Asianet Suvarna News Asianet Suvarna News

ಆಫ್ರಿಕಾದ ಮರಿಯಾನೆಗಿಂತಲೂ ಹೆಚ್ಚು ತೂಕವಿದ್ದ ಈ ಬಾಲಕ ಈಗ ಹೇಗಿದ್ದಾನೆ ನೋಡಿ

ಒಂದು ಕಾಲದಲ್ಲಿ ಜಗತ್ತಿನ ಅತೀ ಧಡೂತಿ ಬಾಲಕ ಎಂದು ಗುರುತಿಸಿಕೊಂಡಿದ್ದ ಹುಡುಗ ಈಗ ಹೇಗಿದ್ದಾನೆ ಎಂದರೆ ಆತ ಹೀಗೆ ಸ್ಥೂಲಕಾಯವನ್ನು ಹೊಂದಿರುವ ಅನೇಕರ ಪಾಲಿಗೆ ಸ್ಫೂರ್ತಿಯಾಗಿದ್ದಾನೆ. 

once he weighed more than a African baby elephant, now handsom boy meet the Arya Permanaonce a world's fattest boy from Indonesia akb
Author
First Published Nov 22, 2022, 3:23 PM IST

ಸ್ಥೂಲಕಾಯ ಇಂದಿನ ಹಲವು ಮಕ್ಕಳ ಸಮಸ್ಯೆ, ವಯಸ್ಸಿಗೆ ಮೀರಿದ ದೇಹದ ತೂಕ ಗಾತ್ರ ಮಕ್ಕಳ ಜೊತೆಯಲ್ಲಿ ಮಕ್ಕಳ ಫೋಷಕರನ್ನು ಚಿಂತೆಗೆ ದೂಡುತ್ತದೆ. ಇಂದಿನ ಆಹಾರ ಶೈಲಿ, ಜೀವನ ಪದ್ಧತಿಯೂ ಇದಕ್ಕೆ ಕಾರಣ. ಆದರೆ ಒಂದು ಕಾಲದಲ್ಲಿ ಹೀಗೆ ಅತೀಯಾದ ದೇಹದ ಗಾತ್ರವನ್ನು ಹೊಂದಿ ಜಗತ್ತಿನ ಅತೀ ದಪ್ಪದ ಬಾಲಕ ಸ್ಥೂಲಕಾಯದ ಬಾಲಕ ಎಂಬ ಅವಮಾನಕ್ಕೆ ಒಳಗಾಗಿದ್ದ ಬಾಲಕನೋರ್ವ ಇಂದು ತನ್ನ ಗುರುತು ಸಿಗದಷ್ಟು ಸುಂದರವಾಗಿ ಬದಲಾಗಿದ್ದಾನೆ. ಒಂದು ಕಾಲದಲ್ಲಿ ಜಗತ್ತಿನ ಅತೀ ಧಡೂತಿ ಬಾಲಕ ಎಂದು ಗುರುತಿಸಿಕೊಂಡಿದ್ದ ಹುಡುಗ ಈಗ ಹೇಗಿದ್ದಾನೆ ಎಂದರೆ ಆತ ಹೀಗೆ ಸ್ಥೂಲಕಾಯವನ್ನು ಹೊಂದಿರುವ ಅನೇಕರ ಪಾಲಿಗೆ ಸ್ಫೂರ್ತಿಯಾಗಿದ್ದಾನೆ. 

ಆತನ ಹೆಸರು ಆರ್ಯಾ ಪೆರ್ಮನಾ (Arya Permana). ಇಂಡೋನೇಷಿಯಾ (Indonesia) ಮೂಲದ ಈ ಬಾಲಕ ಒಂದು ಕಾಲದಲ್ಲಿ 30 ಕಲ್ಲುಗಳಷ್ಟು ತೂಕವಿದ್ದ. ಆತನಿಗಾಗಿ ಧಡೂತಿ ದೇಹದಿಂದಾಗಿ ಮನೆಯ ಸ್ನಾನದ ಕೊಠಡಿ ಆತನಿಗೆ ಸಾಲುತ್ತಿರಲಿಲ್ಲ. ಇಂತಹ ಬಾಲಕ ಇಂದು ತನ್ನ ದೇಹದ ಬೇಡವಾದ ಎಲ್ಲಾ ತೂಕವನ್ನು ಕಳೆದುಕೊಂಡು, ಎಲ್ಲರೂ ಮೆಚ್ಚುವಂತಹ ಸುಂದರ ದೇಹವನ್ನು ಹೊಂದುವ ಮೂಲಕ ಮನಸು ಮಾಡಿದರೆ ಯಾವುದೂ ಅಸಾಧ್ಯವಲ್ಲ ಎಂಬುದನ್ನು ಸಾಧಿಸಿ ತೋರಿದ್ದಾನೆ.   

ಧಡೂತಿ ದೇಹ ಹೊಂದಿದವರಿಗೆ ಬಿಡಿ ಸ್ವಲ್ಪ ಹೆಚ್ಚು ತೂಕ ಹೊಂದಿದ ಅದನ್ನು ಕಳೆದುಕೊಂಡು ಬಳುಕುವ ಬಳ್ಳಿಯಂತಾಗಬೇಕು ಎಂದು ಬಯಸುವರಿಗೆ ದೇಹದ ತೂಕ ಇಳಿಸುವುದು ಎಷ್ಟು ಕಷ್ಟ ಎಂಬುದು ಗೊತ್ತೇ ಇರುತ್ತದೆ. ಅಂತಹದರಲ್ಲಿ ಈ ಒಂಭತ್ತು ವರ್ಷದ ಪುಟ್ಟ ಬಾಲಕ ಇಷ್ಟೊಂದು ತೂಕ ಇಳಿಸಿಕೊಂಡು ಎಲ್ಲರಂತೆ ಸ್ಲಿಮ್ ಆಗಿದ್ದು ಹೇಗೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುತ್ತಿದೆ. ಅದಕ್ಕೆ ಕಾರಣ ಕಠಿಣಶ್ರಮ ಆರೋಗ್ಯಯುತವಾದ ಡಯಟ್

ತೂಕ ಇಳಿಸಿದ ಯಶೋಗಾಥೆ

ಪ್ರಸ್ತುತ 16 ವರ್ಷದವನಾಗಿರುವ ಈ ಬಾಲಕನಿಗೆ ಆತನ ಪೋಷಕರು ಸೆಲೆಬ್ರಿಟಿ ಟ್ರೈನರ್ ಒಬ್ಬರನ್ನು ವೈಯಕ್ತಿಕ ತರಬೇತುದಾರರನ್ನಾಗಿ ನೇಮಿಸಿದ್ದರು. ಇದಾದ ಬಳಿಕ ಆತ ಅವರು ಹೇಳಿದ್ದನ್ನು ತಪ್ಪದ ಪಾಲಿಸಿದ್ದು, ತನ್ನ ವಯಸ್ಸಿಗೆ ತಕ್ಕ ತೂಕ ಗಳಿಸಿದ್ದಾನೆ.  2016ರಲ್ಲಿ ಇಂಡೋನೇಷಿಯಾದ ಸಂಸದ ದೆದಿ ಮುಲ್ಯಾದಿ (Dedi Mulyadi) ಮೊದಲ ಬಾರಿಗೆ ಆರ್ಯನನ್ನು ಭೇಟಿಯಾದಾಗ ಈ ಬಾಲಕ ಆರ್ಯ ತನ್ನ ಧಡೂತಿ ದೇಹದಿಂದಾಗಿ ಬಹಳಷ್ಟು ಪ್ರಚಾರಕ್ಕೆ ಬಂದಿದ್ದ. ಈತ ಒಂಭತ್ತು ವರ್ಷದವನಿದ್ದಾಗ 190 ಕೆಜಿ ತೂಕವಿದ್ದ. ಇದು ಈತನನ್ನು ಆಫ್ರಿಕಾದ ಮರಿಯಾನೆಗಿಂತಲೂ ( African elephant) ಹೆಚ್ಚು ತೂ ಹೊಂದಿರುವ ಬಾಲಕ ಎನ್ನುವಂತೆ ಮಾಡಿತ್ತು.

12 ಕೆ.ಜಿ. ತೂಕದ ದಢೂತಿ ಬೆಕ್ಕು!

ಪಶ್ಚಿಮ ಜಾವದಲ್ಲಿರುವ (West Java) ಬಾಂಡಂಗ್ (Bandung) ಪ್ರದೇಶದ ಹಸನ್ ಸದಿಕಿನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಈ ಗುಂಡು ಗುಂಡಾಗಿದ್ದ ಬಾಲಕನನ್ನು ತಾನು ಭೇಟಿಯಾಗಿದ್ದಾಗಿ ಸಂಸದ ದೇದಿ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ಜುಲೈ 2016 ರ ಜುಲೈ 12ರಂದು ನಾನು ಬಾಲಕ ಆರ್ಯನನ್ನು ಭೇಟಿ ಮಾಡಿದೆ. ಆತ ಆಗ ಹಸನ್ ಸದಿಕಿನ್ ಆಸ್ಪತ್ರೆಯಲ್ಲಿ (Hasan Sadikin Hospital) ಚಿಕಿತ್ಸೆ ಪಡೆಯುತ್ತಿದ್ದ.  ಆ ಸಮಯದಲ್ಲಿ ಆರ್ಯ 420 ಪೌಂಡ್ ತೂಗುತ್ತಿದ್ದ ಆದರೆ ಈಗ ಆರ್ಯ ಮಾಮೂಲಿ ಹುಡುಗರಂತೆ ಸಹಜ ಸ್ಥಿತಿಯ ದೇಹವನ್ನು ಹೊಂದಿದ್ದಾನೆ ಎಂದು ನಾನು ಮಾಧ್ಯಮಗಳ ಮೂಲಕ ಕೇಳ್ಪಟ್ಟೆ. ಪ್ರಸ್ತುತ ಬಾಲಕ ಕಣ್ಣಿಗೆ ಕನ್ನಡಕ ಹಾಕಿಕೊಂಡು ಹ್ಯಾಂಡ್‌ಸಮ್ ಆಗಿ ಕಾಣಿಸುತ್ತಿದ್ದಾನೆ. ಆರೋಗ್ಯವನ್ನು ಉಳಿಸಿಕೋ ಮಗನೇ ನಿನಗಾಗಿ ಒಳ್ಳೆಯ ಭವಿಷ್ಯ ಕಾದಿದೆ ಎಂದು ಸಂಸದ ದೇದಿ ಬರೆದುಕೊಂಡಿದ್ದಾರೆ. 

ಆರ್ಯನ ತೂಕ ಇಳಿಸಿದ ಟ್ರೈನರ್ ಯಾರು?

ಅಂದಹಾಗೆ ಆರ್ಯನ ತೂಕ ಇಳಿಸಿದ ಸೆಲೆಬ್ರಿಟಿ ಟ್ರೈನರ್ ಹೆಸರು ಅದೇ ರೈ. ಇನ್ಸ್ಟಾಗ್ರಾಮ್‌ನಲ್ಲಿ 6 ಲಕ್ಷ ಫಾಲೋವರ್ಸ್‌ಗಳನ್ನು ಹೊಂದಿರುವ ಅದೇ ರೈ ಅವರು ಆರ್ಯಾನ ತೂಕ ಇಳಿಕೆಗಾಗಿ 2016ರರಿಂದ ಕೆಲಸ ಮಾಡಲು ಶುರು ಮಾಡಿದ್ದಾರೆ. ಆರ್ಯಾ ತಮ್ಮನ್ನು ಮೊದಲು ಭೇಟಿ ಮಾಡಿದ ಸಮಯದ ವಿಡಿಯೋ ಹಾಗೂ ಇತ್ತೀಚಿನ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಇಂಡೋನೇಷ್ಯಾದ ಜಕಾರ್ತ ಪೋಸ್ಟ್‌ಗೆ (Jakarta Post) ಈ ಬಗ್ಗೆ ಮಾತನಾಡಿದ ಅದೇ ರೈ, ನಾನು ಕೇವಲ ಆತನಿಗೆ ಬೆಂಬಲಿಸಿದ್ದೇನೆ. ಆತ ಕ್ರೀಡೆಯನ್ನು ಇಷ್ಟಪಡುತ್ತಿದ್ದ. ದಢೂತಿ ದೇಹ ಹೊಂದಿದ್ದರೂ, ಸಾಕ್ಸರ್ ಆಡಲು ಬಯಸುತ್ತಿದ್ದ. ನಾನು ಆತನಿಗೆ ನೀಡಿದ ಮೊದಲ ಬೆಂಬಲವೆಂದರೆ ಉತ್ತಮ ಆಹಾರ ಕ್ರಮವನ್ನು ರೂಢಿಸಿಕೊಳ್ಳುವ ಪ್ರಾಮುಖ್ಯತೆ ಹಾಗೂ ಅದನ್ನು ಆತನ ಪೋಷಕರೊಂದಿಗೆ ಹಂಚಿಕೊಂಡಿದ್ದು ಎಂದು ಅದೇ ರೈ ಹೇಳಿದ್ದಾರೆ.  ಆರ್ಯಾ ಈಗ ಭರವಸೆಗೆ ಒಂದು ಲಕ್ಷಣವಾಗಿದ್ದಾನೆ. ಆರ್ಯಾನೇ ತೂಕ ಇಳಿಸಬಹುದಾದರೆ ನಮ್ಮಿಂದ ಯಾಕೆ ಸಾಧ್ಯ ಇಲ್ಲ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಅದೇ ರೈ ಹೇಳಿದರು. 

ತನ್ನ ಪ್ರಿಯತಮೆಯನ್ನು ದಢೂತಿ ಎಂದ ಮಹಿಳೆಗೆ ಖಡಕ್ ಉತ್ತರ ಕೊಟ್ಟ ಪ್ರಿಯತಮ: ವೈರಲ್ ಆಯ್ತು ಟ್ವೀಟ್!

ನಿಯಮಿತ ಡಯಟ್ ವ್ಯಾಯಾಮದ ಜೊತೆಗೆ ಆರ್ಯಾನಿಗೆ ತನ್ನ ಹೊಟ್ಟೆಯ ಗಾತ್ರವನ್ನು ಕಡಿಮೆ ಮಾಡುವ ಹಾಗೂ ಹಸಿವನ್ನು ನಿಗ್ರಹಿಸುವ ಸಲುವಾಗಿ ಜೊತೆ ಜೊತೆಗೆ ಬಾರಿಯಾಟ್ರಿಕ್ ಶಸ್ತ್ರಚಿಕಿತ್ಸೆಯನ್ನು ಕೂಡ ನಡೆಸಲಾಗಿದೆ. ಪ್ರಸ್ತುತ ಈಗ ಆರ್ಯಾ 87 ಕೆಜಿ ತೂಕ ಹೊಂದಿದ್ದಾನೆ. ಇದು ಆತ ತಾನು ಅತೀಯಾದ ತೂಕ ಹೊಂದಿದ್ದ ಸಮಯದ ತೂಕಕ್ಕಿಂತ ಅರ್ಧ ತೂಕಕ್ಕಿಂತಲೂ ಕಡಿಮೆ. 2014ರಲ್ಲಿ ಈತನ ತೂಕ ನಿಯಂತ್ರಣಕ್ಕೆ ಸಿಗದೇ ಹೋಯ್ತು. ಎರಡೇ ವರ್ಷಗಳಲ್ಲಿ ಈತನ ತೂಕ ವಿಪರೀತವಾಗಿ ಏರಿಕೆಯಾಗಿ ಎರಡೇ ವರ್ಷದಲ್ಲಿ ಆತ ಜಗತ್ತಿನ ಅತ್ಯಂತ ತೂಕದ ಬಾಲಕನಾಗಿ ಓಗಿದ್ದ ಎಂದು ಹೇಳಿದರು. ಅದೇನೆ ಇರಲಿ. ಈ ಧಡೂತಿ ತೂಕ ಇತಿಹಾಸವೆನಿಸಿದ್ದು, ಆರೋಗ್ಯಯುತ ಡಯಟ್ ಜೊತೆ ಕಠಿಣ ಪರಿಶ್ರಮವಿದ್ದರೆ ಅಸಾಧ್ಯ ಎಂಬುದು ಯಾವುದು ಇಲ್ಲ ಎಂಬುದನ್ನು ಈ  ಬಾಲಕ ತೋರಿಸಿಕೊಟ್ಟಿದ್ದಾನೆ. 

Follow Us:
Download App:
  • android
  • ios