Health
ಊಟದ ನಂತರ ತಿನ್ನುವ ಸೋಂಪಿನಿಂದ ಸಿಗುವ ಹಲವು ಆರೋಗ್ಯ ಪ್ರಯೋಜನಗಳ ಬಗ್ಗೆ ಇಲ್ಲಿದೆ ಮಾಹಿತಿ
ಸೋಂಪಿನಲ್ಲಿ ಏನಿರುತ್ತದೆ ಎಂದು ಬಹಳಷ್ಟು ಜನರು ಭಾವಿಸುತ್ತಾರೆ. ಆದರೆ, ಸೋಂಪಿನಲ್ಲಿ ಕ್ಯಾಲೋರಿ ಕಡಿಮೆ ಇರುತ್ತವೆ. ವಿಟಮಿನ್ ಸಿ, ಇ, ಕೆ, ಕ್ಯಾಲ್ಸಿಯಂ, ಕಬ್ಬಿಣ ಹೇರಳವಾಗಿವೆ.
ಊಟದ ನಂತರ ಸೋಂಪು ತಿನ್ನುವುದರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ.
ಸೋಂಪು ಬೀಜಗಳಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಬಾಯಿ ದುರ್ವಾಸನೆಯನ್ನು ಕಡಿಮೆ ಮಾಡಿ, ಬಾಯಿಯನ್ನು ತಾಜಾವಾಗಿರಿಸುತ್ತವೆ.
ಟೈಪ್ 2 ಮಧುಮೇಹ ಇರುವವರಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಬೀಟಾ ಕ್ಯಾರೋಟಿನ್ ಸೋಂಪು ಬೀಜಗಳಲ್ಲಿ ಹೇರಳವಾಗಿರುತ್ತದೆ.
ಸೋಂಪಿನಲ್ಲಿ ಹೆಚ್ಚು ಫೈಟೋನ್ಯೂಟ್ರಿಯೆಂಟ್‌ಗಳಿವೆ, ಇವು ಆಸ್ತಮಾ, ಬ್ರಾಂಕೈಟಿಸ್ ಲಕ್ಷಣಗಳನ್ನು ಕಡಿಮೆ ಮಾಡುತ್ತವೆ.