ಬಿಪಿ ಅಸಾಮಾನ್ಯವಾಗಿ ಏರಿದ್ದರಿಂದ ಉಪಕರಣದಲ್ಲಿ ತೊಂದರೆಯಿರಬಹುದೆಂದು ಭಾವಿಸಿ ಮತ್ತೊಂದು ಉಪಕರಣದಿಂದ ಪರೀಕ್ಷಿಸಿದಾಗಲೂ ಬಿಪಿ ಹೆಚ್ಚಿರುವುದು ತೋರಿಸಿತ್ತು.

ಕೊಚ್ಚಿ (ಫೆ.7): ವಯನಾಡಿನ ನೂಲ್ಪುಳ ಕುಟುಂಬ ಆರೋಗ್ಯ ಕೇಂದ್ರದ ಆರೋಗ್ಯ ಕಾರ್ಯಕರ್ತೆಯರು ಅಧಿಕ ರಕ್ತದೊತ್ತಡ ಹೊಂದಿದ್ದ12ನೇ ತರಗತಿ ವಿದ್ಯಾರ್ಥಿಯನ್ನು ರಕ್ಷಿಸಿದ್ದಾರೆ. ಶಾಲಾ ಆರೋಗ್ಯ ಕಾರ್ಯಕ್ರಮದ ಭಾಗವಾಗಿ ನಡೆಸಿದ ಆರೋಗ್ಯ ತಪಾಸಣೆಯಲ್ಲಿ ವಿದ್ಯಾರ್ಥಿಯ ಬಿಪಿ ಅಸಾಮಾನ್ಯವಾಗಿ ಏರಿಕೆಯಾಗಿದ್ದು ಗೊತ್ತಾಗಿತ್ತು. ತುಂಬಾ ಗಂಭೀರ ಪರಿಸ್ಥಿತಿಗೆ ತಲುಪುವ ಮುನ್ನವೇ ಸಕಾಲದಲ್ಲಿ ಪತ್ತೆ ಹಚ್ಚಿ ಸರಿಯಾದ ರೀತಿಯಲ್ಲಿ ಮಧ್ಯಪ್ರವೇಶ ಮಾಡಿ ಚಿಕಿತ್ಸೆ ಒದಗಿಸಿದ್ದಾರೆ. ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಾದರಿ ಕೆಲಸ ಮಾಡಿದ ಎಲ್ಲಾ ಆರೋಗ್ಯ ಕಾರ್ಯಕರ್ತೆಯರನ್ನು ಶ್ಲಾಘಿಸಿದ್ದಾರೆ.

ಶಾಲಾ ಆರೋಗ್ಯ ಕಾರ್ಯಕ್ರಮದ ಭಾಗವಾಗಿ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸುತ್ತಿದ್ದಾಗ ನೂಲ್ಪುಳ ಕುಟುಂಬ ಆರೋಗ್ಯ ಕೇಂದ್ರದ ಆರ್‌ಬಿಎಸ್‌ಕೆ ನರ್ಸ್‌ಗಳಾದ ರೀತಾ ಮತ್ತು ಟಿಂಟು ಕುರ್ಯಾಕೋಸ್ ಅವರು ವಿದ್ಯಾರ್ಥಿಯ ಬಿಪಿಯಲ್ಲಿ ವ್ಯತ್ಯಾಸ ಆಗುತ್ತಿರುವುದನ್ನು ಪತ್ತೆ ಮಾಡಿದ್ದರು. ಸಂಶಯಗೊಂಡ ಅವರು ಮತ್ತೊಂದು ಬಿಪಿ ಉಪಕರಣದಿಂದ ಪರೀಕ್ಷಿಸಿದಾಗಲೂ ಬಿಪಿ ಏರಿಕೆ ಆಗುತ್ತಿರುವ ರೀಡಿಂಗ್‌ ತೋರಿಸುತ್ತಿತ್ತು. ಈ ಹಂತದಲ್ಲಿ ವಿದ್ಯಾರ್ಥಿಗೆ ತುರ್ತು ಚಿಕಿತ್ಸೆ ಅಗತ್ಯವಿದೆ ಎಂದು ಅರಿತ ಅವರು ಶಿಕ್ಷಕರು ಮತ್ತು ಪೋಷಕರಿಗೆ ಮಾಹಿತಿ ನೀಡಿ ಪರಿಸ್ಥಿತಿಯ ಗಂಭೀರತೆಯನ್ನು ತಿಳಿಸಿದರು.

ತಜ್ಞರ ಪರೀಕ್ಷೆಯಲ್ಲಿ ವಿದ್ಯಾರ್ಥಿಗೆ ಮುಖ್ಯ ರಕ್ತನಾಳವಾದ ಅಯೋರ್ಟ ಕಿರಿದಾಗಿದೆ ಎಂದು ತಿಳಿದುಬಂದಿದ್ದು, ಹೃದ್ರೋಗ ಚಿಕಿತ್ಸೆ ಆರಂಭಿಸಲಾಯಿತು. ಬಳಿಕ ಬಲೂನ್ ಸರ್ಜರಿ ಮಾಡಲಾಗಿದೆ. ಸಕಾಲದಲ್ಲಿ ತಜ್ಞ ಚಿಕಿತ್ಸೆ ನೀಡಿದ್ದರಿಂದ ಅಪಾಯದಿಂದ ಪಾರಾಗಲು ಸಾಧ್ಯವಾಯಿತು ಎಂದು ವೈದ್ಯರು ತಿಳಿಸಿದ್ದಾರೆ.

ಸಾಮಾನ್ಯವಾಗಿ ಮೂವತ್ತು ವರ್ಷ ದಾಟಿದವರಲ್ಲಿ ರಕ್ತದೊತ್ತಡ ಕಂಡುಬರುತ್ತದೆ. 12ನೇ ತರಗತಿ ವಿದ್ಯಾರ್ಥಿಯಲ್ಲಿ ಅಧಿಕ ರಕ್ತದೊತ್ತಡ ಪತ್ತೆಯಾಗುವುದು ಅಸಾಮಾನ್ಯವಾಗಿದೆ. ರಕ್ತದೊತ್ತದ ಅಧಿಕವಾಗುತ್ತಲೇ ಇದ್ದಾಗ ತುರ್ತು ಆರೋಗ್ಯ ತಪಾಸಣೆ ಹಾಗೂ ಪ್ರಮುಖ ಚಿಕಿತ್ಸೆಗಳು ಅಗತ್ಯವಿರುತ್ತದೆ. ರಕ್ತದೊತ್ತಡವು ಮೌನ ಕೊಲೆಗಾರ. ಹಲವು ಬಾರಿ ಯಾವುದೇ ಲಕ್ಷಣಗಳನ್ನು ತೋರಿಸದೆ ಇರುವ ಕಾಯಿಲೆ ಕೂಡ ಹೌದು. ವಿಶೇಷವಾಗಿ ಮಕ್ಕಳು ಮತ್ತು ಯುವಜನರಲ್ಲಿ ಲಕ್ಷಣಗಳು ಕಾಣಿಸಿಕೊಳ್ಳಲು ಸಮಯ ತೆಗೆದುಕೊಳ್ಳಬಹುದು. ಆಗಾಗ್ಗೆ ತಪಾಸಣೆ ಮಾಡುವುದರಿಂದ ಈ ಸ್ಥಿತಿಯನ್ನು ಪತ್ತೆ ಹಚ್ಚಬಹುದು.

ನಂಗೆ ಉಪ್ಪಿಟ್ಟು ಬೇಡ ಬಿರಿಯಾನಿ ಬೇಕು.,.. ಅಂಗನವಾಡಿ ಬಾಲಕನ ಮನವಿಗೆ ಸ್ಪಂದಿಸಿದ ಸಚಿವೆ

ಆರೋಗ್ಯ ಇಲಾಖೆ ಶಾಲೆಗಳ ಮೂಲಕ ಜಾರಿಗೆ ತಂದಿರುವ ಶಾಲಾ ಆರೋಗ್ಯ ಕಾರ್ಯಕ್ರಮದ ಮೂಲಕ ಈವರೆಗೆ 50 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಪರೀಕ್ಷಿಸಲಾಗಿದೆ. ಮಕ್ಕಳು ಮತ್ತು ಹದಿಹರೆಯದವರ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಿ, ಉತ್ತಮ ಸ್ಥಿತಿಯಲ್ಲಿಡುವ ಉದ್ದೇಶದಿಂದ ಈ ಯೋಜನೆಯನ್ನು ರೂಪಿಸಲಾಗಿದೆ. ಶಾಲಾ ಆರೋಗ್ಯ ತಪಾಸಣೆಗಳ ಮೂಲಕ ಅನೇಕ ವಿದ್ಯಾರ್ಥಿಗಳಲ್ಲಿ ರೋಗದ ಸಾಧ್ಯತೆಯನ್ನು ಪತ್ತೆ ಹಚ್ಚಿ, ಮುಂದಿನ ತಪಾಸಣೆ ಮತ್ತು ಚಿಕಿತ್ಸೆ ಒದಗಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.

ಉದ್ಯೋಗ ಅರಸಿ ಕೇರಳ ಯುವಕರು ಗಲ್ಫ್‌ಗೆ, ಮಲಯಾಳಿ ಹುಡುಗೀರ ಹೃದಯಕ್ಕೆ ಈಶಾನ್ಯ ವಲಸಿಗರ ಲಗ್ಗೆ