ಪ್ರೀತಿ ಶರೀರದಿಂದಲ್ಲ, ಹೃದಯಗಳ ಮಿಲನದಿಂದಾಗುತ್ತದೆ ಎಂಬ ಮಾತಿದೆ. ಈ ಮಾತು ಇತ್ತೀಚೆಗೆ ವೈರಲ್ ಆಗುತ್ತಿರುವ ಟ್ವೀಟ್ ಒಂದನ್ನು ನೀಡಿದರೆ ನಿಜ ಎನಿಸುತ್ತದೆ. ಯುವಕನೊಬ್ಬ ತನ್ನ ಪ್ರಿಯತಮೆಯೊಂದಿಗೆ ತೆಗೆಸಿದ ಫೋಟೋಗಳನ್ನು ಟ್ವಿಟರ್'ನಲ್ಲಿ ಶೇರ್ ಮಾಡಿದ್ದ. ಆದರೆ ಈತನ ಈ ಟ್ವೀಟ್'ಗೆ ವ್ಯಕ್ತಿಯೊಬ್ಬ 'ನಿನ್ನ ಪ್ರಿಯತಮೆ ದಢೂತಿಯಾಗಿದ್ದಾಳೆ' ಎಂದು ಕಮೆಂಟ್ ಮಾಡಿದ್ದ. ವ್ಯಕ್ತಿಯ ಉದ್ಧಟತನದ ಉತ್ತರದಿಂದ ಸಿಟ್ಟಿಗೆದ್ದ ಯುವಕ, ಆ ವ್ಯಕ್ತಿಗೆ ಖಡಕ್ಕಾಗೇ ಉತ್ತರಿಸಿದ್ದಾನೆ. ಈ ಪ್ರಿಯತಮನ ಉತ್ತರ ಸದ್ಯ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿದ್ದು, 42 ಸಾವಿರಕ್ಕೂ ಅಧಿಕ ಮಂದಿ ಶೇರ್ ಮಾಡಿದ್ದಾರೆ. ಅಷ್ಟಕ್ಕೂ ಆತ ನೀಡಿದ ಉತ್ತರವೇನು ಅಂತೀರಾ? ಹಾಗಾದ್ರೆ ಈ ಸ್ಟೋರಿ ಓದಿ.

ನವದೆಹಲಿ(ಮೇ.10): ಪ್ರೀತಿ ಶರೀರದಿಂದಲ್ಲ, ಹೃದಯಗಳ ಮಿಲನದಿಂದಾಗುತ್ತದೆ ಎಂಬ ಮಾತಿದೆ. ಈ ಮಾತು ಇತ್ತೀಚೆಗೆ ವೈರಲ್ ಆಗುತ್ತಿರುವ ಟ್ವೀಟ್ ಒಂದನ್ನು ನೀಡಿದರೆ ನಿಜ ಎನಿಸುತ್ತದೆ. ಯುವಕನೊಬ್ಬ ತನ್ನ ಪ್ರಿಯತಮೆಯೊಂದಿಗೆ ತೆಗೆಸಿದ ಫೋಟೋಗಳನ್ನು ಟ್ವಿಟರ್'ನಲ್ಲಿ ಶೇರ್ ಮಾಡಿದ್ದ. ಆದರೆ ಈತನ ಈ ಟ್ವೀಟ್'ಗೆ ಯುವತಿಯೊಬ್ಳು 'ನಿನ್ನ ಪ್ರಿಯತಮೆ ದಢೂತಿಯಾಗಿದ್ದಾಳೆ' ಎಂದು ಕಮೆಂಟ್ ಮಾಡಿದ್ಳುದ. ಆಕೆಯ ಉದ್ಧಟತನದ ಉತ್ತರದಿಂದ ಸಿಟ್ಟಿಗೆದ್ದ ಯುವಕ, ಆಕೆಗೆ ಖಡಕ್ಕಾಗೇ ಉತ್ತರಿಸಿದ್ದಾನೆ. ಈ ಪ್ರಿಯತಮನ ಉತ್ತರ ಸದ್ಯ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿದ್ದು, 42 ಸಾವಿರಕ್ಕೂ ಅಧಿಕ ಮಂದಿ ಶೇರ್ ಮಾಡಿದ್ದಾರೆ. ಅಷ್ಟಕ್ಕೂ ಆತ ನೀಡಿದ ಉತ್ತರವೇನು ಅಂತೀರಾ? ಹಾಗಾದ್ರೆ ಈ ಸ್ಟೋರಿ ಓದಿ.

ಮ್ಯಾಡಿಸನ್ ಹಾಗೂ ಬುಕರ್ ಎಂಬವರು ಒಬ್ಬರನ್ನೊಬ್ಬರು ಪ್ರತಿಸುತ್ತಿದ್ದು, ಇಬ್ಬರೂ ತಮ್ಮ ಕೆಲ ಫೋಟೋಗಳನ್ನು ಸಾಮಾಜಿಕ ಜಾಲಾತಾಣಗಳಲ್ಲಿ ಅಪ್ಲೋಡ್ ಮಾಡಿದ್ದರು. ಈ ಫೋಟೋಗಳಲ್ಲಿ ಮ್ಯಾಡಿಸನ್ ದಢೂತಿಯಾಗಿ ಕಾಣುತ್ತಿದ್ದಳು. ಇದನ್ನು ಕಂಡ ಕಾಬ್ಬಾಗೆ ಎಂಬಾಕೆ 'ವಾವ್ ನೀನಿಷ್ಟು ದಪ್ಪಗಿದ್ದೀಯಾ ಆದರೂ ನಿನ್ನ ಪ್ರಿಯತಮ ನಿನ್ನನ್ನು ಪ್ರೀತಿಸುತ್ತಾನೆ' ಎಂದು ಕಮೆಂಟ್ ಮಾಡಿದ್ದ.

Scroll to load tweet…

ಇದನ್ನು ಕಂಡ ಮ್ಯಾಡಿಸನ್ 'ಅಪರಿಚಿತ ವ್ಯಕ್ತಿಯೊಬ್ಬರ ಕುರಿತಾಗಿ ಯಾವುದೇ ವ್ಯಕ್ತಿಯೊಬ್ಬ ಇಷ್ಟು ಒಂದು ನಿಷ್ಠುರವಾಗಲು ಹೇಗೆ ಸಾಧ್ಯ?' ಎಂದು ಉತ್ತರಿಸಿದ್ದಾಳೆ. ಇದಾದ ಮರುಕ್ಷಣವೇ ತನ್ನ ಪ್ರಿಯತಮೆಯ ಪರವಾಗಿ ಉತ್ತರಿಸಿದ ಪ್ರಿಯತಮ ಬುಕರ್ 'ಬೇಬಿ ನೀನು ದಡೂತಿಯಲ್ಲ. ದೇವರು ನಿನ್ನನ್ನು ನನಗಾಗಿಯೇ ಸೃಷ್ಠಿಸಿದ್ದಾರೆ. ನೀನು ನಿಜಕ್ಕೂ ಪರ್ಫೆಕ್ಟ್ ಆಗಿದ್ದೀಯಾ. ಎಂದಿದ್ದಾನೆ.

Scroll to load tweet…

ಈ ಟ್ವೀಟ್ ಸಮರದಲ್ಲಿ ಹಲವಾರು ಮಂದಿ ಪ್ರೇಮಿಗಳ ಬೆಂಬಲಕ್ಕೆ ನಿಂತಿದ್ದು, ಬಹುತೇಕ ಮಂದಿ ತಮ್ಮ ದಢೂತಿ ಸಂಗಾತಿಯೊಂದಿಗಿನ ಫೋಟೋಗಳನ್ನು ಅಪ್ಲೋಡ್ ಮಾಡಿ ತಮ್ಮ ಬೆಂಬಲ ಸೂಚಿಸಿದ್ದಾರೆ.