Asianet Suvarna News Asianet Suvarna News

ಮಧುಮೇಹಿಗಳಿಗೆ ಇನ್ಮುಂದೆ ನೋವಿನ ಕಿರಿಕಿರಿಯಿಲ್ಲ, ಇಂಜೆಕ್ಷನ್ ಬದಲು ಬರಲಿದೆ ಇನ್ಸುಲಿನ್ ಸ್ಪ್ರೇ

ಮಧುಮೇಹ ಹೊಂದಿರುವ ಜನರು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪ್ರತಿದಿನ ನಿಯಂತ್ರಿಸಲು ಇನ್ಸುಲಿನ್ ಚುಚ್ಚುಮದ್ದನ್ನು ಅವಲಂಬಿಸಿದ್ದಾರೆ. ಆದರೆ ಇನ್ಸುಲಿನ್‌ ಇಂಜೆಕ್ಷನ್‌ಗಳು ನೋವಿನಿಂದ ಕೂಡಿರುತ್ತವೆ. ಆದರೆ ಇನ್ಮುಂದೆ ಆ ಕಷ್ಟವಿಲ್ಲ.  ಹೈದರಾಬಾದ್ ಮೂಲದ ನೀಡಲ್‌ ಫ್ರೀ ಟೆಕ್ನಾಲಜೀಸ್‌ ಕಂಪನಿಯು ಈಗ ಇನ್ಸುಲಿನ್ ಸ್ಪ್ರೇ ಎಂಬ ಔಷಧವನ್ನು ಅಭಿವೃದ್ಧಿಪಡಿಸಿದೆ. 

No more Painful insulin shots, Hyderabad company develops oral Insulin spray for diabetes Vin
Author
First Published Nov 3, 2023, 11:08 AM IST

ಮಧುಮೇಹ ಹೊಂದಿರುವ ಜನರು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪ್ರತಿದಿನ ನಿಯಂತ್ರಿಸಲು ಇನ್ಸುಲಿನ್ ಚುಚ್ಚುಮದ್ದನ್ನು ಅವಲಂಬಿಸಿದ್ದಾರೆ. ಆದರೆ ಇನ್ಸುಲಿನ್‌ ಇಂಜೆಕ್ಷನ್‌ಗಳು ನೋವಿನಿಂದ ಕೂಡಿರುತ್ತವೆ. ಮಾತ್ರವಲ್ಲ ಇದನ್ನು ಮನೆಯ ಹೊರಗೆ ಅಥವಾ ಕೆಲಸದ ಸ್ಥಳದಲ್ಲಿ ಬಳಸಲು ಕಷ್ಟವಾಗಬಹುದು. ಇದು ಕೆಲವೊಮ್ಮೆ ಕಿರಿಕಿರಿ ಅನಿಸುವುದೂ ಇದೆ. ಆದರೆ ಇನ್ಮುಂದೆ ಆ ಕಷ್ಟವಿಲ್ಲ.  ಹೈದರಾಬಾದ್ ಮೂಲದ ನೀಡಲ್‌ ಫ್ರೀ ಟೆಕ್ನಾಲಜೀಸ್‌ ಕಂಪನಿಯು ಈಗ ಇನ್ಸುಲಿನ್ ಸ್ಪ್ರೇ ಎಂಬ ಔಷಧ ಸಾಧನವನ್ನು ಅಭಿವೃದ್ಧಿಪಡಿಸಿದೆ. ಇದಕ್ಕೆ ಓಜುಲಿನ್ ಎಂದು ಹೆಸರಿಡಲಾಗಿದೆ. ಈ ಇನ್ಸುಲಿನ್ ಬಳಸುವುದರಿಂದ ನೋವಾಗುತ್ತದೆ ಅನ್ನೋ ಭಯವಿಲ್ಲ. ಈ ಡೋಸ್‌ಗಳನ್ನು ನೇರವಾಗಿ ಬಾಯಿಗೆ ಸಿಂಪಡಿಸಬಹುದು. 

ಟ್ರಾನ್ಸ್‌ಜೀನ್‌ ಬಯೋಟೆಕ್‌ ಸಂಯೋಜಿತವಾಗಿರುವ ಈ ಸಂಸ್ಥೆ ಸುಧಾರಿತ ಔಷಧಗಳ (Medicine) ವಲಯದಲ್ಲಿ ಹೊಸತನ್ನು ಕಂಡು ಹುಡುಕುತ್ತಿದೆ. ಈಗಾಗಲೇ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಘಟನೆ ಅರ್ಜಿ ಸಲ್ಲಿಸಿರುವ ಈ ಸಂಸ್ಥೆ ತನ್ನ ಇನ್ಸುಲಿನ್‌ ಸ್ಪ್ರೇಯನ್ನು ಸದ್ಯಕ್ಕೆ ಇನ್ನೂ ಮನುಷ್ಯರ ಮೇಲೆ ಪ್ರಯೋಗ ಮಾಡಿಲ್ಲ. ಕೆಲವೊಂದು ಪ್ರಾಣಿಗಳ (Animal) ಮೇಲೆ ಪ್ರಯೋಗ ಮಾಡಿದ ಬಳಿಕ ಮನುಷ್ಯರ ಮೇಲೆ ಪ್ರಯೋಗ (Test) ಮಾಡುವುದಾಗಿ ಹೇಳಿದೆ.

ಈ ಡಯಾಬಿಟೀಸ್‌ ಔಷಧಿ ತಗೊಂಡ್ರೆ ಶುಗರ್‌ ಲೆವೆಲ್‌ ಜತೆಗೆ ತೂಕನೂ ಇಳಿಸ್ಬೋದು!

ಓಜುಲಿನ್‌ಗೆ ಸಂಬಂಧಿಸಿದಂತೆ 40 ದೇಶಗಳಿಂದ ಪೇಟೆಂಟ್
ಮೌಖಿಕ ಇನ್ಸುಲಿನ್‌ಗೆ ಸಂಬಂಧಿಸಿದಂತೆ ಸಂಶೋಧನೆ ಮತ್ತು ಅಭಿವೃದ್ಧಿ ಇನ್ನೂ ನಡೆಯುತ್ತಿದೆ . ಅದರ ಮೇಲಿನ ಅಧ್ಯಯನಗಳು ವಿವಿಧ ಅಂಶಗಳಲ್ಲಿ ಭರವಸೆಯನ್ನು ತೋರಿಸಿವೆ. ಆದರೂ ಕಂಪನಿಯು ಸುರಕ್ಷತೆಯ (Safe) ಬಗ್ಗೆ ಅಧ್ಯಯನಗಳನ್ನು ನಡೆಸಲು ಅನುಮೋದನೆಗಾಗಿ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (ಸಿಡಿಎಸ್‌ಸಿಒ) ಗೆ ಅರ್ಜಿ ಸಲ್ಲಿಸಿದೆ ಎಂದು ನೀಡಲ್ ಫ್ರೀ ಟೆಕ್ನಾಲಜೀಸ್‌ನ ಸಹ-ಸಂಸ್ಥಾಪಕ ಮತ್ತು ನಿರ್ದೇಶಕರಾದ ಡಾ ಕೆ ಕೋಟೇಶ್ವರ ರಾವ್ ತಿಳಿಸಿದ್ದಾರೆ. ಈಗಾಗಲೇ ಓಜುಲಿನ್‌ಗೆ ಸಂಬಂಧಿಸಿದಂತೆ 40 ದೇಶಗಳಿಂದ ಪೇಟೆಂಟ್ ಪಡೆದಿರುವುದಾಗಿ ಕೋಟೇಶ್ವರ ರಾವ್ ಹೇಳಿದ್ದಾರೆ.

ಕ್ಯಾನ್ಸರ್‌, ಅಲ್ಝೈಮರ್‌ಗೂ ಬರಲಿದೆ ಮೂಗಿನ ಸ್ಪ್ರೇ
ಕಂಪನಿಯ ಹೇಳಿಕೆಯ ಪ್ರಕಾರ, ಓಜುಲಿನ್ 2025-26 ರ ಸುಮಾರಿಗೆ 2-3 ವರ್ಷಗಳಲ್ಲಿ ಮಾರುಕಟ್ಟೆಗೆ ಬರಲಿದೆ. ಮಧುಮೇಹ (Diabetes) ಚಿಕಿತ್ಸೆಯ ಜೊತೆಗೆ ಕ್ಯಾನ್ಸರ್‌, ಆಸ್ಟಿಯೊಪೊರೋಸಿಸ್‌ ಮತ್ತು ಅಲ್ಝೈಮರ್‌ಗೂ ಬಾಯಿಗೆ ಮತ್ತು ಮೂಗಿಗೆ ಸ್ಪ್ರೇಗಳನ್ನು ಅಭಿವೃದ್ಧಿಪಡಿಸಲು ನೀಡಲ್‌ ಫ್ರೀ ಟೆಕ್ನಾಲಜೀಸ್ ಕಂಪೆನಿಯು ಪ್ಲಾನ್ ಮಾಡಿಕೊಂಡಿದೆ. ಇದಕ್ಕಾಗಿ ಬರೋಬ್ಬರಿ 225-250 ದಶಲಕ್ಷ ಡಾಲರ್ ಸಂಗ್ರಹಿಸಲು ಯೋಜಿಸಿದೆ.

Health Tips: ಶುಗರ್ ಲೆವೆಲ್ ಹೆಚ್ಚಾದ್ರೆ ಆಗೋ ಅನಾಹುತ ಒಂದೆರಡಲ್ಲ, ಹುಷಾರು

ಇನ್ಸುಲಿನ್ ಒಂದು ಪ್ರಮುಖ ಹಾರ್ಮೋನ್ ಆಗಿದ್ದು ಅದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವಲ್ಲಿ ಮತ್ತು ಅದನ್ನು ಶಕ್ತಿಯನ್ನಾಗಿ ಪರಿವರ್ತಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ನಂತರದ ಬಳಕೆಗಾಗಿ ಹೆಚ್ಚುವರಿ ಸಕ್ಕರೆಯನ್ನು ಸಂಗ್ರಹಿಸಲು ಯಕೃತ್ತನ್ನು ಸಂಕೇತಿಸುತ್ತದೆ. ದೇಹದಲ್ಲಿ ಹೆಚ್ಚಿನ ಸಕ್ಕರೆಯ ನಿರಂತರ ಪೂರೈಕೆ ಇದ್ದಾಗ, ಮೇದೋಜ್ಜೀರಕ ಗ್ರಂಥಿಯು ರಕ್ತದಲ್ಲಿನ ಸಕ್ಕರೆಯನ್ನು ಜೀವಕೋಶಗಳಿಗೆ ಪಡೆಯಲು ಹೆಚ್ಚಿನ ಇನ್ಸುಲಿನ್ ಅನ್ನು ಪಂಪ್ ಮಾಡುತ್ತದೆ. ಕಾಲಾನಂತರದಲ್ಲಿ, ಜೀವಕೋಶಗಳು ಎಲ್ಲಾ ಇನ್ಸುಲಿನ್‌ಗೆ ಪ್ರತಿಕ್ರಿಯಿಸುವುದನ್ನು ನಿಲ್ಲಿಸುತ್ತವೆ ಮತ್ತು ಇನ್ಸುಲಿನ್ ನಿರೋಧಕವಾಗುತ್ತವೆ.

ಇನ್ಸುಲಿನ್ ಇಂಜೆಕ್ಷನ್ ರಕ್ತದಲ್ಲಿನ ಸಕ್ಕರೆಯನ್ನು ಹೇಗೆ ನಿಯಂತ್ರಿಸುತ್ತದೆ?
ಇನ್ಸುಲಿನ್ ಚುಚ್ಚುಮದ್ದು ಸಕ್ಕರೆಯನ್ನು ರಕ್ತದಿಂದ ಇತರ ದೇಹದ ಅಂಗಾಂಶಗಳಿಗೆ ಚಲಿಸಲು ಸಹಾಯ ಮಾಡುತ್ತದೆ, ಅಲ್ಲಿ ಅದನ್ನು ಶಕ್ತಿಗಾಗಿ ಬಳಸಲಾಗುತ್ತದೆ. ರಕ್ತದಲ್ಲಿನ ಸಕ್ಕರೆಯನ್ನು ನಿರ್ವಹಿಸಲು ದಿನಕ್ಕೆ ಹಲವಾರು ಬಾರಿ ಸಬ್ಕ್ಯುಟೇನಿಯಸ್ ಆಗಿ (ಚರ್ಮದ ಅಡಿಯಲ್ಲಿ) ಚುಚ್ಚುಮದ್ದು ಮಾಡಬೇಕಾಗುತ್ತದೆ. ಒಂದಕ್ಕಿಂತ ಹೆಚ್ಚು ರೀತಿಯ ಇನ್ಸುಲಿನ್ ಬೇಕಾಗಬಹುದು. ಮಾನವ ಇನ್ಸುಲಿನ್ ಅಧಿಕ ರಕ್ತದ ಸಕ್ಕರೆಯನ್ನು ನಿಯಂತ್ರಿಸುತ್ತದೆ ಆದರೆ ಮಧುಮೇಹವನ್ನು ಗುಣಪಡಿಸುವುದಿಲ್ಲ.

Follow Us:
Download App:
  • android
  • ios