ಉ.ಕ.ಜಿಲ್ಲೆಗೆ ಆಶಾ ಕಾರ್ಯಕರ್ತೆಯರ ಕೊರತೆ

ಉತ್ತರ ಕನ್ನಡ ಜಿಲ್ಲೆಯ 74 ಮಜರೆಗಳಿಗೆ 98 ಆಶಾ ಕಾರ್ಯಕರ್ತೆಯರು ಹೆಚ್ಚುವರಿಯಾಗಿ ಅವಶ್ಯಕವಿದೆ. ಉತ್ತರ ಕನ್ನಡವನ್ನು ವಿಶೇಷವಾಗಿ ಪರಿಗಣಿಸಿ ಆಶಾ ಕಾರ್ಯಕರ್ತೆಯರ ನೇಮಕಾತಿ ನಿಯಮದಲ್ಲಿ ರಿಯಾಯಿತಿ ನೀಡಿ ಹೆಚ್ಚುವರಿಯಾಗಿ ಅವಶ್ಯಕತೆ ಇರುವ ಹುದ್ದೆಯನ್ನು ಭರ್ತಿ ಮಾಡಲು ಸರ್ಕಾರ ಅವಕಾಶ ನೀಡಬೇಕಿದೆ.

Not enough Asha workers available in karwar at uttara kannada rav

ಜಿ.ಡಿ.ಹೆಗಡೆ

 ಕಾರವಾರ(ಅ.18) : ಉತ್ತರ ಕನ್ನಡ ಜಿಲ್ಲೆಯ 74 ಮಜರೆಗಳಿಗೆ 98 ಆಶಾ ಕಾರ್ಯಕರ್ತೆಯರು ಹೆಚ್ಚುವರಿಯಾಗಿ ಅವಶ್ಯಕವಿದೆ. ಭೌಗೋಳಿಕವಾಗಿ ವಿಸ್ತಾರವಿರುವುದರಿಂದ ಲಕ್ಷಾಂತರ ಜನರಿಗೆ ಆಶಾ ಕಾರ್ಯಕರ್ತೆಯರು ನೀಡುವ ಸೇವೆ, ಮಾಹಿತಿ ಲಭ್ಯವಾಗುತ್ತಿಲ್ಲ. ಕಾರವಾರ, ಕಮಟಾ ತಲಾ 5, ಅಂಕೋಲಾ 1, ಹೊನ್ನಾವರ 13, ಭಟ್ಕಳ 3, ಶಿರಸಿ 16, ಸಿದ್ದಾಪುರ 4, ಯಲ್ಲಾಪುರ, ಜೊಯಿಡಾ, ಹಳಿಯಾಳ ತಲಾ 14, ಮುಂಡಗೋಡ 9 ಸೇರಿ ಒಟ್ಟು 98 ಆಶಾ ಕಾರ್ಯಕರ್ತೆ ಹುದ್ದೆ ಹೆಚ್ಚುವರಿಯಾಗಿ ಬೇಕಾಗಿದೆ. ಆರೋಗ್ಯ ಇಲಾಖೆ ಪ್ರಕಾರ 1,01,868 ಜನರಿಗೆ ಆಶಾ ಕಾರ್ಯಕರ್ತರೆಯರ ಸೇವೆ ಸಿಗುತ್ತಿಲ್ಲ.

ದಲಿತರೆಂದು ಮನೆಯೊಳಗೆ ಸೇರಿಸಲ್ಲ ಸರ್..ಹೇಗೆ ಕೆಲಸ ಮಾಡ್ಲಿ, ಆಶಾ ಕಾರ್ಯಕರ್ತೆ ಕಣ್ಣೀರು

ದೂರ ದೂರದ ಮನೆ, ಹಳ್ಳಿಗಳಿಂದಾಗಿ ಹಾಲಿ ಇರುವ ಕಾರ್ಯಕರ್ತೆಯರು ತೊಂದರೆ ಅನುಭವಿಸುತ್ತಿದ್ದು, ಈ ಜಿಲ್ಲೆಯನ್ನು ವಿಶೇಷವಾಗಿ ಪರಿಗಣಿಸಿ ನಿಯಮಗಳನ್ನು ಸಡಿಲ ಮಾಡಬೇಕಿದೆ. ಕೋವಿಡ್‌ ಸೋಂಕಿನ ಸಂದರ್ಭದಲ್ಲಿ ಮನೆ ಮನೆಗೆ ತೆರಳಿ ಜ್ವರ ಸರ್ವೆ, ಬೇರೆ ಊರುಗಳಿಂದ ಬಂದವರ ಮಾಹಿತಿ ಕಲೆ ಹಾಕುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸೋಂಕಿಗೆ ತುತ್ತಾದವರಿಗೆ ಅಗತ್ಯ ವೈದ್ಯಕೀಯ ಸೇವೆ ನೀಡುವಲ್ಲೂ ಶ್ರಮ ವಹಿಸಿದ್ದಾರೆ.

ನೆರೆಯ ವೇಳೆ ಕೂಡ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸಾಕಷ್ಟುಕೆಲಸ ಮಾಡಿದ್ದು, ಜನರ ಹಾಗೂ ಸರ್ಕಾರದ ನಡುವೆ ಕೊಂಡಿಯಾಗಿ ಕೆಲಸ ನಿರ್ವಹಿಸಿದ್ದಾರೆ. ಕಾಲು ನಡಿಗೆಯಲ್ಲೇ ಕುಗ್ರಾಮಗಳಿಗೂ ತೆರಳಿ ಅಗತ್ಯ ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಸಹಾಯಹಸ್ತ ಚಾಚಿದ್ದಾರೆ. ಆಶಾ ಕಾರ್ಯಕರ್ತೆಯರ ಅವಶ್ಯಕತೆ ಜಿಲ್ಲೆಗೆ ಸಾಕಷ್ಟುಇದ್ದು, ಗುಡ್ಡಗಾಡು ಜಿಲ್ಲೆಯಾದ್ದರಿಂದ ಜನಸಂಖ್ಯೆ ಅಥವಾ ಮಜರೆಗಳ ಆಧಾರದ ಮೇಲೆ ಆಶಾ ಕಾರ್ಯಕರ್ತೆಯರನ್ನು ನಿಯೋಜಿಸಿದರೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಓಡಾಡಲು ತೊಂದರೆಯಾಗುತ್ತದೆ. ಜತೆಗೆ ನಿರ್ದಿಷ್ಟಸಮಯದಲ್ಲಿ ಮಾಹಿತಿ ಪಡೆದುಕೊಳ್ಳಲು ಆಗುವುದಿಲ್ಲ.

10 ಲಕ್ಷ ಆಶಾ ಕಾರ್ಯಕರ್ತೆಯರಿಗೆ ವಿಶ್ವ ಆರೋಗ್ಯ ಸಂಸ್ಥೆಯ ಗೌರವ!

ಉತ್ತರ ಕನ್ನಡವನ್ನು ವಿಶೇಷವಾಗಿ ಪರಿಗಣಿಸಿ ಆಶಾ ಕಾರ್ಯಕರ್ತೆಯರ ನೇಮಕಾತಿ ನಿಯಮದಲ್ಲಿ ರಿಯಾಯಿತಿ ನೀಡಿ ಹೆಚ್ಚುವರಿಯಾಗಿ ಅವಶ್ಯಕತೆ ಇರುವ ಹುದ್ದೆಯನ್ನು ಭರ್ತಿ ಮಾಡಲು ಸರ್ಕಾರ ಅವಕಾಶ ನೀಡಬೇಕಿದೆ.

ಜಿಲ್ಲೆಯಲ್ಲಿ 1400 ಆಶಾ ಕಾರ್ಯಕರ್ತೆಯರ ಅವಶ್ಯಕತೆಯಿದ್ದು, 1390 ಜನರು ಕೆಲಸ ನಿರ್ವಹಿಸುತ್ತಿದ್ದಾರೆ. ಗುಡ್ಡಗಾಡು ಜಿಲ್ಲೆಯಾದ್ದರಿಂದ ವಿಶೇಷ ರಿಯಾಯಿತಿ ನೀಡಿ 98 ಕಾರ್ಯಕರ್ತೆಯರನ್ನು ನೇಮಕ ಮಾಡಿಕೊಳ್ಳಲು ಅವಕಾಶ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.

ಡಾ.ಶರದ್‌ ನಾಯಕ, ಡಿಎಚ್‌ಒ

Latest Videos
Follow Us:
Download App:
  • android
  • ios