Asianet Suvarna News Asianet Suvarna News

ಜನ ಸಾಮಾನ್ಯರಿಗೆ ರಿಲೀಫ್, ಪ್ಯಾರಸಿಟಮಾಲ್ ಸೇರಿ 128 ಔಷಧಿಗಳ ಬೆಲೆ ಇಳಿಕೆ

ಔಷಧ ಬೆಲೆ ನಿಯಂತ್ರಕ ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರವು ಪ್ರತಿಜೀವಕಗಳು ಮತ್ತು ಆಂಟಿವೈರಲ್ ಔಷಧಿಗಳು ಸೇರಿದಂತೆ 128 ಔಷಧಿಗಳ ಬೆಲೆಗಳನ್ನು ಪರಿಷ್ಕರಿಸಿದೆ. ಜನರು ಹೆಚ್ಚಾಗಿ ಬಳಸುವ ಪ್ಯಾರಾಸಿಟಮಾಲ್ ಬೆಲೆ ಹೇಗಿದೆ. ಇಲ್ಲಿದೆ ಹೆಚ್ಚಿನ ಮಾಹಿತಿ. 

NPPA revises prices of medicines including paracetomol Vin
Author
First Published Jan 18, 2023, 1:22 PM IST

ನವದೆಹಲಿ: ಜ್ವರವಿರಲಿ, ಕೆಮ್ಮು-ಶೀತವಿರಲಿ ಅಥವಾ ತಲೆನೋವೇ ಇರಲಿ ಹೆಚ್ಚಿನವರು ತಕ್ಷಣ ತೆಗೆದುಕೊಳ್ಳುವುದು ಪ್ಯಾರಸಿಟಮಾಲ್. ವೈದ್ಯರ ಬಳಿ ಹೋದ್ರೆ ಎಕ್ಸ್‌ರೇ, ಸ್ಕ್ಯಾನಿಂಗ್ ಎಂದು ಸಿಕ್ಕಾಪಟ್ಟೆ ಫೀಸ್ ಹಾಕ್ತಾರೆ ಎಂದುಕೊಂಡು ಹೆಚ್ಚಿನವರು ಸುಲಭವಾಗಿ ಪ್ಯಾರಾಸಿಟಮಮಾಲ್‌ ಟ್ಯಾಬ್ಲೆಟ್ ತೆಗೆದುಕೊಳ್ಳುತ್ತಾರೆ. ಯಾವುದೇ ವೈದ್ಯರ ಪ್ರಿಸ್ಕ್ರಿಪ್ಶನ್ ಇಲ್ಲದೆ ಈ ಟ್ಯಾಬ್ಲೆಟ್‌ನ್ನು ಮೆಡಿಕಲ್‌ನಿಂದ ಪಡೆದು ಜ್ವರವನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಹಲವು ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡುವ ಈ ಪ್ಯಾರಾಸಿಟಮಾಲ್ ಔಷಧಿಯ ಬೆಲೆ ಪರಿಷ್ಕರಣೆಯಾಗಿದೆ.

ಔಷಧ (Medicine) ಬೆಲೆ ನಿಯಂತ್ರಕ ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ (NPPA) ಪ್ರತಿಜೀವಕಗಳು ಮತ್ತು ಆಂಟಿವೈರಲ್ ಔಷಧಿಗಳು ಸೇರಿದಂತೆ 128 ಔಷಧಿಗಳ ಬೆಲೆಯನ್ನ ಪರಿಷ್ಕರಿಸಿದೆ. ಬೆಲೆಗಳನ್ನು ಪರಿಷ್ಕರಿಸಲಾದ ಔಷಧಿಗಳಲ್ಲಿ ಅಮೋಕ್ಸಿಸಿಲಿನ್ ಮತ್ತು ಕ್ಲಾವುಲಾನಿಕ್ ಆಮ್ಲದ ಪ್ರತಿಜೀವಕ ಚುಚ್ಚುಮದ್ದು (Injection)ಗಳು ಸಹ ಸೇರಿವೆ. ವ್ಯಾಂಕೊಮೈಸಿನ್, ಅಸ್ತಮಾ ಔಷಧಿ ಸಾಲ್ಬುಟಮಾಲ್, ಕ್ಯಾನ್ಸರ್ ಔಷಧಿ ಟ್ರಾಸ್ಟುಜುಮಾಬ್, ಮೆದುಳಿನ ಗೆಡ್ಡೆ ಚಿಕಿತ್ಸೆ ಔಷಧ ಟೆಮೊಜೊಲೊಮೈಡ್, ನೋವು ನಿವಾರಕ ಇಬುಪ್ರೊಫೇನ್, ನೋವು ಮತ್ತು ಜ್ವರಕ್ಕೆ (Fever) ಬಳಸುವ ಪ್ಯಾರಸಿಟಮಾಲ್ ಬೆಲೆಗಳನ್ನ ಎನ್ಪಿಪಿಎ ಪರಿಷ್ಕರಿಸಿದೆ.

ಭಾರತದ ಕೋವಿಡ್‌ ಔಷಧಕ್ಕೆ ಚೀನಾದಲ್ಲಿ ಭಾರೀ ಡಿಮ್ಯಾಂಡ್: ಕಾಳಸಂತೆಯ ಮೊರೆ ಹೋದ ಚೀನಿಯರು..!

ಅಧಿಸೂಚನೆಯ ಪ್ರಕಾರ, ಒಂದು ಅಮೋಕ್ಸಿಸಿಲಿನ್ ಕ್ಯಾಪ್ಸೂಲ್ ಗರಿಷ್ಠ ಬೆಲೆ 2.18 ರೂಪಾಯಿಗೆ ನಿಗದಿಪಡಿಸಲಾಗಿದೆ. ಸೆಟಿರಿಜೈನ್, ಅಮೋಕ್ಸಿಸಿಲಿನ್ ಮತ್ತು ಕ್ಲಾವುಲಾನಿಕ್ ಆಮ್ಲದ ಚುಚ್ಚುಮದ್ದಿನ ವೆಚ್ಚ 90.38 ರೂಪಾಯಿ, ಇಬುಪ್ರೊಫೇನ್ 400 ಮಿಗ್ರಾಂ ಟ್ಯಾಬ್ಲೆಟ್ ಬೆಲೆ 1.07ಕ್ಕೆ ನಿಗದಿಪಡಿಸಲಾಗಿದೆ ಎಂದು ತಿಳಿದುಬಂದಿದೆ. 'ಸರ್ಕಾರವು ನಿಗದಿಪಡಿಸಿದ ಮತ್ತು ಸೂಚಿಸಿದ ಸೀಲಿಂಗ್ ಬೆಲೆಗಿಂತ (ಜೊತೆಗೆ ಅನ್ವಯವಾಗುವ ಸರಕು ಮತ್ತು ಸೇವಾ ತೆರಿಗೆ) ಬ್ರಾಂಡೆಡ್ ಅಥವಾ ಜೆನೆರಿಕ್ ಅಥವಾ ನಿಗದಿತ ಸೂತ್ರೀಕರಣಗಳ ಎರಡೂ ಆವೃತ್ತಿಗಳನ್ನು ಮಾರಾಟ ಮಾಡುವ ಎಲ್ಲಾ ತಯಾರಕರು ಎಲ್ಲಾ ಬೆಲೆಗಳನ್ನು ಪರಿಷ್ಕರಿಸುತ್ತಾರೆ. ಅಂತಹ ಸೂತ್ರೀಕರಣಗಳು ಕೆಳಮುಖವಾಗಿ ಸೀಲಿಂಗ್ ಬೆಲೆಯನ್ನು ಮೀರುವುದಿಲ್ಲ' ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಡ್ರಗ್ಸ್ ಆದೇಶ, 2013 (NLEM 2022) ಪ್ರಕಾರ ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ (NPPA) 12 ನಿಗದಿತ ಸೂತ್ರೀಕರಣಗಳ ಚಿಲ್ಲರೆ ಬೆಲೆಯನ್ನ ನಿಗದಿಪಡಿಸಿದೆ. ಮಧುಮೇಹ ವಿರೋಧಿ ಸಂಯೋಜನೆಯ ಔಷಧಿ ಗ್ಲೈಮೆಪಿರೈಡ್, ವೋಗ್ಲಿಬೋಸ್ ಮತ್ತು ಮೆಟ್ಫಾರ್ಮಿನ್ ಮಾತ್ರೆಗಳ ಚಿಲ್ಲರೆ ಬೆಲೆಯನ್ನ 13.83 ರೂ.ಗೆ ನಿಗದಿಪಡಿಸಲಾಗಿದೆ. ಅದೇ ರೀತಿ ಪ್ಯಾರಸಿಟಮಾಲ್, ಫಿನೈಲ್ಫ್ರೈನ್ ಹೈಡ್ರೋಕ್ಲೋರೈಡ್, ಡಿಫೆನ್ಹೈಡ್ರಮೈನ್ ಹೈಡ್ರೋಕ್ಲೋರೈಡ್, ಕೆಫೀನ್‌ನ ಚಿಲ್ಲರೆ ಬೆಲೆಯನ್ನ ಪ್ರತಿ ಮಾತ್ರೆಗೆ 2.76 ರೂ.ಗೆ ನಿಗದಿಪಡಿಸಲಾಗಿದೆ. 

1997ರಲ್ಲಿ ಸ್ಥಾಪನೆಯಾದ ಎನ್ಪಿಪಿಎಗೆ ಔಷಧ ಉತ್ಪನ್ನಗಳ ಬೆಲೆ ಸ್ಥಿರೀಕರಣ,ಪರಿಷ್ಕರಣೆ, ಡಿಪಿಸಿಒ ನಿಯಮಗಳ ಅನುಷ್ಠಾನ ಮತ್ತು ಅನಿಯಂತ್ರಿತ ಔಷಧಿಗಳ ಬೆಲೆ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ವಹಿಸಲಾಯಿತು.

ವಿಶ್ವದ ಅತ್ಯಂತ ದುಬಾರಿ ಔಷಧಿಯಿದು, ಒಂದು ಡೋಸ್ ಬೆಲೆ ಭರ್ತಿ 28 ಕೋಟಿ ರೂ. !

ಕ್ಯಾನ್ಸರ್‌, ಹೃದ್ರೋಗ ಸಂಬಂಧಿತ ಮೆಡಿಸಿನ್ ಸೇರಿ 384 ಜೀವರಕ್ಷಕ ಔಷಧಗಳು ಅಗ್ಗ
ಸೆಪ್ಟೆಂಬರ್‌ನಲ್ಲಿ ಕೇಂದ್ರ ಆರೋಗ್ಯ ಸಚಿವಾಲಯವು ಬಿಡುಗಡೆ ಮಾಡಿದ ಹೊಸ ರಾಷ್ಟ್ರೀಯ ಅಗತ್ಯ ಔಷಧಿಗಳ ಪಟ್ಟಿಯನ್ನು (NLEM) ಈಗ ಔಷಧ ಬೆಲೆ ನಿಯಂತ್ರಣ ಆದೇಶದ ಅಡಿಯಲ್ಲಿ ತರಲಾಗಿದೆ. ಆರೋಗ್ಯ ಸೇವಾ ವಲಯದಲ್ಲಿ ಮಹತ್ತರ ಬದಲಾವಣೆಗಳನ್ನು ತರುತ್ತಿರುವ ಕೇಂದ್ರ ಸರ್ಕಾರ ಕ್ಯಾನ್ಸರ್‌, ಹೃದ್ರೋಗ, ನರ ಸಂಬಂಧಿತ ಕಾಯಿಲೆ, ಮಧುಮೇಹ (Diabetes), ಕ್ಷಯ ಸೇರಿದಂತೆ 384 ಜೀವರಕ್ಷಕ ಔಷಧಗಳು (Essential medicines) ದರವನ್ನು ಇಳಿಕೆ ಮಾಡಿತ್ತು. ನವೆಂಬರ್ 12ರಂದು ಹೊರಡಿಸಲಾದ ಅಧಿಸೂಚನೆಯಲ್ಲಿ ಪರಿಷ್ಕೃತ ಪಟ್ಟಿಯನ್ನು ಪ್ರಕಟಿಸಲಾಗಿತ್ತು.

ಈ ಪ್ರಸ್ತುತ ಪರಿಷ್ಕರಣೆಯು 2022ರ ಪಟ್ಟಿಯಲ್ಲಿ ಸೇರಿಸಲಾದ ಟೆನೆಲಿಗ್ಲಿಪ್ಟಿನ್ ಔಷಧ ಮತ್ತು ಇನ್ಸುಲಿನ್ ಗ್ಲಾರ್ಜಿನ್‌ನಂತಹ ಮಧುಮೇಹಕ್ಕೆ ಹೊಸ ಚಿಕಿತ್ಸೆಗಳ (Treatment) ವೆಚ್ಚವನ್ನು ತಗ್ಗಿಸುವ ಸಾಧ್ಯತೆಯಿದೆ. 1% ಕ್ಕಿಂತ ಹೆಚ್ಚು ಮಾರುಕಟ್ಟೆ ಪಾಲನ್ನು ಹೊಂದಿರುವ ಎಲ್ಲಾ ಜೆನೆರಿಕ್ಸ್ ಮತ್ತು ಬ್ರಾಂಡೆಡ್ ಜೆನೆರಿಕ್‌ಗಳ ಚಿಲ್ಲರೆ ವ್ಯಾಪಾರಿಗಳಿಗೆ ಸರಾಸರಿ ಬೆಲೆಯನ್ನು ಲೆಕ್ಕಹಾಕುವ ಮೂಲಕ ಸೀಲಿಂಗ್ ಬೆಲೆಯನ್ನು ನಿರ್ಧರಿಸಲಾಗಿತ್ತು. 

Follow Us:
Download App:
  • android
  • ios