ಫಿಲಡೆಲ್ಫಿಯಾ[ಆ.26]:  ಬೆಕ್ಕಿನ ಮರಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಆಡುವುದು ಸಹಜ. ಆದರೆ, ಅಲ್ಲೊಂದು ಬೆಕ್ಕು ಎಷ್ಟುದಪ್ಪ ಹಾಗೂ ಭಾರವಾಗಿದೆಯೆಂದರೆ ಅದನ್ನು ಒಮ್ಮೆ ಎತ್ತಿಕೊಳ್ಳುವುದಕ್ಕೂ ಏದುಸಿರು ಬಿಡಬೇಕು.

ಅಮೆರಿಕದ ಫಿಲಡೆಲ್ಫಿಯಾದ ಮೊರ್ರಿಸ್‌ ಪ್ರಾಣಿ ಸಂಗ್ರಹಾಲಯದಲ್ಲಿರುವ ಬೆಕ್ಕೊಂದು ಇದೀಗ ತನ್ನ ದಢೂತಿ ದೇಹದಿಂದ ಭಾರೀ ಸುದ್ದಿಯಾಗಿದೆ.

ಸಾಮಾನ್ಯವಾಗಿ ಬೆಕ್ಕು 4ರಿಂದ 5 ಕೆ.ಜಿ. ಇದ್ದರೆ ಬೀಜೆ ಹೆಸರಿನ ಈ ಬೆಕ್ಕು ಬರೋಬ್ಬರಿ 12 ಕೇಜಿಯಷ್ಟುತೂಕವಿದೆ.