Health Tips: ನಿದ್ರೆಯಲ್ಲಿ ಮಾತನಾಡುವುದೂ ಒಂದು ಖಾಯಿಲೆ!

ಗಾಢ ನಿದ್ರೆಯಲ್ಲಿರುವ ಜನರು ಏನೇನೋ ತಡಬಡಾಯಿಸೋದನ್ನು ನೀವು ನೋಡಿರಬಹುದು. ಇನ್ನು ಕೆಲವರು ಸ್ಪಷ್ಟವಾಗಿ ನಿದ್ರೆಯಲ್ಲಿ ಮಾತನಾಡ್ತಾರೆ. ನಿಮಗೂ ನಿದ್ರೆಯಲ್ಲ ಮಾತನಾಡುವ  ಅಭ್ಯಾಸವಿದ್ರೆ ಅದಕ್ಕೆ ಕಾರಣವೇನು ಎಂಬುದನ್ನು ತಿಳಿದುಕೊಳ್ಳಿ.

Parasomnia Why People Start Talking In Sleep Know What Are The Reasons roo

ನಿದ್ರೆ ಮನುಷ್ಯನಿಗೆ ಅತ್ಯವಶ್ಯಕವಾಗಿದೆ. ನಿದ್ರೆಯಿಲ್ಲದೇ ಮನುಷ್ಯ ಯಾವ ಕೆಲಸವನ್ನೂ ಮಾಡಲಾರ. ಒಳ್ಳೆಯ ನಿದ್ರೆ ಉತ್ತಮ ಆರೋಗ್ಯದ ಮೊದಲ ಮೆಟ್ಟಿಲಾಗಿದೆ. ಆದರೆ ಇಂದಿನ ಜೀವನಶೈಲಿಯಲ್ಲಿ ಬಹುತೇಕ ಮಂದಿ ಅವರ ಶರೀರಕ್ಕೆ ಅಗತ್ಯವಿರುವಷ್ಟು ನಿದ್ರೆ ಮಾಡುತ್ತಿಲ್ಲ. ಇದರಿಂದಲೇ ಅನೇಕ ರೋಗ ರುಜಿನಗಳು ಜನರನ್ನು ಬಾಧಿಸುತ್ತಿವೆ. ಅನೇಕ ಮಂದಿಗೆ ನಿದ್ದೆ (Sleep ) ಯಲ್ಲಿ ಮಾತನಾಡುವ, ಕನವರಿಸುವ ಅಭ್ಯಾಸವಿದೆ. ಇದು ಕೂಡ ಒಂದು ನಿದ್ರೆಯ ಸಮಸ್ಯೆಯೇ ಆಗಿದೆ. ಮಕ್ಕಳು, ಮುದುಕರೆನ್ನದೆ ಅನೇಕ ಮಂದಿಗೆ ನಿದ್ದೆಯಲ್ಲಿ ಮಾತನಾಡುವ ರೂಢಿಯಿದೆ. ಇದು ಒಂದು ಬಗೆಯ ಡ್ರೀಮ್ ಡಿಸಾರ್ಡರ್ ಆಗಿದೆ. ಇದನ್ನು ಪ್ಯಾರಾಸೋಮ್ನಿಯಾ (Parasomnia) ಎನ್ನಲಾಗುತ್ತದೆ. ಪ್ಯಾರಾಸೋಮ್ನಿಯಾಗೆ ಒಳಗಾದವರು ನಿದ್ದೆಯಲ್ಲಿ ಹೆಚ್ಚು ಮಾತನಾಡ್ತಾರೆ. ಅವರು ಏನು ಮಾತನಾಡುತ್ತಿದ್ದಾರೆ ಎನ್ನುವುದು ಉಳಿದವರಿಗೆ ತಿಳಿಯುವುದಿಲ್ಲ. ಇಂದು ಅನೇಕ ಮಂದಿ ಇಂತಹ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹೀಗೆ ನಿದ್ದೆಯಲ್ಲಿ ಮಾತನಾಡುವ ಸಮಸ್ಯೆ ಹೇಗೆ ಶುರುವಾಗುತ್ತದೆ, ಅದಕ್ಕೆ ಕಾರಣವೇನು ಎನ್ನುವುದನ್ನು ನಾವು ತಿಳಿಯೋಣ.

ನಿದ್ದೆಯಲ್ಲಿ ಮಾತನಾಡುವುದೇಕೆ? : 

ಆಯಾಸ :  ಇಂದಿನ ಒತ್ತಡ (Stress) ದ ಜೀವನಶೈಲಿ ಅನೇಕ ರೋಗಗಳನ್ನು ಹುಟ್ಟುಹಾಕುತ್ತದೆ ಎನ್ನುವುದು ಸುಳ್ಳಲ್ಲ. ದಿನಪೂರ್ತಿ ಕೆಲಸದ ಟೆನ್ಶನ್ ಹಾಗೂ ಅದರಿಂದಾಗುವ ಆಯಾಸದಿಂದ ಸರಿಯಾಗಿ ನಿದ್ದೆ ಬರೋದಿಲ್ಲ. ಆಯಾಸಕ್ಕೂ ನಿದ್ದೆಗೂ ನಿಕಟ ಸಂಬಂಧವಿದೆ. ಹೆಚ್ಚು ಆಯಾಸವಾದಾಗ ಅನೇಕ ಮಂದಿ ಮೈ ಮರೆತು ನಿದ್ದೆಗೆ ಜಾರುವುದಿಲ್ಲ. ಅಂಥವರು ನಿದ್ದೆಯಲ್ಲೂ ಮಾತನಾಡುತ್ತಾರೆ.

Sleep Disorder: ಪುರುಷರಿಗೆ ಹೋಲಿಸಿದ್ರೆ ತಡರಾತ್ರಿಯಾದ್ರೂ ಮಹಿಳೆಗೆ ನಿದ್ರೆ ಬರೋದಿಲ್ಲ ಯಾಕೆ?

ಡಿಪ್ರೆಶನ್ :  ಡಿಪ್ರೆಶನ್ ಗೆ ಒಳಗಾದ ವ್ಯಕ್ತಿಗಳಿಗೂ ಚೆನ್ನಾಗಿ ನಿದ್ದೆ ಮಾಡಲು ಸಾಧ್ಯವಿಲ್ಲ. ಅಂತವರು ಮಲಗುವ ಸಮಯದಲ್ಲೂ ಡಿಪ್ರೆಶನ್ ಬಗ್ಗೆಯೇ ಚಿಂತಿಸುತ್ತಿರುತ್ತಾರೆ. ಹಾಗೊಮ್ಮೆ ಮಲಗಿದರೂ ಅವರು ನಿದ್ದೆಯಲ್ಲಿ ಕೂಡ ಅದೇ ಕನಸನ್ನು ಕಾಣುತ್ತಾರೆ. ಡಿಪ್ರೇಶನ್ ಇರುವವರಲ್ಲಿ ಒಂದು ರೀತಿಯ ಭಯವೂ ಇರುತ್ತದೆ. ಭಯದ ಕಾರಣಕ್ಕಾಗಿ ಕೂಡ ಅವರು ನಿದ್ದೆಯಲ್ಲಿ ಮಾತನಾಡುತ್ತಾರೆ

ನಿದ್ರೆಯ ಕೊರತೆ : ಮಕ್ಕಳು 12ರಿಂದ 14 ಗಂಟೆ ನಿದ್ದೆ ಮಾಡಬೇಕು. ದೊಡ್ಡವರಿಗೆ 7-8 ಗಂಟೆ ನಿದ್ದೆ ಬೇಕಾಗುತ್ತದೆ. ಅವರವರ ವಯಸ್ಸಿಗೆ ಅನುಗುಣವಾಗಿ ನಿದ್ದೆ ಮಾಡದೇ ಇದ್ದಾಗ ನಿದ್ದೆಯಲ್ಲಿ ಮಾತನಾಡುವ ತೊಂದರೆ ಆರಂಭವಾಗುತ್ತದೆ.

ಸೊಂಟ ದಪ್ಪಗಿರೋರಿಗೆ ಹೃದಯಾಘಾತದ ಅಪಾಯ ಹೆಚ್ಚು; ಮನೆಯಲ್ಲೇ ಹೀಗೆ ಚೆಕ್ ಮಾಡಿಕೊಳ್ಳಿ!

ಜ್ವರ :  ದೇಹದ ಆರೋಗ್ಯದಲ್ಲಿ ವ್ಯತ್ಯಾಸವಾದಾಗ ಮತ್ತು ಜ್ವರದಿಂದ ಬಳಲುತ್ತಿರುವವರು ನಿದ್ದೆಯಲ್ಲಿ ಮಾತನಾಡುತ್ತಾರೆ. ಮನುಷ್ಯ ಮಾನಸಿಕವಾಗಿ ನೆಮ್ಮದಿಯಿಂದ ಇದ್ದಾಗ ಮತ್ತು ಯಾವುದೇ ರೀತಿಯ ದೈಹಿಕ ಸಮಸ್ಯೆಗಳು ಇಲ್ಲದೇ ಇದ್ದಾಗ ಮಾತ್ರ ಚೆನ್ನಾಗಿ ನಿದ್ದೆ ಮಾಡಲು ಸಾಧ್ಯ. ನಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ. ಸಮಸ್ಯೆಗಳು ಯಾವುದೇ ಇದ್ದರೂ ಸಕಾರಾತ್ಮಕ ಚಿಂತನೆಯಿಂದ ಅವುಗಳನ್ನು ದೂರಮಾಡಬಹುದು. ಹೀಗೆ ನಿದ್ದೆಯಲ್ಲಿ ಮಾತನಾಡುವ ಪ್ಯಾರಾಸೋಮ್ನಿಯಾ ಖಾಯಿಲೆಯಿಂದ ಹೊರಬರಲು ಕೆಲವು ಸುಲಭ ಉಪಾಯಗಳಿವೆ.

ಪ್ಯಾರಾಸೋಮ್ನಿಯಾದಿಂದ ಹೊರಬರಲು ಹೀಗೆ ಮಾಡಿ :
•  ಚೆನ್ನಾಗಿ ನಿದ್ದೆ ಮಾಡಲು ಪ್ರಯತ್ನಿಸಿ
•  ಒತ್ತಡ ಮತ್ತು ಚಿಂತೆಯಿಂದ ದೂರವಿರಿ
•  ಸಾಧ್ಯವಾದಷ್ಟು ಖಿನ್ನತೆಯಿಂದ ಹೊರಬರಲು ಪ್ರಯತ್ನಿಸಿ. ಅದರ ಬಗ್ಗೆ ಹೆಚ್ಚು ಚಿಂತಿಸಬೇಡಿ. ಅದು ನಿಮ್ಮನ್ನು ಆಳಲು ಬಿಡಬೇಡಿ
•  ಸಕಾರಾತ್ಮಕ ಚಿಂತನೆಯಿಂದ ಖಾಯಿಲೆಗಳು ಬೇಗ ವಾಸಿಯಾಗುತ್ತವೆ. ಹಾಗಾಗಿ ಸಾಧ್ಯವಾದಷ್ಟು ಸಕಾರಾತ್ಮಕ ಚಿಂತನೆ ಮಾಡಿ.
• ಅನೇಕ ಖಾಯಿಲೆಗಳಿಗೆ ಯೋಗ, ಮೆಡಿಟೇಶನ್ ಗಳು ದಿವ್ಯೌಷಧವಾಗಿದೆ. ಇದರಿಂದ ಖಿನ್ನತೆ, ಸುಸ್ತು, ಶರೀರದ ನೋವು ಹಾಗೂ ಸಣ್ಣ ಪುಟ್ಟ ಸಮಸ್ಯೆಗಳು ನಿವಾರಣೆಯಾಗುತ್ತವೆ. ಪ್ಯಾರಾಸೋಮ್ನಿಯಾದಿಂದ ಹೊರಬರಲು ಯೋಗ, ಮೆಡಿಟೇಶನ್ ಸಹಾಯಕಾರಿಯಾಗಿದೆ.
• ಕೆಲವು ಮಂದಿ ಯಾವುದೇ ಕೆಲಸಗಳನ್ನು ಮಾಡದೇ, ಹವ್ಯಾಸಗಳನ್ನು ಬೆಳೆಸಿಕೊಳ್ಳದೇ ಸಮಯವನ್ನು ವ್ಯರ್ಥವಾಗಿ ಕಳೆಯುತ್ತಾರೆ. ಇದರಿಂದ ಶರೀರ ಚಟುವಟಿಕೆಯಿಂದ ಇರೋದಿಲ್ಲ ಹಾಗೂ ಒಂಟಿತನವೂ ಅವರನ್ನು ಕಾಡುತ್ತದೆ. ಹಾಗಾಗಿ ನಮಗೆ ಇಷ್ಟವಾದ ಯಾವುದೇ ಚಟುವಟಿಕೆಯಲ್ಲಿ ನಾವು ಭಾಗಿಯಾದರೆ ಅದರಿಂದ ಮಾನಸಿಕ ನೆಮ್ಮದಿ ಹೆಚ್ಚುತ್ತದೆ ಮತ್ತು ನಿದ್ದೆಯೂ ಚೆನ್ನಾಗಿ ಬರುತ್ತದೆ.

Latest Videos
Follow Us:
Download App:
  • android
  • ios