೆ ಗಟ್ಟಿಯಾದ ಸ್ಕ್ರಬ್ ಗಳ ಅತಿಯಾದ ಬಳಕೆಯು ಚರ್ಮದಲ್ಲಿ ಶುಷ್ಕತೆಗೆ(Dryness) ಕಾರಣವಾಗಬಹುದು. ಮೇಲೆ ಹೇಳಿದ ಟಿಪ್ಸ್ ಫಾಲೋ ಮಾಡೋದ್ರಿಂದ ನಿಮ್ಮ ಏಜಿಂಗ್ ಎಷ್ಟು ಕಮ್ಮಿ ಆಗುತ್ತೆ, ನೀವೆಷ್ಟು ಯಂಗ್ ಕಾಣುತ್ತೀರಿ ಅನ್ನೋದನ್ನು ನೀವೇ ನೋಡಿ!