Asianet Suvarna News Asianet Suvarna News

ಸೊಂಟ ದಪ್ಪಗಿರೋರಿಗೆ ಹೃದಯಾಘಾತದ ಅಪಾಯ ಹೆಚ್ಚು; ಮನೆಯಲ್ಲೇ ಹೀಗೆ ಚೆಕ್ ಮಾಡಿಕೊಳ್ಳಿ!

ಹೃದಯ ಬಡಿತ ಸ್ವಲ್ಪ ಹೆಚ್ಚಾದ್ರೂ ಈಗ ಟೆನ್ಷನ್ ಶುರುವಾಗುತ್ತೆ. ಅದಕ್ಕೆ ಕಾರಣ ಹೆಚ್ಚಾಗ್ತಿರುವ ಹೃದಯಾಘಾತ ಪ್ರಕರಣ. ನೀವದಕ್ಕೆ ಭಯಪಡೆಬೇಕಾಗಿಲ್ಲ. ಮನೆಯಲ್ಲೇ ನಿಮ್ಮ ಹೃದಯ ಹೇಗಿದೆ ಅಂತ ಚೆಕ್ ಮಾಡಿಕೊಳ್ಳಬಹುದು. 
 

Waist Size Can Determine Your Risk Of Heart Disease In Men And Women roo
Author
First Published Aug 25, 2023, 4:57 PM IST

ಹೃದಯಘಾತದಿಂದ ಸಾವು.. ಈಗಿನ ದಿನಗಳಲ್ಲಿ ಈ ಮಾತು ಭಯ ಹುಟ್ಟಿಸುತ್ತಿದೆ. ಕೊರೊನಾ ನಂತ್ರ ಈ ಹೃದಯಾಘಾತದ ಪ್ರಕರಣ ಮತ್ತಷ್ಟು ಹೆಚ್ಚಿದ್ದು ಈಗಿದ್ದವರು ಇನ್ನೊಂದು ಕ್ಷಣಕ್ಕೆ ಇಲ್ಲ ಎನ್ನುವ ಪರಿಸ್ಥಿತಿ ಇದೆ. ಈ ಹಿಂದೆ ಹೃದಯಾಘಾತ ಅಪರೂಪದ ಖಾಯಿಲೆಯಾಗಿತ್ತು. ಆದ್ರೀಗ ಹೃದಯ ಸಂಬಂಧಿತ ಕಾಯಿಲೆಗಳು ಪ್ರಪಂಚದಾದ್ಯಂತದ ಸಾವಿನ ದೊಡ್ಡ ಕಾರಣಗಳಲ್ಲಿ ಒಂದಾಗಿದೆ. ಇದು ಎಲ್ಲಾ ಸಾವುಗಳಲ್ಲಿ ನಾಲ್ಕನೇ ಒಂದು ಭಾಗ ಇದ್ರದ್ದಾಗಿದೆ. ಹಲವು ವಿಷ್ಯಗಳು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತಿವೆ. ಇವುಗಳಲ್ಲಿ ಅಧಿಕ ಕೊಲೆಸ್ಟ್ರಾಲ್ ಮತ್ತು ಅಧಿಕ ರಕ್ತದೊತ್ತಡವೂ ಸೇರಿದೆ. 

ಬ್ರಿಟಿಷ್ ಹಾರ್ಟ್ ಫೌಂಡೇಶನ್ (BHF) ಪ್ರಕಾರ, ನಿಮಗೆ ಹೃದ್ರೋಗ (Heart Disease) ದ ಅಪಾಯ ಇದೆಯೇ, ಇಲ್ಲವೇ ಎಂಬುದನ್ನು ಕಂಡುಹಿಡಿಯಬಹುದು.  ಮನೆಯಲ್ಲಿಯೇ ಸುಲಭವಾಗಿ ಹೇಗೆ ಅದನ್ನು ಪರೀಕ್ಷೆ ಮಾಡಬಹುದು ಎಂದು ಬ್ರಿಟಿಷ್ ಹಾರ್ಟ್ ಫೌಂಡೇಶನ್ ಹೇಳಿದೆ.

SLEEP DISORDER: ಪುರುಷರಿಗೆ ಹೋಲಿಸಿದ್ರೆ ತಡರಾತ್ರಿಯಾದ್ರೂ ಮಹಿಳೆಗೆ ನಿದ್ರೆ ಬರೋದಿಲ್ಲ ಯಾಕೆ?

ಸೊಂಟ (Waist) ದ ಸುತ್ತಳತೆಯನ್ನು ಅಳೆಯುವ ಮೂಲಕ ನೀವು ನಿಮ್ಮ ಹೃದಯದ ಆರೋಗ್ಯ ಹಾಗೂ ಅಪಾಯವನ್ನು ಪತ್ತೆ ಮಾಡಬಹುದು ಎಂದು ಬ್ರಿಟಿಷ್ ಹಾರ್ಟ್ ಫೌಂಡೇಶನ್ ಹೇಳಿದೆ. ಅಧಿಕ ತೂಕ ಹಾಗೂ ಬೊಜ್ಜು, ಹೃದಯ ಸಂಬಂಧಿ ಖಾಯಿಲೆ ಮತ್ತು ಬಿಪಿ ಹೆಚ್ಚಾಗಲು ಕಾರಣವಾಗುತ್ತದೆ. ಬಾಡಿ ಮಾಸ್ ಇಂಡೆಕ್ಸ್ (BMI) ನೀವು ಅಧಿಕ ತೂಕ ಅಥವಾ ಬೊಜ್ಜು ಹೊಂದಿದ್ದೀರಾ ಎಂದು ಹೇಳುವ ಒಂದು ಮಾರ್ಗವಾಗಿದೆ. ಸಾಮಾನ್ಯವಾಗಿ 25 ಅಥವಾ ಅದಕ್ಕಿಂತ ಹೆಚ್ಚಿನ ಇದ್ರೆ ನೀವು ಅಧಿಕ ತೂಕ ಹೊಂದಿದ್ದೀರಿ ಎಂದರ್ಥ. ಅದೇ ನೀವು 30 ಅಥವಾ ಅದಕ್ಕಿಂತ ಹೆಚ್ಚಿನ ಬಿಎಂಐ ಹೊಂದಿದ್ದರೆ ಅದನ್ನು ಬೊಜ್ಜು ಎಂದು ಪರಿಗಣಿಸಲಾಗುತ್ತದೆ.  ನಿಮ್ಮ ದೇಹದ ಒಳಗಿರುವ ಬೊಜ್ಜು ನಿಮ್ಮ ಈ ಖಾಯಿಲೆಗೆ ಕಾರಣವಾಗಿದೆ : ಹೃದ್ರೋಗಗಳ ಅಪಾಯವನ್ನು ಕಡಿಮೆ ಮಾಡಲು ಬಿಎಂಐ ಒಂದೇ ಮಾರ್ಗವಲ್ಲ ಎಂದು ಬ್ರಿಟಿಷ್ ಹಾರ್ಟ್ ಫೌಂಡೇಶನ್ ಹೇಳಿದೆ. 

ಮಂಗಳಮುಖಿಯರಿಗೂ ಪ್ರತಿ ತಿಂಗಳು ಋತುಸ್ರಾವ ಆಗುತ್ತಾ?

ಅಧಿಕ ತೂಕ ಅಥವಾ ನಿಮ್ಮ ಹೊಟ್ಟೆ ಭಾಗದಲ್ಲಿ ಅಧಿಕ ಕೊಬ್ಬು ಸಂಗ್ರಹವಾಗಿದ್ದರೆ ಅದು ನಿಮ್ಮ ಹೃದಯ ಕಾಯಿಲೆ, ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ.
ಸಾಮಾನ್ಯವಾಗಿ, ಪುರುಷನ ಸೊಂಟವು 94 cm (37 ಇಂಚು) ಗಿಂತ ಹೆಚ್ಚಿದ್ದರೆ ಅಥವಾ ಮಹಿಳೆಯ ಸೊಂಟ 80 cm (31½ ಇಂಚು) ಗಿಂತ ಹೆಚ್ಚಿದ್ದರೆ ಆಗ ಅವರಿಗೆ ಹೃದಯ ಖಾಯಿಲೆ ಅಪಾಯ ಹೆಚ್ಚು.  

ದೇಹದ ಮಧ್ಯ ಭಾಗದ ಗಾತ್ರ ಹೆಚ್ಚಿದ್ದರೆ ನೀವು ಹೆಚ್ಚು ಒಳಾಂಗಗಳ ಕೊಬ್ಬನ್ನು ಹೊಂದಿದ್ದೀರಿ ಎಂದರ್ಥ. ಯಕೃತ್ತು ಮತ್ತು ಮೇದೋಜ್ಜೀರಕ ಗ್ರಂಥಿಯಂತಹ ಅಂಗಗಳ ಸುತ್ತಲೂ ಕೊಬ್ಬು ಸಂಗ್ರಹಗೊಳ್ಳುತ್ತದೆ. ದೇಹದ ಒಳ ಭಾಗದಲ್ಲಿರುವ ನಿಮ್ಮ ಕೊಬ್ಬು ನಿಮ್ಮ ಯಕೃತ್ತಿನ ಮೇಲೆ ಪರಿಣಾಮ ಬೀರಬಹುದು ಎಂದು ಬ್ರಿಟಿಷ್ ಹಾರ್ಟ್ ಫೌಂಡೇಶನ್ ಹೇಳಿದೆ. ಒಳಭಾಗದ ಕೊಬ್ಬು ನಿಮ್ಮ ದೇಹದ ಕಾರ್ಯಗಳ ಮೇಲೆ ಪರಿಣಾಮ ಬೀರುವ ವಿಷವನ್ನು ನಿರ್ಮಿಸುತ್ತದೆ. ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುವ ಕೆಲಸಕ್ಕೆ ಇದು ಅಡ್ಡಿಯುಂಟು ಮಾಡುತ್ತದೆ. ಇದ್ರಿಂದ ಡಯಾಬಿಟಿಸ್ 2 ಸಮಸ್ಯೆ ಕಾಡಬಹುದು. 

ನಿಮ್ಮ ಸೊಂಟದ ಅಳತೆಯನ್ನು ಹೀಗೆ ಪರೀಕ್ಷೆ ಮಾಡಿ : ಟೇಪನ್ನು ನೀವು ಹೊಕ್ಕುಳಿನ ಕೆಳಗೆ ಇಡಿ. ಅಳೆಯುವಾಗ ಟೇಪನ್ನು ಸರಿಯಾಗಿ ಎಳೆದುಕೊಳ್ಳಿ. ಬಟ್ಟೆ ಧರಿಸಿ ಅಳತೆ ಮಾಡಬೇಡಿ. ಅಳತೆ ಕಡಿಮೆ ಬರಬೇಕು ಎನ್ನುವ ಕಾರಣಕ್ಕೆ ಉಸಿರನ್ನು ಎಳೆದುಕೊಂಡು ಪರೀಕ್ಷೆ ಮಾಡಬೇಡಿ. ನಿಮ್ಮ ಉಸಿರಾಟ ಸಾಮಾನ್ಯವಾಗೇ ಇರಲಿ. ನಿಮಗೆ ಸರಿಯಾದ ಮಾಹಿತಿ ಸಿಗ್ತಿಲ್ಲ ಎಂದಾದ್ರೆ ಒಂದೆರಡು ಬಾರಿ ಪರೀಕ್ಷೆ ಮಾಡಿಕೊಳ್ಳಿ. 

Follow Us:
Download App:
  • android
  • ios